'ನನಗೂ ಪ್ರೀತಿ ಆಯ್ತು..ಬ್ರೇಕಪ್ ಆಯ್ತು': ಮುದ್ದಾದ ನಟಿಯನ್ನು ಡಿಪ್ರೆಷನ್‌ಗೆ ತಳ್ಳಿದ್ಯಾರು?

ನಾನು ಪ್ರೀತಿ ಮಾಡಿದ್ದೇನೆ. ಬ್ರೇಕಪ್‌ ಕೂಡ ಆಗಿದೆ. ಹಾರ್ಟ್ ಬ್ರೇಕು ಆಗಿದೆ. ಡಿಪ್ರೆಷನ್‌ಗೂ ಹೋಗಿದ್ದೇನೆ. ಥೆರಪಿನೂ ತೆಗೆದುಕೊಂಡಿದ್ದೇನೆ. ಇದು ಜೀವನದ ಒಂದು ಭಾಗ ಅಷ್ಟೇ. ಅದೊಂದು ಬ್ಯೂಟಿಫುಲ್‌ ಭಾಗ ಆಗಿಯೇ ನನ್ನ ಮನಸ್ಸಿನಲ್ಲಿ ಇರುತ್ತದೆ ಎಂದು ಕಿರುತೆರೆ ನಟಿ ಸುಕೃತಾ ನಾಗ್‌ ತಮ್ಮ ಜೀವನದಲ್ಲಿ ಪ್ರೀತಿಯಲ್ಲಿ ನಂಬಿ ನೋವು ಕಂಡ ಬಗ್ಗೆ ಮಾತನಾಡಿದ್ದಾರೆ.

ವಿಜಯವಾಣಿ ಯೂಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ ಅವರು, 'ಕೊರೊನಾ ಸಮಯದಲ್ಲಿ ನನಗೆ ಪ್ರೀತಿ ಆಗಿ ಬ್ರೇಕಪ್ ಆಯ್ತು. ಎಲ್ಲರ ಜೀವನದಲ್ಲಿಯೂ ಪ್ರೀತಿ ಆಗುತ್ತದೆ. ಹಾರ್ಟ್‌ ಬ್ರೇಕ್‌ ಆಗುತ್ತದೆ. ನಾವು ಅವರ ಜೊತೆಯಲ್ಲೇ ಇರುತ್ತೇವೆ ಅಂತಾ ಗೊತ್ತಾದ ಮೇಲೆ ಅವರು ನಮ್ಮನ್ನು ಅವರಿಷ್ಟದಂತೆ ತೆಗೆದುಕೊಳ್ಳುತ್ತಾರೆ. ಪ್ರೀತಿ ಸೋಲಲು ಇದೊಂದು ಮುಖ್ಯವಾದ ಕಾರಣ ಆಗುತ್ತದೆ' ಎಂದರು.

Kannada Actress Sukrutha Nag Discusses Love Breakup and Overcoming Depression

'ಪ್ರೀತಿ ಸಿಗುವ ಮುಂಚೆ ಹಾಕುವ ಪ್ರಯತ್ನವನ್ನು ಪ್ರೀತಿ ಸಿಕ್ಕಿದ ಮೇಲೆ ಹಾಕುವುದಿಲ್ಲ. ಪ್ರೀತಿ ಆದ ಮೇಲೆ ಇದ್ದೇ ಇರುತ್ತಾರೆ ಎನ್ನುವ ಅಸಡ್ಡೆ ಶುರುವಾಗುತ್ತದೆ. ಆ ಗುಣವನ್ನು ಸಿಕ್ಕಾದ ಮೇಲೆ ಬಿಡಬೇಕು. ಕಳೆದುಕೊಂಡ ಮೇಲೆ ಅದರ ಬೆಲೆ ಗೊತ್ತಾಗುತ್ತದೆ ಎನ್ನುತ್ತಾರೆ. ಪ್ರೀತಿ ಸಿಗುವ ಮುಂಚೆ, ಸಿಕ್ಕಾದ ಮೇಲೆ, ದೂರಾದ ಮೇಲೆ ವ್ಯತ್ಯಾಸವನ್ನು ನಾನು ಎಲ್ಲೋ ನೋಡಿದ್ದೆ. ಸಿಗುವುದಕ್ಕಿಂತ ಮುಂಚೆ ಬೆಲೆ ಎತ್ತರದಲ್ಲಿ ಇರುತ್ತದೆ. ಸಿಕ್ಕಾದ ಮೇಲೆ ಕೆಳಗೆ ಇಳಿಯುತ್ತದೆ. ಮತ್ತೆ ಕಳೆದುಕೊಂಡ ಮೇಲೆ ಮತ್ತೆ ಮೊದಲಿನ ಸ್ಥಳಕ್ಕೆ ಹೋಗುತ್ತದೆ. ಇದ್ದಾಗಲೂ ಸರಿಯಾದ ಬೆಲೆ ಕೊಟ್ಟರೆ ಎಲ್ಲವೂ ಚೆನ್ನಾಗಿರುತ್ತದೆ' ಎಂದು ಹೇಳಿದರು.

