ಅಣ್ಣಯ್ಯ ಸೀರಿಯಲ್‌ನ ಜಿಮ್ ಸೀನಾಗೆ ವಿಶ್ ಮಾಡಿದ ಕಿಚ್ಚ ಸುದೀಪ್; ವಿಡಿಯೋ & ಪೋಸ್ಟ್‌ ವೈರಲ್!

Annayya Serial: ಅಣ್ಣಯ್ಯ ಸೀರಿಯಲ್ ಕರ್ನಾಟಕದ ಮನೆ ಮಾತಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಸೀರಿಯಲ್‌ಗೆ ಕನ್ನಡಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲಿ ಬರುವ ಜಿಮ್ ಸೀನಾ ಹಾಗೂ ಗುಂಡಮ್ಮ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇಬ್ಬರ ಕಿತ್ತಾಟ - ಮುನಿಸು ಪ್ರೇಕ್ಷಕರಿಗೆ ಆತ್ಮೀಯವೆನಿಸಿದೆ. ಇದರೊಂದಿಗೆ ಜಿಮ್ ಸೀನಾ ಪಾತ್ರದ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ ನಟ ಸುಷ್ಮಿತ್ ಜೈನ್ ಅವರಿಗೆ ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಮೆಸೇಜ್ ಮಾಡಿ ಶುಭಕೋರಿದ್ದಾರೆ. ಈ ವಿಷಯವನ್ನು ಜಿಮ್ ಸೀನಾ / ಸುಷ್ಮಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಜಿಮ್ ಸೀನಾಗೆ ಹೇಳಿದ್ದೇನು ಎನ್ನುವ ಪೂರ್ಣ ಮಾಹಿತಿ ಇಲ್ಲಿದೆ.

ನಟ ಸುಷ್ಮಿತ್ ಅವರು ತಮ್ಮ ಸಹಜ ಅಭಿನಯದಿಂದಲೇ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಮೈಸೂರಿನ ಮೂಲದ ಸುಷ್ಮಿತ್ ಅವರು ಮೆಕ್ಯಾನಿಕ್ ಎಂಜಿನಿಯರಿಂಗ್ ಮಾಡಿದ್ದಾರೆ. ಕಟು ಮಸ್ತದ ದೇಹವನ್ನು ಬೆಳೆಸಿರುವ ಜಿಮ್ ಸೀನಾ ಅವರು ತಮ್ಮ ಸಹಜ ಅಭಿನಯದಿಂದ ಎಲ್ಲರಿಗೂ ಹತ್ತಿರವಾಗಿದ್ದಾರೆ. ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆ ಸುಷ್ಮಿತ್ ಅವರು ಮಾತನಾಡಿದ್ದರು. ಈ ವಿಚಾರವಾಗಿ ಸುದೀಪ್ ಅವರು ಸುಷ್ಮಿತ್ ಅವರಿಗೆ ವಿಶ್ ಮಾಡಿದ್ದಾರೆ.

Kiccha Sudeep wishes Annayya serial actor Jim Seena Sushmit Jain video and post goes viral

ವಿಶ್ವವಾಣಿಯ ಸಂದರ್ಶನದಲ್ಲಿ ಮಾತನಾಡಿದ್ದ ಸುಷ್ಮಿತ್ ಅವರು, ಎಲ್ಲರೂ ಕಿಚ್ಚ ಸುದೀಪ್‌ಗೆ Attitude ಇದೆ ಎನ್ನುತ್ತಾರೆ. ನಾನು ಆ attitudeಗೆ ಫ್ಯಾನ್ಸ್‌. ನಾನು ಕಿಚ್ಚ ಸುದೀಪ್ ಅವರ ಫ್ಯಾನ್‌ ಎಂದಿದ್ದರು. ನಾನೊಬ್ಬ ಕಲಾವಿದನಾದ ಮೇಲೆ ಗೊತ್ತಾಯ್ತು ಅವರಿಗೆ ಯಾಕೆ attitude ಇದೆ ಅಂತಾ. ಏನು ತಪ್ಪೇನು ನಾವು ಇಷ್ಟಪಡುವುದೇ ಈ ಕಾರಣಕ್ಕೆ ಅಲ್ವಾ. ಸುದೀಪ್ ಅವರನ್ನು Attitude ಇಲ್ಲದೆ ನೋಡುವುದಕ್ಕೆ ನಮಗೆ ಇಷ್ಟವೇ ಆಗಲ್ಲ. ಅದು ಗಾಂಚಲಿ ಅಲ್ಲ, ಅವರು ತೂಕದ ಮಾತುಗಳನ್ನು ಹೇಳುತ್ತಾರಲ್ಲ ಅದನ್ನು ನೋಡಿದ್ದೇನೆ ಎಂದು ಜಿಮ್‌ಸೀನಾ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದೀಗ ಕಿಚ್ಚ ಸುದೀಪ್ ಅವರೇ ಜಿಮ್‌ ಸೀನಾ ಅವರಿಗೆ ವಿಶ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ಹೇಳಿದ್ದೇನು ?

"ಸಂದರ್ಶನದಲ್ಲಿ ನೀವು ಮಾತನಾಡಿದ್ದನ್ನು ಕೇಳಿದೆ. ನಿಮ್ಮ ಮಾತುಗಳಿಗೆ ಧನ್ಯವಾದಗಳು. ಬ್ರದರ್ ನಿಮಗೆ ಶುಭಾಶಯಗಳು... ಚಿಯರ್ಸ್" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಈ ವಿಷಯವನ್ನು ಇನ್ಸ್ಟಾಗ್ರಾಮ್‌ನ ಮೂಲಕ ಜಿಮ್ ಸೀನಾ ಅವರು ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ಮೆಸೇಜ್‌ಗೆ ರಿಪ್ಲೈ ಮಾಡಿರುವ ಜಿಮ್‌ ಸೀನಾ ಅವರು, ತುಂಬಾ ಧನ್ಯವಾದಗಳು ಸರ್, ಬೆಳ್ಳಂ ಬೆಳಿಗ್ಗೆ ನಿಮ್ಮ ಸಂದೇಶ ಬಂದಿದ್ದು ನೋಡಿ ಖುಷಿ ಆಯ್ತು. ನಿಮ್ಮ ಮೆಸೇಜ್‌ನಿಂದ ಈ ದಿನ ಮರೆಯಲಾಗದ ದಿನವಾಗಿ ಬದಲಾಗಿದೆ. ನನ್ನ ವೀಡಿಯೊವನ್ನು ವೈರಲ್ ಮಾಡಿದ ಕಿಚ್ಚ ಸುದೀಪ್ ಸರ್ ಅವರ ಪ್ರತಿಯೊಬ್ಬ ಅಭಿಮಾನಿ ಪುಟಕ್ಕೂ ಧನ್ಯವಾದಗಳು
ಎಂದು ಜಿಮ್ ಸೀನಾ ಅವರು ಮೆಸೇಜ್ ಮಾಡಿದ್ದಾರೆ. ಈ ಸಂದೇಶದ ವಿಡಿಯೋ ತುಣುಕನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+