ಗಂಡಸ್ತನ ಇದ್ರೆ ಈ ಕೆಲಸ ಮಾಡಿ: ಚಂದನ್ ಶೆಟ್ಟಿ ಚಾಲೆಂಜ್ ಹಾಕಿದ್ದು ಯಾರಿಗೆ?
ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಅವರು ತಮ್ಮ ರ‍್ಯಾಪ್ ಹಾಡುಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಬಿಗ್‌ಬಾಸ್ ಬಳಿಕ ಇವರ ಕ್ರೇಜ್ ಇನ್ನೂ ಹೆಚ್ಚಾಗಿದೆ. ಆಗಾಗ ರ‍್ಯಾಪ್ ಹಾಡುಗಳನ್ನು ಹಾಡುವ ಮೂಲಕ ಕನ್ನಡಿಗರ ಮನಗೆದ್ದಿರುವ ಇವರು, ಇತ್ತೀಚೆಗಷ್ಟೇ ತಮ್ಮ ವೈವಾಹಿಕ ಜೀವನದ ಕಹಿ ಘಟನೆ ದಾಟಿ ಬಂದಿದ್ದರು. ಕ್ಯೂಟ್ ಜೋಡಿ ಎಂದೇ ಗಮನ ಸೆಳೆದಿದ್ದ ಚಂದನ್ ಶೆಟ್ಟಿ ಅವರು ಡಿವೋರ್ಸ್ ಘೋಷಿಸಿ, ಇದೀಗ ಸೂತ್ರಧಾರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಹೀರೋ ಆಗಿಯೂ ಎಂಟ್ರಿ ಕೊಟ್ಟಿದ್ದಾರೆ. ಇದೇ ಹೊತ್ತಲ್ಲೇ ಚಂದನ್ ಶೆಟ್ಟಿ ಅವರು ಗಂಡಸ್ತನಕ್ಕೆ ದೊಡ್ಡ ಸವಾಲು ಹಾಕಿದ್ದಾರೆ. ಅದು ಯಾರಿಗೆ ಗೊತ್ತಾ?
ಅವರೆಲ್ಲ ಹೇಡಿಗಳು, ತಾಕತ್ತಿದ್ರೆ ಹೋರಾಡಲಿ ಎನ್ನುವ ಮೂಲಕ ಚಂದನ್ ಶೆಟ್ಟಿ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಚಂದನ್ ಖಂಡಿಸಿ ಈ ರೀತಿ ಮಾತನಾಡಿದ್ದಾರೆ. ಪ್ರವಾಸಿಗರ ಮೇಲೆ ಈ ರೀತಿ ದಾಳಿ ನಡೆಸಿರುವುದು ಹೇಡಿತನ ಎಂದು ಹೇಳಲು ಬಯಸುತ್ತೇನೆ. ಅವರಿಗೆ ನಿಜವಾಗಲೂ ಗಂಡಸ್ತನ, ತಾಕತ್ತು ಅನ್ನೋದಿದ್ರೆ ನಮ್ಮ ಸೈನಿಕರ ಜೊತೆ ಹೋರಾಡಿ ಗೆಲ್ಲಲಿ ಎಂದು ಚಾಲೆಂಜ್ ಮಾಡಿದ್ದಾರೆ.

