Master Anand: ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ಮಾಸ್ಟರ್ ಆನಂದ್!
ಶಾಲೆಗೆ ಹೋಗುವ ಮಕ್ಕಳ ವಿಚಾರದಲ್ಲಿ ಪೋಷಕ ತೀವ್ರ ಎಚ್ಚರಿಕೆವಹಿಸಬೇಕು. ನಗರ ಪ್ರದೇಶಗಳಲ್ಲದೇ ಪಟ್ಟಣ ಪ್ರದೇಶಗಳಲ್ಲಿಯೂ ಶಾಲೆಗಳಿಗೆ ಮಕ್ಕಳನ್ನು ಶಾಲಾ ವಾಹನ ಇಲ್ಲದೇ ಖಾಸಗಿ ವಾಹನಗಳಲ್ಲಿ ಕಳುಹಿಸುತ್ತಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಕ್ಕಳ ಕಳ್ಳರ ಗ್ಯಾಂಗ್, ಶಾಲಾ ವಾಹನದ ನೆಪದಲ್ಲಿ ಮಕ್ಕಳನ್ನು ಕಿಡ್ನಾಪ್ ಮಾಡುತ್ತಿರುವ ವಿಚಾರ ಉತ್ತರ ಭಾರತದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಸ್ಟರ್ ಆನಂದ್ ಅವರು ಶಾಕಿಂಗ್ ವಿಷ್ಯವನ್ನ ರಿವೀಲ್ ಮಾಡಿದ್ದಾರೆ.
ಇಂದು ಮಹಾನಗರ, ನಗರ ಪ್ರದೇಶಗಳ ಮಕ್ಕಳು ಮಾತ್ರವಲ್ಲದೇ ಪಟ್ಟಣ ಪ್ರದೇಶಗಳಲ್ಲಿಯೂ ಬಹುತೇಕ ಎಲ್ಲ ಮಕ್ಕಳು ಶಾಲೆಗಳಿಗೆ ಶಾಲಾ ವಾಹನ ಇಲ್ಲವೇ ಖಾಸಗಿ ವಾಹನಗಳಲ್ಲಿ ಕಳುಹಿಸುತ್ತಾರೆ. ಈ ವಾಹನದ ನೆಪದಲ್ಲಿ ಮಕ್ಕಳನ್ನು ಕಿಡ್ನ್ಯಾಪ್ ಮಾಡುತ್ತಿದೆ. ಇಂಥ ಘಟನೆಗಳ ಬಗ್ಗೆ ಮಾಸ್ಟರ್ ಆನಂದ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಮಕ್ಕಳನ್ನು ಶಾಲೆಗೆ ವಾಹನದಲ್ಲಿ ಕಳುಹಿಸುವ ಮುನ್ನ ಸರಿಯಾಗಿ ಯೋಚನೆ ಮಾಡುವಂತೆ ಮಾಸ್ಟರ್ ಆನಂದ್ ಅವರು ಹೇಳಿದ್ದಾರೆ.

ಹಿಂದಿಯಲ್ಲಿ ಬಂದಿರುವ ಸುದ್ದಿಯೊಂದನ್ನು ಉಲ್ಲೇಖಿಸಿರುವ ಮಾಸ್ಟರ್ ಆನಂದ್ ಅವರು, ಮಕ್ಕಳ ಬಗ್ಗೆ ಎಚ್ಚರಿಕೆವಹಿಸಿ ಎಂದು ಪೋಷಕರಿಗೆ ತಿಳಿಸಿದ್ದಾರೆ. ಮಕ್ಕಳನ್ನ ಕಿಡ್ನಾಪ್ ಮಾಡುವ ಈ ಜಾಲ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ವಿವರಿಸಿದ್ದಾರೆ. ಶಾಲೆಗೆ ಹೋಗುವ ಮಕ್ಕಳ ಮನೆಗಳನ್ನು ಈ ಗ್ಯಾಂಗ್ ಗುರುತಿಸುತ್ತದೆ. ಸಾಮಾನ್ಯವಾಗಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವ್ಯಾನ್ಗಳು ನಿಗದಿತ ಸಮಯಕ್ಕಿಂತ ಸ್ವಲ್ಪ ಹೆಚ್ಚೂ ಕಡಿಮೆ ಬರುವುದು ಸಾಮಾನ್ಯ. ಈ ಗ್ಯಾಂಗ್ನವರಿಗೆ ಇದೇ ಬಂಡವಾಳ. ನಿಗದಿತ ವಾಹನ ಬರುವುದಕ್ಕಿಂತ ಸ್ವಲ್ಪ ಮುಂಚೆ ಬರುತ್ತದೆ ಈ ವಾಹನ. ಇದರಲ್ಲಿ ಇರುವ ಡ್ರೈವರ್, ಇವತ್ತು ಮಾಮೂಲು ಡ್ರೈವರ್ ಬಂದಿಲ್ಲ, ಅವರಿಗೆ ಅನಾರೋಗ್ಯನೋ ಅಥವಾ ಇನ್ನೇನೋ ನೆಪ ಹೇಳಿ ನಾನು ಬಂದಿದ್ದೇನೆ ಎಂದು ಹೇಳಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಮಕ್ಕಳನ್ನ ಕಿಡ್ನಾಪ್ ದಂದೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಪ್ರತಿದಿನ ಮಕ್ಕಳನ್ನ ಶಾಲೆಗೆ ಕರೆದುಕೊಂಡ ಹೋಗುದ ಚಾಲಕ ಯಾವುದಾದರೂ ಕಾರಣಕ್ಕೆ ಬರದೇ ಹೋದರೆ ಬೇರೆಯವರು ಬರುವುದು ಸಾಮಾನ್ಯ. ಆದ್ದರಿಂದ ಪಾಲಕರಿಗೂ ಇದು ತಿಳಿಯುವುದಿಲ್ಲ. ಶಾಲಾ ವಾಹನ ಎಂದುಕೊಂಡೇ ಅದರಲ್ಲಿ ಮಕ್ಕಳನ್ನು ಕಳಿಸುತ್ತಾರೆ. ಕೊನೆಗೆ ನಿಜವಾದ ವಾಹನ ಬಂದಾಗಲೇ ತಾವು ಮೋಸ ಹೋಗಿರುವುದು ತಿಳಿಯುತ್ತದೆ. ಈ ಬಗ್ಗೆ ಹಿಂದಿ ವಿಡಿಯೋ ಬಗ್ಗೆ ಮಾಸ್ಟರ್ ಆನಂದ್ ಅವರು ವಿಡಿಯೋ ಹಂಚಿಕೊಂಡಿದ್ದು, ಮಕ್ಕಳನ್ನ ಶಾಲೆಗೆ ಕಳುಹಿಸುವ ಸಮಯದಲ್ಲಿ ಆ ವಾಹನಗಳ ನಂಬರ್, ಡ್ರೈವರ್ ಬಗ್ಗೆ ಗಮನ ಹರಿಸಿ, ಎಚ್ಚರಿಕೆವಹಿಸಿ ಎಂದು ಮಾಸ್ಟರ್ ಆನಂದ್ ಅವರು ಹೇಳಿದ್ದಾರೆ.
ಹಿಂದಿ ವಿಡಿಯೋದಲ್ಲಿ ಮಾತನಾಡಿರುವ ಮಾಸ್ಟರ್ ಆನಂದ್ ಅವರು, ಮಕ್ಕಳನ್ನು ತುಂಬಿಸಿಕೊಂಡು ಶಾಲೆಯ ವಾಹನ ಬಂದ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಡೌಟ್ ಬಂದು ನಿಜವಾದ ಡ್ರೈವರ್ಗೆ ಕರೆ ಮಾಡಿದಾಗ, ಆತ ತಾನು ಬರುತ್ತಿರುವುದಕ್ಕೆ ಇನ್ನೂ 20 ನಿಮಿಷವಾಗುತ್ತದೆ ಎಂದು ಹೇಳಿದ್ದರಿಂದ ಆ ಮೋಸದಾಟ ಬಯಲಾಗಿದೆ. ಆದರೆ ಈ ರೀತಿ ನಿಮ್ಮ ಮಕ್ಕಳಿಗೂ ಆಗಬಹುದು. ಆದ್ದರಿಂದ ಚಾಲಕರು ಬೇರೆ ಬಂದಿದ್ದರೆ ಅಥವಾ ಶಾಲಾ ವಾಹನ ಬೇರೆ ಬಂದಿದ್ದರೆ ಅಥವಾ ಇನ್ನಾವುದೇ ರೀತಿಯಲ್ಲಿ ಸಂದೇಹ ಬಂದರೆ ಕ್ರಮ ತೆಗೆದುಕೊಳ್ಳಿ. ಮಕ್ಕಳನ್ನು ಬೇರೆ ವಾಹನಗಳಿಗೆ ಕಳುಹಿಸುವ ಮುನ್ನ ಎಚ್ಚರಿಕೆವಹಿಸಿ ಎಂದು ಮಾಸ್ಟರ್ ಆನಂದ್ ಹೇಳಿದ್ದಾರೆ.












Click it and Unblock the Notifications