Math Guruprasad: ನಟ ಜಗ್ಗೇಶ್‌ಗೆ ಹುಚ್ಚ ವೆಂಕಟ್ ಮಾಸ್ ಕ್ಲಾಸ್, ಏನಂದ್ರು ನೋಡಿ!
ಮಠ ನಿರ್ದೇಶಕ ಹಾಗೂ ಆತ್ಮಹ* ಮಾಡಿಕೊಂಡಿರುವ ಗುರುಪ್ರಸಾದ್ ಅವರಿಗೆ ಹಲವರು ಸಂತಾಪ ಸೂಚಿಸಿದ್ದಾರೆ. ಮಠ ಹಾಗೂ ಎದ್ದೇಳು ಮಂಜುನಾಥಾ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಸಂಚಲ ಸೃಷ್ಟಿಸಿದ್ದ ಗುರುಪ್ರಾಸಾದ್ ಅವರ ಸಾ*ನ ನಂತರ ಕೆಲವರು ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಗುರುಪ್ರಸಾದ್ ಅವರ ಸಾ* ಹಲವರನ್ನು ಆಘಾತಕ್ಕೆ ದೂಡಿದೆ. ಆದರೆ, ಈ ನಡುವೆ ರಾಜಕಾರಣಿ ಹಾಗೂ ನಟ ಜಗ್ಗೇಶ್ ಅವರು ಗುರುಪ್ರಸಾದ್ ಅವರ ಬಗ್ಗೆ ಮಾತನಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಲದೇ, ನಟ ಹುಚ್ಚ ವೆಂಕಟ್ ಅವರು ಜಗ್ಗೇಶ್ ಮೇಲೆ ಮುಗಿಬಿದ್ದಿದ್ದಾರೆ.
ಹುಚ್ಚ ವೆಂಕಟ್ ಅವರು ಅಬ್ಬರದ ಕಿರುಚಾಟ, ಕೂಗಾಟ ಹಾಗೂ ಗದ್ದಲಗಳಿಂದಲೇ ಜನರಿಂದ ಟೀಕೆಗೆ ಗುರಿಯಾಗುತ್ತಿದ್ದರು. ಆದರೆ, ಇದೇ ಮೊದಲ ಬಾರಿ ಜನ ಭೇಷ್ ಅಂತ ಅನಿಸಿಕೊಳ್ಳುವತರ ಹುಚ್ಚ ವೆಂಕಟ್ ಮಾತನಾಡಿದ್ದಾರೆ. ನಟ ಜಗ್ಗೇಶ್‌ನ ಹಿಗ್ಗಾಮುಗ್ಗಾ ಜಾಡಿಸಿರುವ ಹುಚ್ಚ ವೆಂಕಟ್, ಏನ್ ಸರ್ ಮಾತಾಡ್ತಿದ್ದೀರಾ. ಹಿಂಗಾ ಮಾತಾಡೋದು ಅಂತ ಪ್ರಶ್ನೆ ಮಾಡಿದ್ದಾರೆ.

ಗುರುಪ್ರಸಾದ್ ಅವರು ಕನ್ನಡಿಗರನ್ನು ಅಗಲಿದ್ದಾರೆ. ಆದರೆ, ಅವರು ಇನ್ನಿಲ್ಲ ಎನ್ನುವಾಗಲೇ ನಟ ಜಗ್ಗೇಶ್ ಅವರು ಮಾತನಾಡಿರುವ ಮಾತುಗಳು ಜನಾಕ್ರೋಶಕ್ಕೆ ಕಾರಣವಾಗಿದೆ. ನೀವು ಗುರುಪ್ರಸಾದ್ ಸರ್ ಬಗ್ಗೆ ಈ ರೀತಿ ಮಾತನಾಡಿರುವುದು ಕೇಳಿ ಬೇಜಾರಾಯ್ತು ಸರ್. ಗುರುಪ್ರಸಾದ್ ಅವರು ಈಗ ಇಲ್ಲ. ಒಬ್ಬರು ಸಾ*ನ್ನಪ್ಪಿದ ಮೇಲೆ ಈ ರೀತಿ ಮಾತಾಡ್ಬೋದಾ ಹೇಳಿ ಅಂತ ಹುಚ್ಚ ವೆಂಕಟ್ ಕೇಳಿದ್ದಾರೆ.
ಗುರುಪ್ರಸಾದ್ ಅವರು ಹೋಗಿರುವ ದುಃಖದಲ್ಲಿ ಅವರ ಮನೆಯವರು ಇದ್ದಾರೆ. ಆ ನೋವಿನಲ್ಲಿ ಇನ್ನೊಂದು ನೋವು ಬೇಕಾ, ತಪ್ಪು ಸಾರ್. ಒಬ್ಬ ಮನುಷ್ಯ ಬದುಕಿರುವಾಗಲೇ ಅವನ ಬಗ್ಗೆ ಮಾತನಾಡಬಾರದು ಅಂತ ಹೇಳ್ತಾರೆ. ಈಗ ಅವರು ಇಲ್ಲ. ಈಗ ಮಾತಾಡ್ಬೋದಾ ಸರ್ ಅಂತ ಹುಚ್ಚ ವೆಂಕಟ್ ಅವರು ಪ್ರಶ್ನೆ ಮಾಡಿದ್ದಾರೆ. ಏನೇನೋ ಮಾತಾಡಿದ್ರೆ ಅವರ ಫ್ಯಾಮಿಲಿ ಮೆಂಬರ್ಸ್‌ಗೆ ಏನಾಗಬಹುದು. ಗುರುಪ್ರಸಾದ್ ಅವರ ಫ್ಯಾಮಿಲಿ ಇದನ್ನ ಹೇಗೆ ಸ್ವೀಕರಿಸಬಹುದು ಅಂತ ಹುಚ್ಚ ವೆಂಕಟ್ ದುಃಖದಲ್ಲೇ ಪ್ರಶ್ನೆ ಮಾಡಿದ್ದಾರೆ.
ಮೊದಲೇ ಗುರುಪ್ರಸಾದ್ ಅವರ ಕುಟುಂಬದವರು, ಅವರು ಇನ್ನಿಲ್ಲ ಎನ್ನುವ ನೋವಿನಲ್ಲಿ ಇದ್ದಾರೆ. ಈಗ ಈ ರೀತಿ ಮಾತನಾಡಬಾರ್ದು ಸರ್. ಒಬ್ಬ ವ್ಯಕ್ತಿ ಸಾವನ್ನಪ್ಪಿದ ಮೇಲೆ ಈ ರೀತಿ ಮಾತನಾಡುವುದು ತಪ್ಪಲ್ಲವಾ ಸರ್. ಜಗ್ಗೇಶ್ ಅವರೇ ಇನ್ನೂ ಯಾರ ಬಗ್ಗೆಯೂ ಈ ರೀತಿ ಯಾರ ಬಳಿಯೂ ಮಾತನಾಡಬೇಡಿ. ಜಗ್ಗೇಶ್ ಸರ್ ನಿಮಗೆ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ. ನೀವು ಗುರು ಅವರ ಬಗ್ಗೆ ಮಾತನಾಡಿರುವುದು ಕೇಳಿ ನೋವಾಯಿತು. ಅವರ ಫ್ಯಾಮಿಲಿ ಅವರಿಗೂ ಹೇಳುತ್ತೇನೆ. ಇದರಿಂದ ಬೇಜಾರಾಗಬೇಡಿ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ ಹುಚ್ಚ ವೆಂಕಟ್.
ವೆಂಕಟ್ ಪರ ಕಮೆಂಟ್ ಸುರಿಮಳೆ: ಹುಚ್ಚ ವೆಂಕಟ್ ಅವರ ವಿಡಿಯೋಗೆ ನೂರಾರು ಜನ ಸಪೋರ್ಟ್ ಮಾಡಿದ್ದಾರೆ. ಹುಚ್ಚ ವೆಂಕಟ್ ಅವರು ಮನುಷ್ಯರಾಗಿದ್ದಾರೆ. ಜಗ್ಗೇಶ್ ಹುಚ್ಚ ಆಗಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮೆಚ್ಚಿದೆ ಕಣಯ್ಯ ನಿನ್ನ ಅಂತ ಕಾಮೆಂಟ್ ಮಾಡಿದ್ದಾರೆ.
ಹುಚ್ಚ ವೆಂಕಟ್ ಅವರ ವಿಡಿಯೋ ಬಹುಶಃ ಮೊದಲ ಬಾರಿ ಒಳ್ಳೆಯ ಕಾರಣಕ್ಕೆ ವೈರಲ್ ಆಗ್ತಿದೆ. ಹುಚ್ಚ ವೆಂಕಟ್ ಅವರು ಬುದ್ಧಿ ಹೇಳ್ತಾ ಇದ್ದಾರೆ ನೋಡಿ ಸರ್ ಅಂತ ಕೆಲವರು ಜಗ್ಗೇಶ್ ಅವರಿಗೆ ಕಮೆಂಟ್ ಮಾಡ್ತಾ ಇದ್ದಾರೆ.












Click it and Unblock the Notifications