Anchor Anushree: ವೇದಿಕೆ ಮೇಲೆ ಇಬ್ಬರ ರೊಮಾನ್ಸ್​ ; ಅನುಶ್ರೀನೇ ನನ್ನ ಸ್ವರ್ಗ ಎಂದ ಜಗದೀಶ್

ಲಾಯರ್‌ ಜಗದೀಶ್‌ ಸದ್ಯ ಬಿಗ್‌ ಬಾಸ್‌ ಮನೆಯಿಂದ ಬಂದ ತಕ್ಷಣ ಹಲವು ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಹವಾ ಕ್ರಿಯೇಟ್​ ಮಾಡಿದ್ದ ಲಾಯರ್ ಜಗದೀಶ್, ಹೊರಕ್ಕೆ ಬಂದಿರುವುದಕ್ಕೆ ಇದಾಗಲೇ ಹಲವರಿಗೆ ಸಿಕ್ಕಾಪಟ್ಟೆ ಬೇಸರವಾಗಿದೆ. ಆದರೆ, ಬೇರೆ ಶೋಗಳಿಗೆ ಎಂಟ್ರಿಯಾಗುವ ಮೂಲಕ ಲಾಯರ್‌ ಜಗದೀಶ್‌ ಅವರು ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿದ್ದಾಗ ಲಾಯರ್‌ ಜಗದೀಶ್‌ ಅವರು ಇನ್ನೋರ್ವ ಸ್ಪರ್ಧಿ ಹಂಸಾ ಜೊತೆ ಇವರ ರೊಮ್ಯಾನ್ಸ್​ ಸಕತ್​ ಸದ್ದು ಮಾಡಿತ್ತು. ಆದರೆ ಇದೀಗ ಅವರಿಗೆ ಬಿಗ್​ಬಾಸ್​ನಿಂದ ಬಂದ ಮೇಲೆ ಸಹಜವಾಗಿ ಡಿಮ್ಯಾಂಡ್​ ಹೆಚ್ಚಾಗಿದೆ. ಡಾನ್ಸ್ ಕರ್ನಾಟಕ ಡಾನ್ಸ್​ ವೇದಿಕೆಗೆ ಅವರು ಆಗಮಿಸಿದ್ದಾರೆ. ಡಿಕೆಡಿ ಶೋ ನಲ್ಲಿ ಲಾಯರ್‌ ಜಗದೀಶ್‌ ಅವರು ಡ್ಯಾನ್ಸ್‌ ಮಾಡಿದ್ದಾರೆ.

Lawyer Jagadish Dances with Anchar Anushree on the Dance Karnataka Dance

ಇದೇ ವೇಳೆ ಕೆಲವು ಮಾತನಾಡಿರುವ ಜಗದೀಶ್​ ಅವರು, ಪಕ್ಕದಲ್ಲೇ ಇರುವ ಆ್ಯಂಕರ್​ ಅನುಶ್ರೀ ತಮ್ಮ ಸ್ವರ್ಗ ಎಂದೂ ಹೇಳಿದ್ದಾರೆ. ವೇದಿಕೆಯ ಮೇಲೆ ತಮಾಷೆ ಮಾಡುವ ಸಮಯದಲ್ಲಿ ಲಾಯರ್​ ಜಗದೀಶ್​ ಅವರು, ನನ್ನ ಲಕ್ಕಿ ನಂಬರ್ ಸೆವೆನ್​. ನನ್ನ ಪಕ್ಕವೇ ಇದೆ ಹೆವನ್ ಎಂದು ಅನುಶ್ರೀಯವರನ್ನು ಉದ್ದೇಶಿಸಿ ಹೇಳಿದ್ದಾರೆ. ಇದನ್ನು ಕೇಳಿ ಅನುಶ್ರೀ ಅವರು ನಾಚಿ ನೀರಾಗಿದ್ದಾರೆ. ಈ ವೇಳೆ ಆ್ಯಂಕರ್​ ಅನುಶ್ರೀ ಮತ್ತು ಜಗದೀಶ್‌ ದಾದಾ ಸೇರಿ ತುಝೆ ದೇಖಾ ತೋ ಯೇ ಜಾನಾ ಸನಮ್​ ಹಾಡಿಗೆ ರೊಮಾನ್ಸ್​ ಮಾಡಿದ್ದಾರೆ.

