'ನನ್ನ ಆಯಸ್ಸು ಶಿವಣ್ಣಗೆ ಕೊಡಲಿ, ಅವ್ರು ಇಂಡಸ್ಟ್ರಿಯ ಆಲದಮರ': 3 ಸ್ಟಾರ್ಸ್‌ಗಳ ಬಗ್ಗೆ ಮಡೆನೂರು ಮನು ಓಪನ್ ಟಾಕ್
ಬೆಂಗಳೂರು, ಜೂನ್ 22: ರಿಯಾಲಿಟಿ ಶೋ ಮೂಲಕ ಬಂದು 'ಕುಲದಲ್ಲಿ ಕೀಳ್ಯಾವುದೊ' ಸಿನಿಮಾ ಮಾಡಿದ್ದ ನಟ ಮಡೆನೂರು ಮನು ಮತ್ತೊಮ್ಮೆ ಮೂರು ಸ್ಟಾರ್ಸ್ ನಟರ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಅದಕ್ಕಾಗಿ ಅವರು ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್.ರಮೇಶ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯ ವಿಡಿಯೋದಲ್ಲಿ ಮೂರು ಸ್ಟಾರ್‌ಗಳ ಬಗ್ಗೆ ಮನು ಮಾತನಾಡಿದ್ದಾರೆ.
ದೊಡ್ಮನೆಯ ದೊಡ್ಮಗ ಶಿವರಾಜ್ ಕುಮಾರ್, ನಟ ದರ್ಶನ್ ಮತ್ತು ಧ್ರುವ ಸರ್ಜಾ ಅವರ ಕುರಿತು ವಿವಾದಾತ್ಮಕವಾಗಿ ಮಾತನಾಡಿದ್ದ ಮಡೆನೂರು ಮನು ಇಂದು ಬೇಷರತ್ ಕ್ಷಮೆ ಯಾಚಿಸಲು ಬಂದಿದ್ದಾಗಿ ಎನ್.ಆರ್.ರಮೇಶ್ ಅವರು ತಿಳಿಸಿದ್ದಾರೆ.

ಮನು ವಿರುದ್ಧ 73 ಪೊಲೀಸ್ ಪ್ರಕರಣ ದಾಖಲು
ನಟ ಮಡೆನೂರು ಮನುಗೆ ಸಂಬಂಧಿಸಿದೆ ಎನ್ನಲಾದ ಆಡಿಯೋ ವೈರಲ್ ಬಳಿಕ ನಡೆದ ಬೆಳವಣಿಗೆ ಕುರಿತು ವಿವರಿಸಿದ ಎನ್.ಆರ್.ರಮೇಶ್ ಅವರು, ಬೇರೆ ಪ್ರಕರಣದಲ್ಲಿ ಸಿಲುಕಿದ್ದ ಮಡೆನೂರು ಮನು ಜೈಲು ಪಾಲಾಗಿದ್ದರು. ಸಹ ನಟಿ ಅವರು ಮನುಗೆ ಸಂಬಂದಿಸಿದ ಆಡಿಯೋ ಬಿಡುಗಡೆ ಮಾಡಿದ್ದರು. ಅದರಲ್ಲಿ ಮೂವರ ನಟರ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವಹೇಳನ ಮಾಡಲಾಗಿತ್ತು. ಶಿವಣ್ಣ ಕ್ಯಾನ್ಸರ್ ಗೆದ್ದು ಬಂದು ಸಿನಿಮಾದಲ್ಲಿ ಪಾಲ್ಗೊಂಡಿದ್ದಾರೆ. ಶಿವಣ್ಣ ಆರೇಳು ವರ್ಷ ಇರ್ತಾರೆ, ಧ್ರುವ ಸರ್ಜಾ ಅವರಿಗೆ ಮಾರ್ಕೆಟ್ ಇಲ್ಲ, ದರ್ಶನ್ ತೂಗುದೀಪ್ ಕತೆ ಮುಗಿಯಿತು ಎಂಬ ಆಡಿಯೋ ವೈರಲ್ ಆಗಿತ್ತು.
ಈ ಪ್ರಕರಣ ವಿರುದ್ಧ ರಾಜವಂಶ ಅಭಿಮಾನಿಗಳ ಸಂಘ, ಕನ್ನಡಪರ ಸಂಘಟನೆಗಳು ಸೇರಿ ನಾವೆಲ್ಲರು ಪ್ರತಿಭಟನೆ ಮಾಡಿದ್ದೇವು. ಚಲಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇವೆ. ಜೀ ಕನ್ನಡ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಡೆನೂರು ಮನು ಅವರಿಗೆ ಅವಕಾಶ ನೀಡದಂತೆ ವಾಹಿನಿ ಮುಖ್ಯಸ್ಥರಲ್ಲಿ ಕೋರಿದ್ದೇವು. ದೂರು ನೀಡಿದ್ದೇವು.
