ಒಳ್ಳೆ ಹುಡ್ಗ ಪ್ರಥಮ್ ಮೇಲೆ ಮಾರಕಾಸ್ತ್ರಗಳಿಂದ ಗ್ಯಾಂಗ್ ಅಟ್ಯಾಕ್? ಲಾಯರ್ ಜಗದೀಶ್ ಆಡಿಯೋ ವೈರಲ್, ಆಗಿದ್ದೇನು?
Olle Huduga Pratham: ನಟ ಹಾಗೂ ಬಿಗ್ ವಿನ್ನರ್ ಪ್ರಥಮ್ ಮೇಲೆ ಪುಂಡರು ಹಲ್ಲೆ ಮಾಡಿದ್ದಾರೆ. ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಇದರಲ್ಲಿ ನಟ ದರ್ಶನ್ ತೂಗುದೀಪ ಅಭಿಮಾನಿಗಳು ಇದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ ಸಹ ಅಂದು ಸ್ಥಳದಲ್ಲಿದ್ದರು. ದೊಡ್ಡ ಬಳ್ಳಾಪುರದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ವಿಷಯ ಈಗಾಗಲೇ ನಗರ ಪೊಲೀಸ್ ಆಯುಕ್ತರವರೆಗೂ ಹೋಗಿದ್ದು, ಸದ್ಯ ಪ್ರಕರಣದ ಬಗ್ಗೆ ಪ್ರಥಮ್ ಮತ್ತು ಲಾಯರ್ ಜಗದೀಶ್ ಮಾತನಾಡಿರುವ ಆಡಿಯೋ ಸಖತ್ ಸದ್ದು ಮಾಡುತ್ತಿದೆ. ಆಡಿಯೋದಲ್ಲಿ ಚಿತ್ರರಂಗ, ಕಾನೂನು ಹೋರಾಟ, ಡಿಬಾಸ್ ವಿಚಾರಗಳು ಪ್ರಸ್ತಾಪವಾಗಿವೆ.
ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಫ್ಯಾನ್ಸ್ ಎನ್ನಲಾಗುತ್ತಿರುವ ಪುಂಡರ ಗುಂಪು ಡ್ರ್ಯಾಗರ್ ತೋರಿಸಿ ಚುಚ್ಚುವುದಾಗಿ ಬೆದರಿಸಿ ಪ್ರಥಮ್ ಹಲ್ಲೆ ಮಾಡಿದ್ದಾರೆ. ಸದ್ಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಡಿ ಬಾಸ್ ದೇವರು, ಅವರ ಬಗ್ಗೆ ಮಾತನಾಡದಂತೆ ಎಚ್ಚರಿಕೆ ಕೊಟ್ಟ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕೆಲವು ಅಂಶಗಳನ್ನು ಲಾಯರ್ ಜಗದೀಶ್ ಮುಂದೆ ಪ್ರಥಮ್ ಹೇಳಿಕೊಂಡಿದ್ದಾರೆ.

ರಕ್ಷಕ್ ಬುಲೆಟ್ ಸಹ ದರ್ಶನ್ ತುಗೂದೀಪ ಫ್ಯಾನ್. ಪ್ರಥಮ್ ಮೇಲೆ ಹಲ್ಲೆ ವೇಳೆ ಅವರು ಮೂರಡಿ ದೂರದಲ್ಲಿ ಕೂತಿದ್ದರು. ಘಟನೆ ಬಳಿಕ ಪೊಲೀಸರ ಬಳಿ ನನ್ನ ಬಗ್ಗೆ ಏನು ಹೇಳಬೇಡಿ ಅಣ್ಣ ಎಂದು ಪ್ರಥಮ್ ಬಳಿ ರಕ್ಷಕ್ ಕೇಳಿಕೊಂಡಿದ್ದಾನೆ ಎಂಬದು ಅಡಿಯೋದಲ್ಲಿದೆ. ಪುಂಡರು ಡ್ರ್ಯಾಗರ್ ಹಿಡಿದು ಚುಚ್ಚಿ ಬಿಡುತ್ತೇನೆ, ರುಂಡ ಮುಂಡಾ ಬೇರೆ ಬೇರೆ ಮಾಡಿದ್ರೆ ಹೇಗೆ ಎಂದೆಲ್ಲ ಆವಾಜ್ ಹಾಕಿದ್ದಾರೆ. ಇವರ ಭಯಕ್ಕೆ ನನಗೆ ಹುಷಾರು ತಪ್ಪಿದೆ. ಪೊಲೀಸರು ಹೇಳಿಕೆ ನೀಡುವಂತೆ ಹೇಳಿದ್ದಾರೆ ಎಂದು ಪ್ರಥಮ್ ಮಾತನಾಡಿದ್ದಾರೆ.
