Nayanthara Divorce: ನಟಿ ನಯನತಾರಾ-ವಿಘ್ನೇಶ್‌ ಡಿವೋರ್ಸ್‌ ವಿಚಾರಕ್ಕೆ ಕೊನೆಗೂ ಸಿಕ್ತು ಕ್ಲಾರಿಟಿ

ಲೇಡಿ ಸೂಪರ್‌ಸ್ಟಾರ್‌ ನಟಿ ನಯನತಾರಾ ಹಾಗೂ ವಿಘ್ನೇಶ್‌ ಶಿವನ್‌ ದಂಪತಿ ಡಿವೋರ್ಸ್‌ ಪಡೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಯನತಾರಾ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾದ ಪೋಸ್ಟ್‌ ಕೂಡ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಮದುವೆ ಹಾಗೂ ಪತಿಯ ಬಗ್ಗೆ ಬೇಸರದ ಸಾಲುಗಳು ಆ ಪೋಸ್ಟ್‌ನಲ್ಲಿದ್ದು, ಮದುವೆಯಾಗಿದ್ದು ತಪ್ಪು, ನನ್ನ ಒಂಟಿಯಾಗಿ ಬಿಟ್ಟುಬಿಡಿ ಎಂದು ಬರೆದಿದ್ದ ಸ್ಕ್ರೀನ್‌ಶಾಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಚೆನ್ನಾಗಿಯೇ ಇದ್ದ ಜೋಡಿ ಮಧ್ಯೆ ಇದ್ದಕ್ಕಿದ್ದಂತೆ ಏನಾಯ್ತು? ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಈ ಸುದ್ದಿ ನಿಜಾನಾ? ಸುಳ್ಳಾ? ಎಂದು ಈವರೆಗೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ನಯನತಾರಾ ಕೆಲ ಫೋಟೋಗಳ ಮೂಲಕ ಡಿವೋರ್ಸ್‌ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ.

ವೈರಲ್ ಆಗಿರುವ ಸ್ಕ್ರೀನ್‌ಶಾಟ್‌ ನಯನತಾರಾ ಅವರ ಇನ್‌ಸ್ಟಾಗ್ರಾಂ ಸ್ಟೋರಿ ಎಂದು ಹೇಳಲಾಗಿತ್ತು. ನಯನತಾರಾ ಹಾಗೂ ವಿಘ್ನೇಶ್‌ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂದೇ ಹೇಳಲಾಗಿತ್ತು. ಆ ವೈರಲ್‌ ಸ್ಕ್ರೀನ್‌ಶಾಟ್‌ನಲ್ಲಿ, ʼಒಬ್ಬ ಮೂರ್ಖನನ್ನು ಮದುವೆಯಾಗುವುದು ತಪ್ಪು, ಪತಿಯ ಕೃತ್ಯಗಳಿಗೆ ಹೊಣೆ ಹೊರಬೇಕಿಲ್ಲ, ಪುರುಷರು ಸಾಮಾನ್ಯವಾಗಿ ಬೆಳೆಯುವುದಿಲ್ಲ. ದಯವಿಟ್ಟು ನನ್ನನ್ನು ಒಬ್ಬಳೇ ಇರಲು ಬಿಡಿ. ನಾನು ತುಂಬಾ ಬೇಸತ್ತಿದ್ದೇನೆʼ ಎಂಬ ಸಾಲುಗಳಿದ್ದವು. ಹಾಗಾಗಿ ನಯನತಾರಾ ಡಿವೋರ್ಸ್‌ಗೆ ನಿರ್ಧರಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.

