ಆ ಒಂದು ಧಾರಾವಾಹಿಯಿಂದ ಮಹಿಳೆಯರು ನನ್ನ ವಿರೋಧಿಗಳಾದರು-ಮಾಳವಿಕಾ ಅವಿನಾಶ್‌

ಕನ್ನಡದ ಜನಪ್ರಿಯ ನಟಿ ಮಾಳವಿಕಾ ಅವಿನಾಶ್‌ ಬೆಳ್ಳಿತೆರೆ ಹಾಗೂ ಕಿರುತೆರೆ ಎರಡರಲ್ಲೂ ನಟಿಸಿ ಜನರಿಂದ ಮೆಚ್ಚುಗೆ ಪಡೆದವರು. ನಟನೆ ತಮ್ಮ ಆಯ್ಕೆಯಾದರೂ ಎರಡು ಭಿನ್ನವಾದ ವೇದಿಕೆಯಲ್ಲಿ ವಿಭಿನ್ನವಾದ ಅನುಭವ ಹೊಂದಿರುವ ಅವರು, ತಮಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟ ಮಾಯಾಮೃಗ ಧಾರಾವಾಹಿಯ ಬಗ್ಗೆ ಮಾತನಾಡಿದ್ದಾರೆ.

ಹೊಸದಿಗಂತ ಯೂಟ್ಯೂಬ್‌ ಚಾನೆಲ್‌ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ಇಂದು ನನಗೆ ಬರುವುದೆಲ್ಲಾವನ್ನೂ ನಾನು ಮಾಯಾಮೃಗ ಧಾರಾವಾಹಿ ಸಮಯದಲ್ಲಿ ಕಲಿತಿರುವುದು. ಕೆಲವೊಂದನ್ನು ಗ್ರಹಿಸಿಕೊಳ್ಳುತ್ತೇವೆ. ಇವತ್ತಿನ ಕಲಾವಿದರಿಂದಲೂ ಕೆಲವೊಂದನ್ನು ಗ್ರಹಿಸಿಕೊಳ್ಳುತ್ತೇವೆ. ಆದರೆ ಕೆಲವೊಂದು ಮುಖ್ಯವಾದ ಅಂಶಗಳಿರುತ್ತವೆ, ಅಂದರೆ ಒಂದು ದೃಶ್ಯವನ್ನು ಹೇಗೆ ತೆಗೆದುಕೊಳ್ಳಬೇಕು, ಕ್ಯಾಮರಾವನ್ನು ಹೇಗೆ ಎದುರಿಸಬೇಕು. ಕ್ಯಾಮರಾ ನಮ್ಮನ್ನು ನೋಡುತ್ತಿದ್ದಾಗ ನಾವೇನು ಮಾಡಬೇಕು. ಯಾವ ದೃಶ್ಯಕ್ಕೆ ನಾವು ಹೇಗೆ ಅಭಿನಯ ಮಾಡಬೇಕು. ಯಾವಾಗ ಧ್ವನಿ ಏರಿಸಬೇಕು? ಯಾವಾಗ ತಗ್ಗಿಸಬೇಕು? ಮುಖದ ಭಾವನೆಗಳು ಹೇಗಿರಬೇಕು? ಹೀಗೆ ಹಲವಾರು ವಿಚಾರವನ್ನು ಟಿ.ಎನ್‌ ಸೀತಾರಾಮ್‌ ಅವರಿಂದ ಕಲಿತಿದ್ದೇವೆ' ಎಂದರು.

Malavika Avinash Reflects On Her Experience In The Mayamruga Serial

'ಟಿ.ಎನ್‌ ಸೀತಾರಾಮ್‌ ಅವರು ಒಂದು ಶಾಲೆ ಇದ್ದ ಹಾಗೆ. ರಂಗಭೂಮಿಯಿಂದ ಬರುವವರು ಮೊದಲು ದೃಶ್ಯ ಏನೆಂದು ತಿಳಿದುಕೊಂಡು ಚೆನ್ನಾಗಿ ಕಲಿತು ಬಿಡುತ್ತಾರೆ. ನಾನು ರಂಗಭೂಮಿಯಿಂದ ಬಂದವಳಲ್ಲ. ನನಗೆ ಅದೆಲ್ಲಾ ಗೊತ್ತಿರಲಿಲ್ಲ. ಡೈಲಾಗ್‌ಗಳನೆಲ್ಲಾ ಕೇಳಿಕೊಂಡು ಹೇಳುವುದು, ಓದಿ ಕಲಿತಿ ಹೇಳಲು ನಮಗೆ ಬರುವುದಿಲ್ಲ. ಒಂದು ದಿನ ಸೀತಾರಾಮ್‌ ಅವರು ಮೊದಲೇ ಒಂದು ಸೀನ್‌ ಬರೆದು ಕಳುಹಿಸಿದ್ದರು. ಒಬ್ಬ ನಟ ಅದನ್ನು ನೋಡಿ ಕಲಿತುಕೊಂಡು ಅವರದೇ ಶೈಲಿಯಲ್ಲಿ ಹೇಳುತ್ತಿದ್ದರು. ಟಿ.ಎನ್‌ ಸೀತಾರಾಮ್‌ ಅವರು ಬಂದು, ಯಾರು ನಿಮಗೆ ಸೀನ್‌ ಪೇಪರ್‌ ಕೊಟ್ಟಿರುವುದು. ಯಾಕೆ ಸೀನ್‌ ಪೇಪರ್‌ ನೋಡಿ ಕಲಿತಿದ್ದೀರಿ ಅಂತಾ ಪ್ರಶ್ನಿಸಿದ್ದರು' ಎಂದರು.

