Pavithra Gowda: ಜೈಲಿಂದ ಹೊರ ಬಂದ ಬಳಿಕ ಪವಿತ್ರಾ ಗೌಡ ಮೊದಲ ಪೋಸ್ಟ್
ಬೆಂಗಳೂರು, ಜನವರಿ 09: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ಪವಿತ್ರಾ ಗೌಡ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಜೈಲಿನಿಂದ ಹೊರ ಬರುತ್ತಿದ್ದಂತೆ ದೇವರ ಮೊರೆ ಹೋಗಿದ್ದು, ಪವಿತ್ರಗೌಡ ಅವರು ಇದೀಗ ಸೆಲೆಬ್ರೇಷನ್ ಮೂಡ್‌ನಲ್ಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟಿ ಪವಿತ್ರಾ ಗೌಡ ಅವರು ಜೈಲಿನಿಂದ ಹೊರ ಬಂದ ಬಳಿಕ ಸೋಶಿಯಲ್ ಮೀಡಿಯಾದಿಂದ ಮೊದಲ ಪೋಸ್ಟ್ ಹಾಕಿಕೊಂಡಿದ್ದಾರೆ. ಪವಿತ್ರಾ ಗೌಡಗೆ ಇಂದು (ಜನವರಿ 09) ಜನ್ಮದಿನದ ಸಂಭ್ರಮ.

ಜೈಲಿಂದ ಹೊರಗೆ ಬಂದ ಬಳಿಕವೂ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದ ನಟಿ ಪವಿತ್ರಾ ಇದೀಗ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ಪವಿತ್ರಾ ಗೌಡ ಅವರಿಗೆ ಅವರ ಮಗಳು ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಮಗಳು ಬರ್ತ್ ಡೇಗೆ ವಿಶ್ ಮಾಡಿದ ವಿಡಿಯೋವನ್ನು ಇನ್ಸ್ಟಾ ಸ್ಟೋರಿಸ್ನಲ್ಲಿ ಶೇರ್ ಮಾಡಿದ್ದಾರೆ.
ಪವಿತ್ರಾ ಗೌಡ ಮಗಳು ಅಮ್ಮನಿಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಹ್ಯಾಪಿ ಬರ್ತ್ ಡೇ ಅಮ್ಮ, ಕಳೆದ ವರ್ಷ ನೀವು ಜೀವನದ ಅತ್ಯಂತ ಕಷ್ಟದ ದಿನಗಳನ್ನ ಎದುರಿಸಿದ್ರಿ. ಹೊಸ ವರ್ಷ 2025ಕ್ಕೆ ಕಾಲಿಟ್ಟಿದ್ದೀರಾ, ಹೊಸ ಆರಂಭ ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ ಎಂದ್ರು. ಅಷ್ಟೇ ಅಲ್ಲದೇ ನಾನು ನಿಮಗೆ ಭರವಸೆ ನೀಡುತ್ತೇನೆ.
ಮುಂದೊಂದು ದಿನ ನೀವು ತುಂಬಾ ಹೆಮ್ಮೆಪಡುವಂತೆ ನಾನು ಬೆಳೆಯುತ್ತೇನೆ ಎಂದು ವಿಡಿಯೋದಲ್ಲಿ ಖುಷಿ ಗೌಡ ಹೇಳಿದ್ದಾರೆ. ಜೈಲಿಂದ ಹೊರಗೆ ಬಂದ ಬಳಿಕವೂ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದ ನಟಿ ಪವಿತ್ರಾ ಗೌಡ ಇದೀಗ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ
ನಟಿ ಪವಿತ್ರಾ ಗೌಡ ಹುಟ್ಟುಹಬ್ಬಕ್ಕೆ ಅವರ ಮಗಳೇ ಮೊದಲ ವಿಶ್ ಮಾಡಿದ್ದಾರೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಜೈಲು ಸೇರಿದ್ರು. ಬೇಲ್ ಮೇಲೆ ಎಲ್ಲರೂ ರಿಲೀಸ್ ಆಗಿದ್ದಾರೆ. ಹೊರಗೆ ಐಷಾರಾಮಿ ಜೀವನ ನೋಡಿದ್ದ ಪವಿತ್ರಾಗೆ ಸೆಂಟ್ರಲ್ ಜೈಲು ನರಕ ದರ್ಶನವನ್ನ ಅನುಭವಿಸಿ ಬಂದಿದ್ದಾರೆ.
ಇದೀಗ ಜೈಲಿನಿಂದ ಬರುತ್ತಿದ್ದಂತೆ ಅಮ್ಮನ ಮನೆ ಸೇರಿದ ಪವಿತ್ರಾ ಗೌಡ, ಹೊಸ ವರ್ಷದ ದಿನ ಆರ್ ಆರ್ ನಗರದ ಮನೆಗೆ ತೆರಳಿದ್ದಾರೆ ಎನ್ನಲಾಗ್ತಿದೆ. ಮನೆಯಲ್ಲಿ ಹೊಸ ವರ್ಷದಂದೇ ಪೂಜೆ ಕೂಡ ಮಾಡಿಸಿದ್ದರಂತೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೂಡ ಮಾಡಿಸಿದ್ರು ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳಿಕ ನಟಿ ಪವಿತ್ರಾ ಗೌಡ ಅವರು, ಹೊಸ ವರ್ಷದಿಂದ ಹೊಸ ಬದುಕು ಕಟ್ಟಿಕೊಳ್ಳೊಕೆ ಸಜ್ಜಾಗಿದ್ದಾರೆ, ಇದೀಗ ಏಳು ತಿಂಗಳ ನಂತರ ಮತ್ತೆ ರೆಡ್ ಕಾರ್ಪೆಟ್ ಶಾಪ್ ನಡೆಸಲು ಸಿದ್ಥತೆ ಮಾಡಿಕೊಳ್ತಿದ್ದಾರೆ. ಅರ್ ಅರ್ ನಗರದಲ್ಲಿರುವ ಪವಿತ್ರಗೌಡ ಒಡೆತನದ ರೆಡ್ ಕಾರ್ಪೆಟ್ ಶಾಪ್ ಕೆಲವು ತಿಂಗಳಿಂದ ಬಂದ್ ಆಗಿತ್ತು.
ಇದೀಗ ಪವಿತ್ರಾ ಶಾಪ್ ರೀ ಓಪನ್ ಮಾಡುವ ಪ್ಲಾನ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಧನುರ್ಮಾಸ ಮುಗಿದ ನಂತ್ರ ರೆಡ್ ಕಾರ್ಪೆಟ್ ರೀ ಓಪನ್ ಮಾಡಲು ಪವಿತ್ರ ತಯಾರಿ ನಡೆಸಿದ್ದು, ಈಗಾಗಲೇ ಬಟ್ಟೆ ಅಂಗಡಿಗೆ ರಾ ಮೇಟಿರಿಯಲ್ ಖರೀದಿಯಲ್ಲಿ ಬ್ಯುಸಿ ಆಗಿದ್ದಾರೆ ಎನ್ನಲಾಗ್ತಿದೆ. ಸಂಕ್ರಾಂತಿ ಹಬ್ಬದ ಬಳಿಕ ರೆಡ್ ಕಾರ್ಪೆಟ್ ಶಾಪ್ ನಲ್ಲಿ ನಟಿ ಪವಿತ್ರಾ ಗೌಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.












Click it and Unblock the Notifications