‘ಮಂಗಳೂರು ಕಡೆ ನಟರು, ನಿರ್ದೇಶಕರು ಬೇರೆ ಲೋಕದಿಂದ ಇಳಿದು ಬಂದವರಾ?’ ಖ್ಯಾತ ನಿರ್ದೇಶಕನ ಹೇಳಿಕೆ!

ಕನ್ನಡ ಸಿನಿಮಾ ಇಂಡಸ್ಟ್ರಿ ಈಗ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ನಮ್ಮ ಸಿನಿಮಾಗಳ ಮಾರುಕಟ್ಟೆ ಪ್ರಪಂಚದ ಹಲವು ದೇಶಗಳಿಗೆ ವಿಸ್ತರಿಸಿದೆ. ಅದ್ರಲ್ಲೂ ಕೆಜಿಎಫ್ & ಕಾಂತಾರ ಸಿನಿಮಾ ಮಾಡಿದ ಸಾಧನೆಯು ಎಲ್ಲರಿಗೂ ಮಾದರಿ ಆಗಿದೆ. ಹೀಗಿದ್ದಾಗ, ಕನ್ನಡದ ಖ್ಯಾತ ನಿರ್ದೇಶಕರೊಬ್ಬರು 'ಮಂಗಳೂರು ಕಡೆ ನಟ & ನಿರ್ದೇಶಕರ' ಬಗ್ಗೆ ಮಾತನಾಡಿದ್ದು ಈಗ ಸಂಚಲನ ಸೃಷ್ಟಿ ಮಾಡಿದೆ.

ಕನ್ನಡ ಇಂಡಸ್ಟ್ರಿಯಲ್ಲಿ ಭಾರಿ ಒಗ್ಗಟ್ಟು ಇತ್ತು, ಅದರಲ್ಲೂ ವರನಟ ಡಾ.ರಾಜ್‌ಕುಮಾರ್ ಅವರು ಇಡೀ ಕನ್ನಡ ಸಿನಿಮಾ ಜಗತ್ತನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ಭಾರತದ ಸಿನಿಮಾ ಜಗತ್ತಿಗೆ ಕನ್ನಡಿಗರು ಮಾದರಿ ಕೂಡ ಆಗಿದ್ದರು. ಆದ್ರೆ ಇತ್ತೀಚೆಗೆ ಭಾರಿ ಗೊಂದಲ ಏರ್ಪಡುತ್ತಿದೆ. ಅದರಲ್ಲೂ ಮಂಗಳೂರು ಅಂದರೆ ಕರಾವಳಿ ಭಾಗದ ನಟರು & ನಿರ್ದೇಶಕರ ಬಗ್ಗೆ ಮಾತನಾಡುವ ಖಾಲಿ ನಾಲಗೆಗಳೇ ಹೆಚ್ಚಾಗುತ್ತಿವೆ. ಇದೆಲ್ಲಾ ಕನ್ನಡಿಗರ ಒಗ್ಗಟ್ಟು ಮುರಿಯುವ ಯತ್ನ ಎಂಬ ಆರೋಪ ಕೂಡ ಇದೆ. ಈ ಕುರಿತು ಕನ್ನಡದ ಖ್ಯಾತ ನಿರ್ದೇಶಕರೊಬ್ಬರು, 'ಮಂಗಳೂರು ಕಡೆ ನಟ & ನಿರ್ದೇಶಕರ' ಬಗ್ಗೆ ಮಾತನಾಡಿದ್ದಾರೆ.

Kannada Director Om Prakash Rao Commented On Mangaluru Based Actors And Directors

ಮಂಗಳೂರು ಕಡೆ ನಟ & ನಿರ್ದೇಶಕರ ಬಗ್ಗೆ...

ನಿಮಗೆಲ್ಲಾ ಗೊತ್ತಿರುವಂತೆ, ಪ್ಯಾನ್ ಇಂಡಿಯಾ ಜಮಾನದಲ್ಲಿ ಕನ್ನಡ ಸಿನಿಮಾಗೆ ಡಿಮ್ಯಾಂಡ್ ಇದ್ದು, ಕೆಜಿಎಫ್ & ಕಾಂತಾರ ಬಳಿಕ ಕನ್ನಡ ಸಿನಿಮಾಗಳ ಖದರ್‌ಗೆ ಬಾಲಿವುಡ್ ಶೇಕ್ ಆಗಿದೆ. ಹೀಗಿದ್ದಾಗ ಕನ್ನಡದ ಉತ್ತಮ ಚಿತ್ರಗಳನ್ನು ಪರಭಾಷೆ ಜನರು ಪ್ರೀತಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಅವರಂತಹ ನಟ ಕಂ ನಿರ್ದೇಶಕರು ಕನ್ನಡ ಸಿನಿಮಾಗಳ ಜಗತ್ತಿನಲ್ಲಿ ಜಾದೂ ಮಾಡಿದ್ದಾರೆ.

ಕಿರಿಕ್ ಪಾರ್ಟಿ, 777 ಚಾರ್ಲಿ, ಕಾಂತಾರ ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾನ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದಾರೆ. ಕನ್ನಡ ನಾಡಿನ ಜನರು ಕೂಡ, ಇವರ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಆದರೆ ಕೆಲವರು ಇದೀಗ ಕನ್ನಡ ನಾಡಿನ ಜನರ ಮಧ್ಯೆ ಅಂದ್ರೆ ಕನ್ನಡಿಗರ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಈ ವರ್ತನೆಗೆ, ಕನ್ನಡದ ಖ್ಯಾತ ಡೈರೆಕ್ಟರ್ ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಯಾರು ಆ ನಿರ್ದೇಶಕ? ಅವ್ರು ಹೇಳಿದ್ದೇನು?

ಗರಂ ಆಗಿದ್ದಾರೆ ಓಂ ಪ್ರಕಾಶ್ ರಾವ್!

ಓಂ ಪ್ರಕಾಶ್ ರಾವ್ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾ ನೀಡಿದ್ದಾರೆ. ಹೀಗೆ, ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಓಂ ಪ್ರಕಾಶ್ ರಾವ್ ಅಬ್ಬರಿಸಿದ್ದರು. ಈಗ ಇದೇ, ಸ್ಟಾರ್ ಡೈರೆಕ್ಟರ್ ಓಂ ಪ್ರಕಾಶ್ ರಾವ್ 'ಮಂಗಳೂರು ಕಡೆ ನಟ & ನಿರ್ದೇಶಕರ' ಕುರಿತಾಗಿ ಕೇಳಿಬರುವ ಹೇಳಿಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಸಿನಿಮಾ ಪತ್ರಕರ್ತರಾದ ಬಿ.ಗಣಪತಿ ಅವರಿಗೆ ನೀಡಿದ ಸಂದರ್ಶನದಲ್ಲಿ, ಓಂ ಪ್ರಕಾಶ್ ರಾವ್ ಈ ಬಗ್ಗೆ ಮಾತನಾಡಿದ್ದಾರೆ. ಅವರ ಮಾತಿನ ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.

Kannada Director Om Prakash Rao Commented On Mangaluru Based Actors And Directors

ಹೌದು, ಸಿನಿಮಾ ಪತ್ರಕರ್ತರಾದ ಬಿ.ಗಣಪತಿ ಅವರಿಗೆ ನೀಡಿರುವ ಖಾಸಗಿ ಸಂದರ್ಶನ ವೇಳೆ ಹಲವು ವಿಚಾರ ಪ್ರಸ್ತಾಪವಾಗಿದೆ. ಅದರಲ್ಲಿ 'ಮಂಗಳೂರು ಕಡೆ ನಟ, ನಿರ್ದೇಶಕರ' ಬಗ್ಗೆ ಕೂಡ ಮಾತು ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಓಂ ಪ್ರಕಾಶ್ ರಾವ್ ಅವರು, ನಮ್ಮೊಳಗೆ ತಂದಿಡುವವರ ವಿರುದ್ಧ ಗರಂ ಆಗಿದ್ದಾರೆ. ಅಲ್ಲದೆ 'ಮಂಗಳೂರು ಕಡೆ ನಟರು, ನಿರ್ದೇಶಕರು ನಮ್ಮವರೆ ತಾನೆ? ಮಂಗಳೂರು ಏನು ಪಾಕಿಸ್ತಾನದಲ್ಲಿ ಇದೆಯಾ?' ಅಂತಾ ಮಾತನಾಡಿದ್ದಾರೆ. ಈ ಮೂಲಕ ಮಂಗಳೂರು ಕೂಡ ಕರ್ನಾಟಕದ ಭಾಗ, ಅವರು ಕೂಡ ಕನ್ನಡಿಗರೇ ಎಂಬುದನ್ನ ಒತ್ತಿ ಹೇಳಿದ್ದಾರೆ. ಅಲ್ಲದೆ ಕನ್ನಡಿಗರ ಮಧ್ಯೆ ತಂದಿಡುವ ಕೆಲವು ಜನರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+