Actress Megha Shetty: ತೋಳಿಲ್ಲದ ಬಟ್ಟೆಯಲ್ಲಿ ಫೋಸ್ ಕೊಟ್ಟ ಮೇಘಾ ಶೆಟ್ಟಿ ಸ್ಟನ್ನಿಂಗ್ ಲುಕ್ ಗೆ ಫ್ಯಾನ್ಸ ಬೋಲ್ಡ್..Photos
Actress Megha Shetty: ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ಇದೀಗ ತಮಿಳು ಚಿತ್ರರಂಗದ ಆಫರ್ ಗಿಟ್ಟಿಸಿಕೊಂಡಿರುವ ಕನ್ನಡ ನಟಿ ಮೇಘಾ ಶೆಟ್ಟಿ ಅವರು ಜನ್ಮದಿನಾಚರಣೆಗೆ ಸಜ್ಜಾಗಿದ್ದಾರೆ. ಆಗಸ್ಟ್ 04ರಂದು ಅವರ ಹುಟ್ಟುಹಬ್ಬ. ಇದಕ್ಕು ಮೊದಲೇ ನಟಿ ಮೇಘಾ ಶೆಟ್ಟಿ 'ನೀಲಾಂಬರಿ' ಅವತಾರ ತಾಳಿದ್ದಾರೆ ಎಂದು ಅವರ ಸ್ಟನ್ನಿಂಗ್ ಫೋಟೋ ನೋಡಿದ ಫ್ಯಾನ್ಸ್ ಹೇಳುತ್ತಿದ್ದಾರೆ. ನಟಿ ತೋಳಿಲ್ಲದ ಡ್ರೆಸ್ (ಸೀರೆ) ತೊಟ್ಟು ಹೊಸ ಅವತಾರದಲ್ಲಿ ಚೆಂದನೆಯ ಫೋಟೋಗೆ ಫೋಸ್ಟ್ ಕೊಟ್ಟಿದ್ದು, ಯುವಕರ ನಿದ್ದೆಗೆಡಿಸುವಂತೆ ಮಾಡಿದೆ. ಅವರ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
2019ರಲ್ಲಿ ಜೀ ಕನ್ನಡ ವಾಹಿನಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮುದ್ದು ಮುಖದ ಚೆಲುವೆ ನಟಿ ಮೇಘಾ ಶೆಟ್ಟಿ ಹುಟ್ಟಿದ್ದು 1988ರಲ್ಲಿ. 'ಜೊತೆ ಜೊತೆಯಲ್ಲಿ' ಧಾರವಾಹಿ ನಂತರ ಸ್ಟಾರ್ ಹಿರೋಗಳ ಜೊತೆಗೂ ನಟಿಸಿದ್ದಾರೆ. ಇದೀಗ ತಮಿಳಿನ "ಕಾಳೈಯನ್" ನಟಿಸುವ ಮೂಲಕ ಕಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸದಾ ಫಿಟ್ನೆಸ್, ಸೌಂದರ್ಯ ದತ್ತ ಹೆಚ್ಚು ಗಮನ ಕೊಡುವ ನಟಿ ಮೇಘಾ ಅವರು ಅಭಿಮಾನಿಗಳ ಮುಂದೆ ಹೊಸ ಫೋಟೋ ಸಮೇತ ಪ್ರತ್ಯೇಕ್ಷರಾಗಿಬಿಡುತ್ತಾರೆ. ಇದೀಗ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಂತದ್ದೇ ಒಂದಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ.

