Darshan Thoogudeepa: ಮುನಿರತ್ನ ನಾಯ್ಡು & ದರ್ಶನ್ ತೂಗುದೀಪ್ ನಡುವೆ ಲಿಂಕ್? ರೇಣುಕಾಸ್ವಾಮಿ ಕೊಲೆಗೆ ಸಹಾಯ?
ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಚರ್ಮ ಸುಲಿದು, ಮರ್ಮಾಂಗಕ್ಕೆ ಒದ್ದು, ಸಿಗರೇಟು ಮೂಲಕ ಸುಟ್ಟು, ವಿಕೃತವಾಗಿ ಹಿಂಸೆ ನೀಡಿ ಕೊಲೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ನಟ ದರ್ಶನ್ ತೂಗುದೀಪ್ & ಗ್ಯಾಂಗ್ ಇದೀಗ ಕಂಬಿ ಎಣಿಸುತ್ತಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ಒದ್ದಾಡುತ್ತಿರುವ ಸಮಯದಲ್ಲೇ, ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಬೆಂಗಳೂರು ಶಾಸಕ ಹಾಗೂ ದರ್ಶನ್ ತೂಗುದೀಪ್‌ನ ಆಪ್ತ ಮುನಿರತ್ನ ನಾಯ್ಡು ಹೆಸರು ಕೂಡ ತಳುಕು ಹಾಕಿಕೊಂಡಿದೆ!
ದರ್ಶನ್ ತೂಗುದೀಪ್ ಪ್ರೇಯಸಿ ಪವಿತ್ರಾ ಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುತ್ತಾ, ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಚಿತ್ರದುರ್ಗ ಜಿಲ್ಲೆಯಿಂದ ಕಿಡ್ನಾಪ್ ಮಾಡಿಕೊಂಡು ಬಂದು ಬೆಂಗಳೂರಲ್ಲಿ ಕೊಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗೆ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಕೊಲೆ ಮಾಡಿದ್ದ ದರ್ಶನ್ ತೂಗುದೀಪ್ & ಗ್ಯಾಂಗ್, ರೇಣುಕಾಸ್ವಾಮಿ ಹೆಣವನ್ನ ರಾಜಕಾಲುವೆ ಪಕ್ಕದಲ್ಲೇ ಎಸೆದು ಲಾಕ್ ಆಗಿತ್ತು. ಹೀಗಿದ್ದಾಗ ದರ್ಶನ್ ತೂಗುದೀಪ್ ಜೈಲು ಸೇರದಂತೆ, ಕಾಪಾಡೋಕೆ ಬೆಂಗಳೂರಿನ ಹಲವು ಶಾಸಕರು ಪ್ರಯತ್ನ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿದ್ದ ಸಮಯದಲ್ಲೇ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಹೆಸರು ಕೂಡ ಕೊಲೆ ಕೇಸ್‌ನಲ್ಲಿ ಲಿಂಕ್ ಆಗುತ್ತಿದ್ದು. ಈ ಬಗ್ಗೆ ಖುದ್ದು ಮಾಜಿ ಸಂಸದ ಡಿ.ಕೆ. ಸುರೇಶ್...

ದರ್ಶನ್ ತೂಗುದೀಪ್ & ಮುನಿರತ್ನ ಮಧ್ಯೆ...
ಮುನಿರತ್ನ ನಾಯ್ಡು ವಿರುದ್ಧ ಇದೀಗ ಕೊಲೆ ಬೆದರಿಕೆ ಹಾಗೂ ದಲಿತರಿಗೆ ಜಾತಿ ನಿಂದನೆಯ ಮಾಡಿರುವ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಈಗ ಮುನಿರತ್ನ ನಾಯ್ಡುಗೆ ಸಂಬಂಧ ಪಟ್ಟಿರುವ ಆಡಿಯೋ ಎಂದು ಆರೋಪ ಮಾಡಲಾಗಿರುವ ಒಂದು ತುಣುಕು ರಿಲೀಸ್ ಮಾಡಿ ಆರೋಪ ಮಾಡಿದ್ದಾರೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು. ಈ ಆಡಿಯೋ ಕುರಿತು ಈಗ ಡಿ.ಕೆ. ಸುರೇಶ್ ಅವರು ಮಾತನಾಡುವ ಸಮಯದಲ್ಲಿ, ಮುನಿರತ್ನ ನಾಯ್ಡುಗೂ & ದರ್ಶನ್ ತೂಗುದೀಪ್ ಕೊಲೆ ಕೇಸ್ ವಿಚಾರದ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಮುನಿರತ್ನ ನಾಯ್ಡು ಅವರು ದರ್ಶನ್ ತೂಗುದೀಪ್ ರಕ್ಷಣೆಗೆ ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೂಡ ಮಾಡಲಾಗಿದೆ.
ತಾಯಂದಿರನ್ನ ಮಂಚಕ್ಕೆ ಕರೆಯುತ್ತಾರಾ?
ಚುನಾವಣೆ ಸಮಯದಲ್ಲಿ ಮುನಿರತ್ನ ತಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು. ಇದರ ಜೊತೆಯಲ್ಲೇ ಮುನಿರತ್ನ ನಾಯ್ಡು ಆವಾಜ್‌ಗೆ ಅಧಿಕಾರಿಗಳು ಭಯಗೊಂಡಿದ್ದರು. ಕೆಲ ಅಧಿಕಾರಿಗಳು ನನ್ನ ಬಳಿ ಅಳಲು ತೋಡಿಕೊಂಡು ನೋವು ಹೊರ ಹಾಕಿದ್ದರು. ಹೀಗೆ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಇದೀಗ ಅಧಿಕಾರಿಗಳು ದೂರು ನೀಡಿದರೆ ಸರ್ಕಾರ ಅವರ ರಕ್ಷಣೆಗೆ ಬರುತ್ತದೆ ಎಂದಿದ್ದಾರೆ ಮಾಜಿ ಸಂಸದ ಡಿ.ಕೆ. ಸುರೇಶ್.
ಇದೇ ವೇಳೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಆರೋಪ ಮಾಡಿರುವ ವಿಚಾರ ಪ್ರಸ್ತಾಪ ಮಾಡಿದ ಡಿ.ಕೆ. ಸುರೇಶ್ ಅವರು, ಶಾಸಕ ಮುನಿರತ್ನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಯಾರ ಹತ್ತಿರ ಮಾತನಾಡ್ತಿದ್ದೀನಿ, ಏನು ಮಾತನಾಡ್ತಿದ್ದೀನಿ ಅನ್ನೋದು ಇಲ್ಲ, ತಾಯಂದಿರನ್ನ ಮಂಚಕ್ಕೆ ಕರೆಯುತ್ತಾರೆ ಎಂದು ಶಾಸಕ ಮುನಿರತ್ನ ನಾಯ್ಡು ವಿರುದ್ಧವೇ ಡಿ.ಕೆ. ಸುರೇಶ್ ಅವರು ಆಕ್ರೋಶ ಹೊರ ಹಾಕಿದರು. ಅಲ್ಲದೆ ಈ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸುತ್ತದೆ ಎಂಬ ವಿಚಾರ ಕೂಡ ಪ್ರಸ್ತಾಪ ಮಾಡಿದರು.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications