ಕಾಂತಾರ To ಕಿರಿಕ್ ಪಾರ್ಟಿ: ಲೋ ಬಜೆಟ್ ಹಾಕಿದ್ರೂ ನೂರಾರು ಕೋಟಿ ಗಳಿಸಿದ ಸಿನಿಮಾಗಳ ಪಟ್ಟಿ ಇಲ್ಲಿದೆ!
'ಕಾಂತಾರ' ಸಿನಿಮಾ ಕನ್ನಡ ಇಂಡಸ್ಟ್ರಿ ಹೆಸರನ್ನು ಹಾಗೂ ಕನ್ನಡಿಗರ ಹೆಸರನ್ನ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಕನ್ನಡಿಗರ ಪಾಲಿಗೆ ಕಾಂತಾರ ನಿಜಕ್ಕೂ ಒಂದು ರೀತಿ ಚಿನ್ನವೇ ಇದ್ದಂತೆ. ಕೇವಲ 15 ರಿಂದ 20 ಕೋಟಿ ರೂಪಾಯಿ ಬಂಡವಾಳದಲ್ಲಿ ಸಿದ್ಧವಾದ 'ಕಾಂತಾರ' ಸಿನಿಮಾ 400 ರಿಂದ 450 ಕೋಟಿ ರೂಪಾಯಿ ಗಳಿಸಿತ್ತು. ಹಾಗಾದರೆ ಕಾಂತಾರ ರೀತಿ ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಹಣ ಗಳಿಸಿದ ಸಿನಿಮಾ ಯಾವುವು? ಇಂಚಿಂಚು ಮಾಹಿತಿ ತಿಳಿಯೋಣ ಬನ್ನಿ.
ಕರಾವಳಿ ಪ್ರತಿಭೆ ಕನ್ನಡಿಗ ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್. ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಹೋಗಿ ನೋಡ ನೋಡುತ್ತಲೇ ಎತ್ತರಕ್ಕೆ ಬೆಳೆದು ನಿಂತಿದ್ದ ನಟನಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ರಿಷಬ್ ಶೆಟ್ಟಿ ತಮ್ಮ ಡಿಫರೆಂಟ್ ಸ್ಕಿಲ್ ಮೂಲಕ, ಸಿನಿಮಾ ಮಾಡುತ್ತಾರೆ. ಇಂತಿಪ್ಪ ನಟ ರಿಷಬ್ ಶೆಟ್ಟಿ ಕಾಂತಾರ ಮೂಲಕ ದೊಡ್ಡ ಸಾಧನೆ ಮಾಡಿ, ಬ್ಲಾಕ್ ಬಸ್ಟರ್ ಅಲ್ಲ ಇಂಡಸ್ಟ್ರಿ ಹಿಟ್ ಸಿನಿಮಾ ನೀಡಿದರು. ಇದೇ ರೀತಿ ನೂರಾರು ಕೋಟಿ ರೂಪಾಯಿನ ಗಳಿಸಿದ, ಕಡಿಮೆ ಬಜೆಟ್ ಸಿನಿಮಾಗಳ ಪಟ್ಟಿ ಇಲ್ಲಿದೆ ಮುಂದೆ ಓದಿ.

777 ಚಾರ್ಲಿ
ನಿರ್ದೇಶಕ: ಕಿರಣ್ ರಾಜ್
ಪಾತ್ರವರ್ಗ: ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ
ಓಟಿಟಿ: ಜಿಯೋ ಸಿನಿಮಾ
ಕನ್ನಡ ಸಿನಿಮಾ ರಂಗದಲ್ಲಿ '777 ಚಾರ್ಲಿ' ಸಿನಿಮಾ ದೊಡ್ಡ ಸದ್ದು ಮಾಡಿತ್ತು. ರಕ್ಷಿತ್ ಶೆಟ್ಟಿ ಸಿನಿಮಾ ಕರಿಯರ್‌ಗೆ 777 ಚಾರ್ಲಿ ದೊಡ್ಡ ತಿರುವು ನೀಡಿತ್ತು. ಈ ಸಿನಿಮಾ ಕೇವಲ 20 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ ಈ ಸಿನಿಮಾ 71 ಕೋಟಿ ರೂಪಾಯಿನ ಗಳಿಸಿತ್ತು. 2022 ರಲ್ಲಿ ಈ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು.
