Darshan Thoogudeepa: ಪವಿತ್ರಾ ಗೌಡ ಹುಟ್ಟುಹಬ್ಬ: ಮಗಳಿಂದ ವೀಡಿಯೋ ಹಂಚಿಕೆ- ದರ್ಶನ್ ಕೊಟ್ಟಿದ್ದ ಉಡುಗೊರೆ ಏನು ಗೊತ್ತಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ನಟಿ ಪವಿತ್ರಾ ಗೌಡ ಜೈಲಿನಿಂದ ಹೊರ ಬಂದು ಹೊಸ ಜೀವನ ಶುರು ಮಾಡಿದ್ದಾರೆ. ಇನ್ನೂ ಪವಿತ್ರಾ ಗೌಡ ಹುಟ್ಟುಹಬ್ಬಕ್ಕೆ ಮಗಳು ಖುಷಿ ವಿಷ್ ಮಾಡಿ ವೀಡಿಯೋವನ್ನು ಹಂಚಿಕೊಂಡಿದ್ದು ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಎಲ್ಲವೂ ಸರಿಯಾಗಿ ಇದ್ದಿದ್ದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಜೊತೆಗೆ ಪವಿತ್ರಾ ಗೌಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುತ್ತಿದ್ದರೆನೋ ಗೊತ್ತಿಲ್ಲ. ಆದರೀಗ ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂಬಂತೆ ಅವರು ಜೈಲಿನಿಂದ ಹೊರಬಂದಿದ್ದಾರೆ. ಹಾಗಾದರೆ ಈ ಹಿಂದೆ ಪವಿತ್ರಾ ಹೇಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು? ದರ್ಶನ್ ಪವಿತ್ರಾಗೆ ಕೊಟ್ಟ ಗಿಫ್ಟ್‌ಗಳೇನು? ಎದೆಲ್ಲದರ ಬಗ್ಗೆ ಕಂಪ್ಲೀಟ್ ಆಗಿ ತಿಳಿಯೋಣ.
ಕನ್ನಡ ಸಿನಿಮಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ನಟ ದರ್ಶನ್. ಪವಿತ್ರಾ ಗೌಡ ಕೂಡ ಸಣ್ಣ ಮಟ್ಟದ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು ಸಿನಿಮಾ ಸ್ನೇಹಿತರಿಂದಲೇ. ಪಾರ್ಟಿಯೊಂದರಲ್ಲಿ ಇವರಿಬ್ಬರು ಮೊದಲು ಭೇಟಿ ಆಗಿದ್ದರು. ಬಳಿಕ ಇವರಿಬ್ಬರ ನಡುವೆ ಸ್ನೇಹ ಬೆಳೆದು ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು.

ಪವಿತ್ರಾಗೆ ದರ್ಶನ್ ಗಿಫ್ಟ್..
ಇವರಿಬ್ಬರೂ ಜೊತೆಯಾಗಿ ಒಂದೇ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದ್ದರು. ಈ ವಿಚಾರ ಪತ್ನಿ ವಿಜಯಲಕ್ಷ್ಮೀಗೆ ಗೊತ್ತಾಗಿ ಇದನ್ನು ತಡೆಯಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಅದ್ಯಾವ ಮೋಡಿಗೆ ದರ್ಶನ್ ಪವಿತ್ರಾ ಗೌಡಗೆ ಮಾರು ಹೋಗಿದ್ರೋ ಗೊತ್ತಿಲ್ಲ. ಅವರೊಂದಿಗೆ ತುಂಬಾ ಸಲಿಗೆಯಿಂದ ಇರಲು ಆರಂಭವಿಸಿದ್ದರು.
ಪವಿತ್ರಾ ಗೌಡ ಕೇಳಿದ್ದನ್ನೆಲ್ಲಾ ಎಷ್ಟೇ ಕಷ್ಟವಾದರೂ ಕೂಡ ತೋರಿಸಿಕೊಳ್ಳದೇ ದರ್ಶನ್ ಕೊಡಿಸುತ್ತಿದ್ದರು. ಪವಿತ್ರಾ ಗೌಡ ಬಳಿ ಇರುವ ಬಟ್ಟೆಯಿಂದ ಮನೆ ಹಾಗೂ ಕಾರು ಎಲ್ಲವೂ ದರ್ಶನ್ ಪವಿತ್ರಾಗೆ ನೀಡಿದ ಗಿಫ್ಟ್ ಅಂತಲೇ ಹೇಳಲಾಗುತ್ತದೆ. ಇದೆಲ್ಲವೂ ದರ್ಶನ್ ಪವಿತ್ರಾ ಗೌಡ ಬರ್ತ್‌ಡೇಗೆ ಗಿಫ್ಟ್ ಮಾಡಿದ್ದು ಎಂದು ಹೇಳಲಾಗುತ್ತದೆ.
ದರ್ಶನ್ ಪವಿತ್ರಾ ಪ್ರವಾಸ
ಪವಿತ್ರಾ ಗೌಡ ಹುಟ್ಟುಹಬ್ಬ ಬಂದಾಗಲೆಲ್ಲಾ ದರ್ಶನ್ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಿದ್ದರು. ಅವರ ಹುಟ್ಟುಹಬ್ಬಕ್ಕೆ ದರ್ಶನ್ ಕೊಡದ ಗಿಫ್ಟ್‌ಗಳೇ ಇಲ್ಲ. ಅಲ್ಲದೆ ಪವಿತ್ರಾ ಗೌಡ ಕೂಡ ದರ್ಶನ್ ಬಳಿ ಡಿಮ್ಯಾಂಡ್ ಮಾಡಿ ತಮಗೆ ಬೇಕಾದ ವಸ್ತುಗಳನ್ನು ಪಡೆಯುತ್ತಿದ್ದರು.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳಿ ಇದ್ದ ಕಾರು, ದುಬಾರಿ ಬಟ್ಟೆ, ಆಭರಣಗಳೆಲ್ಲವೂ ಪವಿತ್ರಾಗೆ ಬೇಕಿತ್ತು. ಇದನ್ನು ಅವರು ಡಿಮ್ಯಾಂಡ್ ಮಾಡಿ ದರ್ಶನ್ ಬಳಿ ತರಿಸಿಕೊಳ್ಳುತ್ತಿದ್ದರು. ವಿಜಯಲಕ್ಷ್ಮೀ ಬಳಿ ಇದ್ದ ವಸ್ತುಗಳು ತನ್ನ ಬಳಿ ಇಲ್ಲದೇ ಇದ್ದರೆ ಅದಕ್ಕಾಗಿ ದರ್ಶನ್ ಬಳಿ ಜಗಳ ಕೂಡ ಮಾಡುತ್ತಿದ್ದರು.
ಪವಿತ್ರಾ ಮಗಳ ಹುಟ್ಟುಹಬ್ಬಕ್ಕೂ ದರ್ಶನ್ ಗಿಫ್ಟ್
ಕೇವಲ ಪವಿತ್ರಾ ಗೌಡ ಮಾತ್ರವಲ್ಲ. ಅವರ ಮಗಳು ಖುಷಿ ಹುಟ್ಟುಹಬ್ಬವನ್ನೂ ಕೂಡ ದರ್ಶನ್ ಆಚರಿಸಿರುವುದು ಇದೆ. ಈ ಹಿಂದೆ ಪವಿತ್ರಾ ಗೌಡ ಮಗಳು ಖುಷಿ ಹುಟ್ಟುಹಬ್ಬವನನ್ನು ದರ್ಶನ್ ಆಚರಿಸಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೇಕ್ ಕತ್ತರಿಸಿ ಖುಷಿಗೆ ದರ್ಶನ್ ವಿಶ್ ಮಾಡಿದ್ದರು.
ಅಲ್ಲದೆ ಕೆಲ ಪೂಜೆಗಳಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಒಟ್ಟಿಗೆ ಭಾಗಿಯಾಗಿರುವುದು, ಅವರಿಬ್ಬರು ಒಟ್ಟಿಗೆ ದೇಶ ಮಾತ್ರವಲ್ಲದೆ ವಿದೇಶ ಸುತ್ತಿರುವ ಫೋಟೋಗಳು ಸಾಕಷ್ಟು ಇವೆ. ಈ ಫೋಟೋಗಳು ಇವರಿಬ್ಬರ ನಡುವಿನ ಸಲಿಗೆಗೆ ಹಾಗೂ ಪವಿತ್ರಾ ಪ್ರೀತಿಗಾಗಿ ದರ್ಶನ್ ಏನೆಲ್ಲಾ ಮಾಡಿದ್ದರು ಅನ್ನೋದನ್ನು ತೋರಿಸುತ್ತವೆ.
ಒಟ್ಟಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದಾಗಿ ವಿಜಯಲಕ್ಷ್ಮೀ ಬಾಳಲ್ಲಿ ಉತ್ತಮ ಬದಲಾವಣೆ ಆಗಿದೆ. ದರ್ಶನ್ ಪತ್ನಿಯನ್ನು ಬಿಟ್ಟು ಬೇರೆ ಯಾವ ಹೆಣ್ಣಿನ ಸಹವಾಸಕ್ಕೆ ಹೋಗದಿರಲು ನಿರ್ಧಾರ ಮಾಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ನಡೆಯಬಾರದಿತ್ತು. ಆದರೆ ಈ ಒಂದು ಘಟನೆಯಿಂದ ದರ್ಶನ್ ಬದಲಾಗಿದ್ದಾರೆ ಅನ್ನೋದು ಮಾತ್ರ ಖುಷಿ ವಿಚಾರ.












Click it and Unblock the Notifications