Bigg Boss: ಬಿಗ್‌ಬಾಸ್‌ ಕಳೆ ಹೆಚ್ಚಿಸಿದ 'ರಾಜ' -ಫಿನಾಲೆ ತಲುಪಿದ್ದು ಹೇಗೆ?

ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಗ್ರ್ಯಾಂಡ್ ಫಿನಾಲೆಗೆ ತಲುಪಿದ ರಜತ್ ಕಿಶನ್ ಭಾರೀ ಸುದ್ದಿಯಲ್ಲಿದ್ದಾರೆ. ಕಿರುತೆರೆಯಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದ ರಜತ್ ಇದೀಗ ಬಿಗ್‌ಬಾಸ್‌ ಮನೆಯಲ್ಲಿಯೂ ಬಿರುಗಾಳಿ ಸೃಷ್ಟಿಸಿದ್ದಾರೆ. ರಜತ್ ಬಿಗ್‌ಬಾಸ್‌ ಮನೆಗೆ ಆಗಮಿಸಿದಾಗಿನಿಂದ ಸಿಕ್ಕಾಪಟ್ಟೆ ಹವಾ ಕ್ರಿಯೆಟ್ ಮಾಡುವುದಲ್ಲದೆ ದೊಡ್ಮನೆಯ ಕಳೆ ಕೂಡ ಬದಲಾಗಿದೆ. ಹಾಗಾದರೆ ರಜತ್ ಬಿಗ್‌ಬಾಸ್‌ ಮನೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಫಿನಾಲೆ ತಲುಪಿದ್ದು ಹೇಗೆ? ಅವರು ಇಷ್ಟೊಂದು ಫೇಮಸ್ ಆಗಲು ಕಾರಣ ಏನು?

ಖಾರವಾದ ಮಾತು

ಬಿಗ್‌ ಬಾಸ್‌ ಮನೆಯಲ್ಲಿ ಕಡಿಮೆ ಸಮಯದಲ್ಲಿ ಸಾಕಷ್ಟು ಜನಪ್ರಿಯತೆ ಪಡೆಯಲು ಮೂರು ವಿಷಯಗಳು ಇವೆ. ಅವುಗಳ ಬಗ್ಗೆ ಒಂದೊಂದಾಗಿ ತಿಳಿಯುತ್ತಾ ಹೋಗೋಣ. ಬಿಗ್‌ಬಾಸ್‌ ಮನೆಗೆ ಯಾರೇ ಎಂಟ್ರಿ ಕೊಟ್ಟರು ಅವರು ಮಾತಿನ ಮೂಲಕ ಹೈಲೆಟ್ ಆಗುತ್ತಾರೆ. ರಜತ್‌ ಅವರದ್ದು ಮಾತು ಜೋರು, ಬುದ್ಧಿವಂತಿಕೆಯಲ್ಲಿ ಸಿಕ್ಕಾಪಟ್ಟೆ ಚುರುಕು. ಯಾವುದೇ ತಪ್ಪು ಕಂಡು ಬಂದಲ್ಲಿ ಅದನ್ನು ನೇರವಾಗಿ ಹೇಳಿಬಿಡುತ್ತಾರೆ ರಜತ್. ಅಲ್ಲದೆ ಬಿಗ್‌ಬಾಸ್‌ ಮನೆಗೆ ಆಗಮಿಸಿದ ಆರಂಭದ ದಿನಗಳಲ್ಲಿ ಅವರ ಮಾತು ತುಂಬಾ ಖಾರವಾಗಿತ್ತು. ಅಲ್ಲದೆ ತುಂಬಾ ಕೆಟ್ಟ ಶಬ್ದಗಳನ್ನು ರಜತ್ ಬಳಕೆ ಮಾಡಿದ್ದರು. ಆದರೆ ತುಂಬಾ ಖಾರವಾಗಿದ್ದ ಅವರ ಮಾತು ಪ್ರಸ್ತುತ ಬದಲಾಗಿದೆ. ಮಾತಿನಲ್ಲಿ ತುಂಬಾ ಹಿಡಿತ ಇದೆ. ಈ ಬದಲಾವಣೆ ಬಿಗ್‌ಬಾಸ್‌ ವೀಕ್ಷಕರಿಗೆ ತುಂಬಾ ಖುಷಿ ತಂದಿದೆ.

