ನಾನು ವೇಶ್ಯೆ ಅನ್ನೋದಕ್ಕೆ ಸಾಕ್ಷಿ ಕೊಡೋ: ವಿಡಿಯೋದಲ್ಲಿ ಕಣ್ಣೀರಿಟ್ಟ ಕನ್ನಡ ನಟಿ
ಕನ್ನಡದ ನಟಿಯೊಬ್ಬರು ಕಣ್ಣೀರು ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಖ್ಯಾತಿ ಗಳಿಸಿದ್ದ ನಟಿ ವಿಜಯಲಕ್ಷ್ಮಿ ಅವರು ವಿಡಿಯೋ ಹಂಚಿಕೊಂಡು ಗಳಗಳನೆ ಅತ್ತಿದ್ದಾರೆ. ನಾಮ್ ತಮಿಳರ್ ಪಕ್ಷದ ನಾಯಕ, ನಟ ಹಾಗೂ ನಿರ್ದೇಶಕ ಸೀಮನ್ ಅವರ ಹೆಸರನ್ನು ಉಲ್ಲೇಖಿಸಿ ವಿಜಯಲಕ್ಷ್ಮಿ ಅವರು ಕಣ್ಣೀರು ಹಾಕಿದ್ದಾರೆ. ಇದಕ್ಕೆಲ್ಲ ಕಾರಣವೇನು ಎಂಬುದನ್ನು ಅವರೇ ವಿಡಿಯೋದಲ್ಲಿ ತಿಳಿಸಿದ್ದಾರೆ.
ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ವಿಜಯಲಕ್ಷಿ ಅವರು ಬಳಿಕೆ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಹಲವು ವರ್ಷಗಳ ಬಳಿಕ ಅವರು ಕರ್ನಾಟಕಕ್ಕೆ ಮರಳಿ ಹಲವು ಸ್ಫೋಟಕ ವಿಚಾರಗಳನ್ನು ಹಂಚಿಕೊಂಡಿದ್ರು. ಈಗ ಮತ್ತೆ ಅವರು ವಿಡಿಯೋ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ನಿರ್ದೇಶಕ ಹಾಗೂ ರಾಜಕಾರಣಿ ಸೀಮನ್ ಅವರ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಕಣ್ಣೀರಿಡುತ್ತಲೇ ಅವರಿಗೆ ಹಿಡಿಶಾಪ ಕೂಡ ಹಾಕಿದ್ದಾರೆ.

ಇತ್ತೀಚಿಗೆ ನಾಮ್ ತಮಿಳರ್ ಪಕ್ಷದ ನಾಯಕ ಸೀಮನ್ ಅವರು ನಟಿ ವಿಜಯಲಕ್ಷ್ಮಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಕೊಟ್ಟಿದ್ದರು ಎನ್ನಲಾಗಿದೆ. ವಿಜಯಲಕ್ಷ್ಮಿ ಅವರನ್ನು ವೇಶ್ಯೆಯರಿಗೆ ಹೋಲಿಸಿದ್ದರು ಎಂದೂ ವರದಿಯಾಗಿದೆ. ಈ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ವಿಜಯಲಕ್ಷ್ಮಿ ಅವರು ನನ್ನನ್ನು ವೇಶ್ಯೆಗೆ ಹೋಲಿಸುತ್ತೀಯಾ? ನಾನು ವೇಶ್ಯೆ ಎನ್ನುವುದಕ್ಕೆ ನಿನ್ನತ್ರ ಸಾಕ್ಷಿ ಇದೆಯಾ? ನೀನು ಹೇಳಿದಂತೆ ನಾನು ವೇಶ್ಯೆ ಆಗಿದ್ದರೆ, ಈ ರೀತಿ ಇರುತ್ತಿರಲಿಲ್ಲ. ನನ್ನ ಕಣ್ಣೀರು ನಿನ್ನನ್ನ ಸರ್ವನಾಶ ಮಾಡುತ್ತೆ, ನೋಡ್ತಾ ಇರು ನೀನು ಸರ್ವನಾಶ ಆಗ್ತೀಯ ಕಣೋ ಎಂದು ಏಕವಚನದಲ್ಲೇ ಶಾಪ ಹಾಕಿದ್ದಾರೆ.
ನಾನು ವೇಶ್ಯೆನಾ? ಅದಕ್ಕೆ ಸಾಕ್ಷಿ ಇದ್ರೆ ತೋರಿಸುತ್ತೀಯಾ? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲವಾ? ನಿನಗೆ ಜನ್ಮ ನೀಡಿದ ತಾಯಿ ಕೂಡ ಒಂದು ಹೆಣ್ಣು, ನಿನಗೆ ಅಕ್ಕ ತಂಗಿ, ಹೆಂಡತಿ ಇಲ್ವಾ? ಪ್ರತಿದಿನ ನನ್ನನ್ನ ಅವಮಾನ ಮಾಡುತ್ತಲೇ ಇದ್ದೀಯ, ನೀನು ಸರ್ವನಾಶ ಆಗೋಗ್ತೀಯಾ ಎಂದು ವಿಜಯಲಕ್ಷ್ಮಿ ಅವರು ಕಣ್ಣೀರಿಡುತ್ತಲೇ ವಿಡಿಯೋದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಏನಿದು ಪ್ರಕರಣ?: ನಟಿ ವಿಜಯಲಕ್ಷ್ಮಿ ಅವರು 2011ರಲ್ಲಿ ಸೀಮನ್ ವಿರುದ್ಧ ವಿರುಗಂಬಾಕ್ಕಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನ್ನನ್ನನು ಮದುವೆಯಾಗುವ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದರು. ನಂತರ 2012ರಲ್ಲಿ ವಿಜಯಲಕ್ಷ್ಮಿ ಅವರು ದೂರನ್ನು ವಾಪಸ್ ಪಡೆದರು. ಆದ್ರೆ ಪೊಲೀಸರು ಪ್ರಕರಣವನ್ನು ಬಾಕಿ ಉಳಿಸಿಕೊಂಡಿದ್ದರು. 2023ರಲ್ಲಿ ಸೀಮನ್ ವಿರುದ್ಧ ನಟಿ ಮತ್ತೆ ತನ್ನನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ನಟಿ ವಿಜಯಲಕ್ಷ್ಮಿ ಅವರು ತಮ್ಮ ವಿರುದ್ಧ ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಮುಖ್ಯ ಸಂಯೋಜಕ ಸೀಮನ್ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. "ನಾಗಮಂಡಲ, ಸೂರ್ಯವಂಶ, ಜೋಡಿ ಹಕ್ಕಿ, ಸ್ವಸ್ಥಿಕ್, ಕನಕಾಂಬರಿ" ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ವಿಜಯಲಕ್ಷ್ಮಿ ನಟಿಸಿದ್ದಾರೆ.












Click it and Unblock the Notifications