ಗಾಯಕಿ ಪೃಥ್ವಿ ಭಟ್‌ಗೆ ಮಾಟ-ಮಂತ್ರ, ವಶೀಕರಣ: ತಂದೆಯ ವಿರುದ್ಧವೇ ಇದೆಂಥಾ ಆರೋಪ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪದ ಮಾಜಿ ಸ್ಪರ್ಧಿ ಗಾಯಕಿ ಪೃಥ್ವಿ ಭಟ್ ಮದುವೆ ವಿವಾದದಲ್ಲಿ ಖ್ಯಾತ ಸಂಗೀತ ಶಿಕ್ಷಕ ಹಾಗೂ ಸರಿಗಮಪ ಕಾರ್ಯಕ್ರಮದ ಜ್ಯೂರಿ ನರಹರಿ ದೀಕ್ಷಿತ್ ಅವರ ಹೆಸರು ಕೇಳಿಬಂದಿತ್ತು. ಸ್ವತಃ ಪೃಥ್ವಿ ಭಟ್ ತಂದೆ ನರಹರಿ ದೀಕ್ಷಿತ್ ವಿರುದ್ಧ ವಶೀಕರಣ ಆರೋಪ ಮಾಡಿದ್ದರು.
ಇದೀಗ ಈ ಆರೋಪದ ಬಗ್ಗೆ ಸರಿಗಮಪ ಕಾರ್ಯಕ್ರಮದ ಜ್ಯೂರಿ ನರಹರಿ ದೀಕ್ಷಿತ್ ಪ್ರತಿಕ್ರಿಸಿದ್ದು, 'ವಶೀಕರಣ ಎನ್ನುವ ಪದವನ್ನು ನಾನು ಹಿಂದೆ ಎಲ್ಲಿಯೂ ಬಳಸಿಲ್ಲ. ನನಗೆ ಆ ಪದದ ಬಗ್ಗೆ ಗೊತ್ತೇ ಇಲ್ಲ. ಒಂದು ತಿಂಗಳಲ್ಲಿ ಒಬ್ಬರನ್ನು ವಶೀಕರಣ ಮಾಡಿ ಯಾರನ್ನೋ ಯಾರಿಗೋ ಮದುವೆ ಮಾಡಿಸುವುದಾದರೆ ಯಾರಿಗೆ ಬೇಕಾದರೂ ಮದುವೆ ಮಾಡಬಹುದು. ಒಂದು ತಿಂಗಳಲ್ಲಿ ಅದೆಲ್ಲಾ ಆಗುತ್ತಾ. ಮೊದಲನೆಯದಾಗಿ ನನಗೆ ಅದರ ಬಗ್ಗೆ ಗೊತ್ತೇ ಇಲ್ಲ. ಆದರೆ ಅವರು ಅದರಲ್ಲಿ ನಿಪುಣರಿರಬಹುದು' ಎಂದರು.

'ಪೃಥ್ವಿ ಪ್ರೀತಿ ವಿಚಾರ ಅವರ ಮನೆಯಲ್ಲಿ ಗೊತ್ತಾಗಿ, ಅವಳಿಗೆ ಕಿರುಕುಳ ಶುರುವಾಯ್ತು. ನಾನು ಹೋಗಿ ಬಂದ ಮೇಲೆ ಅವರ ಮನೆಯಲ್ಲಿ ಹೊಡೆದಾಟ ಕೂಡ ಶುರುವಾಯ್ತು. ನಾನು ಹೋಗಿ ಬಂದ ಮೇಲೆ ಬದಲಾವಣೆ ಆಗಿದ್ದು ಯಾಕೆಂದರೆ ಅವರ ಹಿಂಸೆ ಜಾಸ್ತಿ ಆಯ್ತು. ಅವರ ತಾಯಿ ಮಾತನಾಡುವುದು ನೋಡಿದರೆ ಅವರು ಬಳಸುವ ಪದಗಳನ್ನು ನೋಡಿದರೆ ಅವರು ಬ್ರಾಹ್ಮಣರೇ ಅಲ್ಲ, ಅವರು ಮನುಷ್ಯರೇ ಅಲ್ಲ ಅನಿಸುತ್ತದೆ' ಎಂದು ಹೇಳಿದರು.
'ಅವರು ನನ್ನ ಬಗ್ಗೆ ಆರೋಪ ಮಾಡಿದ ಆಡಿಯೋ ಹರಿದಾಡುತ್ತಿದ್ದರು ನಾನು ಸುಮ್ಮನಾಗಿದ್ದೆ. ನಾನು ಏನೂ ಮಾಡದೇ ಇದ್ದ ಮೇಲೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಸುಮ್ಮನಿದ್ದೆ. ಈಗ ಮಾತನಾಡುತ್ತಿದ್ದೇನೆ ಯಾಕೆ ಅಂದರೆ ನನ್ನ ಶಿಷ್ಯರಿಂದ ಒತ್ತಡ ಇದೆ. ನೀವು ಉತ್ತರ ಕೊಡಿ ಇಲ್ಲ ನಾವೇ ಮಾತನಾಡುತ್ತೇವೆ ಎಂದು ಹೇಳುತ್ತಿದ್ದಾರೆ'.

