ಮೇಘನಾ ರಾಜ್‌ 2ನೇ ಮದುವೆ ವಿಚಾರ & ವಿಜಯ್ ರಾಘವೇಂದ್ರ ಬಗ್ಗೆ... Meghana Raj

ಮೇಘನಾ ರಾಜ್‌ ಅವರು 2ನೇ ಮದುವೆ ಆಗುತ್ತಾರಾ? ಅನ್ನೋ ವಿಚಾರ ಪದೇ ಪದೇ ಚರ್ಚೆಗೆ ಬರ್ತಾನೆ ಇದೆ. ಮೇಘನಾ ರಾಜ್‌ ಅವರು ಚಿರಂಜೀವಿ ಸರ್ಜಾ ಅವರನ್ನ 2018ರಲ್ಲಿ ಮದುವೆ ಆಗಿದ್ದರು, ಆದರೆ ವಿಧಿ ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಚಿರಂಜೀವಿ ಸರ್ಜಾ ಅವರು 2020 ಜೂನ್ 7 ಭಾನುವಾರದ ದಿನ ತಮ್ಮ 39ನೇ ವಯಸ್ಸಿನಲ್ಲಿ ಜೀವ ಬಿಟ್ಟಿದ್ದರು. ಹೀಗಿದ್ದಾಗಲೇ, ಮೇಘನಾ ರಾಜ್‌ 2ನೇ ಮದುವೆ ವಿಚಾರ & ವಿಜಯ್ ರಾಘವೇಂದ್ರ ಬಗ್ಗೆ...

ಮೇಘನಾ ರಾಜ್ ಅವರು ಪತಿ ಕಳೆದುಕೊಂಡು ದುಖಃದಲ್ಲಿ ಇದ್ದಾರೆ, ಪ್ರೀತಿಸಿ ಇಡೀ ಕುಟುಂಬ ಸದಸ್ಯರನ್ನು ಒಪ್ಪಿಸಿ ಮದುವೆ ಆಗಿದ್ದ ಮೇಘನಾ ರಾಜ್ & ಚಿರಂಜೀವಿ ಸರ್ಜಾರ ಬದುಕಿನಲ್ಲಿ ವಿಧಿಯಾಟ ಬೇರೆನೇ ಆಗಿತ್ತು. ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ ನಂತರ ಕನ್ನಡ ನಟಿ ಮೇಘನಾ ರಾಜ್ ಅವರು ನೋವಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಚಿರಂಜೀವಿ ಸರ್ಜಾ ಮರಣ ಹೊಂದುವ ಮೊದಲು ಮೇಘನಾ ರಾಜ್ ಅವರು ಗರ್ಭಿಣಿ ಆಗಿದ್ದರು...

Meghana Raj And Vijay Raghavendra Names Are In Trend On Social Media Now

ಮೇಘನಾ ರಾಜ್‌ 2ನೇ ಮದುವೆ ವಿಚಾರ...

ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನಂತರ ಮೇಘನಾ ರಾಜ್ ಅವರಿಗೆ ಜಗತ್ತೇ ತಲೆ ಮೇಲೆ ಬಿದ್ದಂತೆ ಆಗಿತ್ತು. ಆಗಲೇ ಇಡೀ ಕನ್ನಡ ಸಿನಿಮಾ ರಂಗ ನಟಿ ಮೇಘನಾ ರಾಜ್ ಬೆನ್ನಿಗೆ ನಿಂತು ಸಮಾಧಾನ ಹೇಳಿತ್ತು & ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಇಂತಹ ಸಮಯದಲ್ಲೇ ನಟಿ ಮೇಘನಾ ರಾಜ್ ಅವರಿಗೆ ಮಗನಾಗಿ ಜನಿಸಿದ ಪುಟಾಣಿ ರಾಯನ್ ರಾಜ್ ಸರ್ಜಾ ಹೊಸ ಸಂಭ್ರಮ ಕೂಡ ತಂದಿದ್ದಾರೆ. ಹೀಗಿದ್ದಾಗಲೇ, ಮೇಘನಾ ರಾಜ್‌ 2ನೇ ಮದುವೆ ವಿಚಾರ & ವಿಜಯ್ ರಾಘವೇಂದ್ರ ಬಗ್ಗೆ...

