Lakshmi Nivasa Serial: ಲಕ್ಷ್ಮೀಗೆ ಹೊಸ ಸಂಕಷ್ಟ - ಪಾತ್ರ ಮುಗಿಯಲಿದೆಯೇ, ನಮ್ಮ ಲೈಫ್ ಚೆನ್ನಾಗಿದೆ ಅಂತಿರೋದ್ಯಾಕೆ ಪ್ರೇಕ್ಷಕ

Lakshmi Nivasa Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಲಕ್ಷ್ಮೀಗೆ ಇದೀಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಈ ಸಂಕಷ್ಟವನ್ನು ನೋಡಿ ಸೀರಿಯಲ್‌ನ ಪ್ರೇಕ್ಷಕರು ನಮ್ಮ ಲೈಫೇ ಎಷ್ಟೋ ಚೆನ್ನಾಗಿದೆ ಎಂದು ಹೇಳುವುದಕ್ಕೆ ಪ್ರಾರಂಭಿಸಿದ್ದಾರೆ. ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಎಲ್ಲವೂ ಸರಿ ಹೋಗುತ್ತಿದೆ. ಕಳೆದು ಹೋಗಿದ್ದ ಮಗಳು ಸಿಕ್ಕಿದ್ದಾಳೆ. ಎಲ್ಲವೂ ಮೊದಲಿನಂತೆ ಆಗುತ್ತಿದೆ.

ಎಲ್ಲರೂ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ ಎನ್ನುವಾಗಲೇ ಮತ್ತೊಂದು ಸಂಕಷ್ಟ ಶುರುವಾಗಿದೆ. ಲಕ್ಷ್ಮೀ ನಿವಾಸದ ಲಕ್ಷ್ಮೀಗೆ ಇದೀಗ ಹೃದಯಾಘಾತ ಸಂಭವಿಸಿದ್ದು, ಜಗತ್ತಿನಲ್ಲಿರುವ ಕಷ್ಟಗಳೆಲ್ಲವೂ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿಯೇ ಇದೆ ಅಂತಿದ್ದಾರೆ ಪ್ರೇಕ್ಷಕರು. ಈ ಸೀರಿಯಲ್ ಇದೀಗ ಮತ್ತೊಂದು ರೋಚಕ ಘಟ್ಟವನ್ನು ತಲುಪಿದೆ.

Lakshmi Niwas Serial

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಲಕ್ಷ್ಮೀ ಹಾಗೂ ಶ್ರೀನಿವಾಸ್ ಅವರ ಸ್ವಾಭಿಮಾನವೇ ಕಥೆಯ ಕೇಂದ್ರ ಬಿಂದು. ಎಷ್ಟೇ ಅವಕಾಶಗಳು ಬಂದರೂ - ರಾಜಿ ಮಾಡಿಕೊಳ್ಳುವುದಕ್ಕೆ ಅವಕಾಶವಿರುವ ಸಂದರ್ಭಗಳು ಬಂದರೂ ಶ್ರೀನಿವಾಸ್ ಅವರು ರಾಜಿಯಾಗಿಲ್ಲ. ಈ ವಯಸ್ಸಿನಲ್ಲೂ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಈ ರೀತಿ ಇರುವಾಗಲೇ ಲಕ್ಷ್ಮೀ ನಿವಾಸದ ಲಕ್ಷ್ಮೀಗೆ ಹೃದಯಾಘಾತ ಸಂಭವಿಸಿದ್ದು, ವೈದ್ಯರು ಲಕ್ಷ್ಮೀಯ ಎರಡು ಹೃದಯನಾಳಗಳು ಹೆಪ್ಪುಗಟ್ಟಿದೆ / ಹಾರ್ಟ್‌ವಾಲ್ ಬ್ಲಾಕ್ ಆಗಿದೆ ಎಂದು ಹೇಳಿದ್ದಾರೆ. ಈ ವಿಷಯವನ್ನು ಕೇಳಿ ಶ್ರೀನಿವಾಸ್‌ಗೆ ದಿಕ್ಕೇ ತೋಚದಂತೆ ಆಗಿದೆ.

ಲಕ್ಷ್ಮೀ ನಾವು ಇವೊತ್ತು ಆಸ್ಪತ್ರೆಗೆ ಹೋಗಬೇಕು ಎಂದು ಶ್ರೀನಿವಾಸ್ ಹೇಳಿದ್ದು, ಅದಕ್ಕೆ ಲಕ್ಷ್ಮೀ ಯಾಕೆ, ಏನಾಗಿದೆ ಇವಾಗ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶ್ರೀನಿವಾಸ್ ಅವರು, ಡಾಕ್ಟರ್‌ ಹೇಳಿದ್ರಲ್ವೇನೆ ಪೂರ್ತಿ ಬಾಡಿ ಚೆಕ್‌ಅಪ್‌ ಮಾಡಿಸಬೇಕು ಅಂತ ಹೇಳಿದ್ದಾರೆ. ನಂತರ ಲಕ್ಷ್ಮೀ ಹಾಗೂ ಶ್ರೀನಿವಾಸ್ ಇಬ್ಬರೂ ಆಸ್ಪತ್ರೆಗೆ ಹೋಗಿದ್ದು ಫೂಲ್ ಬಾಡಿ ಚೆಕ್ ಅಪ್‌ಗೆ ಒಳಗಾಗಿದ್ದಾರೆ.

