‘ಪ್ರಶಾಂತ್ ನೀಲ್ ಪಾಕಿಸ್ತಾನದವನಾ? ಯಶ್ ‘ಬಿನ್ ಲಾಡೆನ್’ ಮಗನಾ?’
ಪ್ರಶಾಂತ್ ನೀಲ್ ಪಾಕಿಸ್ತಾನದವನಾ? ಯಶ್ 'ಬಿನ್ ಲಾಡೆನ್' ಮಗನಾ? ಹಿಂಗೆ ಯಾರಾದ್ರು ಸಡನ್ ಮಾತನಾಡಿದ್ರೆ ಕನ್ನಡಿಗರಿಗೆ ಕೋಪ ಬರದೆ ಇರುತ್ತಾ? ಬಂದೇ ಬರುತ್ತೆ. ಯಾಕಂದ್ರೆ 'ಕೆಜಿಎಫ್-1', 'ಕೆಜಿಎಫ್-2' ಮೂಲಕ ಕನ್ನಡ ಸಿನಿ ರಂಗದ ಹೆಸರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಕಿಂಗ್ ಸ್ಟಾರ್ ಯಶ್ & ನೀಲ್ ಅವರಿಗೆ ತಲ್ಲುತ್ತದೆ. ಹೀಗಿದ್ದಾಗ ಪ್ರಶಾಂತ್ ನೀಲ್ ಪಾಕಿಸ್ತಾನದವನಾ? ಯಶ್ 'ಬಿನ್ ಲಾಡೆನ್' ಮಗನಾ? ಅಂತಾ ಕನ್ನಡದ ಸ್ಟಾರ್ ನಿರ್ದೇಶಕ ಪ್ರಶ್ನೆ ಮಾಡಿದ್ದಾರೆ.
ನಿಮಗೆಲ್ಲಾ ಗೊತ್ತಿರುವಂತೆ, ಪ್ಯಾನ್ ಇಂಡಿಯಾ ಜಮಾನದಲ್ಲಿ ಕನ್ನಡ ಸಿನಿಮಾಗಳಿಗೆ ಭರ್ಜರಿ ಡಿಮ್ಯಾಂಡ್ ಇದ್ದು, ಕೆಜಿಎಫ್ & ಕಾಂತಾರ ನಂತರ ಕನ್ನಡ ಸಿನಿಮಾಗಳ ಖದರ್‌ಗೆ ಬಾಲಿವುಡ್ ಶೇಕ್ ಆಗಿದೆ. ಹೀಗಿದ್ದಾಗ ಕನ್ನಡದ ಉತ್ತಮ ಚಿತ್ರಗಳನ್ನು ಪರಭಾಷೆ ಜನರು ಪ್ರೀತಿಸುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ ಕನ್ನಡ ಇಂಡಸ್ಟ್ರಿಯಲ್ಲಿ ಅತ್ಯುತ್ತಮ ಚಿತ್ರ ಬರುತ್ತಿವೆ. ಕನ್ನಡಿಗರ ಪಾಲಿಗೆ & ಕನ್ನಡ ಸಿನಿಮಾ ಇಂಡಸ್ಟ್ರಿಗೆ 'ಕೆಜಿಎಫ್' ರಿಯಲ್ ಗೋಲ್ಡ್ ಅಂತಿದ್ದಾರೆ ಫ್ಯಾನ್ಸ್.

ಬರೀ ದುಡ್ಡು ಮಾಡಿದ ವಿಚಾರಕ್ಕೆ ಮಾತ್ರವಲ್ಲ, ಎಲ್ಲಾ ವಿಭಾಗದಲ್ಲೂ 'ಕೆಜಿಎಫ್' ಹಿಂದಿನ ದಾಖಲೆಗಳನ್ನು ಧೂಳ್ ಧೂಳ್ ಮಾಡಿದೆ. ಹೀಗಿದ್ದಾಗ ಪ್ರಶಾಂತ್ ನೀಲ್ ಪಾಕಿಸ್ತಾನದವನಾ? ಯಶ್ 'ಬಿನ್ ಲಾಡೆನ್' ಮಗನಾ? ಎಂಬ ಪ್ರಶ್ನೆ ಕೇಳಿಬಂದಿದೆ. ಅದರಲ್ಲೂ ಈ ಮಾತನ್ನು ಹೇಳಿರುವುದು ಕನ್ನಡದ ಸ್ಟಾರ್ ಡೈರೆಕ್ಟರ್ ಒಬ್ಬರು, ಆದರೆ ಯಾಕೆ ಹೀಗೆ ಮಾತನಾಡಿದರು ಗೊತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಯಶ್ & ನೀಲ್ ಬಗ್ಗೆ ಮಾತನಾಡಿದ್ದು ಯಾರು?
ಓಂ ಪ್ರಕಾಶ್ ರಾವ್ ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿದ್ದು ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಇಂತಿಪ್ಪ ಓಂ ಪ್ರಕಾಶ್ ರಾವ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಪತ್ರಕರ್ತ ಬಿ.ಗಣಪತಿ ಅವರಿಗೆ ನೀಡಿದ ಸಂದರ್ಶನದಲ್ಲಿ, ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಅವರ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಓಂ ಪ್ರಕಾಶ್ ರಾವ್, ಯಶ್ & ನೀಲ್ ಬಗ್ಗೆ ಹೇಳಿದ್ದೇನು? ಮುಂದೆ ಓದಿ.