ಪೊಲೀಸರ ಪ್ರಥಮ್ ಜತೆ ಮಾತುಕತೆ
ದೊಡ್ಡ ಬಳ್ಳಾಪುರದಲ್ಲಿ ದೇವಸ್ಥಾನಕ್ಕೆ ಹೋದಾಗ ಹಲ್ಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿವೈಎಸ್‌ಪಿ, ರಾಜಾನುಕುಂಟೆ ಎಸ್‌ಪಿ ಸಹ ಕರೆ ಮಾಡಿ ನನ್ನೊಂದಿಗೆ ಮಾತನಾಡಿದ್ದಾರೆ. ದೊಡ್ಡಬಳ್ಳಾಪುರ ಸಾಧಿಕ್ ಪಾಷಾ ಅವರ ವ್ಯಾಪ್ತಿಯಲ್ಲಿ ಈ ಘಟನೆ ಬರುತ್ತದೆ. ಅವರು ನನ್ನೊಂದಿಗೆ ಮಾತನಾಡಿದ್ದಾರೆ. ನಾನೇ ಈ ಬಗ್ಗೆ ಮಾತನಾಡುತ್ತೇನೆ ಸರ್ ಎಂದೆ. ಸದ್ಯಕ್ಕೆ ಬಿಟ್ಟು ಬಿಡಿ ಎಂದಿದ್ದೇನೆ ಎಂದು ಪ್ರಥಮ್ ಹೇಳಿದ್ದಾರೆ. ಇದಕ್ಕೆ ಲಾಯರ್ ಜಗದೀಶ್, ಅವರೆಲ್ಲ ಸೇರಿ ನಿನಗೆ ಡ್ರ್ಯಾಗರ್ ನಿಂದ ಚುಚ್ಚಿದ್ದರೆ ಕಥೆ ಏನು. ಸೆಲೆಬ್ರೆಟಿಗೆ ರಕ್ಷಣೆ ಕೊಡಬೇಕು. ಇದು ಸಣ್ಣ ವಿಷಯವೇ ಅಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಹಲ್ಲೆ ಘಟನೆ ಮನೆಯಲ್ಲಿ ಗೊತ್ತಿಲ್ಲ. ನಾನು ಹೇಳಿಲ್ಲ. ನಟ ದರ್ಶನ್ ಸರ್ ಜೈಲಿನಲ್ಲಿದ್ದ ಬ್ಯಾರಕ್‌ನಲ್ಲಿ ಅವರೊಂದಿಗೆ ಇದ್ದ ಅರೋಪಿ ಸಹ ಸ್ಥಳದಲ್ಲಿದ್ದ, ಅವರು ಸೇರಿ ಪ್ರಥಮ್ ಮೇಲೆ ಹಲ್ಲೆ ಮಾಡಿದ್ದಾನೆ ಅಂತಲೂ ಹೇಳಲಾಗುತ್ತಿದೆ. ಈ ಬಗ್ಗೆ ಲಾಯರ್ ಜಗದೀಶ್ ಅವರು ಪ್ರಥಮ್ ಅನ್ನು ಪ್ರಶ್ನಿಸಿದ್ದು ಆಡಿಯೋದಲ್ಲಿದೆ. ನಾನು ಈ ಹಿಂದೆ ದರ್ಶನ್ ಫ್ಯಾನ್ಸ್ ಕುರಿತು ಮಾತನಾಡಿದ್ದಾಗಿ ಪ್ರಥಮ್ ಹೇಳಿದ್ದಾರೆ. ಅವರಿಗೆ ದರ್ಶನ್ ಬಂಧನ ಬಳಿಕ ಒಂದಷ್ಟು ಬೆದರಿಕೆಗಳು ಬಂದಿದ್ದು ವರದಿ ಆಗಿತ್ತು.
