Darshan Thoogudeepa: ಮರಿ ಅಂಬರೀಶ್ ಭರ್ಜರಿ ಎಂಟ್ರಿ.. ಡಿ-ಬಾಸ್ ದರ್ಶನ್ ತೂಗುದೀಪ್...
ಮಂಡ್ಯದ ಗಂಡು ಅಂಬರೀಶ್ ಅಂದ್ರೆ ಗತ್ತು... ಹಾಗೇ, ಗತ್ತಿಗೆ ಮತ್ತೊಂದು ಹೆಸರೇ ನಟ ಅಂಬರೀಶ್... ಇದು ಕೋಟಿ, ಕೋಟಿ ಅಭಿಮಾನಿಗಳು ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದ ಮಾತುಗಳು. ಸಕ್ಕರೆ ನಾಡು ಮಂಡ್ಯದ ಗಂಡು ಅಂಬರೀಶ್ ಅವರು ಕನ್ನಡ ಸಿನಿಮಾ ರಸಿಕರು ಎಂದೆಂದಿಗೂ ಮರೆಯಲು ಆಗದ ನಟ. ಇಂತಹ ಮೇರು ನಟ ಅಂಬರೀಶ್ ಅವರು ನಮ್ಮನ್ನೆಲ್ಲಾ ಅಗಲಿ ಹೋಗಿದ್ದರೂ ಅವರ ನೆನಪು ಮಾತ್ರ ಇಂದಿಗೂ ಮಾಸಿಲ್ಲ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಗಾಡ್ ಫಾದರ್ ಕೂಡ ಆಗಿದ್ದರು ಮಂಡ್ಯದ ಗಂಡು ರೆಬೆಲ್‌ಸ್ಟಾರ್ ಅಂಬರೀಶ್ ಅವರು.
ಅಂಬರೀಶ್ ಅವರ ಹೆಸರಿಗೆ ಈಗಲೂ ಒಂದು ಗತ್ತು ಹಾಗೇ ಉಳಿದಿದ್ದು, ನಟ ಅಂಬರೀಶ್ ಅವರನ್ನ ಕೋಟ್ಯಂತರ ಜನರು ನೆನಪು ಮಾಡಿಕೊಳ್ಳುತ್ತಾರೆ. ಹೀಗಿದ್ದಾಗ ದಿವಂಗತ ಅಂಬರೀಶ್ ಅವರ ಮನೆಗೆ 'ಮರಿ ಅಂಬರೀಶ್' ಭರ್ಜರಿ ಎಂಟ್ರಿ ಎಂಟ್ರಿ ಕೊಟ್ಟಿದ್ದು. ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿದ್ದಪ್ಪ ದಂಪತಿಗೆ ಗಂಡು ಮಗು ಜನಿಸಿದೆ. ಈ ಸುದ್ದಿ ಕೇಳಿ ಕೋಟ್ಯಂತರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಹೀಗಿದ್ದಾಗ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು....

ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ...
ಅಂದಹಾಗೆ ನಟ ಅಭಿಷೇಕ್ ಅಂಬರೀಶ್ & ಅವಿವಾ ದಂಪತಿ ಲವ್ ಮ್ಯಾರೇಜ್ ಆಗಿದ್ದರು. ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಅವಿವಾ ಬಿದ್ದಪ್ಪ & ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು, ಮನೆಯವರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆ ಆಗಿದ್ದರು.
2023ರ ಜೂನ್ 5 ರಂದು ಅಭಿಷೇಕ್ ಅಂಬರೀಶ್ & ಅವಿವಾ ಬಿದ್ದಪ್ಪ ಜೋಡಿಯು ಮದುವೆ ಆಗಿದ್ದರು. ಇದೀಗ ಅಭಿಷೇಕ್ ಅಂಬರೀಶ್ & ಅವಿವಾ ದಂಪತಿ ಕುಟುಂಬಕ್ಕೆ ಹೊಸ ಅತಿಥಿ ಆಗಮನ ಆಗಿದ್ದು, ಮರಿ ಅಂಬರೀಶ್ ಅವರೇ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ ಅಂತಾ ಇದೀಗ ಕೋಟಿ ಕೋಟಿ ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗೇ ಈ ಸುದ್ದಿ ಮತ್ತೊಂದು ಕಡೆಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಭರ್ಜರಿ ಖುಷಿ ಕೊಟ್ಟಂತಾಗಿದೆ.
ಡಿ-ಬಾಸ್ ದರ್ಶನ್ ತೂಗುದೀಪ್ ಅವರು...
ಅಭಿಷೇಕ್ ಅಂಬರೀಶ್ & ಅವಿವಾ ದಂಪತಿಗೆ ಗಂಡು ಮಗು ಜನಿಸಿರುವ ಸುದ್ದಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ತಲುಪಿದೆ. ಇನ್ನು ಈ ಸುದ್ದಿಯನ್ನ ಕೇಳಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತುಂಬಾ ಖುಷಿಯಾಗಿದ್ದು ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಸುಮಲತಾ ಅಂಬರೀಶ್ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಮಗ ಅಂತಾನೇ ಕರೆಯುತ್ತಾರೆ.
ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ & ಅಭಿಷೇಕ್ ಅಂಬರೀಶ್ ಅವರು ಅಣ್ಣ & ತಮ್ಮನ ರೀತಿ ಇದ್ದಾರೆ. ಹೀಗಾಗಿ ಈ ಸುದ್ದಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಭರ್ಜರಿ ಖುಷಿ ಕೊಟ್ಟಂತಾಗಿದೆ. ಮತ್ತೊಂದು ಕಡೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಅಭಿಷೇಕ್ ಅಂಬರೀಶ್ & ಅವಿವಾ ದಂಪತಿಯ ಗಂಡು ಮಗುವನ್ನು ನೋಡಲು ಬರ್ತಾರಾ? ಎಂಬ ಕುತೂಹಲದ ಪ್ರಶ್ನೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಜನ ಕೇಳುತ್ತಿದ್ದಾರೆ.












Click it and Unblock the Notifications