Mata Guruprasad: ಚಟದಿಂದ ಚಟ್ಟದ ತನಕ... ಮಠ ಗುರುಪ್ರಸಾದ್ ಅವರಿಗೆ ಇತ್ತಂತೆ ಅದೊಂದು ಕೆಟ್ಟ...
ಮಠ ಗುರುಪ್ರಸಾದ್ ಸಾವು ಕನ್ನಡ ಸಿನಿಮಾ ರಂಗವನ್ನು ಒಂದು ಕ್ಷಣ ನಡುಗಿಸಿದೆ. ಯಾಕೆ ಈ ಮಾತು ಅಂದ್ರೆ, ಒಬ್ಬ ಕನ್ನಡದ ನಿರ್ದೇಶಕ ಸಾಲದ ಕಾರಣಕ್ಕೆ ಸತ್ತಿದ್ದಾರೆ? ಎನ್ನುವ ಈ ಆರೋಪ ಜನರಿಗೆ & ಕನ್ನಡ ಸಿನಿಮಾ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಂತಹ ಸಮಯದಲ್ಲೇ ಮಠ ಗುರುಪ್ರಸಾದ್ ಅವರ ಬಗ್ಗೆ ಸಾಲು ಸಾಲು ಆರೋಪಗಳು ಕೇಳಿ ಬರ್ತಿವೆ. ಅದರಲ್ಲೂ ನಟ ಜಗ್ಗೇಶ್ ಅವರ ಹೇಳಿಕೆಗೆ ಕನ್ನಡಿಗರು ಎಲುಬು ಇಲ್ಲದ ನಾಲಿಗೆ & ಹರಕು ಬಾಯಿ ಜಗ್ಗಣ್ಣ.. ಅಂತೆಲ್ಲಾ ಬೈಯುತ್ತಾ ಆರೋಪಿಸುತ್ತಿದ್ದಾರೆ. ಇಂತಹ ಸಮಯದಲ್ಲೇ...
ಮಠ ಗುರುಪ್ರಸಾದ್ ಅವರಿಗೆ ಒಂದು ಭಯಾನಕ ಚಟ ಇತ್ತು, ಆ ಚಟವೇ ಮಠ ಗುರುಪ್ರಸಾದ್ ಅವರ ಜೀವ ತೆಗೆದಿದೆ ಎಂಬ ಆರೋಪ ಕೇಳಿ ಬಂದಿದೆ. ಚಟ ಅಂದ ತಕ್ಷಣ ನೀವೆಲ್ಲಾ ಏನು ತಿಳಿಸಿಕೊಂಡಿದ್ದೀರಿ ಅಂತಾ ನಮಗೂ ಗೊತ್ತು, ಆದರೆ ನೀವು ತಿಳಿದ ಚಟ ಇದಲ್ಲ. ಅರೆರೆ, ಹಾಗಾದ್ರೆ ಮಠ ಗುರುಪ್ರಸಾದ್ ಅವರಿಗೆ ಇನ್ಯಾವ ಚಟ ಇತ್ತು ಸ್ವಾಮಿ? ಅಂತಾ ನಿಮ್ಮ ಮನಸ್ಸು ಪ್ರಶ್ನೆ ಕೇಳುತ್ತಿದೆಯಾ? ನಿಮ್ಮ ಪ್ರಶ್ನೆಗೆ ಉತ್ತರ ಹುಡುಕಲು ಮುಂದೆ ಓದಿ.

ಅದೊಂದು ಚಟದಿಂದಲೇ ಚಟ್ಟ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಅಲೆ ಎಬ್ಬಿಸಿದ್ದ ಮಠ ಗುರುಪ್ರಸಾದ್ ಅವರಿಗೆ ಎಣ್ಣೆ ಅಂದ್ರೆ ಹೆಂಡದ ಚಟ ಇದ್ದರೂ, ಕುಡಿದರೆ ಅವರು ಮೈ ಮರೆಯುತ್ತಿರಲಿಲ್ಲ. ಆದ್ರೆ ಹೆಂಡಕ್ಕಿಂತ ಭಯನಾಕ ಚಟ ಮಠ ಗುರುಪ್ರಸಾದ್ ಅವರನ್ನ ಈಗ ಬಲಿ ಪಡೆದುಬಿಟ್ಟಿದೆ! ಹಾಗಾದ್ರೆ ಏನದು ಮಠ ಗುರುಪ್ರಸಾದ್ ಅವರಿಗೆ ಇದ್ದ ಭಯಾನಕ ಚಟ? ಮಠ ಗುರುಪ್ರಸಾದ್ ಅವರ ಜೊತೆಯಲ್ಲಿ ಹಲವು ವರ್ಷಗಳಿಂದ ಇದ್ದವರು ಮಠ ಗುರುಪ್ರಸಾದ್ ಅವರಿಗೆ ಇದ್ದ ಭಯಾನಕದ ಚಟದ ಬಗ್ಗೆ ಏನು ಹೇಳುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಮುಂದೆ ಓದಿ ತಿಳಿಯಿರಿ.
