Karna Serial: ಕರ್ಣ ಸೀರಿಯಲ್ ರೋಚಕ ತಿರುವು: ನಿತ್ಯಾ & ಕರ್ಣ ಮದುವೆ, ನಿಧಿ ಅಕ್ಕ ಪ್ರೆಗ್ನೆಂಟ್!
Karna Serial: ಕರ್ಣ ಸೀರಿಯಲ್‌ನಲ್ಲಿ ಪ್ರೇಕ್ಷಕರು ಏನು ಆಗಬಾರದು ಎಂದು ಬೇಡಿಕೊಳ್ಳುತ್ತಿದ್ದರೋ ಅದೇ ಆಗಿದೆ. 'ಕರ್ಣ' ಧಾರಾವಾಹಿಯಲ್ಲಿ ಮಹತ್ವದ ತಿರುವೊಂದನ್ನು ಪಡೆದುಕೊಂಡಿದ್ದು, ಕರ್ಣ ಹಾಗೂ ನಿತ್ಯಾ ವಿವಾಹವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಗೂ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಟಿಆರ್‌ಪಿ ವಿಚಾರದಲ್ಲಿ ಕಿಂಗ್ ಆಗಿರುವ ಕರ್ಣ ಸೀರಿಯಲ್‌ನಲ್ಲಿ ಮಹತ್ವದ ತಿರುವು ಸಿಕ್ಕಿದೆ.
ಕರ್ಣ ಸೀರಿಯಲ್ ನೋಡುತ್ತಿದ್ದ ಹಲವು ಪ್ರೇಕ್ಷಕರಿಗೆ ಸೀರಿಯಲ್ ಈ ರೀತಿಯ ತಿರುವೊಂದನ್ನು ಪಡೆದುಕೊಳ್ಳಬಹುದು ಎನ್ನುವ ಅನುಮಾನ ಹಲವು ದಿನಗಳಿಂದ ಇತ್ತು. ಇನ್ನು ನಿಧಿ ಅವರ ಅಭಿಮಾನಿಗಳು ಈ ರೀತಿ ಆಗಬಾರದು. ಕರ್ಣ ಮತ್ತು ನಿಧಿ ಒಂದಾಗಬೇಕು. ಇವರಿಬ್ಬರ ಪ್ರೀತಿಗೆ ಜಯವಾಗಬೇಕು ಎಂದು ಬಯಸುತ್ತಿದ್ದರು. ಆದರೆ ಅನಿರೀಕ್ಷಿತ ಬದಲಾವಣೆಯಲ್ಲಿ ಕರ್ಣ ಸೀರಿಯಲ್ ಪ್ರೇಕ್ಷಕರಿಗೆ ಶಾಕ್ ಎದುರಾಗಿದೆ. "ವಿಧಿಯ ಕೈವಾಡದಲ್ಲಿ ಮೋಸ ಹೋದಳು ನಿಧಿ; ನಿತ್ಯಾ ಕೊರಳಿಗೆ ಬಿದ್ದಿದೆ ಕರ್ಣ ಕಟ್ಟಿದ ತಾಳಿ!" ಎನ್ನುವ ಸಾಲುಗಳೊಂದಿಗೆ ಪ್ರೋಮೋ ಹಂಚಿಕೊಳ್ಳಲಾಗಿದೆ.

ಈ ಸೀರಿಯಲ್‌ನಲ್ಲಿ ಕರ್ಣ ಮತ್ತು ನಿಧಿ ಅವರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಮುದ್ದಾದ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು ಈ ರೀತಿ ಇರುವಾಗಲೇ ಕರ್ಣದಲ್ಲಿ ಕರ್ಣ ಮತ್ತು ನಿತ್ಯಾ ವಿವಾಹವಾಗುತ್ತಿರುವಂತೆ ಪ್ರೋಮೋದಲ್ಲಿ ತೋರಿಸಲಾಗಿದೆ. ಈ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಳ್ಳಲಾಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮದುವೆಯನ್ನು ದೃಶ್ಯಗಳನ್ನು ನೋಡಿ ನಿಧಿ ಕಣ್ಣೀರಾಗಿರುವುದು ಪ್ರೋಮೋದಲ್ಲಿ ಇದೆ. ಇನ್ನು ಈ ಪ್ರೋಮೋದಲ್ಲಿ ಮತ್ತೊಂದು ಶಾಕಿಂಗ್ ಸಂಗತಿಯೂ ಇದೆ. ಅದು ನಿತ್ಯ ಗರ್ಭಿಣಿ ಆಗಿದ್ದಾರೆ ಎಂಬರ್ಥದಲ್ಲಿ ಇದೆ. ಇದನ್ನು ನೋಡಿ ಪ್ರೇಕ್ಷಕರು ಶಾಕ್ ಆಗಿದ್ದಾರೆ.
ವೀಕ್ಷಕರು ಹೇಳಿದ್ದು ನಿಜ ಆಗಿದೆ. ಮೊದ್ಲೇ ಶಾಸ್ತ್ರ ಹೇಳಿದ್ರು ನಮ್ ವೀಕ್ಷಕರು ಎಂದು ಸಹನಾ ಎನ್ನುವವರು ಕಮೆಂಟ್ ಮಾಡಿದ್ದಾರೆ. ಆದರೆ ಹಲವು ಪ್ರೇಕ್ಷಕರು ಈ ಪ್ರೋಮೋಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದು ಹಲವರು ಈ ಬದಲಾವಣೆ ಬೇಡವಾಗಿತ್ತು. ಕರ್ಣ ಮತ್ತು ನಿಧಿ ಜೋಡಿ ಸೊಗಸಾಗಿತ್ತು. ಇವರಿಬ್ಬರನ್ನು ಒಂದು ಮಾಡಿ ಎಂದು ಕೇಳುತ್ತಿದ್ದಾರೆ. ನಿತ್ಯಾಗೆ ಈಗಾಗಲೇ ಮದುವೆ ಫಿಕ್ಸ್ ಆಗಿತ್ತು. ನಿಶ್ಚಿತಾರ್ಥ ಸಹ ಆಗಿತ್ತು ಇನ್ನೇನು ಕೆಲವೇ ದಿನದಲ್ಲಿ ತೇಜಸ್ ಅವರೊಂದಿಗೆ ಮದುವೆ ಸಹ ಆಗಬೇಕಿತ್ತು. ಆದರೆ ಈ ವಿವಾಹ ಮುರಿದು ಬೀಳುವಂತೆ ಇದೆ. ಮುಂದಿನ ದಿನಗಳಲ್ಲಿ ಸೀರಿಯಲ್ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.












Click it and Unblock the Notifications