Oscar Award winners: ಆಸ್ಕರ್ ಗೆದ್ದ 8 ಭಾರತೀಯರ ಪಟ್ಟಿ ಇಲ್ಲಿದೆ
Oscar Award winners: ಆಸ್ಕರ್ ಸಿನಿಮಾ ಜಗತ್ತಿನಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿದೆ. ಈಗಾಗಲೇ 96ನೇ ಅಕಾಡೆಮಿ ಅವಾರ್ಡ್‌ಗಳ ಕಾರ್ಯಕ್ರಗಳು ನಡೆದಿವೆ. ಇಂದು (ಮಾರ್ಚ್ 03) 97ನೇ ಅಕಾಡೆಮಿ ಪ್ರಶಸ್ತಿಗಳು ಅಂದರೆ ಆಸ್ಕರ್ 2025 ಕ್ಯಾಲಿಫೋರ್ನಿಯಾದ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಇದುವರೆಗೂ ಈ ಅವಾರ್ಡ್ ಅನ್ನ 8 ಭಾರತೀಯರು ಪಡೆದುಕೊಂಡಿದ್ದಾರೆ. ಹಾಗಾದ್ರೆ ಅವರು ಯಾರು ಹಾಗೂ ಯಾವಾಗ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಎ.ಆರ್.ರೆಹಮಾನ್ ಸೇರಿ 8 ಮಂದಿ ಭಾರತೀಯರು ಅತ್ಯತ್ತಮ ಅತ್ಯುನ್ನತ ಪ್ರಶಸ್ತಿ ಆಸ್ಕರ್ ಅನ್ನು ಪಡೆದುಕೊಂಡಿದ್ದಾರೆ. 97ನೇ ಅಕಾಡೆಮಿ ಪ್ರಶಸ್ತಿಗಳು ಅಂದರೆ ಆಸ್ಕರ್ 2025 ಕ್ಯಾಲಿಫೋರ್ನಿಯಾದ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಇಂದು (ಮಾರ್ಚ್ 3) ನಡೆಯಲಿದೆ. ಅದಕ್ಕೂ ಈಗಾಗಲೇ ಆಸ್ಕರ್ ಪ್ರಶಸ್ತಿ ಗೆದ್ದ 8 ಭಾರತೀಯರ ಸಂಪೂರ್ಣ ವಿವರನ್ನು ಇಲ್ಲಿ ಗಮನಿಸಿ.

* ಭಾನು ಆಥೈಯ್ಯ: ಮೊದಲಿಗೆ 1982ರಲ್ಲಿ ಗಾಂಧಿ ಚಿತ್ರಕ್ಕಾಗಿ ಭಾನು ಅಥೈಯ್ಯಾಗೆ ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಆಸ್ಕರ್ ಪ್ರಶಸ್ತಿ ನೀಡಲಾಯಿತು.
* ಸತ್ಯಜಿತ್ ರೇ: ನಿರ್ದೇಶಕ ಸತ್ಯಜಿತ್ ರೇ ಅವರಿಗೆ 1992ರಲ್ಲಿ ಅಕಾಡೆಮಿಯಿಂದ ಗೌರವ ಆಸ್ಕರ್ ಪ್ರಶಸ್ತಿ ನೀಡಲಾಯಿತು.
* ಗುಲ್ಜಾರ್: ಗುಲ್ಜಾರ್ ಎಂದು ಖ್ಯಾತರಾದ ನಿರ್ದೇಶಕ ಮತ್ತು ಗೀತರಚನೆಕಾರ ಸಂಪೂರನ್ ಸಿಂಗ್ ಕಲ್ರಾ ಅವರಿಗೆ 2009ರಲ್ಲಿ ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರದ ಜೈ ಹೋ ಹಾಡಿಗೆ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ನೀಡಲಾಯಿತು.
