Leelavathi: ಲೀಲಾವತಿ ವಿಧಿವಶ, ಏನಾಗಿತ್ತು ನಟಿ ಲೀಲಾವತಿ ಅವರಿಗೆ?
ನಟಿ ಲೀಲಾವತಿ ಬಾರದ ಲೋಕಕ್ಕೆ ತೆರಳಿದ್ದಾರೆ. ಕನ್ನಡ ಭಾಷೆ ಸೇರಿ ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಮಿಂಚಿದ್ದ ನಟಿ ಈಗ ಕೋಟ್ಯಂತರ ಅಭಿಮಾನಿ ಜಗತ್ತನ್ನ ಬಿಟ್ಟು ಮರೆಯಾಗಿದ್ದಾರೆ. ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದ ನಟಿ ಲೀಲಾವತಿ ಅವರಿಗೆ ಈಗ ಎಷ್ಟು ವಯಸ್ಸಾಗಿತ್ತು? ನಟಿ ಲೀಲಾವತಿ ಇಹಲೋಕ ತ್ಯಜಿಸಲು ಕಾರಣ ಏನು? ಮುಂದೆ ಓದಿ.
ಅಷ್ಟಕ್ಕೂ ನಟಿ ಅವರು ಲೀಲಾವತಿ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಭಾಗದಲ್ಲಿ. ರಂಗಭೂಮಿ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ಲೀಲಾವತಿ ಅವ್ರು ವೃತ್ತಿಜೀವನ ಆರಂಭಿಸಿದ್ದು ಮೈಸೂರಲ್ಲಿ. ರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮೊದಲು ಅವರು ಸಾಕಷ್ಟು ಕಷ್ಟಪಟ್ಟಿದ್ದರು. ನಟಿ ಲೀಲಾವತಿ ಅವ್ರು 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಸಿನಿಮಾದ ಸಖಿ ಪಾತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು, ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು.

ವರನಟ ಡಾ.ರಾಜ್ ಜೊತೆಗೆ ಜೋಡಿ
ಮೊದಲೇ ಹೇಳಿದಂತೆ ನಟಿ ಲೀಲಾವತಿ ಅವರು ಸಾಕಷ್ಟು ಕಷ್ಟಪಟ್ಟು ಸಿನಿಮಾ ಇಂಡಸ್ಟ್ರಿ ಪ್ರವೇಶ ಮಾಡಿದ್ದರು. ಅವರಿಗೆ ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಇಡೀ ಕರ್ನಾಟಕದಲ್ಲಿ ಜನಪ್ರಿಯ ಜೋಡಿ ಆಗಿತ್ತು. ಹೀಗೆ ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ & ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹಲವು ಚಿತ್ರಗಳಲ್ಲೂ ನಾಯಾಕಿಯಾದರು. ಕೆಲ ಚಿತ್ರದಲ್ಲಿ ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆದ ನಾಯಕಿ ಅಂತಲೂ ಅವರು ಗುರುತಿಸಿಕೊಂಡಿದ್ದರು. ಹೀಗೆ ಕನ್ನಡಿಗರು ಎಂದಿಗೂ ಮರೆಯಲಾಗದ ಸಾಧನೆ ಮಾಡಿರುವ ನಟಿ ಈಗ ಮೃತಪಟ್ಟಿದ್ದು ಏಕೆ?
ಕಷ್ಟಗಳ ಬೆಟ್ಟ ಕರಗಿಸಿದ್ದ ನಟಿ
ತೆರೆ ಮೇಲೆ ಬಣ್ಣ ಬಣ್ಣಗಳಿಂದ ವಿಜೃಂಭಿಸುತ್ತಿದ್ದ ಕರ್ನಾಟಕದ ಸ್ಟಾರ್ ನಟಿ ಲೀಲಾವತಿ ಅವರ ನಿಜ ಜೀವನ ಅಮವಾಸೆ ಕತ್ತಲೆಯ ರೀತಿ ಇತ್ತು. ಅಂದು ಬೆಳ್ಳಿ ತೆರೆ ಮೇಲೆ ತಮ್ಮ ಸೌಂದರ್ಯ & ನೈಜ ಅಭಿನಯದ ಮೂಲಕ ಫ್ಯಾನ್ಸ್ ಮನ ಗೆದ್ದಿದ್ದರು ಲೀಲಾವತಿ. ಹಾಗೆಯೇ ಕಷ್ಟವನ್ನು ಲೀಲಾವತಿ ಅವರು ಎದುರಿಸಿದ್ದ ರೀತಿ, ಚಿತ್ರ ರಂಗದ ಇತರ ನಾಯಕಿಯರಿಗೆ ಮಾದರಿಯು ಆಗಿತ್ತು. ಜೀವನದಲ್ಲಿ ಏಳು ಬೀಳು ಕಂಡ ಹಿರಿಯ ಜೀವ ಜೀವನದ ಸಂಧ್ಯಾಕಾಲದಲ್ಲಿ ಬಹಳ ಬಳಲಿತ್ತು. ವಯೋಸಹಜ ಖಾಯಿಲೆ ಅವರ ಬಣ್ಣವನ್ನು ಮಾಸುವಂತೆ ಮಾಡಿತ್ತು.
ವಯೋಸಹಜ ಸಮಸ್ಯೆ ಕಾಟ ಕೊಟ್ಟಿತ್ತು
ಕಳೆದ ಕೆಲವು ತಿಂಗಳಿಂದ ನಟಿ ಲೀಲಾವತಿ ಅವರು ತೀವ್ರವಾಗಿ ಅನಾರೋಗ್ಯದಿಂದ ಬಳಲಿದ್ದರು ಇದೇ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ನಟ ಶಿವರಾಜ್‌ಕುಮಾರ್, ಶ್ರೀನಾಥ್ ಸೇರಿದಂತೆ ಕನ್ನಡ ಸಿನಿಮಾ ರಂಗದ ಹಿರಿಯ ನಟರು ಹಾಗೂ ನಟಿಯರು ಲೀಲಾವತಿ ಅವರನ್ನ ಭೇಟಿ ಮಾಡಿದ್ದರು. ಆರೋಗ್ಯ ವಿಚಾರಿಸಿ, ಬೇಗ ಹುಷಾರಾಗಲಿ ಅಂತಾ ಪ್ರಾರ್ಥನೆ ಮಾಡಿದ್ದರು. ಕೋಟ್ಯಂತರ ಅಭಿಮಾನಿಗಳು ಕೂಡ ಲೀಲಾವತಿ ಅವರ ಆರೋಗ್ಯವು ಸುಧಾರಿಸಲಿ ಅಂತಾ ಪ್ರಾರ್ಥನೆ ಮಾಡಿದ್ದರು. ಆದರೆ ಅವರೆಲ್ಲರ ಪ್ರಾರ್ಥನೆ ಫಲಿಸಲೇ ಇಲ್ಲ.

ಒಟ್ನಲ್ಲಿ ನಟಿ ಲೀಲಾವತಿಯವರ ಅಗಲಿಕೆ ಈಗ ಕೋಟ್ಯಂತರ ಅಭಿಮಾನಿಗಳಿಗೆ ಮಾತ್ರವಲ್ಲ ಇಡೀ ಕನ್ನಡ ಚಿತ್ರರಂಗಕ್ಕೆ, ದೊಡ್ಡ ಆಘಾತ ನೀಡಿದೆ. ಬ್ಲ್ಯಾಕ್ & ವೈಟ್ ಕಾಲದಿಂದಲೂ ಹಿಡಿದು, ಕಲರ್ ಕಲರ್ ಸಿನಿಮಾಗಳ ತನಕ ನಟಿ ಲೀಲಾವತಿ ತಮ್ಮ ಖದರ್ ತೋರಿಸಿದ್ರು. ಅತ್ಯುತ್ತಮ ನಟಿಯಾಗುವ ಜೊತೆಗೆ ಸಾಮಾಜಿಕ ಕಾರ್ಯಗಳ ಮೂಲಕ ಜನರಿಗೆ ಸಹಾಯನ ಕೂಡ ಮಾಡಿದ್ದರು. ಆದ್ರೆ ಇಂತಹ ಮಹಾನ್ ನಟಿಯ ಅಗಲಿಕೆ ತೀವ್ರ ನೋವು ಕೊಟ್ಟಿದೆ.












Click it and Unblock the Notifications