ಅಂದಹಾಗೆ ನಟಿ ಮೇಘನಾ ರಾಜ್ ಅವರ ರೀತಿಯೆ ನಟ ವಿಜಯ್ ರಾಘವೇಂದ್ರ ಅವರು ಕೂಡ ಹೆಂಡತಿಯನ್ನ ಕಳೆದುಕೊಂಡು ಕಣ್ಣೀರಲ್ಲಿ ಜೀವನ ಕಳೆಯುವಂತೆ ಆಗಿದೆ. ಒಬ್ಬ ಮಗನ ಜತೆ ವಿಜಯ್ ರಾಘವೇಂದ್ರ ಅವರು ಜೀವನದ ಪಯಣ ಮುಂದುವರಿಸಿದ್ದಾರೆ. ಹೀಗೆ ಕನ್ನಡ ಸಿನಿಮಾ ರಂಗದ ಇಬ್ಬರು ಕಲಾವಿದರ ಬಾಳಲ್ಲಿ ವಿಧಿ ಆಟ ಆಡಿದೆ. ಒಂದು ಕಡೆ ನಟಿ ಮೇಘನಾ ರಾಜ್ ಅವರ ಗಂಡ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ ನಂತರ ವಿಜಯ್ ರಾಘವೇಂದ್ರ ಅವರ ಹೆಂಡತಿ ಕೂಡ ಅಕಾಲಿಕ ಮರಣ ಹೊಂದಿದರು. ಇಂತಹ ಸಮಯದಲ್ಲೇ ಕೆಲವರು ಅನಗತ್ಯವಾಗಿ, ನಟಿ ಮೇಘನಾ ರಾಜ್ ಹಾಗೂ ವಿಜಯ್ ರಾಘವೇಂದ್ರ ಅವರ ಬಗ್ಗೆ ಮಾತನಾಡಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸುದ್ದಿಗಳ ವಿರುದ್ಧ, ನಟಿ ಮೇಘನಾ ರಾಜ್ ಎಚ್ಚರಿಕೆ ಕೊಟ್ಟ ನಂತರ ಸೈಲೆಂಟ್ ಆಗಿದ್ದರು ಅವರೆಲ್ಲಾ. ಆದರೆ ಇದೀಗ...

ಮೇಘ ಬಂತು ಮೇಘ...

ಹೌದು, ಮೇಘನಾ ರಾಜ್‌ 2ನೇ ಮದುವೆ ವಿಚಾರ & ವಿಜಯ್ ರಾಘವೇಂದ್ರ ಬಗ್ಗೆ ಮತ್ತೆ ದಿಢೀರ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ದಿಢೀರ್ ಈ ರೀತಿಯಾಗಿ ಚರ್ಚೆ ಶುರುವಾಗೋದಕ್ಕೆ ಕಾರಣ ಆಗಿದ್ದು ವಿಜಯ್ ರಾಘವೇಂದ್ರ ಅವರ ಒಂದು ರೀಲ್ಸ್, ಸೋಷಿಯಲ್ ಮೀಡಿಯಾ ಅಕೌಂಟ್‌ನ ಮೂಲಕ ಆಕ್ಟಿವ್ ಆಗಿರುವ ವಿಜಯ್ ರಾಘವೇಂದ್ರ ಅವರು ಹಾಡು ಒಂದನ್ನ ಹಾಡಿದ್ದರು. ಇನ್ಸ್‌ಟಾಗ್ರಾಂ ಅಕೌಂಟ್ ಮೂಲಕ ವಿಜಯ್ ರಾಘವೇಂದ್ರ ಅವರು ಈ ಹಾಡು ಪೋಸ್ಟ್ ಮಾಡಿದ್ರು. ಮೇಘ ಬಂತು ಮೇಘ, ಮೇಘ ಬಂತು ಮೇಘ, ಮೇಘ ನೀಲಿಯ ಮೇಘ, ಮೇಘ ಮಲ್ಹಾರ ಮೇಘ... ಅಂತಾ ಹಾಡು ಹಾಡಿದ್ದರು. ಇದೀಗ ಇದೇ ವಿಡಿಯೋ ಇಟ್ಟುಕೊಂಡು ಮತ್ತೊಮ್ಮೆ ಕೆಲವರು ಗಾಳಿ ಸುದ್ದಿ ಹರಡುವ ಮೂಲಕ ಚರ್ಚೆ ಶುರು ಮಾಡಿದ್ದಾರೆ. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+