Master Anand:'ನಿಮ್ಮ ಆಸ್ತಿಯನ್ನು ನಿಮ್ಮ ಮಕ್ಕಳಿಗೆ ಬರೆಯುವುದು ನೆಪೋಟಿಸಂ ಅಲ್ವಾ?'

ನಮ್ಮ ಕುಟುಂಬದಲ್ಲಿ ಎಲ್ಲರೂ ಮನೋರಂಜನಾ ಕ್ಷೇತ್ರದಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ನೆಪೋಟಿಸಂ ಅಂತಾ ಹೇಳಲು ಆಗುವುದಿಲ್ಲ. ನೆಪೋಟಿಸಂ ಎಲ್ಲಿ ಕೆಲಸ ಮಾಡುತ್ತದೆ ಅಂದರೆ ಯಾವುದೋ ಒಂದು ಮಗುವಿಗೆ. ತನ್ನ ತಂದೆಯಿಂದಲೋ, ತಾಯಿಯಿಂದಲೋ ಮೊದಲನೇ ವೇದಿಕೆ ಬಹಳ ಸುಲಭವಾಗಿ ಸಿಗುತ್ತದೆ. ಆದರೆ ಅದನ್ನು ಉಳಿಸಿಕೊಳ್ಳುವುದು ಆ ಮಗುವಿಗೆ ಬಿಟ್ಟಿದ್ದು. ಕುಟುಂಬಸ್ಥರು ಎಷ್ಟು ಅಂತಾ ಅವಕಾಶ ಕೊಡಲು ಆಗುತ್ತದೆ. ನೆಪೋಟಿಸಂ ಅಂದರೆ ವೇದಿಕೆ ಸಿಗುತ್ತದೆ ಆದರೆ ಆಟ ಯಾವತ್ತಿದ್ದರೂ ಅವನೇ ಆಡಬೇಕು ಎಂದು ಮಾಸ್ಟರ್‌ ಆನಂದ್‌ ತಮ್ಮ ಕುಟುಂಬದ ಬಗ್ಗೆ ನೆಪೋಟಿಸಂ ಆರೋಪ ಮಾಡುವವರಿಗೆ ಉತ್ತರ ಕೊಟ್ಟಿದ್ದಾರೆ.

ಯಶಸ್ವಿನಿ ಮಾಸ್ಟರ್‌ ಆನಂದ್‌ ಅವರ ಕನೆಕ್ಟ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಯಶಸ್ಸು ಎನ್ನುವುದು ಯಾರ ಅಪ್ಪನ ಮನೆ ಸ್ವತ್ತು ಅಲ್ಲ. ಅದಕ್ಕೆ ಅವರದೇ ಆದ ಆಯಾಮ ಇರುತ್ತದೆ. ಯಶಸ್ಸಿನ ಮಾರ್ಗದಲ್ಲಿ ನೆಪೋಟಿಸಂ ನಿಲ್ಲಲ್ಲ. ನಮ್ಮ ಮನೆಯ ಪ್ರತಿಭೆ ಬೆಳೆಯಬೇಕು ಎಂದು ಬೇರೆಯವರ ಮನೆಯ ಪ್ರತಿಭೆಯನ್ನು ತುಳಿದರೆ ಅದು ತಪ್ಪು. ಅದನ್ನು ನಾನು ಕೂಡ ಒಪ್ಪುವುದಿಲ್ಲ ಎಂದರು.

Kannada Famous Anchor Master Anand Talks About Nepotism

ಅವಕಾಶ ಕೊಡುವ ವಿಚಾರಕ್ಕೆ ಬಂದರೆ ನಿಮ್ಮ ಮನೆಯಲ್ಲೇ ಹೀರೋ ಅಥವಾ ಹೀರೋಯಿನ್‌ ಆಗುವಷ್ಟು ಪ್ರತಿಭೆ ಇದ್ದರೆ ಅವಕಾಶ ಕೊಟ್ಟೇ ಕೊಟುತ್ತಾರೆ. ಅದರಲ್ಲಿ ತಪ್ಪೇನು? ಸಿನಿಮಾದಲ್ಲಿ ನೆಪೋಟಿಸಂ ಅಂದರೆ ನಿಮ್ಮ ಮನೆಯ ಆಸ್ತಿಯನ್ನು ನಿಮ್ಮ ಮಕ್ಕಳಿಗೆ ಬರೆಯುತ್ತೀರಿ ಅದು ನೆಪೋಟಿಸಂ ಅಲ್ಲವಾ? ಎಂದು ಮಾಸ್ಟರ್‌ ಆನಂದ್‌ ಪ್ರಶ್ನಿಸಿದ್ದಾರೆ.