ಕಾಂತಾರ
ನಿರ್ದೇಶಕ: ರಿಷಬ್ ಶೆಟ್ಟಿ
ಪಾತ್ರವರ್ಗ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್ ಕುಮಾರ್, ಅಚ್ಯುತ್ ಕುಮಾರ್
ಓಟಿಟಿ: ಅಮೆಜಾನ್ ಪ್ರೈಮ್ / ನೆಟ್‌ಫ್ಲಿಕ್ಸ್
ಕೇವಲ 15 ರಿಂದ 20 ಕೋಟಿ ರೂಪಾಯಿ ಬಂಡವಾಳದಲ್ಲಿ ಸಿದ್ಧವಾದ 'ಕಾಂತಾರ' ಸಿನಿಮಾ 400 ರಿಂದ 450 ಕೋಟಿ ರೂಪಾಯಿ ಗಳಿಸಿತ್ತು. ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ, ದೊಡ್ಡ ಹೆಸರು ಮಾಡಿ ಇಂಡಸ್ಟ್ರಿ ಹಿಟ್ ಕೂಡ ಆಗಿತ್ತು. 2022ರಲ್ಲಿ ಕಾಂತಾರ ಸಿನಿಮಾ, ಅದ್ಧೂರಿಯಾಗಿ ರಿಲೀಸ್ ಆಗಿ ದಾಖಲೆ ನಿರ್ಮಿಸಿತ್ತು.
ಕಿರಿಕ್ ಪಾರ್ಟಿ
ನಿರ್ದೇಶಕ: ರಿಷಬ್ ಶೆಟ್ಟಿ
ಪಾತ್ರವರ್ಗ: ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ
ಓಟಿಟಿ: ಜಿಯೋ ಸಿನಿಮಾ
2016ರಲ್ಲಿ ರಿಲೀಸ್ ಆಗಿದ್ದ ಕಿರಿಕ್ ಪಾರ್ಟಿ ಕೂಡ ದೊಡ್ಡ ಸದ್ದು ಮಾಡಿತ್ತು. ರಿಷಬ್ ಶೆಟ್ಟಿ ಈ ಸಿನಿಮಾ ಡೈರೆಕ್ಷನ್ ಮಾಡಿದ್ದರು. ಹಾಗೇ ರಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದರು. ಇನ್ನು ರಶ್ಮಿಕಾ ಮಂದಣ್ಣಗೆ ಕೂಡ ಈ ಸಿನಿಮಾ ಹೊಸ ಲೈಫ್ ನೀಡಿತ್ತು. ಈ ಸಿನಿಮಾ ಮೂಲಕ ರಶ್ಮಿಕಾ ಹಾಗೂ ಸಂಯುಕ್ತ ಹೆಗಡೆ ಸಿನಿಮಾ ಇಂಡಸ್ಟ್ರಿಗೆ ಬಂದರು.

ರಂಗಿತರಂಗ
ನಿರ್ದೇಶಕ: ಅನೂಪ್ ಭಂಡಾರಿ
ಪಾತ್ರವರ್ಗ: ನಿರೂಪ್ ಭಂಡಾರಿ, ರಾಧಿಕಾ ನಾರಾಯಣ್, ಸಾಯಿ ಕುಮಾರ್
ಓಟಿಟಿ: MX ಪ್ಲೇಯರ್
2015ರ ಜುಲೈ 3ರಂದು ರಿಲೀಸ್ ಆಗಿದ್ದ 'ರಂಗಿತರಂಗ' ಸಿನಿಮಾ ದೊಡ್ಡ ಸಾಧನೆಯನ್ನು ಮಾಡಿತ್ತು. 1.5 ಕೋಟಿ ರೂಪಾಯಿ ಬಜೆಟ್‌ನಲ್ಲಿ ರಿಲೀಸ್ ಆಗಿದ್ದ 'ರಂಗಿತರಂಗ' ಸಿನಿಮಾ ಒಟ್ಟಾರೆ 43 ಕೋಟಿ ರೂಪಾಯಿ ವಸೂಲಿ ಮಾಡಿತ್ತು.
ಎವೆರಿಒನ್ ಈಸ್ ಎ ಹೀರೋ
ನಿರ್ದೇಶಕ: ಜೂಡ್ ಆಂಥನಿ ಜೋಸೆಫ್
ಪಾತ್ರವರ್ಗ: ಟೊವಿನೋ ಥಾಮಸ್, ಆಸಿಫ್ ಅಲಿ, ಕುಂಚಕೋ ಬೋಬನ್, ಅಪರ್ಣಾ ಬಾಲಮುರಳಿ, ವಿನೀತ್ ಶ್ರೀನಿವಾಸನ್
ಓಟಿಟಿ: ಸೋನಿ ಲಿವ್
ಈ ಸಿನಿಮಾ ಮಿಸ್ ಮಾಡದೆ ನೋಡಬೇಕಾದ ಸಿನಿಮಾಗಳ ಪೈಕಿ ಒಂದು, 2018 ರ ಕೇರಳದ ಭಯಾನಕ ಪ್ರವಾಹ ಆಧರಿಸಿ ತೆಗೆದ ಸಿನಿಮಾ ಇದಾಗಿತ್ತು. ಅಂದಹಾಗೆ ಎವೆರಿಒನ್ ಈಸ್ ಎ ಹೀರೋ ಸಿನಿಮಾವನ್ನ, ಕೇವಲ 26 ಕೋಟಿ ರೂಪಾಯಿ ಬಂಡವಾಳದಲ್ಲಿ ತಯಾರಿಸಿದ್ದರು. ಆದರೆ ಬರೋಬ್ಬರಿ ಬಾಕ್ಸ್ ಆಫೀಸ್‌ನಲ್ಲಿ 177 ಕೋಟಿ ರೂಪಾಯಿ ವಸೂಲಿ ಮಾಡಿತ್ತು ಚಿತ್ರ.
ಕಾರ್ತಿಕೇಯ 2
ನಿರ್ದೇಶಕ: ಚಂದೂ ಮೊಂಡೇಟಿ
ಪಾತ್ರವರ್ಗ: ನಿಖಿಲ್ ಸಿದ್ಧಾರ್ಥ, ಅನುಪಮಾ ಪರಮೇಶ್ವರನ್, ಅನುಪಮ್ ಖೇರ್
ಓಟಿಟಿ: ಜೀ5
ಕೇವಲ 15 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ ಈ ಸಿನಿಮಾ, ಬಾಕ್ಸ್ ಆಫಿಸ್‌ನ ಅಖಾಡದಲ್ಲಿ ಜಗತ್ತಿನಾದ್ಯಂತ ಸುಮಾರು 100 ಕೋಟಿ ರೂಪಾಯಿ ವಸೂಲಿ ಮಾಡಿತ್ತು. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿತ್ತು.
ಕನ್ನಡ ಸಿನಿಮಾಗಳ ಗತ್ತು ಹೆಚ್ಚು!
ಕಾಂತಾರ ಮೂಲಕ ಕಮಾಲ್ ಮಾಡಿರುವ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅದ್ರಲ್ಲೂ ಕಾಂತಾರ ಮುಂದುವರಿದ ಭಾಗ ಭಾರಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಸಾಗಿದೆ. ಹೀಗಾಗಿ ಕನ್ನಡಿಗರ ಸಿನಿಮಾಗಾಗಿ ಇಡೀ ದೇಶ ಮತ್ತು ಇಡೀ ಜಗತ್ತೇ ಕಾಯುತ್ತಿದೆ. ಕೆಜಿಎಫ್ & ಕಾಂತಾರ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯ ಖದರ್‌ನ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿ ಗತ್ತನ್ನೇ ಬದಲಿಸಿವೆ. ಮುಂದಿನ ಕೆಲ ವರ್ಷ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿ ಜಾಗತಿಕವಾಗಿ ಮಿಂಚುವುದು ಗ್ಯಾರಂಟಿ ಎಂಬ ಮಾತು ಫ್ಯಾನ್ಸ್ ಬಾಯಿಂದ ಕೇಳಿಬರುತ್ತಿದೆ.












Click it and Unblock the Notifications