Karna Serial: ಕೊನೆಗೂ ಸತ್ಯಗಳ ಅನಾವರಣ ಒಂದಾದ ಕರ್ಣ - ನಿಧಿ ಜೋಡಿ, ನಿತ್ಯಾ ನಿರ್ಧಾರಕ್ಕೆ ಪ್ರೇಕ್ಷಕ ಶಾಕ್

Karna Serial: ಕನ್ನಡಿಗರ ಮೆಚ್ಚುಗೆಯ ಸೀರಿಯಲ್‌ಗಳಲ್ಲಿ ಒಂದಾಗಿರುವ ಕರ್ಣ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಕರ್ಣ ಸೀರಿಯಲ್‌ನಲ್ಲಿ ಕೊನೆಗೂ ಕರ್ಣ - ನಿಧಿ ಒಂದಾಗುವ ಸನ್ನಿವೇಶ ಬಂದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ನಿತ್ಯಾ ಮುಂದೆ ನಿಂತು ಎಲ್ಲರ ಮುಂದೆ ಎಲ್ಲಾ ಸತ್ಯವನ್ನು ಹೇಳಿದ್ದಾರೆ. ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಪ್ರೋಮೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ನಿಧಿಗೆ ಜೋಡಿಗೆಯಾಗಿ ಈಚೆಗೆ ಅರ್ಜುನ್ ಪಾತ್ರವನ್ನು ಪರಿಚಯಿಸಲಾಗಿತ್ತು. ಇದೀಗ ಅರ್ಜುನ್ - ನಿಧಿ ಮದುವೆ ಆಗುತ್ತಿರುವಂತಹ ಸನ್ನಿವೇಶವನ್ನು ತೋರಿಸಲಾಗಿದೆ. ಆದರೆ ಇನ್ನೇನು ಮದುವೆ ಆಗಬೇಕು ಎನ್ನುವಾಗ ಅರ್ಜುನ್‌ನನ್ನು ನಿತ್ಯಾ ತಡೆದಿದ್ದಾಳೆ. ಅಲ್ಲದೆ ರೋಚಕ ತಿರುವನ್ನು ಸೀರಿಯಲ್‌ನಲ್ಲಿ ತೋರಿಸಲಾಗಿದೆ.

Karna Serial

ಕರ್ಣ ಸೀರಿಯಲ್ ರೋಚಕ ಹಾಗೂ ಹೊಸ ತಿರುವು ಪಡೆದುಕೊಂಡಿದೆ. ಕರ್ಣ - ನಿಧಿ ಮೊದಲಿನಿಂದಲೂ ಪ್ರೇಮಿಸುತ್ತಿದ್ದರು. ಕರ್ಣನನ್ನು ಮದುವೆ ಆಗಬೇಕು ಎನ್ನುವುದು ನಿಧಿಯ ಬಹುದಿನಗಳ ಕನಸಾಗಿತ್ತು. ಆದರೆ, ರೋಚಕ ತಿರುವಿನಲ್ಲಿ ಕರ್ಣ ಅನಿವಾರ್ಯವಾಗಿ ನಿತ್ಯಾ ಕೈಹಿಡಿಯಬೇಕಾಯಿತು. ನಿತ್ಯಾ ಮತ್ತು ಕರ್ಣ ಇಬ್ಬರು ಮಾತನಾಡಿಕೊಂಡೇ ಮದುವೆ ನಾಟಕ ಮಾಡಿದ್ದರು. ಆದರೆ ಈ ವಿಷಯ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪವನ್ನು ಪಡೆದುಕೊಂಡಿತ್ತು. ನಿತ್ಯಾ ಗರ್ಭಿಣಿ ಅಂತ ತಿಳಿದ ಮೇಲೆ ಇಬ್ಬರು ದೂರವಾಗುವುದು ಇನ್ನಷ್ಟು ಕಷ್ಟವಾಯಿತು. ಇದೀಗ ನಿತ್ಯಾಳೇ ಎಲ್ಲರ ಮುಂದೆಯೂ ಸತ್ಯವನ್ನು ಬಹಿರಂಗಪಡಿಸಿದ್ದಾಳೆ. ಕೊನೆಗೆ ಕರ್ಣ - ನಿಧಿ ಮದುವೆ ಆಗುತ್ತಿರುವಂತೆ ತೋರಿಸಲಾಗಿದೆ.