ಮಠ ಗುರುಪ್ರಸಾದ್‌ಗೆ ಇತ್ತು ಅದೊಂದು ರೋಗ!
ಮನುಷ್ಯನಿಗೆ ಅಹಂಕಾರ ಒಳ್ಳೆಯದು, ಆದರೆ ಅದೇ ಅಹಂಕಾರ ಮಿತಿ ಮೀರಬಾರದು ಅಷ್ಟೇ. ಅಕಸ್ಮಾತ್ ಮನುಷ್ಯನಿಗೆ ಅಹಂಕಾರ ಮಿತಿಮೀರಿ ಹೋದರೆ, ಮುಂದೆ ಆಗುವುದೆಲ್ಲಾ ದೊಡ್ಡ ಅನಾಹುತ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡ. ಇದೀಗ, ಮಠ ಗುರುಪ್ರಸಾದ್‌ರ ವಿಚಾರದಲ್ಲಿ ಕೂಡ ಅಹಂಕಾರ ಅಥವಾ ದುರಹಂಕಾರ ಎಂಬ ಚಟ ದೊಡ್ಡ ಎಡವಟ್ಟನ್ನೇ ಮಾಡಿ ಹೋಗಿದೆ. ಕುಡಿತ, ಸಾಲ... ಹೀಗೆ ಎಲ್ಲಾ ಚಟಗಳಿಗಿಂತ ಮಠ ಗುರುಪ್ರಸಾದ್ ಅವರ ಮನಸ್ಸನ್ನ ಹಿಂಡಿ ಹಿಂಡಿ ಹಿಪ್ಪೆ ಮಾಡಿದ್ದೇ ಅಹಂಕಾರ ಎಂಬ ಮಾತನ್ನು ಅವರ ಜೊತೆಗಾರರು & ಸ್ನೇಹಿತರು ಇದೀಗ ಹೇಳುತ್ತಿದ್ದಾರೆ.
ಹಳೆಯ ಗುರುಪ್ರಸಾದ್ ಯಾವತ್ತೋ...
ಹೌದು, ಈ ಮಾತು ಅತಿಶಯೋಕ್ತಿ ಅಲ್ಲವೇ ಅಲ್ಲ ಬಿಡಿ. ಯಾಕೆ ಅಂದ್ರೆ, ಮಠ & ಎದ್ದೇಳು ಮಂಜುನಾಥ ಸಿನಿಮಾ ನಿರ್ದೇಶನ ಮಾಡುವ ಸಮಯದಲ್ಲಿ ಇದ್ದ ಮಠ ಗುರುಪ್ರಸಾದ್ ಆ ನಂತರ ಮಾಯವಾಗಿ ಹೋದರು. ಯಶಸ್ಸಿನ ಅಹಂ & ಅಹಂಕಾರ ಅವರ ತಲೆಗೆ ಹತ್ತಿತ್ತು, ಯಾರ ಮಾತನ್ನು ಕೇಳದೆ ಏಕಾಂಗಿಯಾಗಿ ಮಠ ಗುರುಪ್ರಸಾದ್ ಎಲ್ಲ ನಿರ್ಧಾರ ತೆಗೆದುಕೊಂಡು ಒತ್ತಡ ಹೇರುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹೀಗೆ ಮಠ ಗುರುಪ್ರಸಾದ್ ಅವರು ತಮ್ಮ ಒಳಗಿದ್ದ ಅಹಂಕಾರ ಬಿಟ್ಟಿದ್ದರೆ, ಎಂದೋ ಮೇಲೆ ಹೋಗುತ್ತಿದ್ದರು ಎನ್ನುತ್ತಾರೆ ಗುರುಪ್ರಸಾದ್ ಅವರಿಗೆ ತುಂಬಾ ಹತ್ತಿರವಾಗಿ ಬದುಕಿದ್ದವರು.












Click it and Unblock the Notifications