ಅದಲ್ಲದೇ ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಒಕ್ಕೂಟದಿಂದ ರಾಜ್ಯಾದ್ಯಂತ ಮಡೆನೂರು ಮನು ವಿರುದ್ಧ ಸುಮಾರು 30ಕ್ಕೂ ಹೆಚ್ಚು ಠಾಣೆಗಳಲ್ಲಿ 73 ಕೇಸ್ ದಾಖಲಾಗಿತ್ತು. ಸದ್ಯ ಮನು ಅವರು ಮೂರು ನಾಲ್ಕು ದಿನಗಳಿಂದ ನನ್ನ ಸಂಪರ್ಕಿಸಿದ್ದಾರೆ. ನಡೆದ ಘಟನೆ ಬಗ್ಗೆ ವಿವರಿಸಿ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವರಲ್ಲಿ, ಅವರ ಅಭಿಮಾನಿಗಳಲ್ಲಿ ಬೇಷರತ್ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಶಿವಣ್ಣ ಹಾಗೂ ಇತರ ನಟರ ಅಭಿಮಾನಿಗಳ ಸಂಘಗಳ ಜೊತೆ ಸೇರಿ ಮುಂದಿನ ದಿನದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ವಿವರಿಸಿದರು.

'ನನ್ನ ಆಯಸ್ಸು ಶಿವಣ್ಣಗೆ ಕೊಡಲಿ: ಮಡೆನೂರು ಮನು
ಶಿವಣ್ಣ ಸೇರಿ ಮೂರು ಸ್ಟಾರ್‌ಗಳ ಕುರಿತು ಒಕ್ಕೂಟದ ಗೌರವಾಧ್ಯಕ್ಷ ಮುಂದೆ ಮಡೆನೂರು ಮನು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಕಲೆ ನಂಬಿ ಬಂದ ನನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡಿದ್ದಾರೆ. ನಾನು ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ಇದೆಲ್ಲವು ಷಡ್ಯಂತ್ರ ಎಂದು ದೂರಿದ್ದಾರೆ.
ನಾನು ಒಬ್ಬ ಜೂನಿಯರ್ ಆರ್ಟಿಸ್ಟ್ ಆಗಿ ಒಂದೂವರೆ ದಶಕದಿಂದ ಕೆಲಸ ಮಾಡಿದ್ದೇನೆ. ಸಿಕ್ಕ ಇತರ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ನಮ್ ಹಳ್ಳ ನಾವೇ ತೋಡಿಕೊಳ್ಳೋದಿಲ್ಲ. ಇದೆಲ್ಲವು ಷಡ್ಯಂತ್ರ ನಡೆದಿದೆ. ಎರಡು ತಿಂಗಳ ಹಿಂದೆ ಮಾಡಿದ್ದ ಆಡಿಯೋ ವೈರಲ್ ಮಾಡಿದ್ದಾರೆ. ಯಾಕೆ ಅದರ ಉದ್ದೇಶವೆಂಬುದು ತನಿಖೆಯಿಂದ ತಿಳಿಯಬೇಕು. ನನ್ನಿಂದ ಈ ಆಡಿಯೋದಿಂದ ನಟ ಶಿವಣ್ಣಗೆ, ಗೀತಕ್ಕ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಟ ದರ್ಶನ್ ಸರ್, ಧ್ರುವ ಸರ್ಜಾ ಅಣ್ಣ ಅವರಿಗೆ, ಮತ್ತು ಮೂವರು ಸ್ಟಾರ್ ನಟರ ಅಭಿಮಾನಿಗಳು ಮನಸ್ಸಿಂದ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಅವರಲ್ಲಿ ಬೇಷರತ್ ಕ್ಷಮೆ ಯಾಚಿಸಿದ
— Ramesh N R (@RameshNR_BJP) June 21, 2025
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು.
ಮುಂದೆ ಇಂತಹ ನಡೆ ಮರುಕಳಿಸಬಾರದು ಎಂದು ತಿಳಿ ಹೇಳಿದ್ದೇನೆ.
-ರಮೇಶ್ ಎನ್.ಆರ್.
ಗೌರವಾಧ್ಯಕ್ಷರು, ಅಖಿಲ ಕರ್ನಾಟಕ ಡಾll ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ@NimmaShivanna @dasadarshan @DhruvaSarja… pic.twitter.com/XUM4t5cqIG
ಫ್ಯಾನ್ಸ್ ತಾಳ್ಮೆಗೆ ಅಭಿನಂದನೆ: ಮನು
ನನ್ನ ಸಿನಿಮಾ ಬಿಡುಗಡೆ ವೇಳೆ ನೀವು ಶಿವಣ್ಣ, ಧ್ರುವ, ದರ್ಶನ್ ಅವರ ಅಭಿಮಾನಿಗಳು ತಾಳ್ಮೆಯಿಂದ ಇದ್ದಿದ್ದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಮೂರು ಸ್ಟಾರ್ ನಟರ ಸಾವನ್ನು ಬಯಸಿಲ್ಲ. ಬೇರೆಯವರ ಸಾವು ಬಯಸುವ ಅಧಿಕಾರ ನನಗಿಲ್ಲ. ಅಣ್ಣಾವ್ರ ಮನೆ ಆಶೀರ್ವಾದ ಸಿಕ್ಕಿದೆ ಅಂತ ಹೇಳಿದ್ದೇ. ನನ್ನ ಆಯಸ್ಸು ಶಿವಣ್ಣ ಅವರಿಗೆ ಕೊಡಲಿ. ಶಿವಣ್ಣ ಅವರಿಗೆ ಆರೋಗ್ಯ ಆಯಸ್ಸು ಕೊಡಲಿ. ಶಿವಣ್ಣ ಇಂಡಸ್ಟ್ರಿಗೆ ಆಲದಮರ ಇದ್ದಂತೆ ಎಂದು ಬಾಯ್ತುಂಬಾ ಹೊಳಿದ್ದಾರೆ. ತಾವು ದೊಡ್ಮನೆ ಆಶೀರ್ವಾದಿಂದ ಬಂದಿರುವುದಾಗಿ ಮನು ತಿಳಿಸಿ ಕ್ಷಮೆ ಕೇಳಿದ್ದಾರೆ.
ದರ್ಶನ್ ಕ್ರೇಜ್, ಧ್ರುವ ಸರ್ಜಾ ಸಪೋರ್ಟ್..
ಇನ್ನೂ ನಟ ದರ್ಶನ್ ಅವರ ಕ್ರೇಜ್ ಯಾವತ್ತು ಕಡಿಮೆ ಆಗಲ್ಲ, ಇನ್ನು ಹೆಚ್ಚಾಗುತ್ತೆ. ನಟ ಧ್ರವ ಸರ್ಜಾ ಅವರು ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಪೋಸ್ಟರ್ ಲಾಂಚ್ ಮಾಡಿ ಫ್ಯಾನ್ಸ್ ಪೇಜಿನಲ್ಲಿ ಹಾಕಿ ಕೊಟ್ಟಿದ್ದಾರೆ. ಅವರ ಋಣ ಯಾವತ್ತು ನನ್ನ ಮೇಲಿರುತ್ತೆ. ಮೂರು ಜನರ ಆರ್ಶೀವಾದ ಪಡೆದು ಬೆಳೆಯಬೇಕು ಅಂದುಕೊಂಡೆ. ಅದರೆ ಅವರ ಹೆಸರಿನಿಂದಲೇ ನನ ವಿರುದ್ಧ ಷಡ್ಯಂತ್ರ ನಡೆದಿದೆ. ಕ್ಷಮಿಸಿ..ಕ್ಷಮಿಸಿ..ಮನಸ್ಸಿನಿಂದ ಕೇಳಿಕೊಳ್ಳುತ್ತಿದ್ದೇನೆ ಎಂದು ಪರಿ ಪರಿಯಾಗಿ ಮನು ಬೇಡಿಕೊಂಡಿದ್ದಾರೆ.
ನಾನು ಕಲೆ ನಂಬಿ ಬಂದಿದ್ದೇನೆ. ತಪ್ಪನ್ನು ತಿದ್ದುಕೊಳ್ಳುತ್ತೇನೆ. ಮತ್ತೆ ಬದಲಾಗಿ ತೋರಿಸುತ್ತೇನೆ. ಕಿರುತೆರೆ, ಪರದೆ ಮೇಲೆ ನನಗೆ ಅವಕಾಶ ಕೊಡಿ ಎಂದು ಮನು ಕೇಳಿ ಕೊಂಡಿದ್ದಾರೆ. ಆಡೀಯೋ ಸೇರಿದಂತೆ ತಮ್ಮ ಮೇಲಿನ ಇತರ ಆರೋಪ ನ್ಯಾಯಾಲಯದಲ್ಲಿದ್ದು ತನಿಖೆಯಿಂದ ಸತ್ಯ ಗೊತ್ತಾಗಲಿದೆ ಎಂದಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications