ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಕನ್ನಡಿಗರು ಮಾತ್ರವಲ್ಲ ದೇಶದ ಮೂಲೆ ಮೂಲೆ ಇದೀಗ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಅಭಿಮಾನಿಗಳಿಂದ ಆವೃತವಾಗಿದೆ. ಕರ್ನಾಟಕ ರತ್ನ ಅಪ್ಪು, ಕೋಟ್ಯಂತರ ಅಭಿಮಾನಿಗಳನ್ನ ಅಗಲಿ ಹೋಗಿ ಇಂದಿಗೆ 2 ವರ್ಷ ತುಂಬಿದೆ. ಹೀಗಾಗಿಯೇ ಪುನೀತ್ ಅವರ ಸಮಾಧಿ ಬಳಿ, ಜನಸಾಗರವೇ ಹರಿದು ಬಂದು ಪೂಜೆ ಸಲ್ಲಿಸಿದೆ. ದೇಶದ ಗಣ್ಯಾತಿಗಣ್ಯರು ಪುನೀತ್ ಅವರ ನೆನಪು ಮಾಡಿಕೊಂಡಿದ್ದು, ಈಗ ಸಿದ್ದರಾಮಯ್ಯ ಕೂಡ ಅಪ್ಪು ಬಗ್ಗೆ ಮಾತನಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ವರನಟ ಡಾ.ರಾಜ್ ಒಡನಾಟ ಎಲ್ಲರಿಗೂ ಗೊತ್ತಿದೆ. ಇದೇ ಮಾತನ್ನು ಆಗಾಗ ಸಿದ್ದರಾಮಯ್ಯ ಅವರು ಕೂಡ ನೆನಪು ಮಾಡಿಕೊಳ್ಳುತ್ತಾರೆ. ಅದೇ ರೀತಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಸಿದ್ದರಾಮಯ್ಯ ಅವರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದರು. ಅಪ್ಪು ಬಗ್ಗೆ ಸಿದ್ದರಾಮಯ್ಯ ಭಾವುಕರಾಗಿ ಮಾತನಾಡಿದ್ದರು ಕೂಡ. ಇದೀಗ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಸಮಯದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ 'ದೇವತಾ ಮನುಷ್ಯ'ನ ಬಗ್ಗೆ ಮಾತನಾಡಿದ್ದಾರೆ.

Karnataka CM Siddaramaiah Remembered The Karnataka Ratna Puneeth Rajkumar

ನೊಂದ ಜೀವಗಳಿಗೆ ಸದ್ದಿಲ್ಲದ ನೆರವು

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಟ್ವೀಟ್ ಒಂದನ್ನ ಪೋಸ್ಟ್ ಮಾಡಿದ್ದು, 'ಸರ್ವರನ್ನೂ ಪ್ರೀತಿ, ಗೌರವದಿಂದ ಕಾಣುತ್ತಿದ್ದ, ನೊಂದ ಜೀವಗಳಿಗೆ ಸದ್ದಿಲ್ಲದ ನೆರವಿಗೆ ನಿಲ್ಲುತ್ತಿದ್ದ ನಿಷ್ಕಲ್ಮಶ ಹೃದಯದ ಪುನೀತ್ ರಾಜ್‍ಕುಮಾರ್ ನಮ್ಮಿಂದ ಮರೆಯಾದರೂ, ಅವರ ಆದರ್ಶಪ್ರಾಯವಾದ ವ್ಯಕ್ತಿತ್ವ ನಮ್ಮ ನಡುವೆ ಶಾಶ್ವತ. ನಮ್ಮೆಲ್ಲರ ಪ್ರೀತಿಯ ಅಪ್ಪುವಿನ ಪುಣ್ಯಸ್ಮರಣೆಯಂದು ಅವರನ್ನು ಗೌರವದಿಂದ ಸ್ಮರಿಸೋಣ.' ಎಂದು ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾಡಿದ ಟ್ವೀಟ್ ಈಗ ವೈರಲ್ ಆಗುತ್ತಿದೆ.

ಅಪ್ಪು ನೆನಪು ಅಜರಾಮರ...

ನಮ್ಮನ್ನು ಅಪ್ಪು ಅಗಲಿ ಎರಡು ವರ್ಷವೇ ಉರುಳಿದ್ರೂ ಆ ನೋವು ಮಾತ್ರ ಮರೆಯಾಗುತ್ತಿಲ್ಲ. ಹೀಗಾಗಿ ಅಭಿಮಾನಿಗಳು ಅಪ್ಪು ಸಮಾಧಿ ಎದುರಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಾಡುತ್ತಿದ್ದ ಸಮಾಜ ಮುಖಿ ಕೆಲಸ ನೆನೆಯುತ್ತಿದ್ದಾರೆ. ಅಲ್ಲದೆ ಅಪ್ಪು ಕೈಯಿಂದ ಸಹಾಯ ಪಡೆದವರಿಗೆ, ಅವರು ಇಲ್ಲವೆಂಬ ನೋವು ಸಾಕಷ್ಟು ಕಾಡುತ್ತಿದೆ. ಹಾಗೇ ದೂರದ ಊರುಗಳಿಂದ ಇಂದು ಭಾರಿ ಪ್ರಮಾಣದಲ್ಲಿ ಅಭಿಮಾನಿಗಳು ಅಪ್ಪು ಅವರ ಸಮಾಧಿಗೆ ಭೇಟಿ ನೀಡಿ ನಮಿಸಿದ್ದಾರೆ. ಈ ಮೂಲಕ ಶತಮಾನ ಕಳೆದರೂ ಅಪ್ಪು ನೆನಪು ಅಜರಾಮರ ಎಂಬುದನ್ನ ಕನ್ನಡಿಗರು ಜಗತ್ತಿಗೇ ಸಾರಿ ಸಾರಿ ಹೇಳುತ್ತಿದ್ದಾರೆ.

Karnataka CM Siddaramaiah Remembered The Karnataka Ratna Puneeth Rajkumar

ಒಟ್ನಲ್ಲಿ ಆಧುನಿಕ ಜಗತ್ತಿಗೆ ಅಪ್ಪು ಅವರ ಗುಣಗಳೇ ಆದರ್ಶವಾಗಿವೆ. ಅದರಲ್ಲೂ ಕನ್ನಡ ನಾಡು ಇಂತಹ ಒಬ್ಬ ಮಹಾನ್ ನಟನ & ಮಹಾನ್ ಸಮಾಜ ಸೇವಕನನ್ನೂ ಆಧುನಿಕ ಕಾಲಘಟ್ಟದಲ್ಲಿ ಪಡೆದಿದ್ದು ಧನ್ಯಭಾವ ಮೂಡಿಸಿದೆ. ಕೋಟ್ಯಂತರ ಕನ್ನಡಿಗರು ಕೂಡ ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದು, ಕರ್ನಾಟಕದಲ್ಲಿ ಮಾತ್ರವಲ್ಲ ನೆರೆ ರಾಜ್ಯಗಳಲ್ಲಿ ಕೂಡ ಅಪ್ಪು ಅವರನ್ನು ಅಭಿಮಾನಿಗಳು ಆರಾಧಿಸುತ್ತಿದ್ದಾರೆ. ಜಾತ್ರೆ, ಹಬ್ಬ, ಸಂಭ್ರಮದಲ್ಲಿ ಈ ರೀತಿ ಅಪ್ಪು ಅವರು ಹಾಜರಾಗದೆ ಶುಭಕಾರ್ಯ ನಡೆಯುತ್ತಲೇ ಇಲ್ಲ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+