4,00,000 ಫಾಲೋವರ್ಸ್: ಯೂಟ್ಯೂಬ್ ಚಾನೆಲ್ ಮೂಲಕ ಮೇಘನಾ ರಾಜ್ ಸಂಪಾದಿಸುವ ಹಣವೆಷ್ಟು?

ಮೇಘನಾ ರಾಜ್ ಕನ್ನಡಿಗರ ಅಚ್ಚು ಮೆಚ್ಚಿನ ನಟಿ. ಹೀಗಾಗಿ ಮೇಘನಾ ರಾಜ್ ಅವರ ಸಂಪಾದನೆ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ. ಮೇಘನಾ ರಾಜ್ ಅಭಿನಯದ ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾಲನ್‌ವೊಂದನ್ನು ಮಾಡಿಕೊಂಡಿದ್ದಾರೆ. ಇದರ ಮೂಲಕ ಅವರು ಒಂದಿಷ್ಟು ಹಣವನ್ನು ಸಂಪಾದನೆ ಮಾಡುತ್ತಾರೆ. ಹಾಗಾದರೆ ಮೇಘನಾ ರಾಜ್ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಎಷ್ಟು ಹಣ ಸಂಪಾದನೆ ಮಾಡ್ತಾರೆ ಅನ್ನೋದನ್ನು ಈಗ ನೋಡೋಣ.

ಮೇಘನಾ ರಾಜ್ ಇತ್ತೀಚಿಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದಾರೆ. ಇದಕ್ಕೆ 400,000 ಫಾಲೋವರ್ಸ್ ಇದ್ದಾರೆ. ಪರ್ಸನಲ್ ಲಾಗ್ ಮಾಡುವ ಇವರು ತಮ್ಮ ಮನೆಯ ಒಡನಾಟ, ಹಬ್ಬದ ಸೆಲೆಬ್ರೇಷನ್ ಹಾಗೂ ಮಗ ರಾಯನ್ ಸರ್ಜಾ ವಿಡಿಯೋ ಮಾಡಿ ಹಂಚಿಕೊಳ್ಳುತ್ತಾರೆ.

Meghna raj YouTube channel payment reveal

ಇನ್ನೂ ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ದೊಡ್ಡ ಸೆಲೆಬ್ರಿಟಿ ಅಂದರೆ ತಪ್ಪಾಗೋದಿಲ್ಲ. ಯಾಕೆಂದರೆ ರಾಯನ್ ಹುಟ್ಟುವ ಮುನ್ನವೇ ತನ್ನ ತಂದೆ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಳ್ಳುತ್ತಾನೆ. ಈ ಘಟನೆಯ ಬಳಿಕ ಮೇಘನಾ ರಾಜ್ ಫ್ಯಾನ್ಸ್ ಹಾಗೂ ಚಿರಂಜೀವಿ ಸರ್ಜಾ ಫ್ಯಾನ್ಸ್ ರಾಯನ್ ಫ್ಯಾನ್ಸ್ ಆಗಿದ್ದಾರೆ. ಹೆಚ್ಚು ರಾಯನ್ ಬಗ್ಗೆ ಕಾಮೆಂಟ್ ಮಾಡಿ ವಿಚಾರಿಸುತ್ತಾರೆ.

ಇನ್ನೂ ಬಾಳಿ ಬದುಕಬೇಕಿದ್ದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗರ್ಭಿಣಿಯಾಗಿರುವಾಗ ಸಾವನ್ನಪ್ಪಿದರು. ಈ ನೋವಿನಲ್ಲಿ ಇದ್ದ ಮೇಘನಾ ರಾಜ್ ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಮಗ ರಾಯನ್ ರಾಜ್ ಸರ್ಜಾ. ಚಿರಂಜೀವಿ ಸರ್ಜಾ ಅವರನ್ನು ಮಗ ರಾಯನ್ ಮುಖದಲ್ಲಿ ನೋಡುತ್ತಾ ಮೇಘನಾ ದಿನಗಳನ್ನು ಕಳೆಯುತ್ತಿದ್ದಾರೆ.

ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಮೇಘನಾ ರಾಜ್ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಸಾಕಷ್ಟು ಮಾತುಗಳನ್ನು ಕೇಳಿಸಿಕೊಂಡಿದ್ದಾರೆ. ತಾವು ಬದುಕಿರುವುದು ರಾಯನ್ ರಾಜ್ ಸರ್ಜಾಗಾಗಿ ಮಾತ್ರ ಅಂತ ಸಾಕಷ್ಟು ಬಾರಿ ಅವರು ಹೇಳಿಕೊಂಡಿರುವುದು ಇದೆ.

Meghna raj YouTube channel payment reveal

ಮೇಘನಾ ರಾಜ್ ಅವರ ಇಂತಹ ಮಾತುಗಳನ್ನು ಕೇಳಿದ ಬಳಿಕ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಅಭಿಮಾನಿಗಳಿಗೆ ರಾಯನ್ ರಾಜ್ ಸರ್ಜಾ ಮೇಲೆ ಪ್ರೀತಿ ಹೆಚ್ಚಾಗಿದೆ. ತಂದೆ ಇಲ್ಲದ ಮಗುವನ್ನು ಮೇಘನಾ ರಾಜ್ ಅದೆಷ್ಟು ಕಷ್ಟಪಟ್ಟು ಬೆಳೆಸುತ್ತಿದ್ದಾರೆ ಅನ್ನೋ ಕಾಳಜಿ ಹೆಚ್ಚಾಗಿದೆ. ಹೀಗಾಗಿ ಚಿರು ಹಾಗೂ ಮೇಘನಾ ರಾಜ್ ಅಭಿಮಾನಿಗಳಿಗೆ ಈಗ ರಾಯನ್ ರಾಜೇ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ.

ಇನ್ನೂ ಮೇಘನಾ ರಾಜ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ರಾಯನ್ ಏನು ಮಾಡುತ್ತಾನೆ? ಹೇಗಿರುತ್ತಾನೆ? ಹಾಗೂ ಅವನ ದಿನಚರಿ ವಿಡಿಯೋಗಳನ್ನು ಯೂಟ್ಯೂಬ್ ಮೂಲಕ ಹಂಚಿಕೊಳ್ಳುತ್ತಾರೆ. ಹೀಗಾಗಿ ರಾಯನ್ ಸರ್ಜಾ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾನೆ.

ಮೇಘನಾ ರಾಜ್ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ 400k ಸಬ್‌ಸ್ಕೈಬರ್ಸ್ ಅನ್ನು ಹೊಂದಿದ್ದಾರೆ. ಅವರು ತಿಂಗಳಿಗೆ ಎರಡು ಅಥವಾ ಮೂರು ವಿಡಿಯೋಗಳನ್ನು ಮಾತ್ರ ಹಂಚಿಕೊಳ್ಳುತ್ತಾರೆ. ಮೇಘನಾ ಯುಟ್ಯೂಬ್ ಚಾನೆಲ್‌ನಿಂದ ಎಷ್ಟು ಸಂಪಾದನೆ ಮಾಡುತ್ತಾರೆ ಅಂದರೆ ತಿಂಗಳಿಗೆ 50,000 ರೂಪಾಯಿಯಿಂದ 1,50,000 ರೂಪಾಯಿ. ಯೂಟ್ಯೂಬ್ ಆಡ್ ಅಲ್ಲದೆ ಇವರಿಗೆ ಸ್ಪಾನ್ಸರ್ ವಿಡಿಯೋಗಳು ಸಿಗುತ್ತವೆ. ಇದರಿಂದಾಗಿಯೂ ಇವರ ಆದಾಯ ತಿಂಗಳಿಗೆ ಒಂದರಿಂದ ಎರಡುವರೆ ಲಕ್ಷದವರೆಗೂ ಮುಟ್ಟಬಹುದು.

ಒಟ್ಟಿನಲ್ಲಿ ತುಂಬಾ ಜನ ಫ್ಯಾನ್ಸ ಫಾಲೋವರ್ಸ್ ಅನ್ನು ಹೊಂದಿದ ಮೇಘನಾ ರಾಜ್ ಸಾಕಷ್ಟು ಬೆಳೆಯಲಿ, ಮಗ ರಾಯನ್ ರಾಜ್ ಕೂಡ ಚಿರಂಜೀವಿ ಸರ್ಜಾ ಅವರಂತೆ ಹೆಚ್ಚು ಜನಪ್ರಿಯತೆ ಪಡೆಯಲಿ ಅನ್ನೋದು ನಮ್ಮ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+