‘ಏ ಮುತಾಲಿಕ್ ಗಂಡ್ಸೇನೋ ನೀನು’: ಹಿಂದೂ ಹುಲಿಯೊಂದಿಗೆ ಲಾಯರ್ ಜಗದೀಶ್ ಸಂಘರ್ಷ- ವಿಡಿಯೋ ನೋಡಿ Lawyer Jagadish
ಬಿಗ್‌ಬಾಸ್ ಮನೆಯಲ್ಲಿ ಹವಾ ಎಬ್ಬಿಸಿ, ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಿಸುವ ಬಗ್ಗೆ ಆವಾಜ್ ಹಾಕಿ ಹೊರಗೆ ಬಂದಿದ್ದ ಲಾಯರ್ ಜಗದೀಶ್ ಅವರು ಇದೀಗ ಮತ್ತೆ ರೊಚ್ಚಿಗೆದ್ದಿದ್ದಾರೆ. ಈ ಬಾರಿ ಅವರ ಸಿಟ್ಟು ಸಿನಿಮಾ ಸ್ಟಾರ್‌ಗಳು ಅಥವಾ ರಾಜಕಾರಣಿಗಳು ಅಲ್ಲ ಬದಲಾಗಿ ಈ ಬಾರಿ 'ಹಿಂದೂ ಹುಲಿ'ಗಳ ವಿರುದ್ಧ ತಿರುಗಿದೆ. ಅದರಲ್ಲೂ ವಿಡಿಯೋ ಒಂದನ್ನ ಮಾಡಿರುವ ಇದೇ ಲಾಯರ್ ಜಗದೀಶ್ ಅವರು, 'ಏ ಗಂಡ್ಸೇನೋ ನೀನು' ಅಂತಾ ಹಿಂದೂ ಪರ ಸಂಘಟನೆಯ ಹೋರಾಟಗಾರನಿಗೆ ಪ್ರಶ್ನೆ ಮಾಡಿದ್ದಾರೆ!
ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಅಭಿಮಾನಿಗಳ ವಿರುದ್ಧ ಇಷ್ಟು ದಿನಗಳ ಕಾಲ, ಭರ್ಜರಿ ಮಾತಿನ ಯುದ್ಧ ನಡೆಸಿದ್ದರು ಲಾಯರ್ ಜಗದೀಶ್. ಆ ನಂತರ ಮಾಜಿ ಸಿಎಂ ಬಗ್ಗೆ ಕೂಡ ಗಂಭೀರ ಆರೋಪ ಮಾಡಿದ್ದರು ಲಾಯರ್ ಜಗದೀಶ್. ಆ ಬಳಿಕ, ಸಿನಿಮಾ ನಟಿಯರ ವಿರುದ್ಧ ಕೂಡ ಸಿಡಿದೆದ್ದರು ಲಾಯರ್ ಜಗದೀಶ್. ಹೀಗೆ, ಲಾಯರ್ ಜಗದೀಶ್ & ಸಿನಿಮಾ ನಟರು ಹಾಗೂ ರಾಜಕಾರಣಿಗಳ ನಡುವೆ ಮಾತಿನ ಮಹಾಯುದ್ಧ ನಡೆಯುವ ಸಮಯದಲ್ಲೇ ಹಿಂದೂ ಹುಲಿಯೊಂದಿಗೆ ಲಾಯರ್ ಜಗದೀಶ್ ಸಂಘರ್ಷ ಶುರುವಾಗಿ ಬಿಟ್ಟಿದೆ!

'ಏ ಮುತಾಲಿಕ್ ಗಂಡ್ಸೇನೋ ನೀನು'
ಹೌದು, ಲಾಯರ್ ಜಗದೀಶ್ ಅವರು ಒಂದು ವಿಡಿಯೋ ಮಾಡಿದರೆ ಅಲ್ಲಿ ಮಾತಿನ ಜೊತೆ ಕಾಂಟ್ರವರ್ಸಿ ಕೂಡ ಗ್ಯಾರಂಟಿ ಎನ್ನಬಹುದು. ಯಾಕಂದ್ರೆ ಲಾಯರ್ ಜಗದೀಶ್ ಅವರು ಈ ಹಿಂದೆ ಕೂಡ ಹಲವು ಬಾರಿ ಕಾಂಟ್ರವರ್ಸಿ ಮಾಡಿಕೊಂಡಿದ್ದರು. ಆದರೆ ಇದೀಗ ದಿಢೀರ್ ಅಂತಾ 'ಹಿಂದೂ ಹುಲಿ' ಪ್ರಮೋದ್ ಮುತಾಲಿಕ್ ವಿರುದ್ಧ ಸಂಘರ್ಷ ಶುರು ಮಾಡಿದ್ದಾರೆ. ಹಾಗಾದ್ರೆ ಲಾಯರ್ ಜಗದೀಶ್ ಏನ್ ಹೇಳಿದ್ರು? ವಿಡಿಯೋ ಮುಂದೆ ನೋಡಿ.
ಶ್ರೀರಾಮ ಸೇನೆ ಭಯೋತ್ಪಾದಕಿಯರ ಬೆದರಿಕೆಗೆ ಜಗ್ಗದ ವಕೀಲ ಜಗದೀಶ್.@MadhukumarVP1 pic.twitter.com/JyWTClxUBr
— ಕರುನಾಡಿನ ಮಿನುಗುವ ನಕ್ಷತ್ರ💛❤️ (@NaadaPremiSha) January 2, 2025
ವಿಡಿಯೋ ನೋಡಿದ್ರಲ್ಲ ಹೀಗೆ ಲಾಯರ್ ಜಗದೀಶ್ ಅವರು ಈಗ 'ಹಿಂದೂ ಹುಲಿ' ಪ್ರಮೋದ್ ಮುತಾಲಿಕ್ ವಿರುದ್ಧ ಸಮರ ಸಾರಿದ್ದಾರೆ. ಮತ್ತೊಂದು ಕಡೆ ಪ್ರಮೋದ್ ಮುತಾಲಿಕ್ ವಿರುದ್ಧ ಇದೀಗ ಗಂಭೀರ ಆರೋಪಗಳನ್ನು ಕೂಡ ಮಾಡಿ ವಿಡಿಯೋ ಒಂದನ್ನ ಪೋಸ್ಟ್ ಮಾಡಿದ್ದಾರೆ ಲಾಯರ್ ಜಗದೀಶ್ ಅವರು.
ಸಮಾಜಘಾತುಕ ಪ್ರಮೋದ್ ಮುತಾಲೀಕ್ ನ ಕೊಲೆಪಾತಕ ಕೃತ್ಯಗಳು ಹೊರ ಬಂದ್ರೂ, ಸರಿಯಾದ ತನಿಖೆ ನಡೆಯಲಿಲ್ಲ. @siddaramaiah pic.twitter.com/PTQzhjboRE
— ಕರುನಾಡಿನ ಮಿನುಗುವ ನಕ್ಷತ್ರ💛❤️ (@NaadaPremiSha) January 1, 2025
ಯಾವ ಹಂತ ತಲುಪಲಿದೆ ಕಿರಿಕ್?
ಒಟ್ನಲ್ಲಿ ಲಾಯರ್ ಜಗದೀಶ್ & ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನಡುವೆ ಸಂಘರ್ಷ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಕಿರಿಕ್ ಇನ್ನು ಯಾವ ಹಂತ ತಲುಪಲಿದೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications