ಸುದೀಪ್ ಪುತ್ರಿಯ ಮೊದಲ ಕನ್ನಡ ಹಾಡು ಟ್ರೆಂಡೋ ಟ್ರೆಂಡು; ಮಗಳ ಹಾಡಿಗೆ ಕುಣಿದು ಕುಪ್ಪಳಿಸಿದ ಕಿಚ್ಚ

ಕಿಚ್ಚ ಸುದೀಪ್ ನುಡಿದಂತೆ ನಡೆದುಕೊಂಡಿದ್ದಾರೆ. ವರ್ಷಕ್ಕೊಂದು ಸಿನಿಮಾ ಮಾಡುತ್ತೇನೆ ಎಂದಿದ್ದ ಕಿಚ್ಚ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದಾರೆ. ಕಳೆದ ವರ್ಷ ದಿಸೆಂಬರ್‌ ತಿಂಗಳಲ್ಲಿ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿತ್ತು. ಅದೇ ರೀತಿ ಈ ವರ್ಷ ಡಿಸೆಂಬರ್‌ 'ಮಾರ್ಕ್' ರಿಲೀಸ್‌ ಮಾಡುತ್ತಿದ್ದಾರೆ. ಈಗಾಗಲೇ ಸುದೀಪ್ ಸಿನಿಮಾವನ್ನು ಭರ್ಜರಿಯಾಗಿಯೇ ಪ್ರಚಾರ ಮಾಡುತ್ತಿದ್ದಾರೆ.

ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಮಾರ್ಕ್' ಬಿಡುಗಡೆಗೆ ದಿನಗಣನೆ ಶುರುವಾಗಿದೆ. 'ಮ್ಯಾಕ್ಸ್' ಯಶಸ್ಸು ಕಂಡ ಬಳಿಕ ಕಿಚ್ಚ ಸುದೀಪ್‌ಗೆ ಜೊತೆ ಮತ್ತೆ ವಿಜಯ್ ಕಾರ್ತಿಕೇಯ ಸಿನಿಮಾ ಮಾಡುತ್ತಿದ್ದಾರೆ. ಕೇವಲ ಆರು ತಿಂಗಳಲ್ಲಿ ಸಿನಿಮಾವನ್ನು ನಿರ್ದೇಶನ ಮಾಡಿ, ಬಿಡುಗಡೆ ಮಾಡುವ ಹಂತಕ್ಕೂ ತಂದಿದ್ದಾರೆ. ಈ ಮಧ್ಯೆ ಸಿನಿಮಾ ಟ್ರೈಲರ್ ಸದ್ದು ಮಾಡಿದಂತೆ, ಪಾರ್ಟಿ ಸಾಂಗ್‌ ಒಂದು ಜೋರಾಗಿ ಸದ್ದು ಮಾಡುತ್ತಿದೆ.

Kichcha Sudeep daughter Sanvi debut song Mast Malaika from Mark movie got 3 1 million views

ವಿಶೇಷ ಅಂದರೆ, 'ಮಾರ್ಕ್' ಪಾರ್ಟಿ ಸಾಂಗ್ ಅನ್ನು ಹಾಡಿರೋದು ಕಿಚ್ಚ ಸುದೀಪ್ ಪುತ್ರಿ ಸಾನ್ವಿ. ತಂದೆಯ ಸಿನಿಮಾದಲ್ಲಿ "ಮಸ್ತ್ ಮಲೈಕಾ" ಅಂತ ಹಾಡಿರುವ ಸಾನ್ವಿ ಧ್ವನಿ ಸಂಗೀತ ಪ್ರಿಯರು ಹೊಗಳಿ ಕೊಂಡಾಡಿದ್ದಾರೆ. ಕಿಚ್ಚ ಸುದೀಪ್ ಈ ಪಾರ್ಟಿ ಸಾಂಗ್‌ಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇನ್ನೊಂದು ಕಡೆ ಈ ಹಾಡು ಯೂಟ್ಯೂಬ್‌ನಲ್ಲಿ ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಪಡೆದುಕೊಂಡಿದೆ.

