ಅದಿತಿ ಪ್ರಭುದೇವ ಮಗಳ ಹುಟ್ಟುಹಬ್ಬದಲ್ಲಿ ಮೇಘನಾ ರಾಜ್- ಚಿರಂಜೀವಿ ಸರ್ಜಾ ಮುದ್ದು ಸೊಸೆ ಇವಳೇ ಎಂದ ನೆಟ್ಟಿಗರು
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಮಗಳು ನೇಸರಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಏಪ್ರಿಲ್ 4ರಂದು ಆಚರಿಸಲಾಯಿತು. ಹುಟ್ಟುಹಬ್ಬದ ಆಚರಣೆಗೆ ಅನೇಕ ಸ್ಯಾಂಡಲ್‌ವುಡ್ ತಾರೆಯರಿಗೆ ಅದಿತಿ ಪ್ರಭದೇವ ಆಹ್ವಾನಿಸಿದ್ದರು. ಮೇಘನಾ ರಾಜ್ ಕೂಡ ಹುಟ್ಟುಹಬ್ಬದ ಆಚರಣೆಯಲ್ಲಿ ಭಾವಹಿಸಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಹೌದು ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ವಿಜಯ್ ರಾಘವೇಂದ್ರ ಹಾಗೂ ಮೇಘನಾ ರಾಜ್ ಎರಡನೇ ಮದುವೆ ಆಗಲಿದ್ದಾರೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೇ ಇವೆ. ಆದರೆ ಈ ಬಗ್ಗೆ ಮೇಘನಾ ರಾಜ್ ಆಗಲಿ ಅಥವಾ ವಿಜಯ ರಾಘವೇಂದ್ರ ಆಗಲಿ ಎಲ್ಲೋ ಕೂಡ ಪ್ರತಿಕ್ರಿಯೆ ನೀಡಿಲ್ಲ. ಇಂತಹ ಸುಳ್ಳು ಸುದ್ದಿಗಳ ವಿರುದ್ಧ ದೂರು ನೀಡಲು ಮೇಘನಾ ರಾಜ್ ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮೇಘನಾ ರಾಜ್ ಮಗ ರಾಯನ್ ಹಾಗೂ ಅದಿತಿ ಪ್ರಭುದೇವ ಮಗಳು ನೇಸರಳಾ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋಕ್ಕೆ ನೆಟ್ಟಿಗರು ಸಾಕಷ್ಟು ಹೂವಿನ ಸುರಿಮಳೆಗೈದಿದ್ದಾರೆ. ಜೊತೆಗೆ ಹಾರ್ಟ್ ಸಿಂಬಲ್ ಕಳುಹಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಅಂದರೆ ವಿಡಿಯೋಗಳಲ್ಲಿ ಅದಿತಿ ಪ್ರಭುದೇವ ಮಗಳನ್ನು ಮೇಘನಾ ರಾಜ್ ಎತ್ತಿಕೊಂಡು ಆಡಿಸಿ ಮುದ್ದಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅಲ್ಲದೆ ದಿವಂಗತ ಚಿರಂಜೀವಿ ಸರ್ಜಾ ಪುತ್ರ ರಾಯನ್‌ಗೂ ಕೂಡ ನೇಸರಳನ್ನು ಪರಿಚಯಿಸಲಾಯಿತು. ಆಗ ರಾಯನ್ ನಾಚಿ ನೀರಾದ ಮುದ್ದಾದ ಸನ್ನಿವೇಶ ನೋಡಿ ಪೋಷಕರು ಖುಷಿಯಾಗಿ ನಗಾಡಿದ್ದಾರೆ. ನೇಸರಳನ್ನ ನೋಡಿ ರಾಯನ್ ನಾಚಿಕೊಂಡ ಮುದ್ದಾದ ವಿಡಿಯೋ ಕಂಡು ಅಭಿಮಾನಿಗಳೂ ಕೂಡ ಖುಷಿ ಆಗಿದ್ದಾರೆ.
ಈ ವಿಡಿಯೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಕೆಲವರು ಚಿರಂಜೀವಿ ಸರ್ಜಾ ಮುದ್ದು ಸೊಸೆ ಇವಳೇ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ನೋಡಿ ಖುಷಿಪಟ್ಟಿದ್ದಾರೆ.
ಒಟ್ಟಿನಲ್ಲಿ ಮುಂದೇನಾಗುತ್ತೋ ಅನ್ನೋದು ಈಗ ಯಾರೂ ಕೂಡ ನಿರ್ಧರಿಸಲು ಅಥವಾ ಊಹಿಸಲು ಸಾಧ್ಯವಿಲ್ಲ. ಆದರೆ ಈಗಿನ ಸನ್ನಿವೇಶಗಳು ಮಾತ್ರ ಮೇಘನಾ ಹಾಗೂ ಅದಿತಿ ಪ್ರಭುದೇವ ಕುಟುಂಬಕ್ಕೆ ಖುಷಿ ತಂದಿವೆ. ರಾಯನ್ ನೇಸರಳನ್ನು ನೋಡಿ ನಾಚಿಕೊಂಡ ಸನ್ನಿವೇಶ ಅದೆಷ್ಟು ಮುದ್ದಾಗಿತ್ತು ಅಂದರೆ ನೆಟ್ಟಿಗರು ಅದಕ್ಕೆ ಚಿರಂಜೀವಿ ಸರ್ಜಾ ಮುದ್ದು ಸೊಸೆ ಇವಳೇ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಲೇ ಇದೆ.












Click it and Unblock the Notifications