‘ಕಾಂತಾರ’ ರಿಷಬ್ ಶೆಟ್ಟಿ ದರ್ಶನ್ ಅವರ ‘ಕಾಟೇರ’ ಸಿನಿಮಾ ಬಗ್ಗೆ ಹೇಳಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ, 2023ರ ಬಹು ನಿರೀಕ್ಷಿತ ಸಿನಿಮಾ 'ಕಾಟೇರ' ದೇಶದ ವಿವಿಧ ರಾಜ್ಯಗಳಲ್ಲಿ ರಿಲೀಸ್ ಆಗಿ ಕೋಟಿ ಕೋಟಿ ಬಾಚಿದೆ. ಸಂಭ್ರಮದಲ್ಲಿ ಅಭಿಮಾನಿಗಳು ಮಿಂದು ಸಂಭ್ರಮಿಸಿದ್ದಾರೆ. 3 ದಿನದಲ್ಲಿ ಈ ಸಿನಿಮಾ ಸುಮಾರು 60 ಕೋಟಿ ರೂಪಾಯಿ ಗಳಿಸಿದ್ದು ಹೊಸ ದಾಖಲೆ ನಿರ್ಮಿಸಿದೆ ಎನ್ನಲಾಗಿದೆ. ಇದೇ ಸಮಯದಲ್ಲಿ 'ಕಾಂತಾರ' ರಿಷಬ್ ಶೆಟ್ಟಿ ದರ್ಶನ್ ಅವರ 'ಕಾಟೇರ' ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

'ಕಾಟೇರ' ಅಬ್ಬರವು ಶುರುವಾಗಿದ್ದು ಕೆಲವು ಥಿಯೇಟರ್‌ಗಳಲ್ಲಿ ಜಾಗವೇ ಸಿಗ್ತಿಲ್ಲ. ಅದರಲ್ಲೂ ನಿನ್ನೆ ಭಾನುವಾರ ಆದ ಹಿನ್ನೆಲೆ ಕೆಲವು ಥಿಯೇಟರ್‌ನಲ್ಲಿ ಅಭಿಮಾನಿಗಳು ನಿಂತುಕೊಂಡೇ ಸಿನಿಮಾ ನೋಡಿದ್ದಾರೆ. ಫ್ಯಾನ್ಸ್ ಪಾಲಿನ ಡಿಬಾಸ್ ದರ್ಶನ್‌ರ ಬಹು ನಿರೀಕ್ಷಿತ ಚಿತ್ರ ಇದಾಗಿದೆ. ಕೋಟ್ಯಂತರ ಫ್ಯಾನ್ಸ್ ಕಾಟೇರ ಕಣ್ತುಂಬಿಕೊಂಡಿದ್ದಾರೆ. ಕಾಟೇರ ನೂರಾರು ಥಿಯೇಟರ್‌ನಲ್ಲಿ ಸಾವಿರಾರು ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ. ಇದೇ ಸಮಯದಲ್ಲೇ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ 'ಕಾಂತಾರ' ಚಿತ್ರದ ನಿರ್ದೇಶಕ ಮತ್ತು ನಟರಾಗಿರುವ ರಿಷಬ್ ಶೆಟ್ಟಿ ಅವರು 'ಕಾಟೇರ' ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Kantara Actor & Director Rishab Shetty Reacts Over The Kaatera Movie Success

'ಕಾಟೇರ' ಬಗ್ಗೆ 'ಕಾಂತಾರ' ನಟ ಹೇಳಿದ್ದೇನು?

ಯೆಸ್, ಕಾಟೇರ ಸಿನಿಮಾ ಭಾರಿ ದೊಡ್ಡ ಸಕ್ಸಸ್ ಪಡೆದು ಮುನ್ನುಗ್ಗುತ್ತಿದೆ. ಹೀಗಿದ್ದಾಗಲೇ ಕಾಂತಾರದ ನಟ ರಿಷಬ್ ಶೆಟ್ಟಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕಾಟೇರ' ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ಈ ವಿಜಯಕ್ಕಾಗಿ ನಿಮಗೆ ಅಭಿನಂದನೆಗಳು' ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಇಂಗ್ಲಿಷ್‌ನಲ್ಲಿ ಕೂಡ ಬರೆದುಕೊಂಡು, ಕಾಟೇರನಿಗೆ ಸಾಥ್ ನೀಡಿದ ನಿರ್ದೇಶಕ ತರುಣ್ ಸುಧೀರ್ ಅವರು ಮತ್ತು ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್ ಅವರನ್ನು ಹೊಗಳಿದ್ದಾರೆ. ಈ ಜೋಡಿಯು ಅದ್ಭುತ ವಿಚಾರ ಸಾಧಿಸಿದೆ ಎಂದು ಹೇಳಿದ್ದಾರೆ.