* ಎ.ಆರ್.ರೆಹಮಾನ್: 2009ರಲ್ಲಿ ಎ.ಆರ್.ರೆಹಮಾನ್ ಅವರಿಗೆ ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ಎರಡು ಆಸ್ಕರ್ ಲಭಿಸಿತು. ಮೊದಲನೇಯದು ಅತ್ಯುತ್ತಮ ಮೂಲ ಸಂಗೀತ ಮತ್ತು ಎರಡನೇಯದು ಅತ್ಯುತ್ತಮ ಮೂಲ ಗೀತೆ ಜೈ ಹೋಗೆ ಆಸ್ಕರ್ ಪ್ರಶಸ್ತಿ ನೀಡಲಾಯಿತು.
* ರಸೂಲ್ ಪೂಕುಟ್ಟಿ: 2009ರಲ್ಲಿ ರೆಸೂಲ್ ಪೂಕುಟ್ಟಿ ಅವರಿಗೆ ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ಅತ್ಯುತ್ತಮ ಸೌತ್ ಮಿಕ್ಸಿಂಗ್ ಆಸ್ಕರ್ ಪ್ರಶಸ್ತಿ ನೀಡಲಾಯಿತು.
* ಎಂ.ಎಂ.ಕೀರವಾಣಿ: 2023ರಲ್ಲಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಎಂಬ ಹಾಡಿಗೆ ಎಂ.ಎಂ.ಕೀರವಾಣಿ ಅವರಿಗೆ ಅತ್ಯುತ್ತಮ ಮೂಲ ಗೀತೆಗಾರ ಆಸ್ಕರ್ ನೀಡಲಾಯಿತು.
* ಚಂದ್ರಬೋಸ್: 2023ರಲ್ಲಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಚಂದ್ರಬೋಸ್ ಅವರಿಗೆ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ನೀಡಲಾಯಿತು.
* ಕಾರ್ತಿಕ್ ಗೊನ್ಸಾಲ್ವಿಸ್ ಮತ್ತು ಗುನೀತ್ ಮೊಂಗಾ: 2023ರಲ್ಲಿ ದಿ ಎಲಿಫೆಂಟ್ ವಿಸ್ಫರ್‌ಗಾಗಿ ಕಾರ್ತಿಕ ಗೊನ್ಸಾಲ್ವಿಸ್ ಮತ್ತು ಗುನೀತ್ ಮೊಂಗಾ ಅವರಿಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ನೀಡಲಾಯಿತು.
ಈಗಾಗಲೇ 2024ನೇ ಸಾಲಿನಲ್ಲಿ 96ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಲಾಸ್ ಏಂಜಲೀಸ್‌ಲ್ಲಿ ಕಳೆದ ಬಾರಿ ಈ ಕಾರ್ಯಕ್ರಮ ನಡೆಯಿತು. ವಿಶೇಷತೆ ಎಂದರೆ ಒಂದೇ ಸಿನಿಮಾ 13 ವಿಭಾಗಗಳಲ್ಲಿ ನಾಮ ನಿರ್ದೇಶನವಾಗಿ 7 ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಆ ಸಿನಿಮಾವೇ ಒಪ್ಪೆನ್ ಹೈಮರ್ ಆಗಿದೆ. ಮತ್ತೊಂದೆಡೆ ಎಮ್ಮಾ ಸ್ಟೋನ್‌ಗೆ ಅತ್ಯುತ್ತಮ ನಟಿ ಸೇರಿದಂತೆ 'ಪೂರ್ ಥಿಂಗ್ಸ್' ಸಿನಿಮಾಗೆ 4 ಆಸ್ಕರ್ ಪ್ರಶಸ್ತಿಗಳು ಬಂದಿವೆ.
