BBK 12: ಬಿಗ್‌ಬಾಸ್ ಬಗ್ಗೆ ಕೊನೆಗೂ ಆ ಸೀಕ್ರೆಟ್ ರಿವೀಲ್ ಮಾಡಿದ ಸುದೀಪ್
Bigg Boss Kannada season 12: ಇಡೀ ಕರ್ನಾಟಕವೇ ಕಾದು ಕುಳಿತಿರುವ ಬಿಗ್‌ಬಾಸ್ ಕನ್ನಡ ಸೀಸನ್-12 ಇದೇ ಸೆಪ್ಟೆಂಬರ್ 28ರಂದು ಅದ್ಧೂರಿಯಾಗಿ ಶುರುವಾಗಲಿದೆ. ಕಿಚ್ಚ ಸುದೀಪ್ ಅವರೇ ಎಂದಿನಂತೆ ಈ ಸೀಸನ್ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಸ್ಪರ್ಧಿಗಳ ಅಂತಿಮ ಆಯ್ಕೆಯೂ ಮುಗಿದಿದ್ದು, ಯಾರೆಲ್ಲ ಬಿಗ್‌ಬಾಸ್ ಮನೆಯಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಕುತೂಹಲವಿದೆ. ಇತ್ತೀಚೆಗಷ್ಟೇ ಕಲರ್ಸ್ ವಾಹಿನಿ ಬಿಗ್‌ಬಾಸ್ ಪ್ರೋಮೋ ಹಂಚಿಕೊಂಡಿತ್ತು. ಇನ್ನು ಕಿಚ್ಚ ಸುದೀಪ್ ಅವರು ಕೊನೆಗೂ ಆ ರಹಸ್ಯವೊಂದನ್ನು ಶೋ ಆರಂಭಕ್ಕೂ ಮುನ್ನ ಹೇಳೇಬಿಟ್ಟಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ತುಂಬಾ ಸ್ಪೆಷಲ್ ಹಾಗೂ ವಿಭಿನ್ನವಾಗಿರಲಿದೆ ಎಂದು ಹೇಳಲಾಗುತ್ತಿದೆ. ಪ್ರತಿ ಬಾರಿಯೂ ಹೊಸತನ ಈ ಕಾರ್ಯಕ್ರಮದಲ್ಲಿ ಇದ್ದೇ ಇರುತ್ತಿತ್ತು. ಇನ್ನು ಸುದೀಪ್ ಬಿಗ್‌ಬಾಸ್‌ನಿಂದ ಹೊರನಡೆದು ಮತ್ತೆ ವಾಪಸ್ ಆಗಿರುವುದರಿಂದ ಈ ಕಾರ್ಯಕ್ರಮದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನ ಮಾಡಲಾಗಿದೆಯಂತೆ. ಪ್ರಮುಖವಾಗಿ ಈ ಸೀಸನ್‌ಗಾಗಿ ಬಿಗ್‌ಬಾಸ್ ಮನೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಕಿಚ್ಚ ಸುದೀಪ್ ಅವರು ಎಕ್ಸ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಮನೆ ಹೇಗಿರುತ್ತೆ?
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕಾಗಿ ಬೆಂಗಳೂರಿನ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಹೌಸ್ ನಿರ್ಮಿಸಲಾಗಿದೆ. ಈ ಬಾರಿ ಮನೆ ದೊಡ್ಡದಾಗಿರಲಿದೆ ಎಂದು ಹೇಳಿದ್ದಾರೆ. ಮೊದಲು ಬಿಗ್‌ಬಾಸ್ ಮನೆಯನ್ನ ಇನೋವೇಟಿವ್ ಫಿಲ್ಮ್ ಸಿಟಿಯಲ್ಲೇ ನಿರ್ಮಿಸಲಾಗಿತ್ತು. ಬಳಿಕ ಕಾರಣಾಂತರಗಳಿಂದ ಬೇರೆ ಜಾಗಗಳಲ್ಲಿ ವಿವಿಧ ಸೀಸನ್‌ಗಳ ಮನೆ ನಿರ್ಮಿಸಲಾಗಿತ್ತು. ಬೆಂಗಳೂರು ಹೊರವಲಯದಲ್ಲಿ ಪ್ರತ್ಯೇಕ ಜಾಗ ಪಡೆದು ಅಲ್ಲೇ ದೊಡ್ಡದಾದ ಮನೆ ಡಿಸೈನ್ ಮಾಡಲಾಗಿತ್ತು.
ಈ ಬಾರಿ ಬಿಗ್‌ಬಾಸ್ ಮನೆ ಮತ್ತೆ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲೇ ತಲೆ ಎತ್ತಿದೆ. ಈಗಾಗಲೇ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್‌ಬಾಸ್ ಮನೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸಗಳು ಮುಂದುವರಿದಿವೆ. ಒಟ್ಟಾರೆ ಈ ಸೀಸನ್‌ಗಾಗಿ ದೊಡ್ಡದಾದ ಮನೆ ನಿರ್ಮಿಸಲಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರೋಮೋ ವಿಷಯಕ್ಕೆ ಬಂದರೆ ಬಿಗ್‌ಬಾಸ್ ತಂಡವು ನಿಜಕ್ಕೂ ಅದ್ಭುತವಾದ ಸೃಜನಶೀಲತೆಯನ್ನು ಪ್ರದರ್ಶಿಸಿದೆ. ಬಿಡುಗಡೆಯಾಗಲಿರುವ ಎರಡನೇ ಪ್ರೋಮೋ ನೀವು ಏನನ್ನು ಎದುರು ನೋಡಬಹುದೆಂಬುದರ ಬಗ್ಗೆ ಒಂದು ಇಣುಕು ನೋಟವನ್ನು ನೀಡುತ್ತವೆ ಎಂದಿದ್ದಾರೆ. ಈ ಬಾರಿ ದೊಡ್ಡದಾಗ ಹಾಗೂ ಉತ್ತಮ ವೇದಿಕೆ ಇರಲಿದೆ. ಹೆಚ್ಚು ಬೆಚ್ಚಗಿನ ಮತ್ತು ಪ್ರಕಾಶಮಾನವಾದ ಬಿಗ್‌ಬಾಸ್ ಮನೆ ನೋಡಲಿದ್ದೀರಿ. BBK12ರಲ್ಲಿ ಇನ್ನೂ ಬಹಳಷ್ಟು ಇದೆ ಎಂದಿದ್ದಾರೆ ಕಿಚ್ಚ.
ಪ್ರೋಮೋ 15 ಮಿಲಿಯನ್ ವೀಕ್ಷಣೆ
ಸುದೀಪ್ ಹುಟ್ಟುಹಬ್ಬದ ದಿನದಂದೇ ಬಿಗ್‌ಬಾಸ್ ಪ್ರೋಮೋ ರಿಲೀಸ್ ಆಗಿತ್ತು. ಈ ಪ್ರೋಮೋ ಕೂಡ ದಾಖಲೆ ಬರೆದಿದ್ದು, ಬರೋಬ್ಬರಿ 15 ಮಿಲಿಯನ್ ವೀಕ್ಷಣೆ ಪಡೆದಿದೆ ಎಂದು ಕಲರ್ಸ್ ಮಾಹಿತಿ ಹಂಚಿಕೊಂಡಿದೆ. ರಿಯಾಲಿಟಿ ಶೋಗಳ ಬಾಸ್, ರಿಯಲ್ ಎಂಟರ್‌ಟೈನ್‌ಮೆಂಟ್‌ಗೆ ಒಂದೇ ಅಡ್ರೆಸ್, ಬಿಗ್ ಬಾಸ್ ಕನ್ನಡ ಸೀಸನ್ 12. ಆಟ ಆಡೋರು ಹಲವರು, ಆದ್ರೆ ಆಟ ಆಳೋದು ಒಬ್ಬರೇ. ಪ್ರತಿ ಹೆಜ್ಜೆಯಲ್ಲೂ ಮೈಲಿಗಲ್ಲು, ಹೆಸರೊಂದೇ ಬಿಗ್‌ಬಾಸ್ ಎಂದು ಬರೆದುಕೊಂಡಿದೆ.












Click it and Unblock the Notifications