nayanthara-visits-palani-temple-with-family-shuts-down-divorce-rumors

ಈ ಬಗ್ಗೆ ನಯನತಾರಾ ಅಥವಾ ವಿಘ್ನೇಶ್‌ ಶಿವನ್‌ ಬಹಿರಂಗವಾಗಿ ಸ್ಪಷ್ಟನೆಯೂ ನೀಡಿರಲಿಲ್ಲ. ಮತ್ತೊಂದೆಡೆ ನಯನತಾರಾ ಅಭಿಮಾನಿಗಳು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಈ ವದಂತಿ ಬಗ್ಗೆ ಸ್ಪಷ್ಟನೆ ಕೋರಿದ್ದರು. ಆದರೂ ಇಬ್ಬರಿಂದಲೂ ಅಥವಾ ಅವರ ತಂಡದಿಂದಲೂ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಒಂದು ವೇಳೆ ಇದು ಸುಳ್ಳಾಗಿದ್ದರೆ ನಟಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಸಂದೇಶ ಹಾಕಿ ಕ್ಲಾರಿಟಿ ಕೊಡಬಹುದಿತ್ತು. ಆದರೆ ಅವರು ಈ ಬಗ್ಗೆ ಮೌನ ವಹಿಸಿರುವುದರಿಂದ ಈ ಸುದ್ದಿ ನಿಜವೇ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಇನ್ನು ಡಿವೋರ್ಸ್‌ ವದಂತಿ ಎಲ್ಲೆಡೆ ಜೋರಾಗಿರುವಾಗಲೇ ನಯನತಾರಾ ಅವರು ಅಚ್ಚರಿ ಮೂಡಿಸಿದ್ದಾರೆ. ಕೆಲ ಫೋಟೋಗಳ ಮೂಲಕ ಅವರು ಡಿವೋರ್ಸ್‌ ವಿಚಾರಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಹೌದು, ಈ ವದಂತಿಗಳಿಗೆ ಉತ್ತರವಾಗಿ ನಯನತಾರಾ ತನ್ನ ಪತಿ ವಿಘ್ನೇಶ್ ಶಿವನ್ ಮತ್ತು ಮಕ್ಕಳೊಂದಿಗೆ ತಮಿಳುನಾಡಿನ ಪಳನಿ ಮುರುಗನ್ (ಸುಬ್ರಹ್ಮಣ್ಯೇಶ್ವರ) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದಂಪತಿ ಅಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಿ, ಸಾಷ್ಟಾಂಗ ನಮಸ್ಕಾರ ಮಾಡಿರುವ ಫೋಟೋಗಳು ಹಾಗೂ ಈ ದೃಶ್ಯಗಳು ಮತ್ತು ಫೋಟೋಗಳು ವೈರಲ್ ಆಗಿವೆ. ಇದರಿಂದ ನಯನತಾರಾ ಮತ್ತು ಪತಿಯ ನಡುವೆ ಉತ್ತಮ ಸಂಬಂಧವಿದೆ ಎಂಬುದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಡಿವೋರ್ಸ್‌ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

nayanthara-visits-palani-temple-with-family-shuts-down-divorce-rumors

ಪಳನಿ ಮುರುಗನ್ ದೇವಸ್ಥಾನವು ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯಲ್ಲಿ ಇದೆ. ಇದು ಚೆನ್ನೈಯಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿದೆ. ಈ ದೇವಸ್ಥಾನಕ್ಕೆ ಹಲವಾರು ಪ್ರಸಿದ್ಧರು ಭೇಟಿ ನೀಡುತ್ತಾರೆ. ನಯನತಾರ ಕೂಡ ತನ್ನ ಕುಟುಂಬದೊಂದಿಗೆ ತಿರುಮಲ, ಶ್ರೀಕಾಳಹಸ್ತಿ ಮುಂತಾದ ದೇವಾಲಯಗಳಿಗೆ ಆಗಾಗ್ಗೆ ಹೋಗಿರುತ್ತಾರೆ. ಈ ದೇವಸ್ಥಾನಕ್ಕೆ ದಂಪತಿ ಸಮೇತ ಭೇಟಿ ನೀಡಿರುವುದರಿಂದ ಡಿವೋರ್ಸ್‌ ವದಂತಿಗೆ ಬ್ರೇಕ್‌ ಬಿದ್ದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+