KD ಸಿನಿಮಾದಲ್ಲಿ ಧ್ರುವ ಜೊತೆ ಸುದೀಪ್‌ ನಟಿಸುವುದು ಫಿಕ್ಸ್‌, ಇಲ್ಲಿದೆ ಶೂಟಿಂಗ್‌ ಫೋಟೋಸ್

ನಟ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ, ಪ್ರೇಮ್‌ ನಿರ್ದೇಶನ ಬಹುನಿರೀಕ್ಷಿತ 'ಕೆಡಿ' ಸಿನಿಮಾದಲ್ಲಿ ಕಿಚ್ಚ ಸುದೀಪ್‌ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗಾಗಲೇ ಸಿನಿಮಾ ಪ್ರಮೋಷನ್‌ ಶುರು ಮಾಡಿರುವ ಕೆಡಿ ಚಿತ್ರತಂಡವು ಸುದೀಪ್‌ ಅವರ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಪ್ರೇಮ್‌ ಹಾಗೂ ಸುದೀಪ್‌ ಕೂಡ ಇದಕ್ಕೆ ಸ್ಪಷ್ಟ ಉತ್ತರ ನೀಡದೆ ಜಾರಿಕೊಳ್ಳುತ್ತಿದ್ದರು. ಸದ್ಯದಲ್ಲೇ ಸುದೀಪ್‌ ಅವರ ಭಾಗದ ಚಿತ್ರೀಕರಣ ಶುರುವಾಗಲಿದ್ದು, ಆ ಸಮಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ ಎಂದು ಹೇಳಲಾಗಿತ್ತು. ಕಿಚ್ಚ ಸುದೀಪ್‌ ಕೊನೆಗೂ ಕೆಡಿ ಸಿನಿಮಾದಲ್ಲಿ ನಟಿಸುತ್ತಿರುವುದು ಕನ್ಫರ್ಮ್‌ ಆಗಿದೆ.

ಕೆಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಧಿಕೃತವಾಗಿದೆ. ಇಲ್ಲಿವರೆಗೆ ಈ ಸುದ್ದಿ ವದಂತಿಯಾಗಿತ್ತು. ಆದರೆ ಕೆಡಿ ನಿರ್ದೇಶಕ ಜೋಗಿ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಶೂಟಿಂಗ್‌ ಸೆಟ್‌ನ ಫೋಟೋಗಳನ್ನು ಹಂಚಿಕೊಂಡು ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಕಿಚ್ಚ ಸುದೀಪ್‌, ಧ್ರುವ ಸರ್ಜಾ ಹಾಗೂ ಪ್ರೇಮ್‌ ಇರುವ ಫೋಟೋ ವೈರಲ್‌ ಆಗಿವೆ.

Kiccha Sudeep Role Confirmed In KD Movie Photos Shared By Prem

ಹೈದರಾಬಾದ್‌ನಲ್ಲಿ ನಡೆಯುತ್ತಿರುವ "ಕೆಡಿ" ಸಿನಿಮಾ ಶೂಟಿಂಗ್‌ ಸ್ಥಳದಲ್ಲಿ ಕಿಚ್ಚ ಸುದೀಪ್ ಜೋಗಿ ಪ್ರೇಮ್, ಧ್ರುವ ಸರ್ಜಾ ಹಾಗೂ ನಿರ್ಮಾಪಕ ಸುಪ್ರೀತ್ ಅವರೊಂದಿಗೆ ಇರುವ ಫೋಟೋಗಳನ್ನು ನಿರ್ದೇಶಕ ಪ್ರೇಮ್ ಹಂಚಿಕೊಂಡಿದ್ದಾರೆ. "ಇನ್ನು ಗಾಸಿಪ್‌ಗಳಿಲ್ಲ... ನೀವು ಅಧಿಕೃತವಾಗಿ ನಮ್ಮವರು, ಲವ್ ಯು ಮೈ ಡಾರ್ಲಿಂಗ್ ಕಿಚ್ಚ ಸುದೀಪ್‌ ಎಂದು ಪ್ರೇಮ್‌ ಬರೆದುಕೊಂಡಿದ್ದಾರೆ. ಈ ಮೂಲಕ ಸುದೀಪ್ ಅವರ ಪಾತ್ರವನ್ನು ಪ್ರೇಮ್‌ ದೃಢಪಡಿಸಿದ್ದಾರೆ.

ಚಿತ್ರದಲ್ಲಿ ಧ್ರುವ ಸರ್ಜಾ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ರವಿಚಂದ್ರನ್ ಮುಂತಾದ ಘಟಾನುಘಟಿ ನಟರು ತೆರೆ ಹಂಚಿಕೊಂಡಿದ್ದಾರೆ. ಈಗ ಈ ಪ್ಯಾನ್-ಇಂಡಿಯಾ ಸಿನಿಮಾಗೆ ಕಿಚ್ಚ ಸುದೀಪ್ ಕೂಡ ಸೇರ್ಪಡೆ ಆಗಿದ್ದು, ಚಿತ್ರದ ಮೇಲೆ ಕಿಚ್ಚ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಒಂದೇ ಚಿತ್ರದಲ್ಲಿ ಧ್ರುವ ಹಾಗು ಸುದೀಪ್‌ ನಟಿಸುತ್ತಿರುವುದು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ.

Kiccha Sudeep Role Confirmed In KD Movie Photos Shared By Prem

ಹೈದರಾಬಾದ್‌ನಲ್ಲಿ ಶೂಟಿಂಗ್

ಸುದೀಪ್ ಕಥೆಯಲ್ಲಿ ಅತಿಥಿ ಪಾತ್ರದಲ್ಲಿದ್ದಾರೆ ಎಂಬ ಪ್ರಚಾರ ಈಗ ಅಧಿಕೃತವಾಗಿ ದೃಢವಾಗಿದೆ. ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಚಿತ್ರತಂಡ ಈ ಕುರಿತು ಇನ್ನಷ್ಟು ವಿವರ ಶೀಘ್ರವೇ ಹಂಚಿಕೊಳ್ಳಲಿದೆ. ಸಿನಿಮಾ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಶೂಟಿಂಗ್ ಸ್ಪಾಟ್‍ನ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಸುದೀಪ್‌ ಅವರ ಪಾತ್ರ ಏನು? ವಿಲನ್‌ ಪಾತ್ರದಲ್ಲಿ ನಟಿಸುತ್ತಾರಾ? ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ಅನ್ನೋ ಅಪ್‌ಡೇಟ್‌ ಸದ್ಯದಲ್ಲೇ ತಿಳಿಯಲಿದೆ.

ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳು ಸುದೀಪ್ ಹಾಗೂ ಧ್ರುವ ಸರ್ಜಾ ವಿಭಿನ್ನ ಕಾಂಬೋ ನೋಡಲು ಕಾಯುತ್ತಿದ್ದಾರೆ. ಇದು ಬಿಗ್-ಬಜೆಟ್ ಸಿನಿಮಾವಾಗಿದ್ದು, ಹಲವು ಖ್ಯಾತ ನಟರು ಈ ಸಿನಿಮಾದಲ್ಲಿದ್ದಾರೆ. ಆಕ್ಷನ್-ಥ್ರಿಲ್ಲರ್ ಜಾನರ್ ಇರುವ ಈ ಚಿತ್ರ ಪ್ಯಾನ್-ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಲಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೇ ವರ್ಷ ಈ ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾ ಬರುತ್ತಿದ್ದು, ಟೀಸರ್ ಬಿಡುಗಡೆಯನ್ನು ಚಿತ್ರತಂಡ ಭರ್ಜರಿಯಾಗಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+