'ಪ್ರಶಾಂತ್ ನೀಲ್ ಪಾಕಿಸ್ತಾನದವನಾ? ಯಶ್..'
ಹೌದು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಕನ್ನಡ ಸಿನಿಮಾಗಳ ಈಗಿನ ಪರಿಸ್ಥಿತಿ ಬಗ್ಗೆ ಮಾತನಾಡುವಾಗ ಗರಂ ಆಗಿದ್ದಾರೆ. ಅದು ಯಾಕೆ ಅಂದರೆ, ಕನ್ನಡ ಸಿನಿಮಾಗಳು ಬೆಳೆದು ದೊಡ್ಡ ಮಟ್ಟಿಗೆ ಹೆಸರು ಮಾಡಿದ್ರೂ ಕೆಲವರು ಅಡ್ಡ ಮಾತನಾಡುತ್ತಾರೆ ಅಂತಾ. ಆಗಲೇ 'ಕೆಜಿಎಫ್' ಸಿನಿಮಾ ಮ್ಯಾಟರ್ ಕೂಡ ಬಂದಿದೆ. ಆಗ, ಪ್ರಶಾಂತ್ ನೀಲ್ & ರಾಕಿಭಾಯ್ ಯಶ್ ಅವರ ವಿಷಯ ಪ್ರಸ್ತಾಪವಾಗಿದೆ. ಇಬ್ಬರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ನಿರ್ದೇಶಕ ಓಂ ಪ್ರಕಾಶ್ ರಾವ್, ಪ್ರಶಾಂತ್ ನೀಲ್ & ಯಶ್ ಬೆಳವಣಿಗೆ ಬಗ್ಗೆ ಖುಷಿ ಪಡಿ ಎಂದರು.
ಕೆಜಿಎಫ್ ಕುರಿತು ಹೀಗೆ ಹೇಳಿದರು...
ಹೀಗೆ ಪ್ರಶಾಂತ್ ನೀಲ್ ಮತ್ತು ಯಶ್ ಅವರ ಬೆಳವಣಿಗೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವಾಗಲೆ ನಿರ್ದೇಶಕ ಓಂ ಪ್ರಕಾಶ್ ರಾವ್ ಹೀಗೆ ಹೇಳಿದ್ದಾರೆ. ಕೆಜಿಎಫ್ ಸಿನ್ಮಾ ಬಗ್ಗೆ ಕೆಲವರು ಹೀಗೆ & ಹಾಗೆ ಅಂತಾರೆ. ನಾವು ಕೂಡ ಹಿಂದೆ ಇದಕ್ಕಿಂತ ದೊಡ್ಡ ಸಿನಿಮಾ ಮಾಡಿದ್ದೀವಿ ಅಂತ ಹೇಳುತ್ತಾರೆ. ಆದರೆ ಅದಕ್ಕಿಂತ ಮೊದಲು ಕೆಜಿಎಫ್ ಸಾಧನೆ ಬಗ್ಗೆ ಹೆಮ್ಮೆ ಪಡಿ. ಪ್ರಶಾಂತ್ ನೀಲ್ ಪಾಕಿಸ್ತಾನದವರಲ್ಲ, ಯಶ್ ಬಿನ್ ಲಾಡೆನ್ ಮಗನಲ್ಲ. ಅವರು ನಮ್ಮವರು ಹೀಗಾಗಿ ಅವರ ಬೆಳವಣಿಗೆ ಬಗ್ಗೆ ನಾವು ಖುಷಿ ಪಡಬೇಕು ಅಂತಾ ಹೇಳಿದ್ದಾರೆ ಓಂ ಪ್ರಕಾಶ್ ರಾವ್. ಈ ಮೂಲಕ ಕೆಜಿಎಫ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ ಎಕೆ-47 ಸಿನಿಮಾ ಡೈರೆಕ್ಟರ್.
ಒಟ್ನಲ್ಲಿ ಕೆಜಿಎಫ್ ಸಿನಿಮಾ ಸ್ಯಾಂಡಲ್‌ವುಡ್ ಪಾಲಿಗೆ ಒಂದು ಹೆಮ್ಮೆ ಅನ್ನೋದು ರಿಯಲ್ ಅಂತಾ ಹೇಳಬಹುದು. ಯಾಕಂದ್ರೆ ಹೊರ ರಾಜ್ಯದಲ್ಲಿ ಪರಭಾಷೆಯ ನಟರು ಕನ್ನಡದಿಂದ ಬಂದ ಸಿನಿಮಾಗಳ ಕುರಿತು ತಾತ್ಸಾರ ಮನೋಭಾವದಿಂದ ನೋಡುವ ಸಮಯ ಒಂದಿತ್ತು. ಈ ಭಾವನೆ ಈಗ ಬದಲಾಗಿ ಹೋಗಿದೆ. ಇದನ್ನೆಲ್ಲಾ ಸರಿ ಮಾಡಿದ್ದು ಕೆಜಿಎಫ್ & ಕಾಂತಾರ ಸಿನಿಮಾಗಳು ಅಂತಿದ್ದಾರೆ ಕನ್ನಡ ಸಿನಿಮಾ ಅಭಿಮಾನಿಗಳು. ಹೀಗಾಗಿ ಇದೀಗ ಓಂ ಪ್ರಕಾಶ್ ರಾವ್ ಅವರ ಮಾತು ಕೂಡ ಇದಕ್ಕೆ ಬಲ ನೀಡಿದೆ.












Click it and Unblock the Notifications