Take a Poll

ನೆಪೋಟಿಸಂಯಿಂದ ಒಂದು ವೇದಿಕೆ ಸೃಷ್ಟಿಯಾಗುತ್ತದೆ ಅಷ್ಟೇ. ಅದು ಶಾಶ್ವತವಾಗಿ ಉಳಿಯಬೇಕು ಅಂದರೆ ಆ ಕಲಾವಿದನಲ್ಲಿ ತಾಕತ್ತು ಇರಬೇಕು. ನೆಪೋಟಿಸಂ, ಟ್ರೋಲ್‌ ಇದೆಲ್ಲಾ ಈಗ ಬಂದಿರುವುದು. ಈಗಷ್ಟೇ ಜಗತ್ತು ಕಾಣಲು ಶುರು ಮಾಡಿದವರು ಡಿಜಿಟಲ್‌ ಯುಗದಲ್ಲಿ ಈ ರೀತಿಯಾದುದನ್ನು ಸೃಷ್ಟಿಸುತ್ತಾರೆ. ಆದರೆ ಅದೇ ಅವರ ತಂದೆ, ಅಣ್ಣ ಹೀಗೆ ಅವರ ಮನೆಯ ಹಿರಿಯ ಸಂಬಂಧಿಗಳಲ್ಲಿ ನಮ್ಮ ಬಗ್ಗೆ ಕೇಳಿ ಅವರು ಖಂಡಿತವಾಗಿಯೂ ಹೀಗೆ ಮಾತನಾಡುವುದಿಲ್ಲ. ಯಾಕೆಂದರೆ ಅವರಿಗೆ ನಾವು ಕ್ರಮಿಸಿ ಬಂದಿರುವ ದಾರಿ ಗೊತ್ತು. ಹೀಗಾಗಿ ಅವರು ನಮ್ಮ ಬಗ್ಗೆ ಈ ರೀತಿ ಎಲ್ಲಾ ಮಾತನಾಡುವುದಿಲ್ಲ ಎಂದರು.

Kannada Famous Anchor Master Anand Talks About Nepotism

ಕಾಮಿಡಿ ಧಾರಾವಾಹಿಗಳು ಮಾಡುತ್ತಿಲ್ಲ ಏಕೆ?

ಮಾಸ್ಟರ್ ಆನಂದ್‌ ಅವರು ಕಾಮಿಡಿ ಧಾರಾವಾಹಿಗಳನ್ನು ಮಾಡುತ್ತಿಲ್ಲ ಯಾಕೆ ಎನ್ನುವುದರ ಬಗ್ಗೆ ಮಾತನಾಡಿದ ಅವರು, ಕಾಮಿಡಿ ಧಾರಾವಾಹಿಗಳನ್ನು ಮಾಡಬಹುದು, ಆದರೆ ಈಗ ಕಾಮಿಡಿ ಶೋಗಳು ಬಂದಿವೆ. ಜೊತೆಗೆ ಮೊಬೈಲ್‌ನಲ್ಲಿಯೇ ಕಾಮಿಡಿ ಹೆಚ್ಚಾಗಿ ಬರುತ್ತದೆ. ಆ ಕಾಮಿಡಿನಲ್ಲಿ ಡಬ್ಬಲ್‌ ಮೀನಿಂಗ್‌ ಜೋಕ್‌ ಮಾಡುತ್ತಾರೆ. ರಾಜ್ಯ ಹಾಸ್ಯವನ್ನು ಮಾಡಲು ಯಾರಿಗೂ ಆಗುತ್ತಿಲ್ಲ. ಧಾರಾವಾಹಿ ಎನ್ನುವುದು ವಾರದ ಏಳು ದಿನಗಳು ಕೆಲಸ ಮಾಡಬೇಕು. ನಟನೆ ಮಾಡುವುದು ಓಕೆ. ಆದರೆ ನಿರ್ದೇಶನಕ್ಕಿಳಿದರೆ ಮನೆಗೂ ಸಮಯ ಕೊಡಲು ಆಗುವುದಿಲ್ಲ. ನೋಡೋಣ ಮುಂದೆ ಅವಕಾಶಗಳು ಇದ್ದರೆ ಈ ಬಗ್ಗೆ ಯೋಚನೆ ಮಾಡೋಣ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+