ರೋಚಕ ತಿರುವು ಪಡೆದುಕೊಂಡ ಕರ್ಣ

ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಕರ್ಣ ಇದೀಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಕರ್ಣ - ನಿಧಿ ಒಂದಾಗಬೇಕು ಎನ್ನುವುದು ಪ್ರೇಕ್ಷಕರು ಹಲವು ದಿನಗಳ ಬೇಡಿಕೆಯಾಗಿತ್ತು. ಇದೀಗ ಆ ಕನಸು ನನಸಾಗುತ್ತಿದೆ. ನಿಧಿ - ಅರ್ಜುನ್ ಮದುವೆಯಾಗುವ ಸಂದರ್ಭ ಎದುರಾಗಿದ್ದು, ನಿಧಿ - ಅರ್ಜುನ್ ಮದುವೆಯನ್ನು ನಿತ್ಯಾ ನಿಲ್ಲಿಸಿದ್ದಾಳೆ. ಮದುವೆಗೆ ರೆಡಿ ಆಗುತ್ತಿರುವ ನಿಧಿಯನ್ನು ನೋಡಿ ನಿತ್ಯಾ ನನ್ನ ತಂಗಿ ಎಷ್ಟು ಚಂದ ಕಾಣಿಸುತ್ತಿದ್ದಾಳೆ. ಅವಳಿಗೆ ಜಗತ್ತಿನಲ್ಲಿರುವ ಎಲ್ಲ ಖುಷಿಯೂ ಸಿಗಲಿ ಅಂತ ನಿತ್ಯಾ ಹೇಳಿದ್ದಾಳೆ. ಇದಕ್ಕೆ ಅಕ್ಕ ನೀನು ಖುಷಿಯಾಗಿದ್ದರೆ ನನಗೆ ಅದು ಸಾಕು ಕಣೆ ಅಂತ ನಿಧಿ ಹೇಳಿರುವುದು ಇದೆ. ಮುಂದೆ ಕರ್ಣ ಮಧುಮಗನಂತೆ ರೆಡಿ ಆಗುತ್ತಿರುವುದನ್ನು ತೋರಿಸಿದ್ದು, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಲ್ವಾ ಅಂತ ಕೇಳಿರೋದು ಇದೆ.

ಹಸೆಮಣೆಯ ಮೇಲೆ ಅರ್ಜುನ್ - ನಿಧಿ ಮದುವೆ ತಯಾರಿ ನಡೆದಿದ್ದು, ಇನ್ನೇನು ನಿಧಿಗೆ ಅರ್ಜುನ್ ತಾಳಿ ಕಟ್ಟಬೇಕು ಎನ್ನುವಾಗ ನಿಧಿ ಮದುವೆ ನಿಲ್ಲಿಸಿದ್ದಾಳೆ. ನಿಧಿಯನ್ನ ಮದುವೆಯಾಗುವ ಹುಡುಗ ಕರ್ಣ ಎಂದು ಕರೆದುಕೊಂಡು ಬಂದಿದ್ದಾರೆ. ಕರ್ಣ ನಿನ್ನ ಗಂಡ ಅಂತ ಅಜ್ಜಿ ಹೇಳಿದ್ದು, ಅದಕ್ಕೆ ನಿತ್ಯಾ - ಕರ್ಣ ನನ್ನ ಗಂಡ ಅಲ್ಲ ಶಾಂತಿ ನನ್ನ ಕುತ್ತಿಗೆಯಲ್ಲಿರುವ ತಾಳಿನೂ ಅವರು ಕಟ್ಟಿದ್ದಲ್ಲ ಎಂದು ತಾಳಿಯನ್ನು ಕಿತ್ತು ಹಾಕಿರುವಂತೆ ತೋರಿಸಲಾಗಿದೆ.

ಕರ್ಣ - ನಿಧಿ ತುಂಬಾ ದಿನಗಳಿಂದ ಪ್ರೀತಿಸುತ್ತಿದ್ದಾರೆ ಅಂತ ನಿತ್ಯಾ ಹೇಳಿರೋದು ಇದೆ. ನನಗೋಸ್ಕರ ನನ್ನ ಜೊತೆ ಮದುವೆ ಆಗುವ ನಾಟಕವಾಡಿದ್ದಾರೆ. ಮತ್ತೆ ಮಗು ಅಂತ ಕೇಳಿದಾಗ, ಅದು ತೇಜಸ್‌ದು ಅಂತಲೂ ನಿತ್ಯಾ ಹೇಳಿರೋದು ಇದೆ. ಇದೇ ಸತ್ಯ - ಇವರಿಬ್ಬರು ಒಂದಾಗಬೇಕು, ನನ್ನ ತಂಗಿ ಜೀವನ ಹಾಳಾಗಬಾರದು ಅಂತ ನಿಧಿ - ಕರ್ಣನನ್ನು ನಿತ್ಯಾ ಒಂದು ಮಾಡಿರುವಂತೆ ತೋರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+