Manchu Manoj: ಕಿಚ್ಚ ಸುದೀಪ್‌ ರೌಡಿ ಎಂದ ತೆಲುಗು ನಟ ಮಂಚು ಮನೋಜ್‌

ನಟ ಸುದೀಪ್‌ ಅವರನ್ನು ಕರುನಾಡಿನ ಮಂದಿ ಕಿಚ್ಚ ಎಂದು ಕರೆಯುತ್ತಾರೆ. ಅವರ ನಟನೆಯ ಅಭಿನಯ ಚಕ್ರವರ್ತಿ ಅಂತಾರೆ. ಇವರಿಗೆ ಬಾದ್‌ಶಾ ಎನ್ನುವ ಹೆಸರೂ ಇದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಬಾಲಿವುಡ್‌ನಲ್ಲೂ ಕಿಚ್ಚನ ಹವಾ ಇದೆ. ಟಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಸುದೀಪ್‌ ಅವರ ನಟನೆಗೆ ಜನ ಫಿದಾ ಆಗಿದ್ದಾರೆ. ಆದರೆ ಟಾಲಿವುಡ್‌ನ ಖ್ಯಾತ ನಟನೊಬ್ಬ ಸುದೀಪ್‌ ಅವರನ್ನು ರೌಡಿ ಎಂದು ಕರೆದಿದ್ದಾರೆ. ಇದಕ್ಕೆ ಕಾರಣವೇನು ಎಂದೂ ನಟ ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿರುವ ಟಾಲಿವುಡ್‌ ಹಿರಿಯ ನಟ ಮೋಹನ್‌ ಬಾಬು ಪುತ್ರ ಹಾಗೂ ನಟ ಮಂಚು ಮನೋಜ್‌ ಮಾಧ್ಯಮಗಳೊಂದಿಗೆ ಮಾತನಾಡುವಾದ ಸುದೀಪ್‌ ರೌಡಿ ಎಂದಿದ್ದಾರೆ. ಬೆಂಗಳೂರಿಗೆ ಬಂದ ತಕ್ಷಣ ನಾನು ಸುದೀಪ್‌ ಅವರನ್ನ ಭೇಟಿಯಾದೆ. ತುಂಬಾ ದಿನಗಳ ನಂತರ ನಾವಿಬ್ಬರೂ ಭೇಟಿಯಾದೆವು. ಪ್ರತಿ ಬಾರಿ ಭೇಟಿಯಾದಾಗಲೂ ಅದೇ ರೀತಿಯ ಪ್ರೀತಿ ನಮ್ಮ ನಡುವೆ ಇರುತ್ತೆ. ಅವರು ನನಗೆ ಅಡುಗೆ ಮಾಡಿ ಬಡಿಸಿದರು ಎಂದಿದ್ದಾರೆ.

Manchu Manoj Calls Kiccha Sudeep Rowdy Friendship Food Memories Shared

ಸುದೀಪ್ ಅವರ ಜೊತೆ ಕ್ರಿಕೆಟ್ ನೋಡುತ್ತಾ ಮೈಸೂರು ಬಜ್ಜಿ ತಿಂದೆ. ಅದು ತುಂಬಾ ಚೆನ್ನಾಗಿತ್ತು. ಸುದೀಪ್ ಅವರು ನನಗೆ ಹಿರಿಯಣ್ಣ ಇದ್ದಂಗೆ. ಆಗಿನಿಂದಲೂ ಸುದೀಪಣ್ಣ ಅವರನ್ನು ನಾನು "ಸೀನಿಯರ್‌ ರೌಡಿ" ಎಂದೇ ಕರೆಯುತ್ತೇನೆ ಎಂದು ಮಂಚು ಮನೋಜ್‌ ಹೇಳಿದ್ದಾರೆ.

ಗೀತಕ್ಕ ಮಾಡೋ ಕೇಕ್‌ ಇಷ್ಟ

ಶಿವಣ್ಣ ಕೂಡ ನಮಗೆ ತುಂಬಾ ಕ್ಲೋಸ್‌. ಭೈರವ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ತುಂಬಾ ಮೆಚ್ಚುಗೆ ಮಾತುಗಳನ್ನಾಡಿದ್ರು. ಅವರು ಯಾವಾಗಲೂ ನನಗೆ ಸಪೋರ್ಟ್‌ ಮಾಡ್ತಾರೆ ಗೀತಕ್ಕ ಕೂಡ ಒಳ್ಳೆಯ ಅಡುಗೆ ಮಾಡಿ ಬಡಿಸಿದ್ರು. ಗೀತಕ್ಕ ಅವರ ಕೇಕ್‌ ತುಂಬಾ ಫೇಮಸ್.‌ ಈಗ ಅವರ ಮನೆಗೆ ಭೇಟಿ ಕೊಟ್ಟಾಗ ಚಿಕನ್‌ ಕರೀ ಮಾಡಿದ್ರು, ತುಂಬಾ ಚೆನ್ನಾಗಿತ್ತು ಎಂದಿದ್ದಾರೆ.

ಅಂಬರೀಷ್‌ ಅಂಕಲ್‌ ಅವರೊಂದಿಗೆ ತುಂಬಾ ನೆನಪುಗಳಿವೆ. ಅವರು ಸಿಕ್ಕಾಪಟ್ಟೆ ಪಾಸಿಟಿವ್‌, ಹ್ಯಾಪಿ ಪರ್ಸನ್‌. ಅವರ ಬಳಿ ಯಾರೇ ಸಹಾಯ ಕೇಳಿಬಂದರೂ ಬರಿಗೈನಲ್ಲಿ ವಾಪಸ್‌ ಹೋಗೋದಿಲ್ಲ. ಈ ಜನರೇಷನ್‌ನಲ್ಲಿ ಅವರಂತಹ ವ್ಯಕ್ತಿ ಸಿಗೋದು ತುಂಬಾ ಕಷ್ಟ. ಅಂಬರೀಷ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲೇಬೇಕು, ಅವರು ಅದಕ್ಕೆ ಅರ್ಹರು ಎಂದು ಮನೋಜ್‌ ಕೂಡ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ನಾನು ಭೇಟಿ ಮಾಡಿ ಸಿನಿಮಾರಂಗದ ಬಗ್ಗೆ ಕೆಲ ಬೇಡಿಕೆಗಳನ್ನು ಮುಂದಿಟ್ಟೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ನಾನು ಎಲ್ಲಿಗೆ ಭೇಟಿ ನೀಡಿದರೂ ಅಲ್ಲಿನ ಸರ್ಕಾರಗಳೊಂದಿಗೆ ಪೈರಸಿ ಬಗ್ಗೆ ಧ್ವನಿ ಎತ್ತುತ್ತಿದ್ದೇನೆ. ಇಲ್ಲಿಗೆ ಬಂದಾಗಲೂ ಕೆಲ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದು ನಟ ಮನೋಜ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+