2024ರ ಆಸ್ಕರ್ ಪಡೆದವರ ಪಟ್ಟಿ
* ಅತ್ಯುತ್ತಮ ಚಿತ್ರ - ಒಪ್ಪೆನ್ ಹೈಮರ್
* ಅತ್ಯುತ್ತಮ ನಿರ್ದೇಶಕ - ಕ್ರಿಸ್ಟಫರ್ ನೋಲನ್ (ಒಪ್ಪೆನ್ ಹೈಮರ್)
* ಅತ್ಯುತ್ತಮ ನಟ - ಶಿಲಿಯನ್ ಮರ್ಫಿ (ಒಪ್ಪೆನ್ ಹೈಮರ್)
* ಅತ್ಯುತ್ತಮ ನಟಿ - ಎಮ್ಮಾ ಸ್ಟೋನ್ (ಪೂರ್ ಥಿಂಗ್ಸ್)
* ಅತ್ಯುತ್ತಮ ಪೋಷಕ ನಟ - ರಾಬರ್ಟ್ ಡೌನಿ ಜೂ. (ಒಪ್ಪೆನ್ ಹೈಮರ್ )
* ಅತ್ಯುತ್ತಮ ಪೋಷಕ ನಟಿ - ಡಾವೈನ್ ಜಾಯ್ ರಾಂಡಾಲ್ಫ್ (ದಿ ಹೋಲ್ಡೋವರ್ಸ್ )
* ಅತ್ಯುತ್ತಮ ಅಳವಡಿಸಿದ ಚಿತ್ರಕಥೆ - ಅಮೆರಿಕನ್ ಫಿಕ್ಷನ್
* ಅತ್ಯುತ್ತಮ ಚಿತ್ರಕಥೆ - ಅನಾಟಮಿ ಆಫ್ ಅ ಫಾಲ್
* ಅತ್ಯುತ್ತಮ ಆನಿಮೇಷನ್ ಸಿನಿಮಾ - ದಿ ಬಾಯ್ ಆಂಡ್ ದಿ ಹೆರಾನ್
* ಅತ್ಯುತ್ತಮ ಆನಿಮೇಟೆಡ್ ಕಿರುಚಿತ್ರ - ವಾರ್ ಈಸ್ ಓವರ್ ಇನ್ ಸ್ಪೈರ್ಡ್ ಬೈ ದಿ ಮ್ಯೂಸಿಕ್ ಆಫ್ ಜಾನ್ ಆಂಡ್ ಯೊಕೊ
* ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ - ದಿ ಜೋನ್ ಆಫ್ ಇಂಟರೆಸ್ಟ್
* ಅತ್ಯುತ್ತಮ ಸಾಕ್ಷ್ಯಚಿತ್ರ - 20 ಡೇಸ್ ಇನ್ ಮಾರಿಯುಪೊಲ್
* ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ - ದಿ ಲಾಸ್ಟ್ ರಿಪೇರ್ ಶಾಪ್
* ಅತ್ಯುತ್ತಮ ಸಂಗೀತ - ಒಪ್ಪೆನ್ ಹೈಮರ್
* ಅತ್ಯುತ್ತಮ ಹಾಡು - ವಾಟ್ ವಾಸ್ ಐ ಮೇಡ್ ಫಾರ್?
* ಅತ್ಯುತ್ತಮ ಧ್ವನಿ - ದಿ ಝೋನ್ ಆಫ್ ಇಂಟರೆಸ್ಟ್
* ಅತ್ಯುತ್ತಮ ನಿರ್ಮಾಣ ವಿನ್ಯಾಸ - ಪೂರ್ ಥಿಂಗ್ಸ್
* ಅತ್ಯುತ್ತಮ ಲೈವ್ ಆಕ್ಷನ್ಸ್ ಕಿರುಚಿತ್ರ - ದಿ ವಂಡರ್‌ಪೂಲ್ ಸ್ಟೋರಿ ಆಫ್ ಹೆನ್ರಿ ಶುಗರ್
* ಅತ್ಯುತ್ತಮ ಛಾಯಾಗ್ರಹಣ - ಒಪ್ಪೆನ್ ಹೈಮರ್
* ಅತ್ಯುತ್ತಮ ಪ್ರಸಾಧನ ಹಾಗೂ ಕೇಶ ವಿನ್ಯಾಸ- ಪೂರ್ ಥಿಂಗ್ಸ್
* ಅತ್ಯುತ್ತಮ ವಸ್ತ್ರ ವಿನ್ಯಾಸ - ಪೂರ್ ಥಿಂಗ್ಸ್
* ಅತ್ಯುತ್ತಮ ವಿಷುವಲ್ ಎಫೆಕ್ಟ್ - ಗಾಡ್ಜಿಲ್ಲಾ ಮೈನಸ್ ಓನ್
* ಅತ್ಯುತ್ತಮ ಸಂಕಲನ - ಒಪ್ಪೆನ್ ಹೈಮರ್
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications