Deepavali 2024: ಪಟಾಕಿ ಹಚ್ಚು ಅಂದ್ರೆ ಯುದ್ಧ ಮಾಡ್ತಾರೆ ಹುಡುಗರು!
ದೀಪಾವಳಿ ಹಬ್ಬದ ದಿನ ಪಟಾಕಿ ಹೊಡೆಯುವ ಬಗ್ಗೆ ಸಾಕಷ್ಟು ವಿವಾದಗಳು ಇವೆ. ಒಂದು ಕಡೆ ಪಟಾಕಿ ದೀಪಾವಳಿ ಹಬ್ಬದ ಸಂಸ್ಕೃತಿ ಅಂತಾ ಕೆಲವರು ಹೇಳಿದರೆ, ಇನ್ನೂ ಕೆಲವರು ಪಟಾಕಿ ನಮ್ಮ ಸಂಸ್ಕೃತಿ ಅಲ್ಲ ಅಂತಾರೆ. ಇದೆಲ್ಲಾ ಒಂದು ಕಡೆ ಇರಲಿ ಆದ್ರೆ ನಮ್ ಹುಡುಗರು ಮಾತ್ರ ಭರ್ಜರಿಯಾಗಿ ಡಿಸೈನ್ ಡಿಸೈನ್ ಆಗಿ ಪಟಾಕಿ ಹಚ್ಚುತ್ತಾರೆ. ಅದರಲ್ಲೂ ಸುಮ್ಮನೆ, ಪಟಾಕಿ ಹೊಡೆದು ಬರ್ರೋ ಅಂದ್ರೆ ಪಟಾಕಿ ಹಚ್ಚುವಾಗ ಮಹಾಯುದ್ಧವನ್ನೇ ಮಾಡ್ತಿದ್ದಾರೆ. ಪಟಾಕಿ ಫೈಟಿಂಗ್ ವಿಡಿಯೋಗಳನ್ನ ನೋಡಲು ಮುಂದೆ ಓದಿ.
ಪಟಾಕಿ ಇರುವುದು ಏನಕ್ಕೆ? ದೀಪಾವಳಿ ಹಬ್ಬದ ದಿನ ಪಟಾಕಿ ಹಚ್ಚಿ ಸಂಭ್ರಮಿಸುವುದಕ್ಕೆ. ಅದರಲ್ಲೂ ಸಣ್ಣ ಸಣ್ಣ ಪಟಾಕಿಗಳು ಹುಡುಗಿಯರು & ಮಕ್ಕಳ ಪಾಲಿಗೆ ಫೇವರಿಟ್ ಆಗಿವೆ. ಆದರೆ ಜೋರಾಗಿ ಸದ್ದು ಮಾಡುವ, ಢಂ.. ಢಂ.. ಎನ್ನುವ ದೊಡ್ಡ ದೊಡ್ಡ ಪಟಾಕಿಗಳು ಮಾತ್ರ ಹುಡುಗರಿಗೆ ಸಖತ್ ಇಷ್ಟ. ಅದರಲ್ಲೂ ರಾಕೆಟ್ ಹಾರಿಸುವಲ್ಲಿ ಹುಡುಗರು ಪಂಟರ್ ಅಂತಾ ಹೇಳಬಹುದು. ಹೀಗಿದ್ದಾಗ ಪಟಾಕಿಗಳ ಮೂಲಕವೇ ದೀಪಾವಳಿ ಬದಲು ಕುರುಕ್ಷೇತ್ರ ಯುದ್ಧ ಮಾಡುತ್ತಿರುವ ಹುಡುಗರ ವಿಡಿಯೋಗಳನ್ನ ನೋಡೋಣ ಬನ್ನಿ.

ದೀಪಾವಳಿ ಪಟಾಕಿ ಜೊತೆ ಫೈಟಿಂಗ್!
