ಕನ್ನಡಿಗ ಯಶ್ ಸೋಲಿಸಲು ಹಿಂದಿ ಸಿನಿಮಾ ರಂಗದ ಖತರ್ನಾಕ್ ಪ್ಲಾನ್! Yash Movie
ಕನ್ನಡ ಸಿನಿಮಾ ಇಂಡಸ್ಟ್ರಿ ಕಥೆ ಮುಗಿದೇ ಹೋಯ್ತು... ಕನ್ನಡ ಸಿನಿಮಾಗಳು ಓಡೋದೆ ಇಲ್ಲ... ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಕೆಲವು ಕೆಲಸಕ್ಕೆ ಬಾರದ ಮನುಷ್ಯರು ಕಳೆದ 8 ವರ್ಷಗಳಿಂದ ಬಾಯಿ ಬಂದ್ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಅಡಿಪಾಯ ಹಾಕಿ ಆಧುನಿಕ ಕಾಲದಲ್ಲಿ ಕನ್ನಡ ಸಿನಿಮಾಗಳ ಗತ್ತು ಜಗತ್ತಿಗೆ ಗೊತ್ತಾಗುವಂತೆ ಮಾಡಿದ್ದೇ ಕನ್ನಡಿಗ ಯಶ್ ಅವರ ಕೆಜಿಎಫ್ ಸಿನಿಮಾ. ನಂತರ ಬಂದ ಕಾಂತಾರ ಸಿನಿಮಾ ಕನ್ನಡಿಗರ ಹೆಮ್ಮೆಯನ್ನ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಎಲ್ಲಾ ಒಳ್ಳೆಯದೇ ಆಗುತ್ತಿದೆ ಎನ್ನುವಾಗಲೇ ದಿಢೀರ್ ಹಿಂದಿ ಸಿನಿಮಾ ರಂಗ ಕನ್ನಡಿಗನ ಸಿನಿಮಾ ವಿರುದ್ಧ ಖತರ್ನಾಕ್ ಪ್ಲಾನ್ ಮಾಡಿದೆ...
ಒಂದಲ್ಲ... ಎರಡಲ್ಲ... ಈ ಹಿಂದಿ ಸಿನಿಮಾ ಇಂಡಸ್ಟ್ರಿಯ ಸ್ಟಾರ್‌ಗಳು ಮಾಡಿಕೊಳ್ಳುವ ಕಿರಿಕ್. ಒಂದು ಕಡೆ ದಕ್ಷಿಣ ಭಾರತದ ಸಿನಿಮಾ ರಂಗವನ್ನು ಹೊಗಳುತ್ತಲೇ, ಟಾರ್ಗೆಟ್ ಕೂಡ ಮಾಡುತ್ತಾರೆ ಎಂಬ ಆರೋಪ ಇದೆ. ಅದರಲ್ಲೂ ಕೆಜಿಎಫ್ ಚಾಪ್ಟರ್-1 ವಿರುದ್ಧ ಶಾರುಖ್ ಸಿನಿಮಾ 'ಜೀರೋ' ರಿಲೀಸ್ ಮಾಡಿ ದೊಡ್ಡ ಸೊನ್ನೆ ತಗೊಂಡು ಸೋತು ಹೋಗಿದ್ದರು. ಆ ಸಮಯದಲ್ಲೇ ಅಂದ್ರೆ 2018 ವರ್ಷಾಂತ್ಯದಲ್ಲಿ ಸಾಲು, ಸಾಲು ಹಿಂದಿ ಸಿನಿಮಾಗಳು ಕನ್ನಡಿಗ ಯಶ್ ಸಿನಿಮಾ ಎದುರು ಪಲ್ಟಿ ಹೊಡೆದವು. ಇಷ್ಟಾದರೂ ಬುದ್ಧಿ ಕಲಿಯದ ಹಿಂದಿ ಸಿನಿಮಾ ಸ್ಟಾರ್ಸ್ ಈಗ ಕನ್ನಡಗರ ಸಿನಿಮಾ ವಿರುದ್ಧ ಹೊಸ ಕುತಂತ್ರ ಹೂಡಿದ್ದಾರೆ ಎಂಬ ಆಕ್ರೋಶ ಮೊಳಗಿದೆ.

ರಣವೀರ್ ಸಿಂಗ್ ಸಿನಿಮಾ ಉಡೀಸ್?