'ಎರಡೂವರೆ ವರ್ಷ ನಾವು ಪ್ರೀತಿಯಲ್ಲಿ ಇದ್ದೆವು. ನಾನು ನಟನೆಗೆ ಬಂದ ಮೇಲೆಯೇ ಈ ಪ್ರೀತಿ ಆಗಿದ್ದು. ಒಬ್ಬ ವ್ಯಕ್ತಿಯ ಜೊತೆ ನಮ್ಮ ಸಂಪೂರ್ಣ ಜೀವನವನ್ನು ಊಹಿಸಿಕೊಂಡಿರುವುದರಿಂದ ಅವರು ದೂರಾದಾಗ ತುಂಬಾ ಕಷ್ಟ ಆಗಿಯೇ ಆಗುತ್ತದೆ. ಇಬ್ಬರು ಒಪ್ಪಿಕೊಂಡು ಪ್ರೀತಿಯಲ್ಲಿ ಇದ್ದೆವು. ಆದರೆ ಒಂದು ಹಂತಕ್ಕೆ ಬಂದಾಗ ಇಬ್ಬರ ನಡುವೆ ಮಾತುಕತೆ ಕಮ್ಮಿ ಆಗುತ್ತದೆ. ಪ್ರೀತಿ ಕಮ್ಮಿ ಆಗುತ್ತದೆ. ನನಗೆ ಪ್ರೀತಿ ಮುಖ್ಯವಾಗಿರುತ್ತದೆ. ನನಗೆ ಪ್ರೀತಿ, ಕಾಳಜಿ ಮುಂದೆ ಏನು ಇಲ್ಲ. ಆದರೆ ಅವರಿಗೆ ಪ್ರೀತಿ ಸಿಕ್ಕ ಮೇಲೆ ಅವರಿಷ್ಟದಂತೆ ಆಗುತ್ತದೆ. ಜೊತೆಗೆ ಒಂದಿಷ್ಟು ಅಡೆತಡೆಗಳು ಇರುತ್ತದೆ' ಎಂದರು.

Kannada Actress Sukrutha Nag Discusses Love Breakup and Overcoming Depression

'ಎಲ್ಲರೂ ಪ್ರೀತಿಯಲ್ಲಿ ಹುಡುಗಿಯರು ಮೋಸ ಮಾಡಿದರು ಅಂತಾ ಹೇಳುತ್ತಾರೆ. ಆದರೆ ಪ್ರೀತಿಯಲ್ಲಿ ಹುಡುಗಿಯರು ಎಲ್ಲಾ ರೀತಿಯಾಗಿ ಯೋಚನೆ ಮಾಡಿರುತ್ತೇವೆ. ಹಾಗೂ ದೂರಾಗುವಾಗಲೂ ಸಹ ಎಲ್ಲಾ ರೀತಿಯ ಸಂಭಾವ್ಯಗಳನ್ನು ಯೋಚನೆ ಮಾಡಿರುತ್ತೇವೆ. ಒಂದು ದಿನಕ್ಕೆ ಬ್ರೇಕಪ್‌ ಮಾಡಿಕೊಳ್ಳುವುದಿಲ್ಲ. ತುಂಬಾ ದಿನಗಳಿಂದ ನಿಮ್ಮಿಂದ ಮಾನಸಿಕವಾಗಿ ದೂರವಾಗಿರುತ್ತೇವೆ. ಒಂದೊಂದು ಸಮಯದಲ್ಲಿ ಒಂದೊಂದು ಬಾಂಧವ್ಯವನ್ನು ಕತ್ತರಿಸಿಕೊಂಡು ಹೋಗುತ್ತಿರುತ್ತೇವೆ. ಕೆಲ ದಿನಗಳು ಬರೀ ದೈಹಿಕವಾಗಿ ನಿಮ್ಮ ಜೊತೆ ಇರುತ್ತೇವೆ ಅಷ್ಟೇ' ಎಂದು ಹೇಳಿದರು.

'ಹುಡುಗರು ಪ್ರೀತಿ ಬೇಡ ಎಂದು ಚಿಟಿಕೆ ಹೊಡೆಯುವುದರಲ್ಲಿ ನಿರ್ಧಾರ ಮಾಡುತ್ತಾರೆ. ಆದರೆ ಹುಡುಗಿಯರು ಹಾಗಲ್ಲ. ಮೊದಲು ಅವರಿಗೆ ತಿದ್ದಿಕೊಳ್ಳಲು ಎಲ್ಲಾ ಅವಕಾಶವನ್ನು ಕೊಟ್ಟು. ಎಲ್ಲಾ ರೀತಿಯಾಗಿ ಯೋಚನೆ ಮಾಡಿ ಬಳಿಕ ಇದು ಸರಿಯಾಗುವುದಿಲ್ಲ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ನನ್ನ ಪ್ರೀತಿಯಲ್ಲಿ ಅವರಿಷ್ಟದಂತೆ ನಡೆದುಕೊಳ್ಳುವುದು ಮೊದಲು ಆ ಕಡೆಯಿಂದಲೇ ಶುರುವಾಯ್ತು. ಕೆಲಸ, ಜೀವನದ ಇತರ ಕೆಲವು ವಿಚಾರದಿಂದ ಆ ಪ್ರೀತಿ ಅಂತ್ಯವಾಯ್ತು. ನಮ್ಮ ಹಣೆಯಲ್ಲಿ ಯಾರ ಜೊತೆ ಬದುಕಬೇಕು ಅಂತಾ ಬರೆದಿರುತ್ತದೆ ಕೊನೆಗೆ ಅದೇ ಆಗುವುದು' ಎಂದು ನಟಿ ಸುಕೃತಾ ನಾಗ್‌ ಹೇಳಿದರು.

Kannada Actress Sukrutha Nag Discusses Love Breakup and Overcoming Depression

'ಬ್ರೇಕಪ್‌ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಲು ಹೋಗಬಾರದು, ಅದನ್ನು ಅಲ್ಲಿಗೆ ಬಿಟ್ಟು ಬಿಡಬೇಕು. ಅದೊಂದು ನನ್ನ ಜೀವನದ ಒಳ್ಳೆಯ ಭಾಗವಾಗಿತ್ತು. ಒಳ್ಳೆಯ ನೆನಪಿನ ರೀತಿ ಯಾವಾಗಲೂ ನನ್ನ ಜೊತೆಗೆ ಇರುತ್ತದೆ. ನಾನು ಎಂತಹ ಸ್ವಭಾವದ ಹುಡುಗಿ ಅಂದರೆ ಒಂದು ಸಲ ಆ ಸಂಬಂಧ ಮುರಿದು ಹೋದರೆ ಮತ್ತೆ ಅದರ ಕಡೆ ಹೋಗುವವಳಲ್ಲಾ ನಾನು. ಆ ಕಡೆಯಿಂದನೂ ಮತ್ತೆ ಕೇಳಿಕೊಂಡು ಬಂದಿಲ್ಲ. ನಾನು ಕೂಡ ಮತ್ತೆ ಅವರನ್ನು ಕೇಳಿಕೊಂಡು ಹೋಗಿಲ್ಲ. ಅವರ ಜೀವನದಲ್ಲಿ ಅವರು ಚೆನ್ನಾಗಿದ್ದಾರೆ. ನನ್ನ ಜೀವನದಲ್ಲಿ ನಾನು ಚೆನ್ನಾಗಿದ್ದೇನೆ' ಎಂದರು.

ಬ್ರೇಕಪ್‌ ನೋವಿನಿಂದ ಸುಕೃತಾ ನಾಗ್‌ ಹೊರಬಂದಿದ್ದೇಗೆ?

ಬ್ರೇಕಪ್‌ನಿಂದ ಬದಲಾದ ಬಗ್ಗೆ ಮಾತನಾಡಿದ ಅವರು, 'ನಾನು ಈ ಬ್ರೇಕಪ್‌ನಿಂದ ತುಂಬಾ ಬದಲಾಗಿದ್ದೇನೆ. ಯಾರೇ ನಮ್ಮ ಜೀವನದಲ್ಲಿ ಬಂದರೂ ಒಂದು ದೊಡ್ಡ ಪಾಠ ಕಲಿಸಲೆಂದೇ ಬರುತ್ತಾರೆ ಅಂತಾ ಹೇಳುತ್ತಾರೆ. ನಾನು ತುಂಬಾ ಸ್ವಾತಂತ್ರಳಾದೆ. ಆ ವ್ಯಕ್ತಿಯನ್ನು ಇಂದಿಗೂ ನಾನು ಗೌರವಿಸುತ್ತೇನೆ ಯಾಕೆ ಎಂದರೆ ಅವರು ನನ್ನನ್ನು ಗಟ್ಟಿಯಾಗುವಂತೆ ಮಾಡಿದರು. ನಾವು ಪ್ರೀತಿಯಲ್ಲಿದ್ದಾಗಲೇ ಅವರು ನನ್ನನ್ನು ಆ ರೀತಿ ಬದಲಿಸಿದ್ದರು. ಈಗ ನಾನು ಎಲ್ಲಾ ಕಡೆಗೂ ಒಬ್ಬಳೇ ಹೋಗುತ್ತೇನೆ. ಯಾರೋ ನಮ್ಮ ಜೀವನದಲ್ಲಿ ಬಂದಾಗ ಏನೋ ಕಲಿಸುತ್ತಾರೆ ಅಂತಾರಲ್ಲಾ ಅದು ನಿಜಾನೇ. ಈಗ ಇವರು ನನ್ನನ್ನು ಮಾನಸಿಕವಾಗಿ ಗಟ್ಟಿ ಮಾಡಿದ್ದಾರೆ ಅಷ್ಟೇ' ಎಂದರು.

'ನಾವು ಒಂದು ಪ್ರೀತಿಯಲ್ಲಿ ಇದ್ದಾಗ ಅವರು ನಮಗೆ ಅಭ್ಯಾಸ ಆಗಿರುತ್ತಾರೆ. ಪ್ರತಿ ದಿನ ಫೋನ್‌ ಮಾಡು, ಮೆಸೇಜ್‌ ಮಾಡು, ಭೇಟಿಯಾಗು, ಇನ್ನೊಂದು ಮತ್ತೊಂದು ಅಂತಾ ಅವರ ಸುತ್ತಲೇ ಇರುತ್ತದೆ. ಅದನ್ನು ಬಿಟ್ಟು ಹೋಗುವುದು ತುಂಬಾ ಕಷ್ಟ. ನಿಮಗೆ ಆ ವ್ಯಕ್ತಿ ಬೇಡ ಅನಿಸಿದಾಗ ಎಷ್ಟೇ ಕಷ್ಟವಾದರೂ ಬಿಟ್ಟು ಬಿಡಿ. ಪ್ರಾಣ ಹೋಗುವಷ್ಟು ನೋವಾಗುತ್ತದೆ. ಅಳುತ್ತೀರಾ, ಊಟ ಬಿಡುತ್ತೀರಾ, ನಿದ್ದೆ ಬಿಡುತ್ತೀರಾ, ಯಾರ ಜೊತೆನೂ ಸೇರುವುದಿಲ್ಲ. ಆ ಸಮಯದಲ್ಲಿ ಮಲಗಿದ ಸ್ಥಳದಿಂದ ಏಳುವುದು ಕೂಡ ದೊಡ್ಡ ಕೆಲಸದಂತಾಗುತ್ತದೆ. ಇಂತಹ ಸಮಯದಲ್ಲಿ ಪಾಸಿಟಿವ್‌ ದಾರಿಯ ಕಡೆ ಗಮನ ಕೊಡಿ. ಯೋಚನೆ ಮಾಡಿ, ಈ ವ್ಯಕ್ತಿಯ ಜೊತೆಗೆ ಇದ್ದರೆ ನನಗೆ ಭವಿಷ್ಯ ಎನ್ನುವುದು ಇದೆಯಾ? ಎನ್ನುವುದರ ಬಗ್ಗೆ ಯೋಚಿಸಿ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+