ಪರೀಕ್ಷೆಯ ನಂತರ ಶ್ರೀನಿವಾಸ್ ವೈದ್ಯರೊಂದಿಗೆ ಸಮಾಲೋಚನೆ ಮಾಡುತ್ತಿರುವುದನ್ನು ತೋರಿಸಲಾಗಿದೆ. ಅದರಲ್ಲಿ ಡಾಕ್ಟರ್ ಬಳಿ ಶ್ರೀನಿವಾಸ್, ಲಕ್ಷ್ಮೀಗೆ ಏನಾಗಿದೆ ಡಾಕ್ಟರ್ ಅಂತ ಕೇಳಿದ್ದಾರೆ. ಅದಕ್ಕೆ ಡಾಕ್ಟರ್ ಅವರಿಗೆ ಹಾರ್ಟ್‌ ಅಲ್ಲಿ ಎರಡು ಬ್ಲಾಕ್ ಆಗಿದೆ ಎಂದು ಹೇಳಿದ್ದಾರೆ. ಒಪನ್ ಹಾರ್ಟ್ ಸರ್ಜರಿ ಮೂಲಕ ಮಾತ್ರವೇ ಇದನ್ನು ಸರಿಪಡಿಸುವುದಕ್ಕೆ ಸಾಧ್ಯ ಅಂತ ಡಾಕ್ಟರ್ ಹೇಳಿದ್ದಾರೆ. ಈ ವಿಚಾರವನ್ನು ಕೇಳಿ ಶ್ರೀನಿವಾಸ್ ಕಂಗಾಲಾಗಿರುವುದನ್ನು ತೋರಿಸಲಾಗಿದೆ.

Lakshmi Nivasa Serial:: ಪ್ರೇಕ್ಷಕರು ಏನಂದ್ರು

ಲಕ್ಷ್ಮೀ ನಿವಾಸ ಸೀರಿಯಲ್‌ನ ಹೊಸ ಟ್ವಿಸ್ಟ್‌ಗೆ ಪ್ರೇಕ್ಷಕರು ಸಹ ಶಾಕ್ ಆಗಿದ್ದಾರೆ. ಜಗತ್ತಿನಲ್ಲಿ ಇರುವ ಎಲ್ಲಾ ಕಷ್ಟಗಳು ಲಕ್ಷ್ಮೀ ನಿವಾಸದಲ್ಲೇ ಇರುವಂತೆ ಇದೆ. ಅಯ್ಯೋ... ತೊಂದರೆ ಮೊದಲೇ ಗೊತ್ತಾದರೆ ಒಳ್ಳೆಯದಲ್ಲವೇ ಎಂದೂ ಕೆಲವರು ಹೇಳಿದ್ದಾರೆ. ನಾಗರಾಜ ಸಾಂಗುಲ ಎನ್ನುವವರು ಹೆಸರಿಗೆ ಲಕ್ಷ್ಮೀ ನಿವಾಸ, ವಯಸ್ಸು ಇರೋವಾಗ ಮನೆ ಕಟ್ಟಿಸುವುದಕ್ಕೆ ಆಗಲಿಲ್ಲ, ಈಗ ನಿವೃತ್ತಿ ನಿಲಯ ಅಂತಾನೂ ಹೇಳೋ ಆಗಿಲ್ಲ ಪಾಪ ಎಂದಿದ್ದಾರೆ. ಇನ್ನೂ ಕೆಲವರು ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಪ್ರಮುಖ ಪಾತ್ರಧಾರಿ ಲಕ್ಷ್ಮೀ ಅವರು ಸಹ ಸೀರಿಯಲ್ ಬಿಡಲಿದ್ದಾರೆಯೇ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಈ ಸೀರಿಯುಲ್‌ನಲ್ಲಿ ಹಲವು ಪಾತ್ರಧಾರಿಗಳು ಬದಲಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಪಾತ್ರಗಳನ್ನು ಬದಲಾಯಿಸುವಾಗ ಕೆಲವೊಂದು ಟ್ವಿಸ್ಟ್‌ ಅಥವಾ ಮೃತಪಟ್ಟವರಂತೆ ತೋರಿಸುವುದು ಸಹ ಇದೆ. ಇದೇ ಕಾರಣಕ್ಕೆ ಇದೀಗ ಮುಖ್ಯ ಪಾತ್ರದಲ್ಲೂ ಬದಲಾವಣೆ ಅಥವಾ ಪಾತ್ರವೇ ಇಲ್ಲದಂತೆ ಆಗಲಿದೆಯೇ ಎನ್ನುವ ಚರ್ಚೆಯೂ ಪ್ರೇಕ್ಷಕರಲ್ಲಿ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+