'ಪೃಥ್ವಿ ಭಟ್ ಮದುವೆಯಾಗಿದ್ದು ಇಪ್ಪತ್ತೇಳನೆ ತಾರೀಖು, ಇಪ್ಪತ್ತೆಂಟಕ್ಕೆ ಅವರು ಅವರ ಮೂಲ ಊರು ಕಾಸರಗೋಡಿಗೆ ಹೋಗಬೇಕೆಂದುಕೊಂಡಿದ್ದರು. ಹದಿನೈದು ಇಪ್ಪತ್ತು ದಿನದ ಮುಂಚೆ ಇಪ್ಪತ್ತೆಂಟನೇ ತಾರೀಖಿನ ಬಳಿಕ ಹತ್ತು ದಿನ ಎಲ್ಲಿಯೂ ಕಾರ್ಯಕ್ರಮ ಇಟ್ಟುಕೊಳ್ಳಬೇಡ ಎಂದು ಹೇಳಿದ್ದರು. ಇದು ಶಿವಣ್ಣ ಅವರಿಗೆ ಗೊತ್ತು, ಅವರ ಪತ್ನಿಗೆ ಗೊತ್ತು. ಅವರು ಅವಳನ್ನು ಹತ್ತು ದಿನ ಬೆಂಗಳೂರು ಬಿಡಿಸಿ ಊರಿಗೆ ಕರೆದುಕೊಂಡು ಹೋಗಿ ಒಬ್ಬ ಹುಡುಗನ ಜೊತೆ ಎಂಗೇಜ್‌ಮೆಂಟ್‌ಗೆ ತಯಾರಿ ಮಾಡಿಕೊಂಡಿದ್ದರು' ಎಂದರು.
'ಹತ್ತು ದಿನಗಳ ಕಾಲ ಯಾವುದೇ ಕಾರ್ಯಕ್ರಮ ಒಪ್ಪಿಕೊಳ್ಳಬೇಡ, ರೆಕಾರ್ಡಿಂಗ್ ಇಟ್ಟುಕೊಳ್ಳಬೇಡ ಎಂದು ಕಾಸರಗೋಡಿಗೆ ಟಿಕೆಟ್ ಮಾಡಿಸಿದ್ದರು. ಇದರಿಂದ ಅವಳಿಗೆ ಖಾತರಿ ಆಯ್ತು. ನನ್ನನ್ನು ಊರಿಗೆ ಕರೆದುಕೊಂಡು ಹೋಗಿ ಆ ಹುಡುಗ ಜೊತೆ ಮದುವೆ ಮಾಡುತ್ತಾರೆ. ನನ್ನ ಅಭಿನಾ ಬೇರೆ ಮಾಡುತ್ತಾರೆ. ನನ್ನ ಸಂಪರ್ಕನೇ ಕಡಿದು ಬಿಡುತ್ತಾರೆ ಅಂತಾ ಗೊತ್ತಾಯ್ತು. ಅವಳಿಗೆ ಗೊತ್ತಾದ ದಿನದಿಂದ ಅವಳಲ್ಲಿ ಬದಲಾವಣೆ ಶುರು ಆಗಿದೆ'.
'ಮಾಟಮಂತ್ರ ಮಾಡಿರುವುದು ಅವರು. ಯಾಕೆಂದರೆ ಅವರ ಮೂಲ ಆ ಕಡೆಯವರೇ. ಬಹುಶಃ ಯಾರನ್ನೋ ಹಿಡಿದು ಮಾಡಿರಬಹುದು ನನಗೆ ಗೊತ್ತಿಲ್ಲ. ಹೀಗೆ ಒಂದೇ ತಿಂಗಳಲ್ಲಿ ಯಾರಿಗಾದರೂ ಮದುವೆ ಮಾಡಿಸುವುದಾದರೆ ಅವರು ನನಗೂ ಅದನ್ನು ಕಲಿಸಿಕೊಡಲಿ ನಾನು ಮಾಡುತ್ತೇನೆ. ಯಾಕೆಂದರೆ ನಮ್ಮ ಹಿಂದೂ ಸಮಾಜ ಇನ್ನೂ ಬೆಳೆಯಬೇಕಿದೆ. ಅಸಲಿ ವಿಚಾರ ಏನೆಂದರೆ ಅವಳು ಗುರುವಾರ ಮದುವೆಯಾಗಿದ್ದು ಯಾಕೆ ಅಂದರೆ ಶುಕ್ರವಾರ ಊರು ಬಿಡಿಸುತ್ತಾರೆ ಎನ್ನುವ ಭಯದಲ್ಲಿ' ಎಂದು ನರಹರಿ ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications