ಮಲಗೋಕೆ ಜಾಗ ಸಿಕ್ರೆ ಸಾಕು ಅಂದ್ರು ನಟಿ ಸಪ್ತಮಿ ಗೌಡ: ಖ್ಯಾತ ನಟ ಹೀಗಂದಿದ್ದೇಕೆ?
ʼಕಾಂತಾರʼ ಬೆಡಗಿ ಸಪ್ತಮಿ ಗೌಡ ಅವರು ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆ ಮೊದಲಿಗೆ ನಟಿಸಿದರೂ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಆದರೆ ಕಾಂತಾರ ಸಿನಿಮಾ ಬಳಿಕ ಅವರು ಲೀಲಾ ಎಂದೇ ಫುಲ್ ಫೇಮಸ್ ಆಗಿದ್ದಾರೆ. ಬಾಲಿವುಡ್, ಟಾಲಿವುಡ್ ಅಂಗಳಕ್ಕೂ ಕಾಲಿಟ್ಟಿರುವ ಅವರು ಕನ್ನಡದಲ್ಲಿ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟರೊಬ್ಬರಿಗೆ ಸಪ್ತಮಿ ಗೌಡ ಅವರು ಮಲಗೋಕೆ ಜಾಗ ಸಿಕ್ಕರೆ ಸಾಕು ಎಂದು ಹೇಳಿದ್ದರಂತೆ. ಏನಿದು ವಿಚಾರ? ಸಪ್ತಮಿ ಗೌಡ ಹೀಗಂದಿದ್ದೇಕೆ? ಆ ನಟ ಯಾರು? ಎಂಬ ವಿವರ ಇಲ್ಲಿದೆ.
ಕಾಂತಾರ ಬಳಿಕ ಸಪ್ತಮಿ ಗೌಡ ಅವರು ಯುವ ರಾಜ್‌ಕುಮಾರ್ ನಟನೆಯ "ಯುವ" ಸಿನಿಮಾದಲ್ಲಿ ಮಿಂಚಿದ್ದರು. ಇದಾದ ಬಳಿಕ ಅವರು ನಟ ಸತೀಶ್ ನೀನಾಸಂ ಅವರೊಂದಿಗೆ "ರೈಸ್ ಆಫ್ ಅಶೋಕ" ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್ ಕೂಡ ಮುಗಿದು, ಡಬ್ಬಿಂಗ್ ಪೂರ್ಣಗೊಳಿಸಿದೆ. ಈ ಸಿನಿಮಾ ಶೂಟಿಂಗ್ ವೇಳೆ ನಟಿ ಸಪ್ತಮಿ ಗೌಡ ಅವರು ಮಲಗೋಕೆ ಜಾಗ ಸಿಕ್ಕರೆ ಸಾಕು ಎಂದು ನಟನಿಗೆ ಹೇಳಿದ್ದರಂತೆ.

ಈ ವಿಚಾರವನ್ನು ಖುದ್ದು ಈ ಸಿನಿಮಾ ನಟ ನೀನಾಸಂ ಸತೀಶ್ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. 'ಈ ಸಿನಿಮಾಗಾಗಿ ತುಂಬಾ ಕಷ್ಟಪಟ್ಟಿದ್ದೀವಿ. ಬೆಳಿಗ್ಗೆ 6 ಗಂಟೆಗೆಲ್ಲ ಶೂಟಿಂಗ್ ಶುರು ಮಾಡ್ತಿದ್ವಿ. ಒಮ್ಮೆ ಇಡೀ ದಿನ ಶೂಟಿಂಗ್ ಮಾಡಿದ್ವಿ. ಇದಕ್ಕೆ ಮೇಜರ್ ಆಗಿ ನಟಿ ಸಪ್ತಮಿ ಗೌಡ ಅವರ ಸಹಕಾರ ಬೇಕಾಗಿತ್ತು. ಸಪ್ತಮಿ ಅವರ ಸಹಕಾರ ಇಲ್ಲದೇ ಇದ್ದಿದ್ರೆ ನಾನು ಸಕಾಲಕ್ಕೆ ಶೂಟಿಂಗ್ ಮುಗಿಸಲು ಸಾಧ್ಯವಾಗುತ್ತಿರಲಿಲ್ಲ' ಎಂದಿದ್ದಾರೆ.