ಹೌದು, ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಸರ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಅಲ್ಲದೆ ಮಂಡ್ಯ ಟು ಇಂಡಿಯಾ ಮಾತ್ರ ಅಲ್ಲ, ಇಡೀ ಜಗತ್ತಿನ ಮೂಲೆ ಮೂಲೆಗೂ ಟೀಸರ್ ಕಹಳೆ ಮೊಳಗಿಸಿದೆ. ಟೀಸರ್ ರಿಲೀಸ್ ಆದ 3 ಗಂಟೆಗಳಲ್ಲಿ ಬರೋಬ್ಬರಿ 3.5 ಮಿಲಿಯನ್ ವೀವ್ಸ್ ಗಿಟ್ಟಿಸಿದೆ. ಹೀಗಿದ್ದಾಗ ಕನ್ನಡಿಗ ಯಶ್ ಸಿನಿಮಾ ಟಾಕ್ಸಿಕ್ ಎದುರು ಹಿಂದಿಯ ಧುರಂಧರ್-2 ಬರುವುದು ಕೂಡ ಫಿಕ್ಸ್ ಆಗಿದೆ. ಈ ಮೂಲಕ ಯಶ್ ಸಿನಿಮಾಗೆ ಅಡ್ಡಿ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ರಾಕಿಂಗ್ ಸ್ಟಾರ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಆದರೆ ಈ ತಿಕ್ಕಾಟದಲ್ಲಿ ಉಡೀಸ್ ಆಗೋದು ರಣವೀರ್ ಸಿಂಗ್ ಸಿನಿಮಾ ಅಂತಾ ನೆಟ್ಟಿಗರು ಕಾಲು ಎಳೆಯುತ್ತಾ ಯಶ್ ಬೆಂಬಲಕ್ಕೆ ನಿಂತಿದ್ದಾರೆ.
ಯಶ್ ಪರ ಕನ್ನಡಿಗರ ಒಗ್ಗಟ್ಟು
ಕನ್ನಡ ಸಿನಿಮಾ ಇಂಡಸ್ಟ್ರಿ ಈಗ ಹಾಲಿವುಡ್ ಹಂತಕ್ಕೆ ಎಂಟ್ರಿ ಕೊಟ್ಟಿದ್ದು, ಯಶ್ ಅವರು ಇದೀಗ ತಮ್ಮ ಆರ್ಭಟದ ಮೂಲಕ ಸ್ಕ್ರೀನ್ ಧೂಳ್ ಧೂಳ್ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ಹಿಂದಿ ಸಿನಿಮಾ ರಂಗ ಹೊಸ ಸ್ಕೆಚ್ ಹಾಕಿದ್ದು, ಕನ್ನಡಿಗನ ಸಿನಿಮಾ ವಿರುದ್ಧ ದೊಡ್ಡ ಸಿನಿಮಾ ರಿಲೀಸ್ ಮಾಡಿಸಿ ತೊಂದರೆ ಕೊಡಲು ಕುತಂತ್ರ ಮಾಡುತ್ತಿದ್ದಾರೆ ಎಂಬುದು ಅಭಿಮಾನಿಗಳ ಆರೋಪ. ಮಾರ್ಚ್ 19ಕ್ಕೆ ಟಾಕ್ಸಿಕ್ ರಿಲೀಸ್ ಆಗುತ್ತಿದ್ದು, ಅದೇ ಸಮಯದಲ್ಲಿ ರಣವೀರ್ ಸಿಂಗ್ ಸಿನಿಮಾ ಕೂಡ ಎಂಟ್ರಿ ಕೊಡುತ್ತಿದೆ. ಆದರೆ ಇದರಿಂದ ಯಶ್ ಅವರಿಗೆ ಏನೂ ಆಗಲ್ಲ, ಶಾರುಖ್ ಖಾನ್ 2018ರಲ್ಲಿ ಅನುಭವಿಸಿದ ಕಷ್ಟಗಳೇ ಹಿಂದಿ ನಟ ರಣವೀರ್ ಸಿಂಗ್ ಅವರಿಗೂ ಎದುರಾಗಬಹುದು. ಹೀಗಾಗಿ ಹುಷಾರಾಗಿ ಇರಿ ಎಂಬ ವಾರ್ನಿಂಗ್ ಕೊಡ್ತಿದ್ದಾರೆ ನೆಟ್ಟಿಗರು!












Click it and Unblock the Notifications