ಜನ್ಮದಿನ ಒಂದು ದಿನಕ್ಕೆ ಮುನ್ನ ಮೇಘಾ ಶೆಟ್ಟಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಥೌಟ್ ಸ್ಲೀವ್ ಸೀರೆಯಲ್ಲಿ ಮಿಂಚಿದ್ದಾರೆ. ಅವರನ್ನು ನೋಡಿದ ಫ್ಯಾನ್ಸ್ 'ನಿಮ್ಮನ್ನು ನೋಡುತ್ತಿದ್ದಂತೆ ನೀಲಾಂಬರಿ ಸಿನಿಮಾ ನೆನಪಾಯಿತು' ಎಂದು ಬರೆದುಕೊಂಡಿದ್ದಾರೆ. ನಟನೆ, ಫಿಟ್ನೆಸ್, ಧಾರಾವಾಹಿ ನಿರ್ಮಾಣದಲ್ಲಿ ತೊಡಗಿರುವ ನಟಿ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.
ಮೂಗುತಿ ಸುಂದರಿ ಫೋಟೋ ಭಾರೀ ವೈರಲ್
ಆಕರ್ಷಕ ಸೀರೆ, ಲೂಸ್ ಹೇರ್ಸ್ ನಲ್ಲಿ ಮೂಗುತಿ ಸುಂದರಿ ನಟಿ ಮೇಘಾ ಶೆಟ್ಟಿಯವರ ಫೋಟೋ ನೋಡಿದ ಫ್ಯಾನ್ಸ್ ಅವರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. 'ಆಲ್‌ವೇಜ್ ಲುಕ್ಕಿಂಗ್ ಬ್ಯೂಟಿಫುಲ್, ಹಾಟ್‌ನೆಸ್ ಓವರ್‌ಲೋಡೆಡ್, ಸ್ಟನ್ನಿಂಗ್ ಬ್ಯೂಟಿ' ಎಂದು ಬಣ್ಣಿಸಿದ್ದಾರೆ. ಹೊಸ ರೀತಿಯ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಬೇಕು, ಸಿನಿಮಾದ ಆಯ್ಕೆಗಳಲ್ಲಿನ ನಟಿ ಭಿನ್ನತೆ ಅಭಿಮಾಣಿಗಳ ಮನ ಗೆದ್ದಿದೆ. ಅದರೊಂದಿಗೆ ಅವರ ಫೋಟೋ, ಪೋಸ್ಟ್‌ಗಳೂ, ಜಿಮ್ ವರ್ಕೌಟ್ ವಿಡಿಯೋಗಳನ್ನು ಸಾಕಷ್ಟು ವೀಕ್ಷಣೆ ಪಡೆಯುತ್ತಿವೆ. ಸದ್ಯದ ಅವರು ಪೋಸ್ಟ್‌ಗೆ ಸಹ 10 ಗಂಟೆಗಳಲ್ಲಿ 27000 ಲೈಕ್ಸ್, ನೂರಾರು ಕಾಮೆಂಟ್ಸ್ ಬಂದಿವೆ. 1800ಕ್ಕೂ ಅಧಿಕ ಭಾರಿ ಈ ನಟಿಯ ಪೋಸ್ಟ್ ಶೇರ್ ಆಗಿದೆ.
'ತ್ರಿಬಲ್ ರೈಡಿಂಗ್' ಮೂಲಕ ಬೆಳ್ಳಿ ತೆರೆಗೆ ಬಂದು, ದಿಲ್ ಪಸಂದ್, ಕೈವ ಸಿನಿಮಾ ಮಾಡಿದ್ದಾರೆ. ಮೇಘಾ ಶೆಟ್ಟಿ ನಟನೆಯ ಚೀತಾ ಮತ್ತು ಗ್ರಾಮಾಯಣ ತೆರೆಗೆ ಬರಬೇಕಿದೆ. ಈ ಮಧ್ಯೆ ಅವರು ತಮಿಳು ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಆಗಸ್ಟ್ 4ರಂದು ಹೊಸ ವಸಂತಕ್ಕೆ ಕಾಲಿಡುವ ನಟಿ ಮೇಘಾ ಶೆಟ್ಟಿ, ಅವರು ಫ್ಯಾನ್ಸ್ ಜೊತೆಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದಾರೆ.












Click it and Unblock the Notifications