ಸೈನಿಕರೊಂದಿಗೆ ಹೋರಾಡುವ ಬದಲು ಪಾಪದ ಜನಗಳು, ಜನಸಾಮಾನ್ಯರ ಮೇಲೆ ದಾಳಿ ಮಾಡಿದವರು ತುಂಬಾ ಹೇಡಿಗಳು ಅಂತಾನೇ ಹೇಳಬಹುದು. ಗನ್ ಹಿಡಿದು ಅವರ ಮೇಲೆ ದಾಳಿ ಮಾಡಿರುವುದು ನಿಜಕ್ಕೂ ಅಮಾನವೀಯ ಕೃತ್ಯ. ಇದಕ್ಕೆ ಖಂಡಿತವಾಗಿಯೂ ಮೋದಿ ಅವರು, ಕೇಂದ್ರ ಸರ್ಕಾರ ತಕ್ಕ ಪಾಠ ಕಲಿಸಲೇಬೇಕು. ನಾವು ಇಷ್ಟು ವರ್ಷದಿಂದ ಶಾಂತಿ ಕಾಪಾಡಬೇಕು ಎಂದು ಬಂದಿದ್ದೇವೆ. ಎಲ್ಲದಕ್ಕೂ ಒಂದು ಮಿತಿ ಅನ್ನೋದು ಇರುತ್ತೆ. ಆದರೆ ಅದು ಈಗ ಮೀರಿ ಆಗೋಗಿದೆ. ನಾವಂತೂ ರೆಡಿಯಾಗಿದ್ದೇವೆ, ಕೇಂದ್ರ ಸರ್ಕಾರ ಯುದ್ಧ ಘೋಷಿಸಿದ್ರೂ ನಾವು ಹೋರಾಟಕ್ಕೆ ಸಿದ್ಧ ಎಂದು ಚಂದನ್ ಶೆಟ್ಟಿ ತೊಡೆ ತಟ್ಟಿದ್ದಾರೆ.
ನನ್ನ ಪ್ರಕಾರ ಭಯೋತ್ಪಾದಕರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು ಅಂದ್ರೆ, ಅವರು ಯಾವ ರೀತಿ ಭಾರತೀಯ ಕುಟುಂಬಗಳಿಗೆ ನೋವು ಕೊಟ್ಟಿದ್ದಾರೋ ಅದೇ ರೀತಿ ಅವರಿಗೂ ತಕ್ಕ ಶಾಸ್ತಿ ಆಗಬೇಕು ಎಂದು ಆಗ್ರಹಿಸಿದ್ದಾರೆ. ನಾನು ಕಾಶ್ಮೀರಕ್ಕೆ ಹೋಗಿರಲಿಲ್ಲ. ಪಹಲ್ಗಾಮ್ ಘಟನೆ ಬಳಿಕ ಕಾಶ್ಮೀರದ ಕಡೆಗೆ ಹೋಗಬೇಕು ಅಂದ್ರೆ ಸ್ವಲ್ಪ ಭಯ ಹುಟ್ಟಿಕೊಂಡಿದೆ. ನಮ್ಮ ಸಂಬಂಧಿಕರು ಕೂಡ ಈ ಘಟನೆ ನಡೆದ ಜಾಗದಲ್ಲೇ ಒಂದೆರಡು ದಿನ ಮುಂಚೆ ಇದ್ದು ಬಂದಿದ್ದರು. ಅವರು ಈ ದಾಳಿಯಿಂದ ಪಾರಾಗಿ ಬಂದಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳು ಆಗಲೇಬೇಕು ಎಂದಿದ್ದಾರೆ ಚಂದನ್ ಶೆಟ್ಟಿ.
ಭಯೋತ್ಪಾದಕರ ದಾಳಿಯನ್ನು ಸ್ಯಾಂಡಲ್‌ವುಡ್‌ನ ಹಲವು ನಾಯಕರು ಖಂಡಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್‌ನಲ್ಲಿ ನಡೆದ ಅಟ್ಯಾಕ್ ಕ್ಷಮಿಸಲಾರದ ಅಪರಾಧ. ಭಯೋತ್ಪಾದನೆ ಮಾಡುವ ಯಾರೇ ಆಗಿರಲಿ, ಅವರು ಬದುಕಲು ಅನರ್ಹ. ದಾಳಿಯಲ್ಲಿ ಮೃತರಾದವರಿಗೆ ನನ್ನ ಅಂತಿಮ ನಮನ, ಮೃತರ ಕುಟುಂಬಸ್ಥರಿಗೆ ನನ್ನ ಸಾಂತ್ವನ ಎಂದು ಹೇಳಿದ್ದಾರೆ.












Click it and Unblock the Notifications