ಎಲ್ಲರಿಗೂ ಇಷ್ಟವಾದ ಕಾಟೇರ ಸಿನಿಮಾ

'ಕಾಟೇರ' 3ನೇ ದಿನ ಎಷ್ಟು ಗಳಿಸಿದೆ ಎಂಬುದರ ಬಗ್ಗೆ ಸಿನಿಮಾ ತಂಡ ಇನ್ನ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಮೊದಲ 2 ದಿನಕ್ಕಿಂತಲೂ 3ನೇ ದಿನವು ಕಾಟೇರ ಕ್ರೇಜ್ ಹೆಚ್ಚಾಗಿದ್ದ ಕಾರಣ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ 'ಕಾಟೇರ' ಕಲೆಕ್ಷನ್ 60 ಕೋಟಿ ರೂಪಾಯಿ ಮೀರಿಸಿದೆ ಎಂಬ ಮಾಹಿತಿ ಓಡಾಡುತ್ತಿದೆ. ಹೀಗಾಗಿ ಅಭಿಮಾನಿಗಳಿಗೆ ಹೊಸ ವರ್ಷದ ಸಂದರ್ಭದಲ್ಲಿ ಸಿಹಿಸುದ್ದಿ ಸಿಕ್ಕಿದೆ. ಅಲ್ಲದೆ ಇನ್ನೂ ಹಲವು ದಿನಗಳ ಕಾಲ 'ಕಾಟೇರ' ಸಿನಿಮಾ ದೊಡ್ಡ ಮಟ್ಟದಲ್ಲೇ ಅಬ್ಬರಿಸುವ ನಿರೀಕ್ಷೆ ಇದೆ. ಯಾಕಂದ್ರೆ ಈ ಸಿನಿಮಾ ಅಭಿಮಾನಿಗಳಿಗೆ ಮಾತ್ರವಲ್ಲ, ಜತೆಗೆ ವಿಮರ್ಶಕರಿಗೆ ಕೂಡ ಹಿಡಿಸಿದೆ. ಇದೇ ಸಮಯದಲ್ಲಿ ಕಾಂತಾರ ನಟ & ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಟೇರ ಬಗ್ಗೆ ಮಾತನಾಡಿರುವುದು ಫ್ಯಾನ್ಸ್ ಖುಷಿ ಹೆಚ್ಚಿಸಿದೆ.

ದೊಡ್ಡ ಮಟ್ಟದಲ್ಲಿ ಕಾಂತಾರಕ್ಕೆ ಸಿದ್ಧತೆ!

ಕಾಂತಾರ ಸಿನಿಮಾ ಮೂಲಕ ಕಮಾಲ್ ಮಾಡಿರುವ ನಟ ಕಂ ನಿರ್ದೇಶಕರಾದ ರಿಷಬ್ ಶೆಟ್ಟರು, ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಕಾಂತಾರ ಸಿನಿಮಾ ಮುಂದುವರಿದ ಭಾಗ ಭಾರಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ ಸಿನಿಮಾ ತಂಡ. ಈ ಮೂಲಕ ಕನ್ನಡಿಗರ ಸಿನಿಮಾಗಾಗಿ ಇಡೀ ದೇಶವೇ ಕಾಯುತ್ತಿದೆ.

Kantara Actor & Director Rishab Shetty Reacts Over The Kaatera Movie Success

ಕೆಜಿಎಫ್ & ಕಾಂತಾರ ಸಿನಿಮಾಗಳು ಕನ್ನಡ ಸಿನಿಮಾ ಇಂಡಸ್ಟ್ರಿಯ ಖದರ್‌ನ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿ ಗತ್ತನ್ನೇ ಬದಲಿಸಿವೆ. ಅದ್ರಲ್ಲೂ ಮುಂದಿನ ಕೆಲವು ವರ್ಷಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿ ಜಾಗತಿಕವಾಗಿ ಮಿಂಚುವುದು ಪಕ್ಕ ಎನ್ನುವ ಮಾತು ಫ್ಯಾನ್ಸ್ ಬಾಯಿಂದ ಕೇಳಿಬರುತ್ತಿದೆ. ಹಿಂದಿ ಭಾಷಿಕರಿರುವ ಜಾಗದಲ್ಲಿ ಕೂಡ ಕನ್ನಡಿಗರ ಸಿನಿಮಾಗಳು ಅಬ್ಬರಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+