ಬುದ್ಧಿವಂತ ರಜತ್

ಇನ್ನೂ ಎರಡನೇ ವಿಷಯ ಏನು ಎಂದರೆ ರಜತ್‌ ಬುದ್ಧಿವಂತ. ಬಿಗ್‌ಬಾಸ್‌ ಇತಿಹಾಸದಲ್ಲಿ ಯಾರೂ ಮಾಡದ ಕೆಲಸವನ್ನು ರಜತ್ ಮಾಡಿದ್ದಾರೆ. ಬಹುಶ: ಈ ಕೆಲಸವನ್ನು ಬಿಗ್‌ಬಾಸ್‌ ಮಾಡಲು ನೂರು ಬಾರಿ ಯೋಚನೆ ಮಾಡಬಹುದು. ಆದರೆ ರಜತ್ ತಮಗೆ ಕಳಪೆ ನೀಡಿದ್ದಾರೆ ಎನ್ನುವ ಕಾರಣಕ್ಕೆ ಜೈಲಿಗೆ ಹೋಗಿ ಮನೆ ಮಂದಿಗೆಲ್ಲಾ ಲೇಟ್ ಆಗಿ ತರಕಾರಿ ಹೆಚ್ಚಿ ಕೊಟ್ಟು ಸಂಜೆಗೆ ತಿಂಡಿ ತಿನ್ನುವಂತೆ ಮಾಡಿದ್ದರು. ಇಂತಹ ಯೋಚನೆ ಬಹುಶ: ರಜತ್‌ ಅವರಿಗೆ ಬಿಟ್ರೆ ಬೇರೆ ಯಾರಿಗೂ ಕೂಡ ಬರಲು ಸಾಧ್ಯವಿಲ್ಲ. ಈ ಒಂದು ವಿಚಾರಕ್ಕೆ ಸುದೀಪ್ ರಜತ್ ಅವರನ್ನು ಸಿಕ್ಕಾಪಟ್ಟೆ ನಿಪುಣ, ಬುದ್ಧಿವಂತ ಎಂದೆಲ್ಲಾ ಆಗಾಗ ರೇಗಿಸುವುದು. ಈ ಒಂದು ವಿಷಯ ಬಿಗ್‌ಬಾಸ್‌ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇದಾದ ಬಳಿಕ ರಜತ್ ಭವಿಷ್ಯವೇ ಬದಲಾಗಿದೆ.

ಸುದೀಪ್ ಹೇಳಿದ್ದನ್ನು ಅನುಸರಿಸಿದ ರಜತ್

ಅಷ್ಟಕ್ಕೂ ರಜತ್‌ ಕೆಲವೇ ವಾರದಲ್ಲಿ ಯಾಕಿಷ್ಟು ವೈರಲ್ ಆದರು? ಅತ್ಯಂತ ಕಡಿಮೆ ಸಮಯದಲ್ಲಿ ರಜತ್ ಹೆಚ್ಚಾಗಿ ಗುರುತಿಸಿಕೊಂಡಿದ್ದು ಹೇಗೆ? ಇದಕ್ಕೆ ಉತ್ತರ ಇಲ್ಲಿದೆ ನೋಡಿ.. ಬಿಗ್‌ಬಾಸ್‌ ಮನೆಯಲ್ಲಿ ಕೆಲ ಸ್ಪರ್ಧಿಗಳು ಗುಂಪುಗಾರಿಕೆ, ಗುಂಪು ಬಿಟ್ಟು ಬಾರದೆ ಆಟ ಆಡುವುದು ಇದೆಲ್ಲವೂ ಕಾಣಿಸಿಕೊಳ್ಳುತ್ತಿತ್ತು.