ಕಿಚ್ಚನ ಪುತ್ರಿ ಮೊದಲ ಕನ್ನಡ ಹಾಡು

ಸುದೀಪ್ ಪುತ್ರಿ ಸಾನ್ವಿ ಗಾಯನದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಸಿಂಗಿಂಗ್ ಬಗ್ಗೆ ತನ್ನ ಆಸಕ್ತಿಯನ್ನು ಹೊರ ಹಾಕುತ್ತಲೇ ಬಂದಿದ್ದಾರೆ. ಪರಭಾಷೆಯಲ್ಲಿ ಈಗಾಗಲೇ ಸಾನ್ವಿ ಪರಭಾಷೆಯ ಸಿನಿಮಾದಲ್ಲೂ ಧ್ವನಿ ನೀಡಿ ಗಮನ ಸೆಳೆದಿದ್ದರು. ಆದರೆ, 'ಮಾರ್ಕ್' ಸಿನಿಮಾದ "ಮಸ್ತ್ ಮಲೈಕಾ.." ಕನ್ನಡದಲ್ಲಿ ಹಾಡಿದ ಮೊದಲ ಹಾಡು. ಹೀಗಾಗಿ ಸುದೀಪ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Kichcha Sudeep daughter Sanvi debut song Mast Malaika from Mark movie got 3 1 million views

ಸಾನ್ವಿಗೆ ಸುದೀಪ್‌ಗೆ ಸಂಗೀತದ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಅನ್ನೋದು ಆಸೆ. ಹೀಗಾಗಿ ನಟನೆಗಿಂತ ಹೆಚ್ಚಾಗಿ ಗಾಯನದ ಕಡೆಗೆ ಹೆಚ್ಚು ಗಮನವನ್ನು ಹರಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಅದರಲ್ಲೂ ತಾನು ಹಾಡಿದ ಮಸ್ತ್ ಪಾರ್ಟಿ ಸಾಂಗ್‌ಗೆ ತಂದೆಯೇ ಹೆಜ್ಜೆ ಹಾಕಿರುವುದು ಸಾನ್ವಿಯ ಹುಮ್ಮಸ್ಸನ್ನು ದುಪ್ಪಟ್ಟು ಮಾಡಿದೆ.

"ಮಸ್ತ್ ಮಲೈಕಾ"ಗೆ ಮಸ್ತ್ ವೀವ್ಸ್!

ಕಿಚ್ಚ ಸುದೀಪ್ ನಟಿಸುತ್ತಿರುವ 'ಮಾರ್ಕ್' ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಗಾಯಕಿಯಾಗಿ ಸಾನ್ವಿ ಹೊರ ಹೊಮ್ಮಿದ್ದಾರೆ. ಈ ಹಾಡು ಬಿಡುಗಡೆಯಾಗಿ ಒಂದು ದಿನ ಆಗಿದೆ. ಅಷ್ಟರಲ್ಲೇ ಸಿನಿಮಾ ಹಾಡು ಮಸ್ತ್ ದಾಖಲೆಗಳನ್ನು ಬರೆಯುತ್ತಿದೆ. ಕೇವಲ ಒಂದು ದಿನದಲ್ಲಿಯೇ ಸುಮಾರು 3.1 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ನಾನಿಯ 'ಹಿಟ್ 3'ಗೂ ಹಾಡಿದ್ದ‌ ಸಾನ್ವಿ

ಹಾಗಂತ ಸಾನ್ವಿ ಸುದೀಪ್ ಹಾಡಿರುವ ಮೊದಲ ಹಾಡೇನು ಅಲ್ಲ. ಟಾಲಿವುಡ್ ನಟ ನಾನಿ ನಟಿಸುತ್ತಿರುವ 'ಹಿಟ್ 3' ಸಿನಿಮಾದಲ್ಲಿಯೂ ಹಾಡಿದ್ದವು. ಈ ಸಿನಿಮಾ ಮೂಲಕ ಸಾನ್ವಿ ಸುದೀಪ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 'ಹಿಟ್ 3' ಥೀಮ್ ಸಾಂಗ್ "ಪೊರಟಮೆ 3.0" ಸಾಂಗ್ ಕೂಡ ಸಾನ್ವಿ ಸುದೀಪ್‌ಗೆ ಒಳ್ಳೆಯ ಹೆಸರನ್ನೇ ಕೊಟ್ಟಿತ್ತು.

ಇನ್ನು 'ಮಾರ್ಕ್' ಸಿನಿಮಾವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ಹಾಗೂ 'ಕಿಚ್ಚ ಕ್ರಿಯೇಷನ್' ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಇನ್ನು ಸುದೀಪ್ ಜೊತೆ ದೀಪ್ಷಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುಂರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ , ಯೋಗಿ ಬಾಬು ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+