ಆ ವಾಯ್ಸ್ ನನ್ನದೇ, ಕ್ಷಮಿಸಿ ಡಿಬಾಸ್ ಬದಲಾಗ್ತೀನಿ: ಕೈಮುಗಿದು ಕೇಳಿಕೊಂಡ ಮಡೆನೂರು ಮನು
ಉದಯೋನ್ಮುಖ ನಟ ಮಡೆನೂರು ಅವರು ಕೇಸ್‌ವೊಂದರಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಮನು ಅವರು ಮಾತನಾಡಿದ್ದು ಎನ್ನಲಾದ ಆಡಿಯೋ ವೈರಲ್ ವಿಚಾರ ಇನ್ನೂ ತಣ್ಣಗಾಗಿಲ್ಲ. ವೈರಲ್ ಆಡಿಯೋದಲ್ಲಿ ಸ್ಯಾಂಡಲ್‌ವುಡ್ ನಟರಾದ ದರ್ಶನ್ ಹಾಗೂ ಶಿವರಾಜ್ ಕುಮಾರ್ ಅವರ ಸಾವಿನ ಬಗ್ಗೆ ಕೆಟ್ಟದಾಗಿ ಮಾತನಾಡಲಾಗಿತ್ತು. ಇದೇ ಕಾರಣಕ್ಕೆ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಕೂಡ ಮಾಡಲಾಗಿತ್ತು. ಜೈಲಿನಿಂದ ಹೊರಬಂದ ನಂತರ ಮನು ಅವರು ಧ್ರುವ ಸರ್ಜಾ ಬಳಿ ಮಾತ್ರ ನೇರವಾಗಿ ಕ್ಷಮೆ ಕೇಳಿದ್ದರು. ಬಳಿಕ ಶಿವಣ್ಣ ಮನೆ ಬಳಿ ಹೋದರೂ ಕ್ಷಮೆ ಕೇಳಲು ಅವಕಾಶ ಸಿಕ್ಕಿರಲಿಲ್ಲ. ಇನ್ನು ದರ್ಶನ್ ಅವರನ್ನು ಭೇಟಿಯಾಗಲು ಅವಕಾಶ ಸಿಗದ ಕಾರಣ ವಿಡಿಯೋ ಮೂಲಕ ಮನು ಕ್ಷಮೆ ಕೇಳಿದ್ದಾರೆ.
'ಆಡಿಯೋ ವೈರಲ್ ಆದಾಗ ಬಹಿರಂಗವಾಗಿ ಬಂದು ಕ್ಷಮೆಯಾಚಿಸಿದೆ. ಸುಮಾರು ಜನ ಡಿಬಾಸ್ ಅಭಿಮಾನಿಗಳು ನನಗೆ ಫೋನ್, ಮೆಸೇಜ್, ಕಾಮೆಂಟ್‌ಗಳನ್ನು ಮಾಡಿದ್ದರು. ದರ್ಶನ್ ಅವರನ್ನು ಮೀಟ್ ಮಾಡಿದ್ರಾ? ಕ್ಷಮೆ ಕೇಳಿದ್ರಾ? ಎಂದೆಲ್ಲ ಪ್ರಶ್ನೆಗಳನ್ನು ಕೇಳಿದ್ರು. ಒಂದ್ ಸಲ ದರ್ಶನ್ ಅವರನ್ನ ಮೀಟ್ ಮಾಡಿ ಕ್ಷಮೆ ಕೇಳಿ, ನಿಮ್ಮ ಸಿನಿಮಾನ ಮತ್ತೆ ರೀರಿಲೀಸ್ ಮಾಡಿಸೋಣ ಎಂದು ಪ್ರೀತಿಯಿಂದ ಹೇಳಿದ್ದರು' ಎಂದು ಮನು ವಿಡಿಯೋದಲ್ಲಿ ತಿಳಿಸಿದ್ದಾರೆ.

'ನಾನು ದರ್ಶನ್ ಅವರನ್ನು ಭೇಟಿಯಾಗಲು ಹಲವು ಪ್ರಯತ್ನ ಮಾಡಿದೆ. ಆದರೆ ಬಾಸ್ ತುಂಬಾ ಬ್ಯುಸಿಯಾಗಿದ್ದಾರೆ ಎಂಬ ವಿಚಾರ ಗೊತ್ತಾಯಿತು. ಹಾಗಾಗಿ ನಾನೇ ನೇರವಾಗಿ ಕ್ಷಮೆಯಾಚಿಸೋಣ ಎಂದು ಈ ವಿಡಿಯೋ ಮಾಡುತ್ತಿದ್ದೇನೆ ಎಂದಿದ್ದಾರೆ. "ದಯವಿಟ್ಟು ಡಿಬಾಸ್ ನಾನೊಬ್ಬ ಪುಟ್ಟ ಕಲಾವಿದ, ಒಂದು ಸಂಘ ಸಹವಾಸಗಳನ್ನ ಮಾಡಿ, ಜೊತೆಯಲ್ಲೇ ಇರುವವರನ್ನ ನಂಬಿ, ಈ ಆಡಿಯೋಗೆ ನಾನು ಬಲಿಯಾಗಿದ್ದೀನಿ' ಎಂದಿದ್ದಾರೆ.
'ದಯಮಾಡಿ ನನ್ನ ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ ಎಂದು ಮಡೆನೂರು ಮನು ಕೇಳಿಕೊಂಡಿದ್ದಾರೆ. ಎಲ್ಲ ಡಿಬಾಸ್ ಅಭಿಮಾನಿಗಳು, ಇಡೀ ಕರ್ನಾಟಕದ ಜನತೆ, ನೀವೆಲ್ಲ ಜೀವಭಿಕ್ಷೆ ಕೊಟ್ಟಿದ್ದೀರಿ. ನೀವೆಲ್ಲ ರಿಯಾಕ್ಟ್ ಮಾಡಿದ್ರೆ ನಾನು ಇಲ್ಲಿ ಇರುತ್ತಿರಲಿಲ್ಲ. ಈ ಜೀವ ಉಸಿರಿರುವವರೆಗೆ ನಿಮ್ಮನ್ನೆಲ್ಲ ನಾನು ಮರೆಯುವುದಿಲ್ಲ. ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ. ಈ ಪುಟ್ಟ ಕಲಾವಿದನನ್ನ ಕ್ಷಮಿಸಿ, ಮುಂದೆ ಬದಲಾಗ್ತೀನಿ, ಯಾರ ಸಹವಾಸೂ ಬೇಡ. ನಾನೇನು ಕೆಲಸ ಮಾಡೋಕೆ ಬಂದಿದ್ದೀನೋ ಅದನ್ನ ಮಾಡಿಕೊಂಡು ಹೋಗ್ತೀನಿ. ನಿಮ್ಮ ಆಶೀರ್ವಾದವಿರಲಿ' ಎಂದು ಬೇಡಿಕೊಂಡಿದ್ದಾರೆ.
ಮನೆ ಕಟ್ಟಿಸುವಾಗ ಡಿಬಾಸ್ ಅಭಿಮಾನಿಗಳಿಂದ 69,000 ರೂ ಸಹಾಯ
'ಇನ್ನೊಂದು ವಿಷಯವನ್ನು ನಾನು ಹೇಳಿಕೊಂಡಿರಲಿಲ್ಲ. ನಾನು ಊರಲ್ಲಿ ಮನೆ ಕಟ್ಟಿಸಬೇಕಾದ್ರೆ 69,000 ರೂಪಾಯಿಯಷ್ಟು ವೆಟ್ರಿಫೈಡ್ ಟೈಲ್ಸ್ ಕೊಡಿಸಿದ್ದೇ ಡಿಬಾಸ್ ಅಭಿಮಾನಿಗಳು. ಅವರ ಹೆಸರನ್ನು ಹೇಳಬಹುದಾ ಎಂದು ಕೇಳಿದ್ದಕ್ಕೆ ಅವರು ಅದೆಲ್ಲ ಬೇಡ, ನೀನು ಕ್ಷಮೆ ಕೇಳಿದರೆ ಸಾಕು ಎಂದು ದೊಡ್ಡ ಮನಸ್ಸಿನಿಂದ ಹೇಳಿದರು. ಹಾಗಾಗಿ ಇಷ್ಟೆಲ್ಲ ಸಪೋರ್ಟ್ ಮಾಡಿದವರನ್ನು ನಾವು ಯಾವ ಕಾರಣಕ್ಕೂ ಬೈಯಲ್ಲ' ಎಂದಿದ್ದಾರೆ.
'ಆ ವಾಯ್ಸ್ ನನ್ನದೇ, ಆದರೆ ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ನನಗೆ ಪ್ರಜ್ಞೆ ಇಲ್ಲದಂತೆ ಟ್ರಿಗರ್ ಮಾಡಿ ಮಾತನಾಡಿಸಿರುವ ಮಾತಗಳು. ಇದೆಲ್ಲ ಪ್ರೀಪ್ಲ್ಯಾನ್ ಮಾಡಿದ್ದಾರೆ. ನನಗೆ ಗೊತ್ತಿಲ್ಲ, ರೆಕಾರ್ಡ್, ವಿಡಿಯೋ ಕಂಪನಿಗಳು ನನಗೆ ಗೊತ್ತಿಲ್ಲ, ನಂದು ಆ ಕೆಲಸನೂ ಅಲ್ಲ, ನಾನು ಬಂದಿರುವ ಉದ್ದೇಶವೇ ಬೇರೆ, ಕೆಲವರ ಜೊತೆ ಸೇರಿ ಹಾಳಾಗಿದ್ದೆ, ದಯಮಾಡಿ ನನ್ನ ಕ್ಷಮಿಸಿ' ಎಂದು ಮನು ಕೇಳಿಕೊಂಡಿದ್ದಾರೆ.












Click it and Unblock the Notifications