ಮಂಡ್ಯ ರಮೇಶ್ ಹಾಸಿಗೆ ಹಿಡಿದಾಗ ನೆರವಿಗೆ ಬಂದಿದ್ದು ಆ ನಟರು ಮಾತ್ರ
ಕನ್ನಡದ ಹಿರಿಯ ಹಾಸ್ಯ ನಟರಿಗೆ ಸಿನಿರಂಗದಲ್ಲಿ ಅವಕಾಶಗಳು ಕೈತಪ್ಪಿವೆ. ಕನ್ನಡದ ಹಿರಿಯ ನಟ ಮಂಡ್ಯ ರಮೇಶ್ ಅವರು ತಾವು ಅನುಭವಿಸಿದ ಕಷ್ಟದ ದಿನಗಳನ್ನ ನೆನಪಿಸಿಕೊಂಡು ಮಾತನಾಡಿದ್ದಾರೆ. ಅಲ್ಲದೇ ಕಷ್ಟದ ದಿನಗಳಲ್ಲಿ ಕೈ ಹಿಡಿದ ಕಲಾವಿದರ ಬಗ್ಗೆ ಹೇಳಿಕೊಂಡಿದ್ದಾರೆ.
ಖಾಸಗಿ ಯುಟ್ಯೂಬ್ ಸಂದರ್ಶನವೊಂದರಲ್ಲಿ ಕನ್ನಡದ ಹಿರಿಯ ನಟ ಮಂಡ್ಯ ರಮೇಶ್ ಅವರು ಮಾತನಾಡಿ, 'ನನಗೆ 8 ತಿಂಗಳ ಹಿಂದೆ ಭೀಕರ ಅಪಘಾತವಾಗಿತ್ತು. ಸಿನಿಮಾ ಶೂಟಿಂಗ್ ನಡೆಯುವ ವೇಳೆಯೇ ದೊಡ್ಡ ಆ್ಯಕ್ಸಿಡೆಂಟ್ ಆಯ್ತು. ಎದ್ದು ನಿಲ್ಲೋದಕ್ಕೂ ಹಲವು ತಿಂಗಳು ತೆಗೆದುಕೊಂಡೆ. ನಾನು ಬೆಡ್ ಮೇಲೆ ಇದ್ದಾಗ ನನ್ನ ಕಡೆಯವರು ಚಿತ್ರೋದ್ಯಮದ ಕೆಲವರ ಬಳಿ ಹಣದ ಸಹಾಯಕ್ಕಾಗಿ ಬೇಡಿಕೆ ಇಟ್ಟು ಕಾಲ್ ಮಾಡಿದ್ದರು ಎಂದು ಕಷ್ಟ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ.

ಭೀಕರ ಅಪಘಾತವಾಗಿ ನಾನು ಬೆಡ್ ಮೇಲೆ ಇದ್ದಾಗ ಒಬ್ಬರ ಹೊರತೂ ಬೇರೆ ಯಾರೂ ಕೂಡ ಆಗ ಸಹಾಯಕ್ಕೆ ಮುಂದೆ ಬಂದಿಲ್ಲ. ಕನ್ನಡ ಆ ಒಬ್ಬ ನಟ-ನಿರ್ದೇಶಕ ಮಾತ್ರ ನನ್ನ ಸಹಾಯಕ್ಕೆ ಬಂದ್ರು. ಅಚ್ಚರಿ ಅಂದ್ರೆ ನಾನು ಅವರ ಜೊತೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅವರೇ ನನಗೆ ಫೋನ್ ಮಾಡಿ 'ಭೀಕರ ಅಪಘಾತದಲ್ಲಿ ಬದುಕುಳಿದಿದ್ದೆ ದೊಡ್ಡದು, ಕಳೆದ ಒಂದು ತಿಂಗಳಿಂದ ಹಾಸಿಗೆ ಹಿಡಿದಿದ್ದೀರಾ, ಜೀವನ ಹೇಗೆ ನಡಿತಿದೆ ಅಣ್ಣಾ ಅಂತ ಮಾತಾಡಿ, ಕಾಲ್ ಕಟ್ ಮಾಡಿದ್ರು. ಫೋನ್ ಕಟ್ ಆದ ತಕ್ಷಣ ನನ್ನ ಅಕೌಂಟ್ಗೆ ಹಣ ಬಂದಿತ್ತು. ಆ ನಟ ಬೇರೆ ಯಾರು ಅಲ್ಲ ನಟ ರಿಷಬ್ ಶೆಟ್ಟಿ ಅವರು ಎಂದು ಮಂಡ್ಯ ರಮೇಶ್ ಹೇಳಿಕೊಂಡಿದ್ದಾರೆ.
ಇನ್ನೂ ಸಂದರ್ಶನದಲ್ಲಿ ನಟ ದರ್ಶನ್ ಕುರಿತು ಮಂಡ್ಯ ರಮೇಶ್ ಅವರು ಮಾತನಾಡಿದ್ದಾರೆ. ಈ ಹಿಂದೆ ರಂಗಮಂದಿರ ನಿರ್ಮಿಸುವಾಗ ಸಮಯದಲ್ಲಿ ಜನರೇಟರ್ ಅಳವಡಿಸಲು ನನ್ನ ಬಳಿ ಹಣವಿಲ್ಲದೇ ಒದ್ದಾಡ್ತಿದ್ದೆ ಆಗ ಜನರೇಟರ್ ತೆಗೆದುಕೊಳ್ಳಿ ಅಂತ ನಟ ದರ್ಶನ್ ನನ್ನ ಜೇಬಿಗೆ ಹಣ ಇಟ್ಟು ಹೋಗಿದ್ದರು . ಹೀಗೆ ಕೆಲವರು ಮಾತ್ರ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಾರೆ ಎಂದು ಹಿರಿಯ ನಟ ರಮೇಶ್ ನೆನಪು ಮಾಡಿಕೊಂಡಿದ್ದಾರೆ.
ಇನ್ನೂ ಮಂಡ್ಯ ರಮೇಶ್ ಅವರು ನಟ ಯಶ್ ಕು ರಿತು ಮಾತನಾಡಿ, ನಟ ಯಶ್ ಅವರಲ್ಲಿ ಸರಳತೆ ಇದೆ. ಸೂಪರ್ ಸ್ಟಾರ್ ಎನ್ನುವ ಗತ್ತಿಲ್ಲ. ಯಾವತ್ತೂ ಸಿಂಪಲ್ ಆಗಿ ಇರಲು ಇಷ್ಟಪಡುವವರು ಯಶ್. ಅಂತ ನಟ ರಮೇಶ್ ಹೇಳಿದ್ದಾರೆ.
ಯಶ್ ಗಜಕೇಸರಿ ಸಿನಿಮಾ ಮಾಡುವಾಗ ನಾನು ಅವರ ಜೊತೆ ನಟಿಸಿದ್ದೇನೆ. ಆಗ ಈ ನಟ ಮುಂದೆ 'ಕೆಜಿಎಫ್' ಅಂತಹ ಸಿನಿಮಾ ಮಾಡ್ತಾರೆ, ನ್ಯಾಷನಲ್ ಸ್ಟಾರ್ ಆಗ್ತಾರೆ ಎನ್ನುವ ಯಾವ ಕಲ್ಪನೆಯೂ ನನಗೆ ಇರಲಿಲ್ಲ. ರಂಗಭೂಮಿ ಹಿನ್ನೆಲೆಯಿಂದ ಬಂದ ಹುಡುಗ, ಒಳ್ಳೆಯ ನಟ ಯಶ್. ಶ್ರದ್ಧೆ ಹಾಗೂ ಶ್ರಮ ಅವರನ್ನು ಇಲ್ಲಿವರೆಗೂ ತಂದು ನಿಲ್ಲಿಸದೆ, ಅದೇ ಅವರನ್ನು ಕಾಪಾಡಿದೆ. ಯಶ್ ಅವರ ಕೋಟೆ ಟಚ್ ಮಾಡಲು ಆಗಲ್ಲ. ಆದ್ರೆ ಒಳಗೆ ಹೋದ್ರೆ ನಿಮ್ಮನ್ನು ಅವರು ತಮ್ಮ ಹೃದಯದ ಕೋಟೆಯಲ್ಲಿ ಗಟ್ಟಿಯಾಗಿ ಬಂಧಿಸಿಕೊಳ್ಳುವಂತಹ ವ್ಯಕ್ತಿ ನಟ ಯಶ್ ಎಂದು ಮಂಡ್ಯ ರಮೇಶ್ ಅವರು ತಿಳಿಸಿದ್ದಾರೆ.












Click it and Unblock the Notifications