ಉಗುರಿನಲ್ಲೇ ಮುದ್ದೆ ಮುರಿಯುವ ನಿವೇದಿತಾ ಗೌಡಗೆ ಹನುಮಂತ ಸಖತ್ ಠಕ್ಕರ್
ಕನ್ನಡದ ಸಂಗೀತ ನಿರ್ದೇಶಕ ಹಾಗೂ ನಟ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ಬಳಿಕ ಸೋಶಿಯಲ್ ಮೀಡಿಯಾ ರೀಲ್ಸ್, ವಿಡಿಯೋ ಹಾಗೂ ಟ್ರಾವೆಲ್‌ನಲ್ಲಿ ಬ್ಯೂಸಿಯಾಗಿದ್ದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಇದೀಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಕೂಡ ಸ್ಪರ್ಧಿಯಾಗಿದ್ದಾರೆ.
ಯಾವಾಗಲೂ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ನಿವೇದಿತಾ ಗೌಡ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಪಿಂಕ್ ಪ್ರಾಕ್‌ನಲ್ಲಿ ಎಲ್ಲರ ಗಮನ ಸೆಳೆದರು. ಆದರೆ ಈ ಬಾರಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ನಿವೇದಿತಾ ಗೌಡ ಅವರ ಕೈ ಬೆರಳಿನ ಉಗುರುಗಳು. ಸುಮಾರು ಎರಡು-ಮೂರು ಇಂಚು ಉಗುರಿಗೆ ನಿವೇದಿತಾ ಗೌಡ ಗುಲಾಬಿ ಬಣ್ಣದ ನೇಲ್ ಪಾಲಿಶ್ ಹಚ್ಚಿದ್ದರು.

ನಿವೇದಿತಾ ಗೌಡ ಉಗುರಿನ ಬಗ್ಗೆ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದ ವೇದಿಕೆ ಮೇಲೆ ಚರ್ಚೆ ನಡೆದಿದ್ದು, ಹಿರಿಯ ನಟಿ ಶ್ರುತಿ, ನಿವೇದಿತಾ ಗೌಡ ಅವರ ಬಳಿ 'ಇಷ್ಟು ಉದ್ದದ ಉಗುರುಗಳನ್ನು ಇಟ್ಟುಕೊಂಡಿದ್ದೀಯಲ್ಲಾ, ಯಾರಾದರೂ ನಿಮಗೆ ಮುದ್ದೆ ಕೊಟ್ಟರೆ ಅದನ್ನು ಹೇಗೆ ತಿನ್ನುತ್ತೀರಿ? ಉಗುರಿನಿಂದ ತಿನ್ನಲು ತೊಂದರೆ ಆಗಲ್ವಾ' ಎಂದು ಪ್ರಶ್ನಿಸಿದ್ದಾರೆ.
ನಟಿ ಶ್ರುತಿ ಪ್ರಶ್ನೆಗೆ ಉತ್ತರಿಸಿದ ನಿವೇದಿತಾ ಗೌಡ, 'ನಾನು ಮುದ್ದೆ ತಿನ್ನಲು ಸಾಮಾನ್ಯವಾಗಿ ಚಮಚ ಹಾಗೂ ಫೋರ್ಕ್ ಬಳಸುತ್ತೇನೆ. ಈಗ ಈ ಉಗುರುಗಳನ್ನೇ ಮುದ್ದೆ ತಿನ್ನಲು ಬಯಸುತ್ತೇನೆ. ಚಮಚ ಹಾಗೂ ಫೋರ್ಕ್ ರೀತಿ ಒಂದು ಉಗುರಿನಲ್ಲಿ ಮುದ್ದೆಯನ್ನು ಕಟ್ ಮಾಡಿ ಮತ್ತೊಂದರಲ್ಲಿ ಚುಚ್ಚಿ ತಿನ್ನುತ್ತೇನೆ' ಎಂದಿದ್ದಾರೆ. ನಿವೇದಿತಾ ಗೌಡ ಉತ್ತರ ಕೇಳಿ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದಲ್ಲಿ ಎಲ್ಲರೂ ಶಾಕ್ ಆಗಿದ್ದಾರೆ.

ಇನ್ನು ನಿವೇದಿತಾ ಗೌಡ ಅವರ ಉಗುರುಗಳನ್ನು ಹೊಗಳುತ್ತಿದ್ದ ನಿರೂಪಕಿ ಅನುಪಮಾ ಗೌಡ ಇದೇ ವಿಚಾರವನ್ನು ಚರ್ಚಿಸಲು ಬಿಗ್ ಬಾಸ್ ಕನ್ನಡ ಸೀಜನ್ 11ರ ವಿನ್ನರ್ ಪ್ರಸ್ತುತ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದ ಸ್ಪರ್ಧಿ ಹನುಮಂತ ಅವರನ್ನು ಕೇಳಿದರು, 'ಇದು ಸಂಪೂರ್ಣ ನಿಜವಾದ ಉಗುರು ನಿಮಗೆ ಏನು ಅನಿಸುತ್ತದೆ ಹನುಮಂತು ಅವರೇ' ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಹನುಮಂತ, 'ನಾನು ಒಂದು ಉಗುರು ಬಿಟ್ಟಿದ್ದೇನೆ ಕೆರೆದುಕೊಳ್ಳೋಕೆ' ಎಂದು ಉತ್ತರಿಸಿದ್ದಾರೆ. ಹನುಮಂತ ಅವರ ಉತ್ತರ ಕೇಳಿ ಎಲ್ಲರೂ ನಕ್ಕಿದ್ದು, ಹನುಮಂತ ಒಂದೇ ಉತ್ತರದಲ್ಲಿ ವೇದಿಕೆ ಮೇಲಿದ್ದವರ ಬಾಯಿ ಮುಚ್ಚಿಸಿದ್ದಾರೆ.












Click it and Unblock the Notifications