'28 ದಿನದಲ್ಲಿ 20 ದಿನ ಸಪ್ತಮಿ ಅವರದ್ದೇ ಶೆಡ್ಯೂಲ್ ಇತ್ತು. ಎಲ್ಲರೂ ಹೀರೋಯಿನ್ ಬೆಳಿಗ್ಗೆ ಆರು ಘಂಟಗೆ ಸೆಟ್‌ಗೆ ಹೇಗೆ ಕರೆಸುತ್ತೀರಾ? ಎಂದು ಕೇಳುತ್ತಿದ್ದರು. ಆಗ ಸಪ್ತಮಿ ಅವರ ಬಳಿ ನಾನು ಹೋಗಿ ಬೇಡಿಕೊಂಡೆ. ನಮ್ಮ ಪರಿಸ್ಥಿತಿ ವಿವರಿಸಿದೆ. ಆದರೆ ಹೇಳಿದರೆ ನಂಬಲ್ಲ, ನಾನು ನೋಡಿರೋ ಬೆಸ್ಟ್ ನಟಿಯರಲ್ಲಿ ಸಪ್ತಮಿ ಕೂಡ ಒಬ್ರು' ಎಂದು ಹೊಗಳಿದ್ದಾರೆ.
ಸಪ್ತಮಿ ಅಂತವರು ಬೆಳೀಬೇಕು
'ರಾತ್ರಿ 10 ಗಂಟೆವರೆಗೆ ಶೂಟಿಂಗ್‌ನಲ್ಲಿ ಇರುತ್ತಿದ್ದ ಸಪ್ತಮಿ ಅವರು ಬೆಳಿಗ್ಗೆ ಆರು ಗಂಟೆಗೆಲ್ಲ ಸೆಟ್‌ನಲ್ಲಿ ಇರ್ತಿದ್ರು. ರಾತ್ರಿ ಅಷ್ಟು ತಡವಾದ್ರೂ ಸರಿಯಾಗಿ ನಿದ್ರೆ ಇಲ್ಲದೆ ಶೂಟಿಂಗ್‌ಗೆ ಬರುತ್ತಿದ್ರು. ಚಾಮರಾಜನಗರದಿಂದ ಗುಂಡ್ಲುಪೇಟೆಗೆ ಹೋಗಿ ಬರುತ್ತಿದ್ದರು. ಬ್ರೇಕ್ ಕೊಡದೆ ಶೂಟಿಂಗ್ ಮಾಡಿಸಿದ್ವಿ, ಒಂದು ಸಲನೂ ಅವರು ಬೇಜಾರು ಮಾಡಿಕೊಳ್ಳಲಿಲ್ಲ. ಒಮ್ಮೆ ನಾನು ಕೂಡ ಈ ಬಗ್ಗೆ ಕೇಳಿದ್ದೆ. ಇಲ್ಲಿ ಹೋಟೆಲ್‌ಗಳು ಅಷ್ಟು ಚೆನ್ನಾಗಿಲ್ಲ, ನಿಮಗೆ ಓಕೆನಾ? ಎಂದಿದ್ದಕ್ಕೆ, ಸಾರ್...ಎಲ್ಲಾದ್ರೂ ಮಲಗೋಕೆ ಜಾಗ ಸಿಕ್ರೆ ಸಾಕು ಬಿಡಿ ಎಂದು ಹೇಳಿದ್ರು. ಈ ರೀತಿ ಸಿನಿಮಾಗೋಸ್ಕರ ನಿಂತುಕೊಳ್ಳುವವರು ಮತ್ತಷ್ಟು ಬೆಳೆಯಬೇಕು' ಎಂದು ನಟ ಸತೀಶ್ ಆಶಿಸಿದ್ದಾರೆ.












Click it and Unblock the Notifications