ಕೆಲವರು ಆಟ ಆಡಿ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡಿರುವುದು ಇದೆ. ಇನ್ನೂ ಕೆಲವರು ಆಟ ಆಡಿ ಗುಂಪುಗಾರಿಕೆಯಲ್ಲಿ ನಾಮಿನೇಟ್ ಮಾಡಿಸಿಕೊಂಡು ಹೊರಗೆ ಬಂದಿರುವುದು ಇದೆ. ಕೆಲವರು ಆಟದಲ್ಲಿ ಗಾಯ ಮಾಡಿಕೊಂಡು ಸಾಧ್ಯವಾದಷ್ಟು ಮಾತ್ರ ಆಡಿ ಕೆಲ ವಾರದವರೆಗೆ ಸುಮ್ಮನೆ ಕುಳಿತಿರುವುದು ಇದೆ.

ಆದರೆ ರಜತ್ ಮನೆಗೆ ಬಂದ ಮೇಲೆ ಈ ಎಲ್ಲಾ ರೀತಿ ಆಟಗಳನ್ನು ಪ್ರಶ್ನೆ ಮಾಡಲು ಶುರು ಮಾಡಿದ್ರು. ಎಲ್ಲರ ವಿರೋಧ ಕಟ್ಟಿಕೊಂಡರೂ ಚಿಂತೆ ಇಲ್ಲ, ಮೋಸದ ಆಟ ಆಡುವವರನ್ನು ನಾಮಿನೇಟ್ ಮಾಡಲು ಶುರು ಮಾಡಿದ್ರು. ಇದರಿಂದಾಗಿ ನಿದ್ದೆ ಮಾಡುತ್ತಿದ್ದ ಬಿಗ್‌ಬಾಸ್‌ ಮನೆಯ ಕೆಲ ಸದಸ್ಯರು ಎಚ್ಚರಗೊಂಡರು. ಹೀಗೆ ಎಚ್ಚರಗೊಂಡವರೆಲ್ಲಾ ರಜತ್ ವಿರುದ್ಧ ಕತ್ತಿ ಮಸಿಯಲು ಕೂಡ ಶುರು ಮಾಡಿದ್ರು.

ಆದರೆ ರಜತ್‌ ಮಾತ್ರ ಇದ್ಯಾವುದಕ್ಕೂ ಕುಗ್ಗಲಿಲ್ಲ ಜಗ್ಗಲಿಲ್ಲ. ಸಂದರ್ಭ ಬಂದಾಗಲೆಲ್ಲಾ ಟಾಂಗ್, ಟಕ್ಕರ್ ಕೊಡುತ್ತಾ ಬಿಗ್‌ಬಾಸ್‌ ಮನೆಯ ಟಫ್ ಸ್ಪರ್ಧಿಗಳಾಗಿದ್ದ ಮಂಜು ಹಾಗೂ ತ್ರಿವಿಕ್ರಮ್ ಜೊತೆಗೆ ಫೈಟ್ ಶುರು ಮಾಡಿದರು. ಫಿಸಿಕಲ್ ಆಟದಲ್ಲಿ ರಜತ್ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಹಾಗೂ ಅಗ್ರೆಸಿವ್ ಆಗಿ ಆಡಿದ್ದು ಇದೆ.

ಇದರಿಂದಾಗಿ ಅವರು ಆಟದಲ್ಲಿ ಗೆಲ್ಲುತ್ತಾ ಜೊತೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿ ಮನೆಯ ಕ್ಯಾಪ್ಟನ್ ಆದರು. ಇದು ಕೆಲ ಸ್ಪರ್ಧಿಗಳಿಗೆ ಈಗಲೂ ಕೂಡ ಸಹಿಸಲು ಆಗುತ್ತಿಲ್ಲ. ಆದರೆ ಇದೆಲ್ಲದನ್ನೂ ಎದುರಿಸುವ ಶಕ್ತಿ ಹಾಗೂ ಜಾಣ್ಮೆ ರಜತ್‌ಗೆ ಇರುವುದರಿಂದಲೇ ರಜತ್‌ ಇನ್ನೂ ಕೂಡ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡಿದ್ದಾರೆ ಹಾಗೂ ಫಿನಾಲೆ ಕೂಡ ತಲುಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+