ದರ್ಶನ್ ಜಾಮೀನು ರದ್ದಾದರೆ ಕೆಟ್ಟ ಹೆಸರು..!
ನಾನು ಕಾನೂನಾತ್ಮಕವಾಗಿ ಮುಂದುವರಿದರೆ ದರ್ಶನ್ ಅವರ ಆರ್‌ಆರ್ ನಗರದ ಪ್ರಕರಣದಲ್ಲಿ ಅವರ ಜಾಮೀನು ರದ್ದಾದರೆ ನನಗೆ ಕೆಟ್ಟ ಹೆಸರು ಬರುತ್ತದೆ. ನನಗೆ ನನ್ನ ಸಿನಿಮಾ ರಿಲೀಸ್ ಆಗುವುದು ಬಾಕಿ ಇದೆ. ಆದರೆ ನಾನು ಮುಂದೆ ಈ ಬಗ್ಗೆ ದೂರು ಕೊಡುತ್ತೇನೆ. ಸಮಾರು 15 ಜನ ಹುಡುಗರು ಇದ್ದರು. ಒಂದಷ್ಟು ಮಾರಕಾಸ್ತ್ರ ಇಟ್ಟುಕೊಂಡಿದ್ದರು ಎಂದು ಪ್ರಥಮ್ ಹೇಳಿಕೊಂಡಿದ್ದಾರೆ. ಇದಕ್ಕೆ ಲಾಯರ್ ಜಗದೀಶ್ ಅವರು, ಸ್ಥಳದಲ್ಲಿದ್ದ ರಕ್ಷಕ್ ಬುಲೆಟ್ ಗೆ ಇದೆಲ್ಲ ಗೊತ್ತಿರುತ್ತದೆ. ಪ್ರಥಮ್ ಬೇರೆಯವರ ಚಿಂತೆ, ಜಾಮೀನು ರದ್ದು ಬಿಟ್ಟು ಬಿಡು. ನಿನ್ನ ಜೀವ ಮುಖ್ಯ. ನಿನಗೆ ಹೊರಗಡೆ ಬಂದಾಗ, ಮುಂದೆ ಯಾವಾಗಲಾದರೂ ಚುಚ್ಚಿ ಏನಾದರು ಮಾಡಿದರೆ ಕಥೆ ಏನು? ಎಂದು ಲಾಯರ್ ಜಗದೀಶ್ ಮಾತನಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಎಸ್‌ಪಿ ಕಡೆಯಿಂದ ಹೆಚ್ಚಿನ ಮಾಹಿತಿ ಗೊತ್ತಾಗುತ್ತದೆ. ಅವರು ಹೇಳಿಕೆ ನೀಡುವಂತೆ ನನಗೆ ಕರೆಯುತ್ತಾರೆ ಎಂದು ಪ್ರಥಮ್ ತಿಳಿಸಿದ್ದಾರೆ.
ಪ್ರಥಮ್ ಮೇಲೆ ಹಲ್ಲೆ ಮಾಡಲು ಕಾರಣವೇನು? ಇವರೆಲ್ಲ ಡಿ.ಬಾಸ್ ಅಭಿಮಾನಿಗಳ, ಅವರ ಮೇಲಿನ ಅಭಿಮಾನದಿಂದ ಹೀಗೆಲ್ಲ ಮಾಡಿದರಾ, ಇದರಲ್ಲಿ ಯಾರೆಲ್ಲರ ಕೈವಾಡ ಇದೆ ಎಂಬೆಲ್ಲ ಪ್ರಶ್ನೆಗಳಿಗೆ ಮಾಹಿತಿ ಪೊಲೀಸ್ ತನಿಖೆಯಿಂದ ಉತ್ತರ ಸಿಗಲಿದೆ.












Click it and Unblock the Notifications