Kantara Chapter 1: ಸಿನಿಮಾದ ಡಿಜಿಟಲ್ ಹಕ್ಕುಗಳು ದಾಖಲೆಯ ಬೆಲೆಗೆ ಸೇಲ್,...Amazon Prime
Kantara Chapter 1 updates: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ 'ಕಾಂತಾರಾ ಅಧ್ಯಾಯ 1' ಸಿನಿಮಾಗೆ ದೇಶವೇ ಕಾಯುತ್ತಿದೆ. ಈ ಸಿನಿಮಾ 2022 ರಲ್ಲಿ ತೆರೆಕಂಡ 'ಕಾಂತಾರ' ಪ್ರಿಕ್ವೆಲ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.. ಈ ಸಿನಿಮಾದ ಸಿನಿಮಾದ ಡಿಜಿಟಲ್ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಅಪ್ಡೇಟ್ ಸಿಕ್ಕಿದೆ.
ಹೊಂಬಾಳೆ ಬ್ಯಾನರ್ ನಡಿ ಸಿದ್ಧವಾಗಿರುವ 'ಕಾಂತಾರ ಅಧ್ಯಾಯ 1' (Kantara Chapter-1) ಅಕ್ಟೋಬರ್ 02ರಂದು ಬಿಡುಗಡೆ ಆಗಲಿದೆ. ಇತ್ತೀಚೆಗೆ ಪ್ರಚಾರ ಆರಂಭಿಸಿರುವ ಚಿತ್ರತಂಡ ವಿಡಿಯೋ ಗ್ಲಿಂಪ್ಸ್ ಬಿಡುಗಡೆ ಮಾಡಿತ್ತು. ಅದು ಕರ್ನಾಟಕ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಕಾಂತಾರ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಅದರಲ್ಲಿ ರಿಷಬ್ ಶೆಟ್ಟಿ ಶ್ರಮ, ನಿರ್ದೇಶನ, ಕ್ರಿಯೇಟಿವಿಟಿ ಎದ್ದು ಕಾಣುತ್ತದೆ. ಒಂದೊಳ್ಳೆ ಸಿನಿಮಾ, ಕನ್ನಡ ನಾಡಿನ ನೆಲದ ಕಥೆಯನ್ನು ದೇಶಾದ್ಯಂತ ಜನರಿಗೆ ತಲುಪಿಸಲು ನಟ ಮುಂದಾಗಿದ್ದಾರೆ. ಈಗಾಗಲೇ ಕಾಂತಾರ ಹಿಟ್ ಆಗಿದ್ದು, ಅದರ ಕಾಂತಾರ ಪ್ರಿಕ್ವೆಲ್ ಡಿಜಿಟಲ್ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ಪಡೆದುಕೊಂಡಿದೆ.

ಪ್ರಮುಖ ಮನರಂಜನೆ, ಸ್ಪೋಟ್ಸ್ ಸೇರಿ ಹಲವು ಅಂಶಗಳನ್ನು ಒಳಗೊಂಡ ಚಂದಾದಾರಿಕೆ ಸಹಿತ ಸೇವೆ ಪಡೆಯುವ ಒಟಿಟಿ ವೇದಿಕೆಗಳಲ್ಲಿ ಒಂದಾಗಿರುವ ಅಮೇಜಾನ್ ಪ್ರೈಮ್ 'ಕಾಂತಾರ ಅಧ್ಯಾಯ 1' ರ ಡಿಜಿಟಲ್ ಹಕ್ಕುಗಳನ್ನು ಬರೋಬ್ಬರಿ 125 ಕೋಟಿ ರೂಪಾಯಿ ಪಡೆದಿದೆ. ಭಕ್ತಿಪೂರ್ವ ಮಹಾಕಾವ್ಯ ಹಾಗೂ ಆಕ್ಷನ್ ಸಿನಿಮಾ ಇದಾಗಿದ್ದು, ಕಾಂತಾರ ಹಿಟ್ ಆಗಿದ್ದರಿಂದಲೇ ಅದರ ಪ್ರಿಕ್ವೆಲ್‌ಗೆ ಇಷ್ಟೊಂದು ಬೇಡಿಕೆ ಸೃಷ್ಟಿಯಾಗಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ.
'ಕಾಂತಾರ: ಅಧ್ಯಾಯ 1' ರ ಎಲ್ಲ ಭಾಷೆಗಳ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ 125 ಕೋಟಿ ರೂ.ಗಳಿಗೆ ಕೊಟ್ಟು ಖರೀದಿಸಿದ್ದನ್ನು ನೋಡಿದರೆ ಕನ್ನಡ ಸಿನಿಮಾಗಳ ಮಾರ್ಕೆಟ್ ಏನೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದು ದಾಖಲೆ ಮೊತ್ತ ಎಂದು ಹೇಳಲಾಗುತ್ತಿದೆ. ಈ ಮೂಲಕ ನಟ ಯಶ್ ಅವರ 'ಕೆಜಿಎಫ್ 2 'ನಂತರ 'ಕಾಂತಾರ: ಅಧ್ಯಾಯ 1' ಎರಡನೇ ಅತ್ಯುತ್ತಮ ಚಿತ್ರವಾಗಿದೆ.
ಟ್ರೈಲರ್ ಬಿಡುಗಡೆ ಯಾವಾಗ?
2025 ಅಕ್ಟೋಬರ್ 2ಕ್ಕೆ 'ಕಾಂತಾರ: ಅಧ್ಯಾಯ 1' ಬಿಡುಗಡೆಯಾಗುವುದು ದೃಢವಾಗಿದೆ. ಇದರ ಥಿಯೇಟ್ರಿಕಲ್ ಟ್ರೇಲರ್ ಸೆಪ್ಟೆಂಬರ್ 20 ರ ಆಸುಪಾಸಿಗೆ ಬಿಡುಗಡೆಯಾಗಲಿದೆ. ಅದಕ್ಕಾಗಿ ಅಪಾರ ಅಭಿಮಾನಿಗಳು ಕಾಯುತ್ತಾ ಕುಳಿತಿದ್ದಾರೆ. ಟ್ರೈಲರ್ ಬಿಡುಗಡೆಯ ಕೆಲಸಗಳು ಬರದಿಂದ ನಡೆದಿವೆ. ಉತ್ತರ ಭಾರತದ ಭಾಗಗಳಲ್ಲಿ ಅನಿಲ್ ಥಡಾನಿ ತಮ್ಮ AA ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಅಧ್ಯಾಯ 1' ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಈ ಮಧ್ಯೆ ಕೇರಳದಲ್ಲಿ ಬ್ಯಾನ್ ಆಗಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಕೇರಳದಲ್ಲಿನ 'ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ' (FEUOK) ಅಧ್ಯಕ್ಷ ಕೆ. ವಿಜಯಕುಮಾರ್ ಹೇಳುವಂತೆ, ರಾಜ್ಯದಲ್ಲಿ ಇತರ ಭಾಷಾ ಚಿತ್ರಗಳಿಗೆ ಮೊದಲ ದಿನಗಳಲ್ಲಿ ಕೇವಲ 50ರಷ್ಟು ಲಾಭ ನೀಡಲಾಗುತ್ತದೆ. ಆದರೆ ಪೃಥ್ವಿರಾಜ್ ಪ್ರೊಡಕ್ಷನ್ಸ್ ಈ ಸಿನಿಮಾಗೆ ಶೇಕಡಾ 55ರಷ್ಟು ಲಾಭಕ್ಕೆ ಬೇಡಿಕೆ ಇಟ್ಟಿದೆ. ಇಂತಹ ವಿಶೇಷ ಅವಕಾಶ COVID ಸಮಯದಲ್ಲಿ ಮಾತ್ರವೇ ಇತ್ತು, ಆಗ ಹೆಚ್ಚಿನ ಲಾಭ ನೀಡಲಾಗಿತ್ತು. ಈಗ ಅದು ಸಾಧ್ಯವಿಲ್ಲ. ಇದೆಲ್ಲ ಕಾರಣದಿಂದ ಕೇರಳದಲ್ಲಿ ರಿಲೀಸ್ ಆಗುತ್ತಾ? ನಿಷೇಧಗೊಳ್ಳುತ್ತಾ? ಎಂದು ಕಾದು ನೋಡಬೇಕಿದೆ. ಶೀಘ್ರವೇ ಇದಕ್ಕೆ ಉತ್ತರ ಸಿಗುವ ನಿರೀಕ್ಷೆ ಇದೆ.












Click it and Unblock the Notifications