'ಒಂದು ವೇಳೆ ಡೈಲಾಗ್‌ ನೋಡಿಕೊಂಡು, ಕಲಿತುಕೊಂಡು ಹೋಗಿ ಹೇಳಿದ್ದರೆ, ಇದನೆಲ್ಲಾ ದೇವರಿಗೆ ಬಿಟ್ಟು ಮೊದಲಿನಿಂದ ಮಾಡೋಣ ಬನ್ನಿ ಎನ್ನುತ್ತಿದ್ದರು. ಒಂದು ಪಾತ್ರ ಹೀಗೆ ಇರಬೇಕು ಅಂತಾ ನೀವು ತಯಾರಿ ಇಟ್ಟುಕೊಳ್ಳಬಹುದೇ ವಿನಃ ಆ ದೃಶ್ಯ ಹೇಗೆ ಬರಬೇಕು ಎನ್ನುವುದು ಅವರ ನಿರ್ಧಾರ. ಜೊತೆಗೆ ಡೈಲಾಗ್‌ಗಳನ್ನು ಕೂಡ ಹಾಗೇ ಕ್ಷಣ ಕ್ಷಣಕ್ಕೆ ಬದಲಾಯಿಸುತ್ತಿದ್ದರು. ಆದರೆ ಹೆಣ್ಣು ಮಕ್ಕಳನ್ನು ಪ್ರಸ್ತುತ ಪಡಿಸುವುದರಲ್ಲಿ ಅವರನ್ನು ಮೀರಿಸುವವರು ಇವತ್ತಿನ ಕಾಲದಲ್ಲಿ ಯಾರೂ ಇಲ್ಲ' ಎಂದು ಹೇಳಿದರು.

Malavika Avinash Reflects On Her Experience In The Mayamruga Serial

'ಪುಟ್ಟಣ್ಣ ಕಣಗಾಲ್‌ ಅವರ ಶಾಲೆಯಿಂದಲೇ ಅವರು ಬಂದಿದ್ದು, ಪುಟ್ಟಣ್ಣ ಕಣಗಾಲ್‌ ಅವರು ಸಹ ಹಾಗೇ ಸಂಪೂರ್ಣವಾಗಿ ಒಬ್ಬ ಹೀರೋಯಿನ್‌ ನಂಬಿ ಒಂದು ಕಥೆ ಬರೆಯುತ್ತಿದ್ದರು. ನಾಯಕಿಯ ಸುತ್ತ ಕಥೆ ತಿರುಗುವಂತೆ ಮಾಡುತ್ತಿದ್ದರು. ಇವತ್ತಿನ ಕಾಲಕ್ಕೆ ಆ ರೀತಿ ನಾಯಕಿಯ ಸುತ್ತ ಕಥೆ ಬರೆಯುವವರು ಮತ್ತು ನಿರ್ದೇಶಿಸುವವರು ಟಿ.ಎನ್‌ ಸೀತಾರಾಮ್‌ ಒಬ್ಬರೇ ಎಂದ ಮಾಳವಿಕಾ ಅವಿನಾಶ್‌, ಮಾಯಾಮೃಗ ಧಾರಾವಾಹಿಯಿಂದ ಒಂದು ದೊಡ್ಡ ಸಂಖ್ಯೆಯ ಮಹಿಳೆಯರು ನನ್ನ ವಿರೋಧಿಗಳಾದರು. ಇವಳೇನು ನಟನೆ ಮಾಡಿದ್ದಾಳೆ ಅಂತಾ ಸೀತಾರಾಮ್‌ ಇವಳಿಗೆ ಇಷ್ಟು ಪ್ರಾಮುಖ್ಯತೆ ಕೊಡಬೇಕು ಎಂದು ವಿರೋಧಿಸುತ್ತಿದ್ದರು' ಎಂದು ತಮ್ಮ ಧಾರಾವಾಹಿ ನಟನೆಯ ದಿನಗಳನ್ನು ಹಂಚಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+