ಪಟಾಕಿ ಎಷ್ಟು ಸಂಭ್ರಮ ತರುತ್ತದೆಯೋ, ಹಚ್ಚುವಾಗ ಸ್ವಲ್ಪ ಎಡವಟ್ಟು ಮಾಡಿಕೊಂಡರೆ ಅಷ್ಟೇ ದೊಡ್ಡ ಅನಾಹುತಕ್ಕೆ ಕೂಡ ಪಟಾಕಿಗಳು ಕಾರಣವಾಗುತ್ತವೆ ಅನ್ನೋದು ಗ್ಯಾರಂಟಿ. ಪಟಾಕಿ... ಪಟಾಕಿ... ಪಟಾಕಿ... ಪಟ ಪಟ ಪಟಾಕಿ.. ಇಲ್ಲಿದೆ ನೋಡಿ ನೀವು ಹಚ್ಚುವ ಪಟಾಕಿ ಜೊತೆಗೆ ಇವರೆಲ್ಲಾ ಹೇಗೆ ಫೈಟಿಂಗ್ ಮಾಡ್ತಿದ್ದಾರೆ ಅನ್ನೋ ವಿಡಿಯೋ!
ನೋಡಿದ್ರಲ್ಲ, ಇವರೆಲ್ಲಾ ಹೇಗೆ ಪಟಾಕಿಯನ್ನ ಹಿಡಿದು ಭರ್ಜರಿಯಾಗಿ ರಾಕೆಟ್‌ನ ಎಸೆದು & ಎಸೆದು ಎಂಜಾಯ್ ಮಾಡ್ತಿದ್ದಾರೆ ಅಂತಾ. ಆದರೆ ಇವರಿಗೆಲ್ಲಾ ಪಟಾಕಿಗಳ ಅಪಾಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಹೀಗೆ ಇವರೆಲ್ಲಾ ಪಟಾಕಿಗಳನ್ನು ಎಸೆದಾಡುತ್ತಿದ್ದರೆ, ಅಪ್ಪಿತಪ್ಪಿ ಅದು ಕಣ್ಣಿಗೆ ಇಲ್ಲ ಎಲ್ಲಿಗಾದರೂ ಬಡಿದರೆ ಕಥೆ ಏನು? ಎಂಬ ಚರ್ಚೆ ಕೂಡ ಜೋರಾಗಿದೆ. ಹಾಗೇ ಇಲ್ಲೊಬ್ಬ ಮಹಾಶಯ ಕುಕ್ಕರ್ ಒಳಗೆ ಬಾಂಬ್ ಇಟ್ಟು ಬೆಂಕಿ ಹಚ್ಚಿ ಮಜಾ ತಗೊಂಡಿದ್ದಾನೆ!
ಪರಿಸರ ವಾದಿಗಳ ತೀವ್ರ ಆಕ್ರೋಶ!
ಒಟ್ನಲ್ಲಿ ಪಟಾಕಿಗಳ ಜೊತೆಗೆ ಜನರು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಪಟಾಕಿ & ಬೆಂಕಿ ಜೊತೆ ಆಟವಾಡುವ ಸಮಯದಲ್ಲಿ ಸ್ವಲ್ಪ ಹುಷಾರ್ ಇಲ್ಲವಾದರೆ ಸಮಸ್ಯೆ ಗ್ಯಾರಂಟಿ. ಈಗಾಗಲೇ ನೂರಾರು ಜನ ಕಣ್ಣಿಗೆ ಮತ್ತು ಇತರ ಅಂಗಗಳಿಗೆ ಹಾನಿ ಮಾಡಿಕೊಂಡು ತೀವ್ರ ನರಳಾಟ ಪಡುತ್ತಿದ್ದಾರೆ.
ಪಟಾಕಿ ಇಷ್ಟಪಡದ ಜನರಿಗೆ ಈ ರೀತಿ ಪಟಾಕಿಗಳ ಹಾವಳಿ ಪರಿಣಾಮ ಸಿಕ್ಕಾಪಟ್ಟೆ ಇರಿಟೇಷನ್ ಆಗ್ತಿದ್ದು, ಯಾವಾಗ ಇದರಿಂದ ಮುಕ್ತಿ ಸಿಗುತ್ತೆ? ಅಂತಾ ಗೊಣಗುತ್ತಿದ್ದಾರೆ. ಆದರೂ ಪಟಾಕಿ ಮೂಲಕ ಪ್ರಕೃತಿಗೆ ಹಾನಿ ಮಾಡಬಾರದು ಎಂಬ ಆಗ್ರಹ ಕೂಡ ಕೇಳಿ ಬಂದಿದ್ದು, ಪಟಾಕಿ ಬಳಕೆ ಬಗ್ಗೆ ಪರಿಸರ ವಾದಿಗಳು ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications