Malayalam Lokah Movie Row: ಕನ್ನಡಿಗರ ಕ್ಷಮೆಯಾಚಿಸಿದ ಮಲಯಾಳಂನ ಲೋಕಾ ಚಿತ್ರತಂಡ
malayala Loka Movie Row: ಬೆಂಗಳೂರಿನ ಯುವತಿಯರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿರುವ ಆರೋಪ ಎದುರಿಸುತ್ತಿರುವ ಮಲಯಾಳಂನ ಲೋಕಾ ಸಿನಿಮಾ ತಂಡ ಕೊನೆಗೂ ಕ್ಷಮೆಯಾಚನೆ ಮಾಡಿದೆ. ಬೆಂಗಳೂರಿನ ಯುವತಿಯರು ಡಗಾ* ಎನ್ನುವ ಪದವನ್ನು ಈ ಸಿನಿಮಾದಲ್ಲಿನ ಪೊಲೀಸ್ ಪಾತ್ರಧಾರಿ ಬಳಸಿದ್ದಾರೆ ಅಥವಾ ಪೊಲೀಸ್ ಪಾತ್ರಧಾರಿಯ ಮೂಲಕ ಹೇಳಿಸಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಈ ವಿಚಾರವು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ನಿರ್ದಿಷ್ಟ ಡೈಲಾಗ್ ತೆಗೆದುಹಾಕಬೇಕು ಹಾಗೂ ಕನ್ನಡಿಗರ ಕ್ಷಮೆ ಕೇಳಬೇಕು ಎನ್ನುವ ಆಗ್ರಹ ಕನ್ನಡಿಗರಿಂದ ಕೇಳಿ ಬಂದಿತ್ತು. ಇದೀಗ ಸಿನಿಮಾದ ನಿರ್ಮಾಣ ಸಂಸ್ಥೆಯು ಆಗಿರುವ ತಪ್ಪಿಗೆ ಕನ್ನಡಿಗರ ಕ್ಷಮೆಯಾಚನೆ ಮಾಡಿದೆ. ಲೋಕಾ ಸಿನಿಮಾ ತಂಡ ಹೇಳಿದ್ದೇನು ಎನ್ನುವ ವಿವರ ನೋಡೋಣ.
ಇದೀಗ ಮಲಯಾಳಂನ ಲೋಕಾ ಸಿನಿಮಾದ ನಿರ್ಮಾಣ ಸಂಸ್ಥೆ Wayfarer file (ವೇಫೇರ್ ಫೈಲ್) ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು. ಆಗಿರುತ ತಪ್ಪಿಗೆ ಕನ್ನಡಿಗರ ಕ್ಷಮೆಯನ್ನು ಕೇಳಿದೆ. ನಮ್ಮ ಚಲನಚಿತ್ರ ಲೋಕಾದಲ್ಲಿ ಪಾತ್ರಧಾರಿಗಳಲ್ಲಿ ಒಬ್ಬರ ಸಂಭಾಷಣೆಯು ಕರ್ನಾಟಕದ ಜನರ ಭಾವನೆಗಳನ್ನು ನೋಯಿಸಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಮೊದಲ ಭಾಗದಲ್ಲಿನ ಸಂಭಾಷಣೆಯು ಕರ್ನಾಟಕದ ಜನರ ಭಾವನೆಗಳನ್ನು ನೋಯಿಸಿದೆ. ವೇಫೇರ್ ಚಲನಚಿತ್ರಗಳಲ್ಲಿ, ನಾವು ಜನರನ್ನು ಅತ್ಯಂತ ಗೌರವಯುತವಾಗಿ ತೋರಿಸುತ್ತೇವೆ. ಆಗಿರುವ ತಪ್ಪಿಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ.

ಈ ಸಂಭಾಷಣೆಯು ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳುವುದಕ್ಕೆ ಇಚ್ಛಿಸುತ್ತೇವೆ. ವಿವಾದಕ್ಕೆ ಕಾರಣವಾಗಿರುವ ಸಂಭಾಷಣೆಯನ್ನು ಮೊದಲೇ ತೆಗೆದುಹಾಕಲಾಗುತ್ತದೆ. ಕನ್ನಡಿಗರಿಗೆ ಆಗಿರುವ ನೋವಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಹೀಗಾಗಿ, ನಮ್ಮ ಕ್ಷಮೆಯಾಚನೆಯನ್ನು ಸ್ವೀಕರಿಸಲು ವಿನಮ್ರವಾಗಿ ವಿನಂತಿಸುತ್ತೇವೆ ಎಂದು ನಿರ್ಮಾಣ ಸಂಸ್ಥೆ ಹೇಳಿದೆ.
ಕನ್ನಡಿಗರಿಂದ ಸ್ವಾಗತ: ಇನ್ನು ಈ ಪ್ರತಿಕ್ರಿಯೆಯನ್ನು ಕನ್ನಡಿಗರು ಸ್ವಾಗತಿಸಿದ್ದಾರೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಲೋಕಾ ಮಲಯಾಳಂ ಚಿತ್ರದಲ್ಲಿ ಬೆಂಗಳೂರು ಹೆಣ್ಣುಮಕ್ಕಳ ಬಗ್ಗೆ ಅವಹೇಳನ ಪದ ಬಳಕೆ ವಿರುದ್ಧ ಕೂಡಲೇ ಮಾತನಾಡಲಾಗಿ ಪದ ತೆಗೆದು ಹಾಕಲಾಗಿದೆ ಹಾಗೂ ಚಿತ್ರತಂಡ ಕ್ಷಮೆ ಕೇಳಿದ್ದಾರೆ..
ಧನ್ಯವಾದಗಳು ರಾಜ್ ಬಿ ಶೆಟ್ಟಿ ಸಾರ್ ನನ್ನ ಮನವಿಗೆ ಸ್ಪಂದನೆ ಮಾಡಿದ್ದಕ್ಕೆ. ಆದಷ್ಟು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿ.ಕನ್ನಡಿಗರ ಪರವಾಗಿ ನಾವೆಂದು ಎಂದು ಬರೆದುಕೊಂಡಿದ್ದಾರೆ.












Click it and Unblock the Notifications