Mata Guruprasad: ನನ್ನ ಸಾ**ಗೆ ನೀವೆಲ್ಲಾ ಕಾರಣ, ಗುರುಪ್ರಸಾದ್ ಕೊನೆಯ ವಿಡಿಯೋ ವೈರಲ್!

ಕನ್ನಡ ಸಿನಿಮಾ ರಂಗದಲ್ಲಿ ಪ್ರತಿಭಾವಂತ ಡೈರೆಕ್ಟರ್ ಎಂಬ ಬಿರುದನ್ನು ಪಡೆದು, ಎದ್ದೇಳು ಮಂಜುನಾಥ, ಮಠ, ಡೈರೆಕ್ಟರ್ ಸ್ಪೆಷಲ್ ರೀತಿಯ ಅದ್ಭುತ ಸಿನಿಮಾಗಳನ್ನ ಕನ್ನಡ ಸಿನಿಮಾ ಪ್ರೇಕ್ಷಕರ ಎದುರು ತಂದಿಟ್ಟ ಮಠ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿಢೀರ್ ಮಠ ಗುರುಪ್ರಸಾದ್ ಸಾವಿಗೆ ಶರಣಾದ ವಿಚಾರ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ನನ್ನ ಸಾ**ಗೆ ನೀವೆಲ್ಲಾ ಕಾರಣ.... ಎಂದು ಗುರುಪ್ರಸಾದ್ ಮಾಡಿರುವ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ವಿಡಿಯೋ ನೋಡಲು ಮುಂದೆ ಓದಿ.

ಮಠ ಗುರುಪ್ರಸಾದ್ ಅವರ ಸಾವಿಗೆ ಸಾಲ ಮಾಡಿಕೊಂಡಿದ್ದೇ ಕಾರಣ, ಸಾಲಗಾರರ ಕಾಟವೇ ಕಾರಣ ಎಂಬ ಆರೋಪ ಮಾಡಲಾಗ್ತಿದೆ. ಆದರೆ ಈ ಆರೋಪದ ಬಗ್ಗೆ ಪೊಲೀಸರು ಅಥವಾ ತನಿಖಾಧಿಕಾರಿಗಳು ಅಧಿಕೃತ ಹೇಳಿಕೆ ನೀಡಿಲ್ಲ. ಹೀಗೆ ಇದ್ದರೂ, ಮಠ ಗುರುಪ್ರಸಾದ್ ಅವರು ಮಾತ್ರ ಮೈತುಂಬಾ ಸಾಲ ಮಾಡಿಕೊಂಡಿದ್ದರು. ಈ ನಡುವೆ ಕುಡಿತಕ್ಕೆ ಕೂಡ ದಾಸರಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇಷ್ಟೆಲ್ಲದರ ನಡುವೆ ಮಠ ಗುರುಪ್ರಸಾದ್ ವಿಡಿಯೋ ಕೂಡ ವೈರಲ್ ಆಗುತ್ತಿದೆ.

Mata Guruprasad Incident Details And Watch Guruprasad Viral Video On Social Midea

ಸಾವಿನ ಬಗ್ಗೆ ಮಠ ಗುರುಪ್ರಸಾದ್....

ಮಠ ಗುರುಪ್ರಸಾದ್ ಅವರ ಸಾವಿನ ಕುರಿತು ಇದೀಗ ತನಿಖೆ ಆರಂಭವಾಗಿದೆ. ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನ ಹಳ್ಳಿ ಸಮೀಪದ ಖಾಸಗಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಮಠ ಗುರುಪ್ರಸಾದ್ ಅವರು ವಾಸ ಮಾಡುತ್ತಿದ್ದರು. ಮಠ ಗುರುಪ್ರಸಾದ್ 8 ತಿಂಗಳಿಂದಲೂ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಒಂದನ್ನ ಬಾಡಿಗೆಗೆ ಪಡೆದು, ವಾಸ ಮಾಡುತ್ತಿದ್ದರು. ಕಳೆದ 4 ದಿನಗಳ ಹಿಂದೆ ಹೀಗೆ ಮಠ ಗುರುಪ್ರಸಾದ್ ಅವರು ನೇಣಿಗೆ ಶರಣಾಗಿದ್ದಾರಾ? ಎಂಬ ಅನುಮಾನ ಮೂಡಿದೆ. ಇಂತಹ ಸಮಯದಲ್ಲೇ ಮಠ ಗುರುಪ್ರಸಾದ್ ಅವರು ಸಾವಿನ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಪೊಲೀಸರಿಂದ ಎಲ್ಲೆಲ್ಲೂ ಹುಡುಕಾಟ!

ನೋಡಿದ್ರಲ್ಲ ವಿಡಿಯೋ, ಅಂದಹಾಗೆ ಈ ವಿಡಿಯೋ ಹಳೆಯದು ಎನ್ನಲಾಗುತ್ತಿದ್ದು. ಇದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಮತ್ತೊಂದು ಕಡೆ ಪೊಲೀಸರು ಕೂಡ ಎಲ್ಲಾ ರೀತಿ ತನಿಖೆ ಆರಂಭ ಮಾಡಿದ್ದು, ಎಲ್ಲಾ ಕಡೆಯಲ್ಲೂ ಹುಡುಕುತ್ತಿದ್ದಾರೆ. ಹಾಗೇ ಮತ್ತೊಂದ್ಕಡೆ ಮಠ ಗುರುಪ್ರಸಾದ್ ಅವರ ಹೊಸ ಸಿನಿಮಾ ರಿಲೀಸ್ ಆಗಬೇಕಿತ್ತು, ಆದರೆ ಈಗ ಅದು ಕೂಡ ರಿಲೀಸ್ ಆಗಲು ಒದ್ದಾಡುವ ಪರಿಸ್ಥಿತಿ ಬಂದಿದೆ.

ಪೊಲೀಸರಿಗೆ ಸಿಕ್ಕಿದೆಯಾ ಮಹತ್ವದ ಮಾಹಿತಿ?

1972ರ ನವೆಂಬರ್ 2ರಂದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಗುರು ಪ್ರಸಾದ್ ಜನಿಸಿದ್ದರು. ಸಾಕಷ್ಟು ಕಷ್ಟದ ನಡುವೆಯೇ ಗೆದ್ದು ಬೆಳೆದು ಬಂದ ಪ್ರತಿಭೆ ಮಠ ಗುರುಪ್ರಸಾದ್ ಅವರು. ಮಠ ಗುರುಪ್ರಸಾದ್ ಹೀಗೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಯಾರಿಗೂ ನಂಬಲು ಆಗ್ತಿಲ್ಲ. ನಟ ಜಗ್ಗೇಶ್, ತಬಲ ನಾಣಿ ಸಮೇತ ದೊಡ್ಡ ದೊಡ್ಡ ನಟರು & ಸಿನಿಮಾ ಸೆಲೆಬ್ರಿಟಿಗಳೆಲ್ಲ ಮಠ ಗುರುಪ್ರಸಾದ್ ಅವರ ಸಾವಿನ ಬಗ್ಗೆ ಭಾರಿ ಆಘಾತ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಹೀಗೆ ಮಠ ಗುರುಪ್ರಸಾದ್ ಸಾಯುವ ನಿರ್ಧಾರ ಕೈಗೊಳ್ಳಲು ಕಾರಣ ಏನು? ಎಂಬ ಪ್ರಶ್ನೆಗೆ ನಿಖರ ಉತ್ತರ ಹುಡುಕಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+