Namratha Gowda: ನಿಮ್ಮ ದ್ವೇಷ ಕಂಡು ಬೇಜಾರಾಯ್ತು: ನಮ್ರತಾ ಗೌಡ ಭಾವುಕ ಪೋಸ್ಟ್
ಕಿರುತೆರೆ ನಟಿ, ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ ಸದ್ಯ ಕರ್ಣ ಸೀರಿಯಲ್‌ನಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ನಮ್ರತಾ ಇದ್ದಕ್ಕಿದ್ದಂತೆ ಬೇಸರದ ಪೋಸ್ಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿನ ಬೆಳವಣಿಗೆಯಿಂದ ನಮ್ರತಾ ಬೇಸರಗೊಂಡಿದ್ದು, ಪೋಸ್ಟ್ ಮೂಲಕ ತಮ್ಮ ಸಂಕಟ ಹೊರಹಾಕಿದ್ದಾರೆ. ತಮ್ಮನ್ನು ಹಲವರು ದ್ವೇಷ ಮಾಡುತ್ತಿದ್ದು, ಇದಕ್ಕೆ ಕಾರಣವೇನು ಎಂದು ಬಹಿರಂಗಪಡಿಸಿದ್ದಾರೆ.
ಬಿಗ್‌ಬಾಸ್ ಬಳಿಕ ಕಿರುತೆರೆಗೆ ಮರಳಿರುವ ನಮ್ರತಾ ಗೌಡ, ಕಿರಣ್ ರಾಜ್ ನಟನೆಯ ಕರ್ಣ ಸೀರಿಯಲ್‌ನಲ್ಲಿ "ನಿತ್ಯ" ಎನ್ನುವ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತ್ರಿಕೋನ ಪ್ರೇಮಕಥೆ ಆಧಾರಿತ ಈ ಧಾರಾವಾಹಿಯಲ್ಲಿ ಕರ್ಣನಾಗಿ ಕಿರಣ್ ರಾಜ್, ನಿತ್ಯ ಆಗಿ ನಮ್ರತಾ ಹಾಗೂ ನಿಧಿ ಪಾತ್ರದಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆ. ಇತ್ತೀಚಿನ ಪ್ರೋಮೋದಲ್ಲಿ ಕರ್ಣ ಹಾಗು ನಿತ್ಯ ಮದುವೆಯಾಗಿದ್ದರು. ಇದು ವೈರಲ್ ಕೂಡ ಆಗಿತ್ತು.

ಆದರೆ ಈ ಪ್ರೋಮೋ ಬಂದ ನಂತರ ನಮ್ರತಾ ಗೌಡ ಅವರ ನಿತ್ಯ ಪಾತ್ರವನ್ನು ಪ್ರೇಕ್ಷಕರು ದ್ವೇಷಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕೆಟ್ಟ ಕಾಮೆಂಟ್ ಕೂಡ ಹಾಕಿದ್ದಾರಂತೆ. ಇದನ್ನು ಗಮನಿಸಿದ ನಮ್ರತಾ, ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಮ್ಮ ಬೇಸರ ಹಂಚಿಕೊಂಡಿದ್ದಾರೆ.
ಸುಮಾರು 23 ವರ್ಷಗಳ ಸುದೀರ್ಘ ನಟನೆಯ ಅನುಭವದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳು... ಕೊಂಚ ಬ್ರೇಕ್‌ನ ನಂತರ ಕೇಳಿದ ಪಾತ್ರವೇ "ನಿತ್ಯ". ಕಥೆ ಮತ್ತು ಪಾತ್ರದ ಆಳ ಕೇಳಿದಾಗ ನನಗೆ ತುಂಬ ಹಿಡಿಸಿದವಳು. ಬಲಿಷ್ಠಳು, ಸ್ವತಂತ್ರಳು, ಸದಾ ತನಗಿಂತ ಇತರರ ಅಗತ್ಯಗಳನ್ನು ಮೊದಲು ಯೋಚಿಸುವಳು, ಇಷ್ಟೆಲ್ಲ ಲೇಯರ್ಸ್‌ಗಳನ್ನು ಒಳಗೊಂಡಿರುವ ಪಾತ್ರವನ್ನು ಒಲ್ಲೆ ಎನ್ನಲು ಮನಸಾಗಲಿಲ್ಲ ಎಂದು ತಮ್ಮ ಪಾತ್ರದ ಆಯ್ಕೆ ಬಗ್ಗೆ ನಮ್ರತಾ ವಿವರಿಸಿದ್ದಾರೆ.
ನಿತ್ಯ ನಾನು ಪೋಷಿಸಿದ ಪಾತ್ರ
"ಇತ್ತೀಚಿನ ಪ್ರೋಮೋ ಕಂಡು ನಿತ್ಯಾಳ ಮೇಲೆ ನೀವು ತೋರಿಸುತ್ತಿರುವ ದ್ವೇಷ ಕಂಡು ಬೇಸರವುಂಟಾಯಿತು ಎಂದಿದ್ದಾರೆ ನಮ್ರತಾ. Its okay, ನಿತ್ಯ ನಾನು ಪೋಷಿಸಿದ ಪಾತ್ರ. ತುಂಬಾ ಪ್ರೀತಿಯಿಂದ ಒಪ್ಪಿದ ಪಾತ್ರ. ಅವಳೊಂದಿಗೆ ನಾನಿದ್ದೇನೆ. ಅವಳನ್ನು ನನ್ನನ್ನು ಪ್ರೀತಿಸುವ ಅಭಿಮಾನಿಗಳು ಸದಾ ನಮ್ಮೊಂದಿಗೆ ಇರುವರು ಎಂದು ಭಾವಿಸುವೆ. ಪ್ರೀತಿಯಿಂದ ನಿಮ್ಮವಳು" ಎಂದು ನಮ್ರತಾ ಬರೆದುಕೊಂಡಿದ್ದಾರೆ.
ಎರಡು ವರ್ಷಗಳ ಬಳಿಕ ಕಿರಣ್ ರಾಜ್ ಕರ್ಣ ಸೀರಿಯಲ್ ಮೂಲಕ ಧಾರಾವಾಹಿಗೆ ವಾಪಸ್ ಆಗಿದ್ದರು. ಇದರಲ್ಲಿ ಇಬ್ಬರು ನಾಯಕಿಯರಿದ್ದು, ಭವ್ಯಾ-ನಮ್ರತಾ ಸಹೋದರಿಯರಾಗಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಟಿಆರ್‌ಪಿಯಲ್ಲೂ ಕರ್ಣ ಸೀರಿಯಲ್ ದಾಖಲೆ ಬರೆದಿತ್ತು. ಸೀರಿಯಲ್ ಶುರುವಾದಾಗಿನಿಂದಲೂ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದು, ಇತ್ತೀಚಿನ ಎಪಿಸೋಡ್‌ಗಳಲ್ಲಿ ನಮ್ರತಾ ಅವರ ಪಾತ್ರದ ಬಗ್ಗೆ ಕೆಲವರು ಅಸಮಾಧಾನ ಹೊರಹಾಕಿದ್ದರೆ, ಕೆಲವರು ದ್ವೇಷ ಮಾಡುತ್ತಿದ್ದಾರೆ ಎಂದು ನಮ್ರತಾ ಭಾವುಕರಾಗಿದ್ದಾರೆ.












Click it and Unblock the Notifications