Mokshitha Pai: ಮೆಹಂದಿ ಶಾಸ್ತ್ರದಲ್ಲಿ ಮಿಂಚಿದ ಮೋಕ್ಷಿತಾ ಪೈ
ಮೆಹಂದಿ ಶಾಸ್ತ್ರದಲ್ಲಿ ಮಿಂಚಿದ ಮೋಕ್ಷಿತಾ ಪೈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ಕಂಡು ಜನ ಮೋಕ್ಷಿತಾ ಅವರ ಮದುವೆನಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಇದು ಮೋಕ್ಷಿತಾ ಪೈ ಅವರ ಮದುವೆ ಅಲ್ಲ. ಹಾಗಾದರೆ ಈ ಮೆಹಂದಿ ಕಾರ್ಯಕ್ರಮದ ಫೋಟೋಗಳು ಯಾರದ್ದು? ಮೋಕ್ಷಿತಾ ಪೈಗೆ ಮೆಹಂದಿ ಹಚ್ಚಿಕೊಂಡಿದ್ದು ಯಾಕೆ? ಎಲ್ಲವನ್ನೂ ತಿಳಿಯೋಣ.
ಜೀ ಕನ್ನಡದ ಪಾರು ಸೀರಿಯಲ್ ಖ್ಯಾತಿಯ ನಟಿ ಮಾನ್ಸಿ ಜೋಶಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರು ಬಿಗ್‌ಬಾಸ್ ಕನ್ನಡ ಸೀಸನ್ 11 ಖ್ಯಾತಿಯ ನಟಿ ಮೋಕ್ಷಿತಾ ಪೈ ಅವರ ಬೆಸ್ಟ್ ಫ್ರೆಂಡ್. ಹೀಗಾಗಿ ಮೋಕ್ಷಿತಾ ಪೈ ಮಾನ್ಸಿ ಜೋಶಿ ಅವರ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರ್ಪೈಸ್ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಹೌದು... ಮಾನ್ಸಿ ಹಾಗೂ ಮೋಕ್ಷಿತಾ ಇಬ್ಬರೂ ಪಾರು ಸೀರಿಯಲ್ ಮೂಲಕ ಜನರಿಗೆ ಹತ್ತಿರವಾದವರು. ಪಾರು ಧಾರವಾಹಿಯಲ್ಲಿ ಮಾನ್ಸಿ ವಿಲನ್ ರೋಲ್ ಅನ್ನು ಮಾಡುತ್ತಿದ್ದರು. ಆದರೆ ನಿಜ ಜೀವನದಲ್ಲಿ ಮೋಕ್ಷಿತಾ ಹಾಗೂ ಮಾನ್ಸಿ ಇವರಿಬ್ಬರೂ ಕೂಡ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಅಲ್ಲದೆ ಮೋಕ್ಷಿತಾ ಪೈ ಬಿಗ್‌ಬಾಸ್ ಮನೆಯಲ್ಲಿ ಆಟ ಆಡುತ್ತಿದ್ದಾಗ ಮಾನ್ಸಿ ಸಾಕಷ್ಟು ಸಪೋರ್ಟ್ ಅನ್ನು ಮಾಡಿದ್ದರು.
ಮೋಕ್ಷಿತಾ ಪೈ ಅವರ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನೂ ಕೂಡ ಮಾನ್ಸಿ ಅವರೇ ಹ್ಯಾಂಡಲ್ ಮಾಡುತ್ತಿದ್ದರು. ಅಲ್ಲದೆ ನಟ ನಟಿ ಸೆಲೆಬ್ರಿಟಿಗಳ ಬಳಿ ಹೋಗಿ ಮೋಕ್ಷಿತಾ ಪೈಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದರು ಮಾನ್ಸಿ. ಅಲ್ಲದೆ ಪ್ರಮೋಷನ್ ವಿಡಿಯೋ ಕೂಡ ಮಾಡಿಸುತ್ತಿದ್ದರು.
ಮೋಕ್ಷಿತಾ ಪೈ ಅವರು ಬಿಗ್‌ಬಾಸ್ ಮನೆಯಲ್ಲಿ ರನ್ನರ್ ಅಪ್ ಆಗೋದಕ್ಕೆ ನಟಿ ಮಾನ್ಸಿ ಅವರು ಕೂಡ ಪ್ರಮುಖ ಕಾರಣ ಅಂತಲೇ ಹೇಳಬಹುದು. ಇದೀಗ ಮಾನ್ಸಿ ಜೋಶಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಅವರ ಮದುವೆ ಕಾರ್ಯಕ್ರಮಗಳಲ್ಲಿ ಮೋಕ್ಷಿತಾ ಭಾಗಿಯಾಗಿದ್ದಾರೆ.
ಮಾನ್ಸಿ ಅವರಿಗೆ ಸರ್ಪೈಸ್ ಮೇಲೆ ಸರ್ಪೈಸ್ ಕೊಡುತ್ತಾ ಕಾರ್ಯಕ್ರಮಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾದ ಮೋಕ್ಷಿತಾ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಬಹುತೇಕ ಜನ ಮೋಕ್ಷಿತಾ ಮದುವೆನಾ ಎಂದು ಕನ್ಫೂಸ್ ಆಗಿದ್ದಾರೆ. ಆದರೆ ಇದು ಮೋಕ್ಷಿತಾ ಮದುವೆ ಅಲ್ಲ ಬದಲಿಗೆ ಮಾನ್ಸಿ ಮದುವೆ.
ಬಿಗ್‌ಬಾಸ್ ಕನ್ನಡ ಸೀಸನ್ 11ರ ಟಾಪ್ 5 ಸ್ಫರ್ಧಿಗಳಲ್ಲಿ ಮೋಕ್ಷಿತಾ ಪೈ ಕೂಡ ಒಬ್ಬರು. ಇವರ ಆಟ, ಮೌನ, ಮಾತಿಗೆ ಬಿಗ್‌ಬಾಸ್ ವೀಕ್ಷಕರು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಹೀಗಾಗಿನೇ ಮೋಕ್ಷಿತಾ ಪೈ ಟಾಪ್ ಸ್ಪರ್ಧಿಯಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ನಿಜ ಜೀವನ ಮಾತ್ರ ತುಂಬಾ ಸಮಸ್ಯೆಗಳಿಂದ ಕೂಡಿದೆ. ಅವರ ಸಹೋದರನ ಅನಾರೋಗ್ಯ ಕಾರಣ ಮೋಕ್ಷಿತಾ ಪೈ ಇನ್ನೂ ಕೂಡ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ಮೋಕ್ಷಿತಾ ಪೈ ಅವರೇ ಮನೆಯ ಜವಬ್ದಾರಿ ಹೊತ್ತುಕೊಂಡಿದ್ದರಿಂದ ಸದ್ಯಕ್ಕೆ ಮದುವೆ ಕನಸಿನಿಂದ ದೂರ ಉಳಿದಿದ್ದಾರೆ.












Click it and Unblock the Notifications