ಇನ್ನೂ ಅನುಶ್ರೀ ಜೊತೆ ಲಾಯರ್‌ ಜಗದೀಶ್‌ ಡ್ಯಾನ್‌ ನೋಡಿ ತರ್ಲೆ ಕಮೆಂಟಿಗರು ಹಲವು ಕಮೆಂಟ್ಸ್​ ಹಾಕುತ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಹಂಸ ಮೇಡಂ ಆಯ್ತು, ಈಗ ಅನುಶ್ರೀ ಮೇಡಂ ಎಂದು ಕೆಲವರು ಹೇಳಿದ್ರೆ, ಮತ್ತೆ ಹಲವರು ಹಿಂದಿ ಹಾಡು ಹಾಕಿದ್ದಕ್ಕೆ ಗರಂ ಆಗಿದ್ದಾರೆ. ಇನ್ನೂ ಕೆಲವರು ಈ ಕಣ್ಣಲ್ಲಿ ಏನೇನೋ ನೋಡ್ಬೇಕೋ ನಾ ಕಾಣೆ ದೇವರೇ.. ಟೊಮೇಟೊ ಜೊತೆಗೆ ಬದನೇಕಾಯಿ ಡಾನ್ಸ್ ಮಾಡಿದ ಹಾಗೆ ಇದೆ ಎಂದಿದ್ದಾರೆ.

ಬಿಗ್‌ ಬಾಸ್‌ ನಿಂದ ಹೊರ ಬಂದ ಮೇಲೆ ಹಲವು ಶೋ ಗಳಲ್ಲಿ ಲಾಯರ್‌ ಜಗದೀಶ್‌ ಅವರು ಕಾಣಿಸಿಕೊಳ್ಳುತ್ತಿದ್ದು, ಮತ್ತೆ ಜಗದೀಶ್​ ಅವರನ್ನು ವಾಪಸ್​ ಬಿಗ್​ಬಾಸ್​ಗೆ ಕರೆಸಿಕೊಳ್ಳಬೇಕು ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಇದು ಸಾಧ್ಯವೇ ಇಲ್ಲ ಎಂದು ಖುದ್ದು ಕಿಚ್ಚ ಸುದೀಪ್‌ ಅವರೇ ಹೇಳಿದ್ದಾರೆ. ಈ ಹಿಂದೆ ಜಗದೀಶ್​ ಅವರೂ ನೇರ ಪ್ರಸಾರದಲ್ಲಿ ಬಂದು ವಾಪಸ್​ ಹೋಗಲು ತಮಗೆ ಅವಕಾಶ ಇಲ್ಲ ಎಂದು ನೋವು ತೋಡಿಕೊಂಡಿದ್ದರು.

ಬಿಗ್‌ ಬಾಸ್‌ ಮನೆಯಲ್ಲಿ ಒಂದು ಚಿಕ್ಕ ಪದದಿಂದ ಬಿಗ್​ಬಾಸ್​ನಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದ ಜಗದೀಶ್, ಇನ್ನೂ ನನಗೆ ಅರ್ಥವಾಗದ ವಿಷಯ ಏನೆಂದರೆ, ಚೈತ್ರಾ ಕುಂದಾಪುರ, ತುಕಾಲಿ ಮಾನಸ, ಮಂಜಣ್ಣ ಇವರೆಲ್ಲರೂ ನನ್ನ ಹಾಗೆಯೇ ಕೆಲವು ಸಲ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ. ಆದರೆ ನನ್ನೊಬ್ಬನನ್ನೇ ಯಾಕೆ ಹೊರಗೆ ಕಳುಹಿಸಿದ್ದೋ ಗೊತ್ತಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ‌

ಇನ್ನೂ ಲಾಯರ್‌ ಜಗದೀಶ್‌ ಅವರನ್ನ ಹಲವರು ನೀವು ಮತ್ತೆ ಹೋಗ್ತೀರಾ ಎಂದು ಪ್ರಶ್ನಿಸುತ್ತಾರೆ. ಆದರೆ ಇದು ಸಾಧ್ಯವಿಲ್ಲ. ಏಕೆಂದ್ರೆ ಈಗಾಗಲೇ ಸುದೀಪ್​ ಅವರು, ಬಿಗ್​ಬಾಸ್​ಗೆ ಜಗದೀಶ್​ ಮುಗಿದು ಹೋಗಿರೋ ಅಧ್ಯಾಯ ಎಂದಿದ್ದಾರೆ. ಆದ್ದರಿಂದ ಮತ್ತೆ ವಾಪಸ್​ ಹೋಗುವ ಯಾವುದೇ ಚಾನ್ಸ್​ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+