Dr Bro: ಡಾಕ್ಟರ್ ಬ್ರೋ ಸ್ಟೈಲ್ ಕಾಪಿ ಮಾಡಿದ್ರಾ ಪುಷ್ಪರಾಜ್? ಹಳೆ ವಿಡಿಯೋ ವೈರಲ್
ಕನ್ನಡ ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಡಾಕ್ಟರ್ ಬ್ರೋ (Dr Bro) ಖ್ಯಾತಿಯ ಗಗನ್ ಹೆಸರು ಹೊಸದೇನಲ್ಲ. ಯೂಟ್ಯೂಬ್‌ನಲ್ಲಿ ಡಾಕ್ಟರ್ ಬ್ರೋ ಒಂದು ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಸದಾ ವಿಡಿಯೋಗಳನ್ನು ಮಾಡುವ ಮೂಲಕ ಚಿಕ್ಕವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ ಗಗನ್. ಹಲವರಿಗೆ ರೋಲ್ ಮಾಡಲ್ ಆಗಿರೋ ಡಾಕ್ಟರ್ ಬ್ರೋ ಸದ್ದಿಲ್ಲದೆ ಇತ್ತೀಚೆಗೆ ತೆರೆಕಂಡ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾಗೂ ರೋಲ್ ಮಾಡಲ್ ಆಗಿದ್ದಾರಾ ಎನ್ನುವ ಪ್ರಶ್ನೆಗಳು ಎದ್ದಿವೆ.
ಹೌದು ಆದರೆ ಡಾಕ್ಟರ್ ಬ್ರೋ ಸಿನಿಮಾರಂಗಕ್ಕೆ ಯಾವಾದ ಕಾಲಿಟ್ರು ಅಂತ ಗಾಬರಿಯಾಗಬೇಡಿ. ಇನ್ನು ಅಸಲಿ ವಿಚಾರಕ್ಕೆ ಬರೋದಾದ್ರೆ ಪುಷ್ಪ ಸರಣಿಯ ಸಿನಿಮಾಗಳಲ್ಲಿ ಟಾಲಿವುಡ್ ನಟ ಪುಷ್ಪರಾಜ್ ಅವರು ತಮ್ಮದೇ ಮ್ಯಾನರಿಸಂನಿಂದ ಕ್ರೇಜ್ ಹುಟ್ಟಿಸಿದವರು. ಈ ಸಿನಿಮಾಗಳಲ್ಲಿ ಪುಷ್ಪರಾಜ್ ಪಾತ್ರ ಮಾಡಿರುವ ಅಲ್ಲು ಅರ್ಜುನ್ ಅವರು ಒಂದು ಭುಜವನ್ನು ಮೇಲಕ್ಕೆತ್ತಿಕೊಂಡೇ ಓಡಾಡುತ್ತಾರೆ. ಇದು ಸದ್ಯ ಪುಷ್ಪರಾಜ್ ಸ್ಟೈಲ್ ಎಂದೇ ದೇಶದಾದ್ಯಂತ ಖ್ಯಾತಿಯಾಗಿದೆ.

ಆದರೆ, ಹೊಸ ವಿಚಾರ ಏನಪ್ಪಾ ಅಂದ್ರೆ ಪುಷ್ಪರಾಜ್ ಸ್ಟೈಲನ್ನು ಡಾಕ್ಟರ್ ಬ್ರೋ ಮೊದಲೇ ಮಾಡಿ ಮೂಲೆಗೆ ಬಿಸಾಡಿದ್ದಾರೆ ಎಂದು ಚರ್ಚೆ ಶುರುವಾಗಿದೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿ ಡಾಕ್ಟರ್ ಬ್ರೋ ಅವರ ಹಳೆಯ ವಿಡಿಯೋಗಳು ವೈರಲ್ ಆಗಿವೆ.
ಇದರಲ್ಲಿ ಬ್ರೋ ಗಗನ್ ಅವರು ಕೂಡ ಥೇಟ್ ಪುಷ್ಪರಾಜ್ ಅವರ ಸ್ಟೈಲಲ್ಲೇ ಒಂದು ಭುಜವನ್ನು ಮೇಲಕ್ಕೆತ್ತಿಕೊಂಡು ಹಲವು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಥೇಟ್ ನಟ ಅಲ್ಲು ಅರ್ಜುನ್ ಅವರ ಮ್ಯಾನರಿಸಂಗೆ ಹೋಲುವಂತಿದ್ದು, ಪುಷ್ಪ ಇನ್‌ಸ್ಪೈರ್ಡ್ ಬೈ ಡಾಕ್ಟರ್ ಬ್ರೋ ಎಂದೆಲ್ಲ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.
Enri pushpa 🔥😂
— ಶಿಷ್ಯ ಕೋಟಿ (@aarogance_24) December 8, 2024
Dr bro,, in 2016🔥🗿
Pushpa teenage video leaked 🥵🔥#Pushpa2TheRule #Pushpa2TheRuleOnDec5th #PushpaTheWildFire #Pushpa2TheRulereview #kannada #karnataka #india #drbro #AlluArjun pic.twitter.com/znQ1gU77K8
ಅಲ್ಲದೆ ಏನ್ರೀ ಪುಷ್ಪ...? ನಮ್ ಡಾಕ್ಟರ್ ಬ್ರೋ 2016ರಲ್ಲೇ ಈ ಸ್ಟೈಲ್ ಮಾಡಿ ತೋರಿಸಿದ್ದಾರೆ. ಬಹುಶಃ ಪುಷ್ಪ ಸಿನಿಮಾ ತಂಡದವರು ಡಾಕ್ಟರ್ ಬ್ರೋ ಅವರಿಂದಲೇ ಈ ಸ್ಟೈಲ್ ಕದ್ದಿರಬಹುದಾ ಎಂದು ಜೋಕ್ ಕೂಡ ಮಾಡಿದ್ದಾರೆ. ಹಲವರು ವಿಡಿಯೋ ಅನ್ನು ಪುಷ್ಪ ಟ್ಯಾಗ್ ಬಳಸಿ ಹಂಚಿಕೊಂಡಿದ್ದು, ನಿಮ್ಮ ಸಿನಿಮಾ ಘೋಷಣೆಯಾಗೋಕೂ ಮುಂಚೇನೇ ನಮ್ಮಲ್ಲೂ ಒಬ್ಬ ಪುಷ್ಪ ಇದ್ದ. ಆತನ ಹೆಸರು ಡಾಕ್ಟರ್ ಪುಷ್ಪರಾಜ್ ಎಂದು ಹಾಸ್ಯವಾಗಿ ಬರೆದುಕೊಂಡಿದ್ದಾರೆ.
ಇನ್ನು ವಿಡಿಯೋದಲ್ಲಿ ಡಾಕ್ಟರ್ ಬ್ರೋಗೆ ಪುಷ್ಪ ಸಿನಿಮಾದ ಹಿನ್ನೆಲೆ ಸಂಗೀತವನ್ನು ಹಾಕಿ ಎಡಿಟ್ ಮಾಡಲಾಗಿದ್ದು, ಇದು ನೋಡಲು ಪುಷ್ಪರಾಜ್ ಪಾತ್ರ ಬಾಲ್ಯದ ವಿಡಿಯೋ ಎಂಬಂತೆ ಕಾಣುತ್ತಿದೆ. ಆದರೆ ಪುಷ್ಪರಾಜ್ ರೀತಿ ಡಾಕ್ಟರ್ ಬ್ರೋ ನಡೆದಿರಬಹುದು. ಇದನ್ನು ಟಾಲಿವುಡ್‌ನವರು ಕಾಪಿ ಮಾಡಿರಲು ಸಾಧ್ಯವಿಲ್ಲ ಬಿಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡಿರುವ ಪುಷ್ಪ-2 ಸಿನಿಮಾದಲ್ಲೂ ನಟ ಅಲ್ಲು ಅರ್ಜುನ್ ಅವರು ಅದೇ ಶೈಲಿಯಲ್ಲಿ ಭುಜ ಎತ್ತಿಕೊಂಡು ಅಭಿನಯಿಸಿದ್ದಾರೆ. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ಸಖತ್ ಧೂಳೆಬ್ಬಿಸುತ್ತಿದೆ.












Click it and Unblock the Notifications